ವಿಡಿಯೋ: ಟಿವಿ ನೋಡಿ ವರ್ಕೌಟ್ ಮಾಡುವ ನಾಯಿ
ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಪ್ರಾಣಿಗಳ ವಿಡಿಯೋಗಳನ್ನು ಜನರು ತುಂಬಾ ಇಷ್ಟಪಡುತ್ತಾರೆ. ಪ್ರಾಣಿಗಳು ತುಂಬಾ ಬುದ್ಧಿವಂತವಾಗಿರುತ್ತವೆ. ಕೆಲವೊಮ್ಮೆ ಅವು ಮನುಷ್ಯರಂತೆ ನಡೆದುಕೊಳ್ಳುತ್ತವೆ. ಮನುಷ್ಯರಂತೆ ಕೆಲಸಗಳನ್ನು ಮಾಡುತ್ತವೆ. ಇದು ನಂಬಲು ತುಂಬಾ ಕಷ್ಟ.
ಇತ್ತೀಚಿನ ದಿನಗಳಲ್ಲಿ ನಾಯಿಯ ವಿಡಿಯೊ ತುಂಬಾ ವೈರಲ್ ಆಗುತ್ತಿದೆ. ಅದರಲ್ಲಿ ನಾಯಿ ಟಿವಿ ನೋಡಿ ವರ್ಕೌಟ್ ಮಾಡುತ್ತಿರುವುದನ್ನು ಕಾಣಬಹುದು. ನಾಯಿ ಟಿವಿಯಲ್ಲಿ ನೋಡಿದ ರೀತಿಯಲ್ಲಿಯೇ ವ್ಯಾಯಾಮ ಮಾಡಲು ಪ್ರಯತ್ನಿಸುತ್ತದೆ. ನಾಯಿಯ ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಜನರು ನಾಯಿಯನ್ನು ಸ್ಫೂರ್ತಿ ಎಂದು ಪರಿಗಣಿಸಿದ್ದಾರೆ.
ಟಿವಿಯಲ್ಲಿ ನೋಡಿದ ವ್ಯಾಯಾಮವನ್ನು ನಾಯಿ ಎಷ್ಟು ಬುದ್ಧಿವಂತಿಕೆಯಿಂದ ಅನುಸರಿಸುತ್ತಿದೆ ಎಂಬುದನ್ನು ವೈರಲ್ ವಿಡಿಯೊದಲ್ಲಿ ಕಾಣಬಹುದು. ಪ್ರಾಯಶಃ ಮನುಷ್ಯನೂ ಅದನ್ನು ಇಷ್ಟು ಉತ್ತಮ ರೀತಿಯಲ್ಲಿ ಮಾಡಲಾರನು. ನಾಯಿಯ ಈ ವಿಡಿಯೋವನ್ನು ಜನರು ತುಂಬಾ ಇಷ್ಟಪಡುತ್ತಿದ್ದಾರೆ.
|
ಟಿವಿ ನೋಡಿ ವ್ಯಾಯಾಮ ಮಾಡುವ ನಾಯಿ
ನಾಯಿ ನಿಯತ್ತಿಗೆ ಹೆಸರಾದದ್ದು. ಸ್ವಲ್ಪ ಪ್ರೀತಿ ತೋರಿಸದರೆ ಸಾಕು ಬೆಟ್ಟದಷ್ಟು ಪ್ರೀತಿ ತೋರಿಸುತ್ತವೆ. ಅದು ತನ್ನ ಯಜಮಾನನಿಂದ ಏನನ್ನೂ ಬಯಸುವುದಿಲ್ಲ. ಒಂದು ತುತ್ತು ಅನ್ನ ಹಾಕಿದರೆ ಸಾಕು ಪ್ರಾಮಾಣಿಕವಾಗಿರುತ್ತದೆ. ಅದಕ್ಕೆ ಮನುಷ್ಯರನ್ನು ಅರ್ಥ ಮಾಡಿಕೊಳ್ಳುವ ವಿಶೇಷ ಗುಣಗಳಿವೆ. ಹೀಗಾಗಿ ನಮ್ಮ ಬಳಿ ನಾಯಿ ಇದ್ದರೆ ಯಾವತ್ತೂ ಒಂಟಿ ಎಂಬ ಭಾವನೆಗಳಿರುವುದಿಲ್ಲ. ಮಾತ್ರವಲ್ಲದೇ ಅವುಗಳಿಗೆ ಮನುಷ್ಯರ ಭಾವನೆಗಳು ಅರ್ಥವಾಗುತ್ತವೆ. ಕೋಪ ಬಂದಾಗ ಬೇಸರವಾದಾಗ ನಾಯಿಗಳು ಯಜಮಾನನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತವೆ.
ಸಾಮಾನ್ಯವಾಗಿ ಪ್ರಾಣಿಗಳು ಅಪಾರ ಬುಧ್ಧಿಶಕ್ತಿಯನ್ನು ಹೊಂದಿರುತ್ತವೆ. ಈ ಕಾರಣದಿಂದಲೇ ಜನರಿಗೆ ನಾಯಿಗಳೆಂದರೆ ತುಂಬಾ ಇಷ್ಟ. ನಾಯಿಗಳು ಸಾಮಾನ್ಯವಾಗಿ ಮನುಷ್ಯರಂತೆ ವರ್ತಿಸುತ್ತವೆ. ಕೆಲವೊಮ್ಮೆ ಅದರ ಕಾರ್ಯಗಳು ನೋಡುಗರನ್ನು ಬೆರಗುಗೊಳಿಸುತ್ತವೆ.

ನಾಯಿಯ ಸ್ಫೂರ್ತಿದಾಯಕ ದೃಶ್ಯ
ವಿಡಿಯೋದಲ್ಲಿ ಟಿವಿ ಆನ್ ಆಗಿರುತ್ತದೆ. ಟಿವಿಯಲ್ಲಿ ನಾಯಿ ತನ್ನ ಮಾಲೀಕರೊಂದಿಗೆ ವ್ಯಾಯಾಮ ಮಾಡುವುದನ್ನು ನೋಡಬಹುದು. ಟಿವಿಯಲ್ಲಿ ಮಾಲೀಕರ ಬೋಧನಾ ಕ್ರಮವನ್ನು ನಾಯಿಯೂ ಉತ್ತಮ ರೀತಿಯಲ್ಲಿ ಅನುಸರಿಸುತ್ತಿದೆ. ಟಿವಿಯಲ್ಲಿ ಮಾಲೀಕನನ್ನು ಅನುಸರಿಸಿ ವರ್ಕೌಟ್ ಮಾಡುವ ನಾಯಿಯನ್ನು ಅನುಸರಿ ನಾಯಿಯೊಂದು ವರ್ಕೌಟ್ ಮಾಡುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಟಿವಿಯಲ್ಲಿ ಕಾಣಿಸುವ ನಾಯಿಯನ್ನು ನೋಡಿದ ನಾಯಿ ಸ್ಫೂರ್ತಿ ಪಡೆದು ಭರ್ಜರಿ ವರ್ಕೌಟ್ ಮಾಡುತ್ತದೆ.

ಈ ನಾಯಿಯ ಜಾಣತಕ್ಕೆ ಸರಿಸಾಟಿಯಾದ ನಾಯಿ ಮತ್ತೊಂದಿಲ್ಲ
ವ್ಯಾಯಾಮ ಮಾಡುವುದರಲ್ಲಿ ಒಲವಿರುವ ಈ ಶ್ವಾನ ದೂರದರ್ಶನದಲ್ಲಿ ತೋರಿಸುವ ಸ್ಟೆಪ್ಸ್ ಅನ್ನು ಅತ್ಯಂತ ಜಾಣತನದಿಂದ ಅನುಸರಿಸುತ್ತದೆ. ಮೊದಲೇ ತರಬೇತಿ ಪಡೆದಿದ್ದರಂತೆ ನಾಯಿ ವರ್ಕೌಟ್ ಮಾಡುತ್ತದೆ. ಶ್ವಾನದ ಜಾಣ್ಮೆಯನ್ನು ಕಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡಲಾರಂಭಿಸಿದ್ದಾರೆ.

ವಿಡಿಯೋ ಮೆಚ್ಚಿಕೊಂಡ ಜನ
ಈ ತಮಾಷೆಯ ವಿಡಿಯೊವನ್ನು @MorissaSchwartz ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದುವರೆಗೆ ಲಕ್ಷಾಂತರ ವೀಕ್ಷಣೆ ಪಡೆದಿದೆ. ಜನರು ಈ ನಾಯಿಯ ಶೈಲಿಯನ್ನು ತುಂಬಾ ಇಷ್ಟಪಟ್ಟಿದ್ದಾರೆ. ಇಂತಹ ಶ್ವಾನದ ಕಸರತ್ತು ನೋಡಿ ಜನ ಕೂಡ ಸಾಕಷ್ಟು ಪ್ರೇರಣೆ ಪಡೆಯುತ್ತಿದ್ದಾರೆ.












Click it and Unblock the Notifications