ಮಕ್ಕಳ ಆಶ್ರಯ ಕೇಂದ್ರದಲ್ಲಿ ಬಾಲಕಿಗೆ ಚಪ್ಪಲಿಯಿಂದ ಥಳಿಸಿದ ಅಧಿಕಾರಿ: ಹೃದಯವಿದ್ರಾವಕ ವಿಡಿಯೋ ವೈರಲ್
ಆಗ್ರಾ ಸೆಪ್ಟೆಂಬರ್ 14: ಅಧಿಕಾರಿಯೊಬ್ಬರು ಬಾಲಕಿಗೆ ಚಪ್ಪಲಿಯಿಂದ ಥಳಿಸಿದ ಹೃದಯವಿದ್ರಾವಕ ಘಟನೆ ಆಗ್ರಾದ ಮಕ್ಕಳ ಆಶ್ರಯ ಕೇಂದ್ರದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಉತ್ತರ ಪ್ರದೇಶದ ಆಗ್ರಾದ ಮಕ್ಕಳ ಆಶ್ರಯ ಕೇಂದ್ರದ ಅಧೀಕ್ಷಕ ಪೂನಂ ಪಾಲ್ ಅವರು ಅಪ್ರಾಪ್ತ ಕೈದಿಯೊಬ್ಬರಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ಹಾಸಿಗೆಯ ಮೇಲೆ ಮಲಗಿದ ಬಾಲಕಿಗೆ ಕರುಣೆಯಿಲ್ಲದ ಮಹಿಳೆ ಚಪ್ಪಲಿಯಿಂದ ಥಳಿಸಿದ್ದಾಳೆ. ಆಗ್ರಾದ ಬಾಲ ಗೃಹ ಮಕ್ಕಳ ಆಶ್ರಯದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡ ಅಧಿಕಾರಿಯು ಈ ಆಶ್ರಯದ ಅಧಿಕೃತ ಸೂಪರಿಂಟೆಂಡೆಂಟ್ ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಅಧಿಕಾರಿಗಳು ಘಟನೆಯ ಬಗ್ಗೆ ಗಮನ ಹರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪ್ರೊಬೇಷನರಿ ಅಧಿಕಾರಿ (ಡಿಪಿಒ) ಅವರಿಗೆ ಆದೇಶಿಸಿದ್ದಾರೆ.
ಘಟನೆಯ ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್, ನಿರ್ದೇಶಕರು, ಲಕ್ನೋದಲ್ಲಿ ಮಹಿಳಾ ಕಲ್ಯಾಣ ಇಲಾಖೆಯ ಶಿಫಾರಸಿನ ಮೇರೆಗೆ ಡಿಪಿಒ ಅವರು ಮಕ್ಕಳ ಆಶ್ರಯಕ್ಕೆ ಭೇಟಿ ನೀಡಿದರು. ಬಳಿಕ ಅಧೀಕ್ಷಕ ಪೂನಂ ಪಾಲ್ ಅವರನ್ನು ಅಮಾನತುಗೊಳಿಸಿದ್ದಾರೆ. ಮಂಗಳವಾರ ನಗರದ ಮ್ಯಾಜಿಸ್ಟ್ರೇಟ್ ಅವರೊಂದಿಗೆ ಆಶ್ರಯ ಮನೆಗೆ ಭೇಟಿ ನೀಡಿದ ನಂತರ, ಡಿಪಿಒ ಅಜಯ್ ಪಾಲ್ ಸಿಂಗ್ ಅವರು ಬಾಲಕಿಯ ಮೇಲೆ ಚಪ್ಪಲಿಯಿಂದ ಥಳಿಸುವಿಕೆಯು ಸ್ವೀಕಾರಾರ್ಹವಲ್ಲ ಎಂದರು.
In #Agra's govt run children shelterhome (Pachkuiyaan), Poonam Lal, the center superintendent was caught slapping a girl with slippers. Earlier she was booked for abetment to suicide in #Prayagraj district in 2021 after a 15-yr-old girl allegedly killed her self in shelter home pic.twitter.com/JE5V56jR7l
— Arvind Chauhan 💮🛡️ (@Arv_Ind_Chauhan) September 12, 2023
ವರದಿಗಳ ಪ್ರಕಾರ ಘಟನೆಯು ಸೆಪ್ಟೆಂಬರ್ 4ರಂದು ನಡೆದಿದೆ. ಮಕ್ಕಳ ಆಶ್ರಯದಲ್ಲಿರುವ ಇನ್ನೊಬ್ಬ ಅಧಿಕಾರಿ ಕ್ಯಾಮರಾದಲ್ಲಿ ಈ ಘಟನೆಯನ್ನು ಸೆರೆಹಿಡಿದಿದ್ದಾರೆ. ಹಾಸಿಗೆಯ ಮೇಲೆ ಮಲಗಿರುವ ಅಪ್ರಾಪ್ತ ಬಾಲಕಿಯನ್ನು ಸೂಪರಿಂಟೆಂಡೆಂಟ್ ಪೂನಂ ಪಾಲ್ ತನ್ನ ಚಪ್ಪಲಿಯಿಂದ ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪಾಲ್ ಅವರ ಕ್ರಮಗಳ ಹಿಂದಿನ ಕಾರಣ ಮತ್ತು ಉದ್ದೇಶ ಇನ್ನೂ ತಿಳಿದುಬಂದಿಲ್ಲ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ವಿಚಾರಿಸಿದಾಗ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಪಾಲ್ ನಿರಾಕರಿಸಿದರು. ಈ ಬಗ್ಗೆ ತಾವು ಈಗಾಗಲೇ ಮಾಹಿತಿಯನ್ನು ನೀಡಿರುವುದಾಗಿ ಹೇಳಿದರು.
ನಾನು ಮತ್ತು ಸಿಟಿ ಮ್ಯಾಜಿಸ್ಟ್ರೇಟ್ ಮಂಗಳವಾರ ರಾಜಕಿಯಾ ಆಗ್ರಾದ ಮಕ್ಕಳ ಆಶ್ರಯ ಕೇಂದ್ರಕ್ಕೆ ಭೇಟಿ ನೀಡಿದ್ದೇವೆ ಮತ್ತು ಹುಡುಗಿ ತನ್ನನ್ನು ಇತರ ಮಕ್ಕಳೊಂದಿಗೆ ಸೇರಿಸದೆ ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಬಗ್ಗೆ ತನಿಖೆ ತಡೆಸಲಾಗುತ್ತಿದೆ ಎಂದು ಡಿಪಿಒ ಹೇಳಿದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications