ಮೋದಿ 'ರೆಡಾರ್' ಹೇಳಿಕೆಗೆ ನಕ್ಕು ನಲಿಸುವ ಟ್ವೀಟ್ ಪ್ರತಿಕ್ರಿಯೆ

ನವದೆಹಲಿ, ಮೇ 12: ಪ್ರಧಾನಿ ನರೇಂದ್ರ ಮೋದಿ ಅವರು ಸಂದರ್ಶನವೊಂದರಲ್ಲಿ ಬಾಲಕೋಟ್ ವೈಮಾನಿಕ ದಾಳಿ ಬಗ್ಗೆ ನೀಡಿದ ಹೇಳಿಕೆ ಈಗ ಹಾಸ್ಯಾಸ್ಪದವಾಗಿ ಸಾಮಾಜಿಕ ಜಾಲ ತಾಣಗಳ ತುಂಬ ಹರಡಿದೆ.

ಮೋದಿ ಹೇಳಿಕೆ ವಿರುದ್ಧ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಸೇರಿದಂತೆ ವಿಪಕ್ಷ ನಾಯಕರು ಒಂದು ಸುತ್ತಿನ ಪ್ರತಿಕ್ರಿಯೆ ನೀಡುತ್ತಿದ್ದಂತೆ ಇನ್ನೊಂದೆಡೆ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರಾಲ್ಸ್ ಮುಂದುವರೆದಿವೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಸಂದರ್ಶನದಲ್ಲಿ ಮಾತನಾಡುತ್ತಾ, ಬಾಲಕೋಟ್ ವೈಮಾನಿಕ ದಾಳಿ ವೇಳೆಯಲ್ಲಿ ಭಾರತದ ಯುದ್ಧ ವಿಮಾನಗಳು ಪಾಕಿಸ್ತಾನಿ ರೆಡಾರ್ ಗಳಿಗೆ ಕಾಣಿಸದಂತಾಗಲು ಮೋಡ ಹಾಗೂ ಮಳೆ ಕಾರಣವಾಗಲಿದೆ ಎಂಬ ಸಲಹೆ ನೀಡಿದ್ದೆ ಎಂದು ಮೋದಿ ಹೇಳಿದ್ದ ವಿಡಿಯೋ ತುಣುಕು ಈಗ ಟ್ವಿಟ್ಟರ್ ನಿಂದ ಬಿಜೆಪಿ ಡಿಲೀಟ್ ಆಗಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಬೇರೆ ಬೇರೆಯವರ ಐಡಿಗಳಿಂದ ಮತ್ತೆ ಮತ್ತೆ ಮೇಲಕ್ಕೆ ಬರುತ್ತಿದೆ.

ಚಂದ್ರಯಾನಕ್ಕೂ ಮೋದಿ ಸಲಹೆ

ಚಂದ್ರಯಾನಕ್ಕೆ ಇಸ್ರೋ ಇನ್ನು ಸಿದ್ಧವಾಗಿರಲಿಲ್ಲ. ತಜ್ಞರಿಗೆ ಈ ಬಗ್ಗೆ ಅನುಮಾನವಿತ್ತು. ಹುಣ್ಣಿಮೆ ದಿನದಂದು ಪ್ರಯತ್ನ ಪಡಿ ಎಂದು ನಾನು ಸಲಹೆ ನೀಡಿದೆ. ಹುಣ್ಣಿಮೆ ದಿನ ಹೆಚ್ಚು ವಿಸ್ತಾರವಾದ ಭೂಮಿ ಸಿಗಲಿದೆ ಎಂದು ಪ್ರಧಾನಿ ಮೋದಿ ಸಲಹೆ ನೀಡಿರಬಹುದು ಎಂದು ತಮಾಷೆಯಾಗಿ ಟ್ವೀಟ್.

ಮಲ್ಯ ಕೂಡಾ ಹೀಗೆ ಪರಾರಿಯಾಗಿರಬಹುದು

ಮೋಡದ ನೆರವಿನಿಂದ ಯಾರಿಗೂ ಕಾಣದಂತೆ ಮಲ್ಯ ಕೂಡಾ ಪರಾರಿಯಾಗಿರಬಹುದಲ್ಲ. ಭಾರತದಿಂದ ಪರಾರಿಯಾಗಲು ಇದು ಒಂದು ದಾರಿ ಎಂದು ಮೋಡ ಹಿಡಿದುಕೊಂಡು ನಿಂತಿರುವ ಮಲ್ಯ ಚಿತ್ರ ಹಾಕಲಾಗಿದೆ.

ಪಾಕಿಸ್ತಾನಿ ರೆಡಾರ್ ಚಿತ್ರ ಈಗ ಬಹಿರಂಗ

ಪಾಕಿಸ್ತಾನಿ ರೆಡಾರ್ ಚಿತ್ರ ಈಗ ಬಹಿರಂಗ ಎಂದು ಟಾಟಾ ಸ್ಕೈ ಡಿಶ್ ಚಿತ್ರ ಹಾಕಿ ತಮಾಷೆ ಮಾಡಲಾಗಿದೆ. ನೋ ಸಿಗ್ನಲ್ ಎಂದು ಬಂದರೆ ಸೆಟ್ ಟಾಪ್ ಬಾಕ್ಸ್ ಸಿಗ್ನಲ್ ಪಡೆಯುತ್ತಿಲ್ಲ ಎಂದಾದರೆ ಹೊರಗಡೆ ಮೋಡ, ಮಳೆ ಬರುತ್ತಿರಬಹುದು.

ಮಿರ್ಜಾ ಗಾಲಿಬ್ ಗೆ ಹೋಲಿಕೆ

ಮಿರ್ಜಾ ಗಾಲಿಬ್ ಗೆ ಹೋಲಿಸಿ ಮಿರ್ಜಾ ಕ್ಲೌಡಿ ಎಂದು ಮೋದಿ ಚಿತ್ರ ಹಾಕಿ, ಐದು ವರ್ಷ ಬಳಿ ಜೂಮ್ಲಾ(ಸುಳ್ಳು) ಹಾಕುತ್ತಿದ್ದೆ, ಮೋಡ ಕವಿದ ವಾತಾವರಣವಿದೆ ಹಾಗಾಗಿ, ರೆಡಾರ್ ನಲ್ಲಿ ಬರುವುದಿಲ್ಲ ಅನ್ಸುತ್ತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+