ತುಮಕೂರು ಲೋಕಸಭೆ: ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿಗೊಂದು ಭರವಸೆಯ ಚುಕ್ಕಿ

Recommended Video

      Lok Sabha Election 2019 : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

      ತುಮಕೂರು ಲೋಕಸಭಾ ಕ್ಷೇತ್ರದ ಪರಿಚಯ ಮಾಡಿಕೊಳ್ಳುವ ಪ್ರಯತ್ನ ಇದು. ಒಟ್ಟು ಹತ್ತು ತಾಲೂಕು ಇರುವ ತುಮಕೂರು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭೆ ವ್ಯಾಪ್ತಿಗೆ ಬರುತ್ತವೆ. ಶಿರಾ ವಿಧಾನಸಭಾ ಕ್ಷೇತ್ರ ಚಿತ್ರದುರ್ಗಕ್ಕೂ ಕುಣಿಗಲ್ ವಿಧಾನಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೂ ಬರುತ್ತವೆ.

      ಉಳಿದಂತೆ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರಗಳು ತುಮಕೂರು ಲೋಕಸಭಾ ವ್ಯಾಪ್ತಿಗೆ ಬರುತ್ತವೆ. 1951ರಿಂದ 2014ರ ತನಕ ನಡೆದ ಸಂಸತ್ ಚುನಾವಣೆಯ ಪೈಕಿ 10 ಬಾರಿ ಇಲ್ಲಿ ಕಾಂಗ್ರೆಸ್ ಗೆದ್ದಿದೆ. ತಲಾ 1 ಸಲ ಪ್ರಜಾ ಸೋಷಿಯಲಿಸ್ಟ್ ಪಕ್ಷ, ಜನತಾದಳ ಮತ್ತು 4 ಸಲ ಬಿಜೆಪಿ ಮತದಾರರು ಆಯ್ಕೆ ಮಾಡಿದ್ದಾರೆ.

      Tumakuru lok sabha constituency profile in Kannada

      ಸದ್ಯಕ್ಕೆ ಅಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿದವರು ಕಾಂಗ್ರೆಸ್ ನ ಸ್ಪರ್ಧಿಸಿದ ಎಸ್.ಪಿ.ಮುದ್ದಹನುಮೇಗೌಡ. ಎಪ್ಪತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹಿರಿಯ ರಾಜಕಾರಣಿ- ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರನ್ನು ಮಣಿಸಿದರು. ಕಳೆದ ಬಾರಿ ಚುನಾವಣೆಯಲ್ಲಿ ಮತದಾನ ಮುಗಿದ ನಂತರ ಜೆಡಿಎಸ್ ಅಭ್ಯರ್ಥಿ ಎಂ.ಕೃಷ್ಣಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕೊನೆ ಕ್ಷಣದಲ್ಲಿ ಚುನಾವಣೆ ಅಖಾಡಕ್ಕೆ ಇಳಿದಿದ್ದ ಅವರು, ಎರಡೂವರೆ ಲಕ್ಷ ಮತಗಳನ್ನು ಪಡೆದಿದ್ದರು.

      ತುಮಕೂರು ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಭರ್ಜರಿ ಫಸಲು ನೀಡುತ್ತದೆ ಎಂಬುದೇನೋ ನಿಜ. ಆದರೆ ಕಾಂಗ್ರೆಸ್ ನಿಂದಲೇ ಬಿಜೆಪಿಗೆ ವಲಸೆ ಬಂದಿರುವ ಜಿ.ಎಸ್.ಬಸವರಾಜು ಪಕ್ಷವನ್ನೂ ಮೀರಿ ಜನ ಸಂಪರ್ಕ ಹೊಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರದಿಂದ ಅವರ ಮಗ ಜ್ಯೋತಿ ಗಣೇಶ್ ಬಿಜೆಪಿಯಿಂದ ಸ್ಪರ್ಧೆ ಮಾಡಿ, ಗೆದ್ದಿರುವುದೇ ಅದಕ್ಕೆ ಸಾಕ್ಷಿ.

      ಇಡೀ ಜಿಲ್ಲೆಯಲ್ಲಿ ಬಹುತೇಕ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಪ್ರಭಾವವೇ ಎದ್ದು ಕಾಣುತ್ತದೆ. ಅಲ್ಲೊಂದು ಇಲ್ಲೊಂದು ಭರವಸೆಯ ಚುಕ್ಕೆಗಳಂತೆ ಬಿಜೆಪಿಗೆ ಸ್ಥಾನಗಳು ಲಭಿಸಿವೆ.

      Tumakuru lok sabha constituency profile in Kannada

      ಸಂಸದ ಎಸ್.ಪಿ.ಮುದ್ದಹನುಮೇಗೌಡರು ಸಂಸತ್ ನ ಅಧಿವೇಶನದಲ್ಲಿ ಹೇಗೆ ಪಾಲ್ಗೊಂಡಿದ್ದಾರೆ ಅನ್ನೋದು ಗಮನಿಸಿದರೆ ಅಂಕಿ-ಅಂಶ ಆಶಾದಾಯಕವಾಗಿದೆ.

      ಸಂಸತ್ ನಲ್ಲಿ ಆದ ಚರ್ಚೆಯಲ್ಲಿ ಮುದ್ದೇಹನುಮೇಗೌಡರು ಭಾಗಿ ಆಗಿರುವುದು 109 ಬಾರಿ. ರಾಜ್ಯ್ಸದ ವಿಷಯಗಳ ಸರಾಸರಿ ಪ್ರಮಾಣ 45.6, ರಾಷ್ಟ್ರೀಯ ವಿಷಯಗಳ ಸರಾಸರಿ ಪ್ರಮಾಣ 63.8, ಸಂಸತ್ ನಲ್ಲಿ 595 ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಸರಾಸರಿ ಪ್ರಶ್ನೆಗಳು 350, ರಾಷ್ಟ್ರಕ್ಕೆ ಸಂಬಂಧಿಸಿದ ಸರಾಸರಿ ಪ್ರಶ್ನೆಗಳು 273. ಎಸ್ ಪಿಎಂ ಹಾಜರಾತಿ ಪ್ರಮಾಣ 92%.

      ರಾಜ್ಯದ ಸರಾಸರಿ ಹಾಜರಾತಿ ಪ್ರಮಾಣವಾದ 78%ಗೆ ಹೋಲಿಸಿದರೆ ಎಸ್.ಪಿ.ಮುದ್ದಹನುಮೇಗೌಡರು ಸಂಸತ್ ಅಧಿವೇಶನದಲ್ಲಿ ಎಷ್ಟು ಸಕ್ರಿಯರಾಗಿ ಭಾಗಿಯಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

      Tumakuru lok sabha constituency profile in Kannada

      ತುಮಕೂರು ಜಿಲ್ಲೆಯ ಮತದಾರರ ಸಂಖ್ಯೆ ತಿಳಿದುಕೊಳ್ಳಿ. ಒಟ್ಟು ಮತದಾರರ ಸಂಖ್ಯೆ 15,18,518. ಆ ಪೈಕಿ ಪುರುಷ ಮತದಾರರು 7,64,561 ಹಾಗೂ ಮಹಿಳಾ ಮತದಾರರು 7,53,957. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆದ ಮತದಾನ ಪ್ರಮಾಣ 73%.

      ತುಮಕೂರಿನ ಜನಸಂಖ್ಯೆ ಮತ್ತಿತರ ವಿವರಗಳು ಹೀಗಿವೆ: (2011)

      ಜನಸಂಖ್ಯೆ 26.79 ಲಕ್ಷ

      ಪುರುಷರು 13,50,594

      ಮಹಿಳೆಯರು 13,28,386

      ಜನಸಂಖ್ಯಾ ಏರಿಕೆ ಪ್ರಮಾಣ 3.65%

      ಭೌಗೋಳಿಕ ವ್ಯಾಪ್ತಿ (ಚದರ ಕಿ.ಮೀ.) 10,597

      ಲಿಂಗಾನುಪಾತ (1000 ಮಂದಿಗೆ) 984

      ಸರಾಸರಿ ಸಾಕ್ಷರತಾ ಪ್ರಮಾಣ 75.14%

      Tumakuru lok sabha constituency profile in Kannada

      ಇನ್ನು ಧರ್ಮದ ಆಧಾರದಲ್ಲಿ ಜನಸಂಖ್ಯೆಯ ವರ್ಗೀಕರಣ ಹೇಗಿದೆ ಎಂಬ ವಿವರ ಇಲ್ಲಿದೆ:

      ಹಿಂದೂ 90.10%

      ಮುಸ್ಲಿಮ್ 9.18%

      ಕ್ರಿಶ್ಚಿಯನ್ 0.34%

      ಸಿಖ್ 0.02%

      ಬೌದ್ಧರು 0.01%

      ಜೈನರು 0.19%

      ಇತರರು 0.01%

      ಮಾಹಿತಿ ಇಲ್ಲದ್ದು 0.16%

      ತುಮಕೂರು ಜಿಲ್ಲೆ ಬಹು ವೈವಿಧ್ಯದಿಂದ ಕೂಡಿದೆ. ಇಲ್ಲಿನ ಸಿದ್ದಗಂಗಾ ಮಠ, ಮಧುಗಿರಿ ಏಕಶಿಲಾ ಬೆಟ್ಟ, ತಿಮ್ಮಲಾಪುರ ಕರಡಿ ಧಾಮ, ಜಯಮಂಗಲಿ ಕೃಷ್ಣಮೃಗ ಧಾಮ, ದೇವರಾಯನ ದುರ್ಗ, ತಿಪಟೂರಿನ ಅರಳಗುಪ್ಪೆ, ಹೆಬ್ಬೂರಿನ ಕಾಮಾಕ್ಷಿ ದೇವಸ್ಥಾನ ಪ್ರಮುಖ ಪ್ರವಾಸಿ ತಾಣಗಳು. ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯ ಧರ್ಮಾವರಂ ಸೀರೆ, ತಿಪಟೂರಿನ ಕೊಬ್ಬರಿ ಬಹಳ ಹೆಸರುವಾಸಿ. ಗುಬ್ಬಿ ವೀರಣ್ಣ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಇನ್ನೂ ಹಲವ ಮಹನೀಯರು ಇದೇ ನೆಲದವರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+