ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Lunar Eclipse 2022: ಯಾವಾಗ ಸಂಭವಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ? ಎಲ್ಲೆಲ್ಲಿ ಗೋಚರಿಸುತ್ತೆ?

|
Google Oneindia Kannada News

2022 ರ ಕೊನೆಯ ಸೂರ್ಯಗ್ರಹಣದ ನಂತರ, ಈಗ ವರ್ಷದ ಕೊನೆಯ ಚಂದ್ರಗ್ರಹಣವೂ ಸಂಭವಿಸಲಿದೆ. ದೀಪಾವಳಿಯ ಮರುದಿನ ಕೊನೆಯ ಸೂರ್ಯಗ್ರಹಣ ಸಂಭವಿಸಿದೆ. ಈಗ ಕೊನೆಯ ಚಂದ್ರಗ್ರಹಣವು ನವೆಂಬರ್ 08 ರಂದು ಅಂದರೆ ಸೂರ್ಯಗ್ರಹಣ ನಡೆದು ನಿಖರವಾಗಿ 15 ದಿನಗಳ ನಂತರ ಸಂಭವಿಸಲಿದೆ. ಮೊದಲ ಚಂದ್ರಗ್ರಹಣವು 16 ಮೇ 2022 ರಂದು ಸಂಭವಿಸಿತು. ಕೊನೆಯ ಚಂದ್ರಗ್ರಹಣ ನವೆಂಬರ್ 08ರಂದು ಸಂಭವಿಸಲಿದ್ದು ಇದು ಕಾರ್ತಿಕ ಮಾಸದ ಹುಣ್ಣಿಮೆಯ ದಿನವೂ ಆಗಿದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ, ದೀಪಾವಳಿ ಹಬ್ಬವನ್ನು ಹಲವೆಡೆ ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ದೀಪಾವಳಿಯ ದಿನದಂದು ಸಂಭವಿಸುವ ಚಂದ್ರಗ್ರಹಣದ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ಹಾಗಾದರೆ ಚಂದ್ರಗ್ರಹಣದ ದಿನಾಂಕ, ಸಮಯ ಮತ್ತು ಸೂತಕ ಅವಧಿಯನ್ನು ನಾವು ತಿಳಿಯೋಣ...

2022 ರ ಕೊನೆಯ ಚಂದ್ರಗ್ರಹಣ ಯಾವಾಗ?

2022 ರ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ನವೆಂಬರ್ 8 ರಂದು ಸಂಜೆ 5:32 ಕ್ಕೆ ಪ್ರಾರಂಭವಾಗುತ್ತದೆ ಮತ್ತು ರಾತ್ರಿ 7.27 ರವರೆಗೆ ಇರುತ್ತದೆ.

Total Lunar Eclipse November 2022: Know date, timings, Visibility, where and how to watch Chandra Grahan

2022 ರ ಚಂದ್ರಗ್ರಹಣದ ಸೂತಕ ಅವಧಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರಗ್ರಹಣದ ಸಮಯದಲ್ಲಿ, ಸೂತಕ ಅವಧಿಯು ಗ್ರಹಣ ಪ್ರಾರಂಭವಾಗುವ 9 ಗಂಟೆಗಳ ಮೊದಲು ಇರಲಿದೆ. ಈ ಚಂದ್ರಗ್ರಹಣವು ಭಾರತದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಆದ್ದರಿಂದ, ಚಂದ್ರಗ್ರಹಣದ ಸೂತಕ ಅವಧಿಯು ಮಾನ್ಯವಾಗಿರುತ್ತದೆ.

ಕೊನೆಯ ಚಂದ್ರಗ್ರಹಣ ಎಲ್ಲಿ ಕಾಣಿಸುತ್ತದೆ?

2022 ರ ಕೊನೆಯ ಚಂದ್ರಗ್ರಹಣ ಭಾರತದಲ್ಲಿ- ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ, ಗುವಾಹಟಿಯಲ್ಲಿ ಗೋಚರಿಸುತ್ತದೆ ಮತ್ತು ಜಗತ್ತಿನಲ್ಲಿ - ಉತ್ತರ ಮತ್ತು ಪೂರ್ವ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ, ಉತ್ತರ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಕಾಣಿಸುತ್ತದೆ.

Total Lunar Eclipse November 2022: Know date, timings, Visibility, where and how to watch Chandra Grahan

ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ?

ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರ ಗ್ರಹಣವು ಭೌಗೋಳಿಕ ವಿದ್ಯಮಾನವಾಗಿದ್ದರೂ, ಜ್ಯೋತಿಷ್ಯದಲ್ಲಿ ಧರ್ಮಗ್ರಂಥಗಳಲ್ಲಿ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಚಂದ್ರಗ್ರಹಣಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳು

1. ಚಂದ್ರಗ್ರಹಣದ ಸೂತಕವು ಗ್ರಹಣಕ್ಕೆ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ.

2. ಗರ್ಭಿಣಿಯರು ಗ್ರಹಣದ ಸಮಯದಲ್ಲಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

3. ಸೂತಕ ಅವಧಿಯ ಪ್ರಾರಂಭದ ನಂತರ, ಯಾವುದೇ ರೀತಿಯ ಮಂಗಳಕರ ಮತ್ತು ಶುಭ ಕೆಲಸವನ್ನು ಪ್ರಾರಂಭಿಸುವುದು ಅಥವಾ ಪೂಜಿಸುವುದು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ.

Total Lunar Eclipse November 2022: Know date, timings, Visibility, where and how to watch Chandra Grahan

4. ಚಂದ್ರಗ್ರಹಣದ ಸಮಯದಲ್ಲಿ ಪ್ರಯಾಣ ಮಾಡಬಾರದು.

5. ಗ್ರಹಣದ ಸಮಯದಲ್ಲಿ ತಪ್ಪಾಗಿಯೂ ಮಲಗಬೇಡಿ

6. ಸೂತಕದ ಕಾಲದಿಂದ ಚಂದ್ರಗ್ರಹಣದ ಅಂತ್ಯದವರೆಗೆ ಚೂಪಾದ ವಸ್ತುವನ್ನು ಬಳಸಬಾರದು.

English summary
Total Lunar Eclipse November 2022: Know date, timings, Visibility, where and how to watch Chandra Grahan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X