Times-Now ಸಮೀಕ್ಷೆ: ಯುಪಿ, ಉತ್ತರಾಖಂಡ ಮತ್ತೆ ಬಿಜೆಪಿ ತೆಕ್ಕೆಗೆ

ಮುಂದಿನ ತಿಂಗಳು ಉತ್ತರ ಪ್ರದೇಶ, ಗೋವಾ, ಮಣಿಪುರಮ ಉತ್ತರಾಖಂಡ, ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಎಲ್ಲಾ ಪಕ್ಷಗಳು ಚುನಾವಣೆಯ ತಯಾರಿಯಲ್ಲಿ ಇದೆ. ಈ ನಡುವೆ ಹಲವಾರು ಚುನಾವಣಾ ಪೂರ್ವ ಸಮೀಕ್ಷೆಗಳು ನಡೆಯುತ್ತಿದೆ. ಈ ಮಧ್ಯೆ ಟೈಮ್ಸ್‌ ನೌ ಸಮೀಕ್ಷೆಯು ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಮತ್ತೆ ಬಿಜೆಪಿ ಗದ್ದುಗೆಯನ್ನು ಏರಿಲಿದೆ ಎಂದು ತಿಳಿಸಿದೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಈ ಹಿಂದೆ ನಡೆದ ಟೈಮ್ಸ್ ನೌ ಚುನಾವಣಾಪೂರ್ವ ಸಮೀಕ್ಷೆಯು ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರವನ್ನು ಪಡೆಯಲಿದೆ. ಭರ್ಜರಿ ಬಹುಮತವನ್ನು ಬಿಜೆಪಿಯು ಗಳಿಸಲಿದೆ ಎಂದು ಹೇಳಿತ್ತು. ಈ ಬಳಿಕ ಇಂದು ಟೈಮ್ಸ್‌ ನೌ ಪಂಚ ರಾಜ್ಯಗಳ ಜನರ ಅಭಿಪ್ರಾಯದ ಸಮೀಕ್ಷೆ ನಡೆಸಿ ನಮ್ಮ ಮುಂದೆ ಇರಿಸಿದೆ. ಈ ಸಮೀಕ್ಷೆಯ ಪ್ರಕಾರ ಬಿಜೆಪಿಯು ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಮತ್ತೆ ಅಧಿಕಾರವನ್ನು ಪಡೆಯಲಿದೆ. ಹಾಗಾದರೆ ಉಳಿದ ರಾಜ್ಯಗಳ ಬಗ್ಗೆ ಟೈಮ್ಸ್‌ ನೌ ಸಮೀಕ್ಷೆ ಏನು ಹೇಳುತ್ತದೆ ಎಂದು ತಿಳಿಯಲು ಮುಂದೆ ಓದಿ.

 ಉತ್ತರ ಪ್ರದೇಶ ಸಮೀಕ್ಷೆ

ಉತ್ತರ ಪ್ರದೇಶ ಸಮೀಕ್ಷೆ

ದೇಶದಲ್ಲಿ ಅತೀ ಹೆಚ್ಚು ವಿಧಾನ ಸಭೆ ಕ್ಷೇತ್ರವನ್ನು ಉತ್ತರ ಪ್ರದೇಶ ಹೊಂದಿದ್ದು, ಉತ್ತರ ಪ್ರದೇಶವು ಒಟ್ಟು 403 ಸದಸ್ಯರನ್ನು ಹೊಂದಿದೆ. ಟೈಮ್ಸ್ ನೌ ನಡೆಸಿದ ಅಭಿಪ್ರಾಯ ಸಂಗ್ರಹದ ಪ್ರಕಾರ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಯು 2022 ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಮರಳಲಿದೆ. ಸಮಾಜವಾದಿ ಪಕ್ಷವು 2017 ರ ಚುನಾವಣೆಗಿಂತ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಕಾಂಗ್ರೆಸ್ ಅತ್ಯಂತ ಕಳಪೆ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಉತ್ತರ ಪ್ರದೇಶದ ಮುಸ್ಲಿಮರು ಅಧಿಕವಾಗಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಆದ್ಯತೆಯನ್ನು ನೀಡಲಿದ್ದಾರೆ ಎಂದು ಸಮೀಕ್ಷೆಯು ಹೇಳಿದೆ. ಬಿಜೆಪಿಯು ಶೇಕಡ 3.3ರಷ್ಟು, ಎಸ್‌ಪಿ ಶೇಕಡ 48.1, ಬಿಎಸ್‌ಪಿ ಶೇ 16.6 , ಕಾಂಗ್ರೆಸ್‌ ಶೇ 10.7 , ಎಐಎಂಐಎಂ ಶೇಕಡ 19.7 ಮುಸ್ಲಿಮರ ಮತವನ್ನು ಪಡೆಯಲಿದೆ.

 ಪಂಜಾಬ್‌ ಸಮೀಕ್ಷೆ

ಪಂಜಾಬ್‌ ಸಮೀಕ್ಷೆ

ಪಂಜಾಬ್‌ನಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಟೈಮ್ಸ್ ನೌ ನಡೆಸಿದ ಅಭಿಪ್ರಾಯ ಸಂಗ್ರಹದ ಪ್ರಕಾರ 2022 ರ ಪಂಜಾಬ್ ಚುನಾವಣೆಗಳಲ್ಲಿ ಎಎಪಿ ಗರಿಷ್ಠ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ. ಇನ್ನು ಚುನಾವಣಾ ಸಮೀಕ್ಷೆಯ ಪ್ರಕಾರ ಜನರು ಎಎಪಿ ನಾಯಕ ಭಗವಂತ್ ಮಾನ್‌ರನ್ನು ಪಂಜಾಬ್‌ನ ಮುಂದಿನ ಸಿಎಂ ಆಗಬೇಕು ಎಂದು ಬಯಸಿದ್ದಾರೆ. ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್‌ನಲ್ಲಿ ಸರ್ಕಾರ ರಚಿಸುವ ಹಾದಿಯಲ್ಲಿದೆ. ಟೈಮ್ಸ್ ನೌ ಒಪಿನಿಯನ್ ಪೋಲ್ ಸಮೀಕ್ಷೆಯ ಪ್ರಕಾರ ಶೇಕಡಾ 41.10 ರಷ್ಟು ಎಎಪಿ ಗೆಲುವು ಸಾಧಿಸಲಿದೆ. ಶೇಕಡ 33.70 ರಷ್ಟು ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಇಳಿಯಲಿದೆ. ಬಿಜೆಪಿ ಮತ್ತು ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಮೈತ್ರಿಯು ಕೇವಲ ಶೇಕಡ 3.49ರಷ್ಟು ಮತವನ್ನು ಪಡೆಯಲಿದೆ.

 ಉತ್ತರಾಖಂಡ ಸಮೀಕ್ಷೆ

ಉತ್ತರಾಖಂಡ ಸಮೀಕ್ಷೆ

ಟೈಮ್ಸ್ ನೌ ಒಪಿನಿಯನ್ ಪೋಲ್ ಸಮೀಕ್ಷೆಯು 2022ರ ಪ್ರಕಾರ ಉತ್ತರಾಖಂಡ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಸಮೀಕ್ಷೆಯ ಪ್ರಕಾರ, ಪ್ರಸ್ತುತ ಪುಷ್ಕರ್ ಸಿಂಗ್ ಧಾಮಿ ರಾಜ್ಯದಲ್ಲಿ ಸಿಎಂ ಅಭ್ಯರ್ಥಿ ಆಗಿದ್ದಾರೆ. 2022 ರ ಉತ್ತರಾಖಂಡ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಎಂದು ಸಮೀಕ್ಷೆಯು ಹೇಳಿದೆ. ಆದರೆ ಕಾಂಗ್ರೆಸ್‌ ನಾಯಕರು ಮಾತ್ರ ರಾಜ್ಯದಲ್ಲಿ ಅಧಿಕಾರ ಪಡೆಯುವ ಭರವಸೆಯಲ್ಲಿ ಇದ್ದಾರೆ. 2021 ರ ಉತ್ತರಾಖಂಡ ಚುನಾವಣೆಯಲ್ಲಿ ರಾವತ್ ಆಡಳಿತದ ಚುಕ್ಕಾಣಿ ಹಿಡಿದಾಗ ಕಾಂಗ್ರೆಸ್‌ಗೆ ಏನಾಯಿತು ಎಂಬುದನ್ನು ಎಲ್ಲರೂ ನೋಡಿದ್ದಾರೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ರಾವತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 ಗೋವಾ ಸಮೀಕ್ಷೆ

ಗೋವಾ ಸಮೀಕ್ಷೆ

ಟೈಮ್ಸ್ ನೌ ಒಪಿನಿಯನ್ ಪೋಲ್ ಸಮೀಕ್ಷೆಯ ಪ್ರಕಾರ ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು 2022 ರ ಗೋವಾ ಚುನಾವಣೆಯಲ್ಲಿ ಬಿಜೆಪಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಕರಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ. ಆದರೆ ರಾಜ್ಯದಲ್ಲಿ ಕೇಸರಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕೂಡಾ ಸಮೀಕ್ಷೆ ಹೇಳಿದೆ. 2022 ರ ಗೋವಾ ಚುನಾವಣೆಯ ನಂತರ ಪ್ರಮೋದ್ ಸಾವಂತ್ ಮುಂದಿನ ಸಿಎಂ ಆಗಿ ಮುಂದುವರಿಯಬೇಕು ಎಂದು ಸುಮಾರು ಶೇಕಡ 24ರಷ್ಟು ಜನರು ಮತ ಚಲಾಯಿಸಿದ್ದಾರೆ. ಆದರೆ ಪ್ರಮೋದ್ ಸಾವಂತ್ ನೇತೃತ್ವದ ಆಡಳಿತದ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಟೈಮ್ಸ್ ನೌನ ಅಭಿಪ್ರಾಯ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ 53 ಪ್ರತಿಶತಕ್ಕೂ ಹೆಚ್ಚು ಜನರು ಹೇಳಿದ್ದಾರೆ. 2022 ರ ಗೋವಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಎಎಪಿಗೆ ಉತ್ತಮ ಅವಕಾಶವಿದೆ ಎಂದು ಸಮೀಕ್ಷೆ ಹೇಳಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+