ಅಲೆಲೇ.... ಏನ್ ಬ್ಯಾಟಿಂಗ್ ಮಾಡ್ತಾನ್ ರೀ ಈ ಪುಟ್ಟ ಪೋರ...!
ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಮೂರು ವರ್ಷದ ಆಸ್ಟ್ರೇಲಿಯಾದ ಮಗುವೊಂದು ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ತೋರಿಸುತ್ತಿದೆ. ಮುದ್ದಾದ ಮಗು ವೃತ್ತಿಪರ ಕ್ರಿಕೆಟ್‌ನ ಶೈಲಿಯನ್ನು ಅನುಕರಿಸಿದ್ದು ಎಲ್ಲರ ಗಮನ ಸೆಳೆದಿದೆ. ಮಗು ಬ್ಯಾಟಿಂಗ್ ಮಾಡುವ ಮೂಲಕ ಸಿಕ್ಸರ್ ಬಾರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಐಸಿಸಿ ಕಿರಿಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಯುವ ಪಡೆಗೆ ನಿರಾಶೆ ಎದುರಾಗಿದೆ.
ದಕ್ಷಿಣ ಆಫ್ರಿಕಾದ ಬೆನೋನಿಯ ವಿಲ್ಲೋಮೋರ್ ಪಾರ್ಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಗೆಲುವಿಗೆ 254 ರನ್‌ಗಳ ಗುರಿ ಬೆನ್ನತ್ತಿದ್ದ ಉದಯ್ ಸಹಾರಣ್ ಸಾರಥ್ಯದ ಯಂಗ್ ಇಂಡಿಯಾ 43.5 ಓವರ್‌ಗಳಲ್ಲಿ 174 ರನ್‌ಗಳಿಗೆ ಆಲ್‌ಔಟ್ ಆಯಿತು. ಭಾರತ ತಂಡಕ್ಕೆ 79 ರನ್‌ಗಳ ಸೋಲುಣಿಸಿದ ಆಸ್ಟ್ರೇಲಿಯಾ ತಂಡ 79 ರನ್‌ಗಳ ಜಯದೊಂದಿಗೆ ನಾಲ್ಕನೇ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.

ಇದೇ ಖುಷಿಯಲ್ಲಿ ಆಸ್ಟ್ರೇಲಿಯಾದ ಮಗುವೊಂದು ಅರ್ಧಶತಕ ಬಾರಿಸಿ ತನ್ನ ಕ್ಯಾಪ್ ತೆಗೆದು ಬ್ಯಾಟ್ ಎತ್ತಿ ಹಿಡಿದು ಥೇಟ್ ಬ್ಯಾಟ್ಸ್ಮನ್‌ನಂತೆ ಫೋಸ್ ಕೊಟ್ಟಿದೆ. ಇದು ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದೆ. ವಿಡಿಯೋದಲ್ಲಿ ಬ್ಯಾಟಿಂಗ್ ಮಾಡುವ ಮಗು ರನ್ ಮಾಡುವಾಗ ಕೆಳಗೆ ಬಿದ್ದು ಬ್ಯಾಟ್ ಮೂಲಕ ತನ್ನ ಗುರಿ ಮುಟ್ಟುತ್ತದೆ. ಈ ಮಗುವಿನ ಮುದ್ದಾದ ಬ್ಯಾಟಿಂಗ್ ಶೈಲಿಗೆ ಜನ ಫಿದಾ ಆಗಿದ್ದಾರೆ.
ಈ ಪುಟ್ಟ್ ಮಗು ಬ್ಯಾಟಿಂಗ್ ಮಾಡೋದು ಅಂದ್ರೇನು, ಒಬ್ಬ ಬ್ಯಾಟ್ಮ್ಸ್‌ಮನ್‌ನಂತೆ ಫೋಸ್ ಕೊಡುವುದು ಅಂದರೇನು? ಜನ ಬೆರಗಾಗಿ ವಿಡಿಯೋವನ್ನು ನೋಡಿದ್ದಾರೆ. ಈ ಬಾಲಕ ಥೇಟ್ ಬ್ಯಾಟ್ಸ್ಮ್‌ಮನ್fನಂತೆ ಕಾಣಿಸಿಕೊಂಡಿದೆ. ಈ ವೀಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಕಾಮೆಂಟ್‌ಗಳು ಹೀಗಿವೆ...
ಒಬ್ಬ ಬಳಕೆದಾರರು "ಮಿನಿ ಸ್ಟೀವ್ ಸ್ಮಿತ್" ಎಂದು ವೀಡಿಯೊಕ್ಕೆ ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು "25.7 ಕೋಟಿ ಸಿಎಸ್‌ಕೆ ಬಲಗೈ ಬ್ಯಾಟ್ಸ್‌ಮನ್" ಎಂದು ಬರೆದಿದ್ದಾರೆ.
ಇನ್ನೊಬ್ಬರು ಬರೆದಿದ್ದಾರೆ, "ಆಸ್ಟ್ರೇಲಿಯಾ ಹೆಚ್ಚು ಟ್ರೋಫಿಗಳನ್ನು ಗೆದ್ದ ಕಾರಣ ... ಬಾಲ್ಯದಿಂದಲೂ ಅಭ್ಯಾಸ ಮತ್ತು ಪೋಷಕರ ಬೆಂಬಲ ಸಿಕ್ಕಿದೆ" ಎಂದಿದ್ದಾರೆ.
ಅಂಡರ್-19 ಫೈನಲ್ ಪಂದ್ಯದ ಕುರಿತು ಮಾತನಾಡುವುದಾದರೆ, ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 253 ರನ್ ಗಳಿಸಿತು. ಎಡಗೈ ಆಟಗಾರ ಹರ್ಜಸ್ ಸಿಂಗ್ 55 ರನ್ ಗಳಿಸಿ ಗಟ್ಟಿಯಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಫೈನಲ್‌ಗೂ ಮುನ್ನ ಭಾರತದ ಬ್ಯಾಟಿಂಗ್ ಬಲವಾಗಿತ್ತು, ಆದರೆ ಆಸ್ಟ್ರೇಲಿಯಾದ ವೇಗದ ಬೌಲಿಂಗ್ ದಾಳಿಯ ಮುಂದೆ ಎಂಟು ವಿಕೆಟ್‌ಗೆ 122 ರನ್‌ಗಳಿಗೆ ಕುಸಿಯಿತು.
ಆರಂಭಿಕರಾದ ಆದರ್ಶ್ ಸಿಂಗ್ (47) ಮಾತ್ರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಲ್ಲಿ ಮಿಂಚಿದರು. ಮುರುಗನ್ ಅಭಿಷೇಕ್ (42) ತಂಡವನ್ನು ಸ್ವಲ್ಪ ಮುನ್ನಡೆಸಿದರು. ಬಳಿಕ ತಂಡ 174 ರನ್‌ಗಳಿಗೆ ಆಲೌಟ್ ಆಯಿತು. ವೇಗಿ ಮಹಾಲಿ ಬಿಯರ್ಡ್‌ಮನ್ 15 ರನ್‌ಗಳಿಗೆ ಮೂರು ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಆಫ್ ಸ್ಪಿನ್ನರ್ ರಾಫೆ ಮೆಕ್‌ಮಿಲನ್ 41 ರನ್‌ಗಳಿಗೆ ಮೂರು ವಿಕೆಟ್ ಪಡೆದರು.












Click it and Unblock the Notifications