ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್ ಇತಿಹಾಸ ತಿಳಿಯಿರಿ
ಟ್ವಿಟ್ಟರ್ ಅನ್ನು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಖರೀದಿ ಮಾಡುವ ಬಗ್ಗೆ ಪ್ರಸ್ತುತ ಭಾರೀ ಚರ್ಚೆಗಳು ನಡೆಯುತ್ತಿದೆ. ಟ್ವಿಟ್ಟರ್ ತಾನಾಗಿಯೇ ಎಲಾನ್ ಮಸ್ಕ್ ಗೆ ಮಾರಾಟವಾಗುವ ಸಾಧ್ಯತೆ ಇದೆ ಎಂದು ವರದಿ ಉಲ್ಲೇಖ ಮಾಡಿದೆ.
ಟ್ವಿಟ್ಟರ್ ಆರಂಭದಲ್ಲೇ ತನ್ನ ಬಾಹುವನ್ನು ಶೀಘ್ರವಾಗಿ ವಿಸ್ತಾರ ಮಾಡಿದೆ. ಈಗ ಟ್ವಿಟ್ಟರ್ ಅನ್ನು ಮಾರಾಟ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಟೆಸ್ಲಾ ಸಂಸ್ಥಾಪಕರು ಈಗಾಗಲೇ ಟ್ವಿಟರ್‌ನ ಅತಿದೊಡ್ಡ ಷೇರುದಾರರಾಗಿದ್ದಾರೆ. ಸುಮಾರು ಶೇಕಡ 9.1ರಷ್ಟು ಟ್ವಿಟ್ಟರ್ ಪಾಲುದಾರಿಕೆ ಎಲಾನ್ ಮಸ್ಕ್ ಹೊಂದಿದ್ದು ಈಗ ಟ್ವಿಟ್ಟರ್ ಅನ್ನು ತಾವೇ ಸಂಪೂರ್ಣವಾಗಿ ಖರೀದಿ ಮಾಡುವ ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿ ಉಲ್ಲೇಖ ಮಾಡಿದೆ.
ಹಾಗೆಯೇ ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ತನ್ನ ಮಾಲೀಕತ್ವಕ್ಕೆ ಪಡೆದರೆ ಹಲವಾರು ಬದಲಾವಣೆಗಳನ್ನು ಮಾಡುವ ಸಾಧ್ಯತೆಯ ಬಗ್ಗೆಯೂ ಸುದ್ದಿಗಳು ಆಗುತ್ತಿದೆ. ಎಲಾನ್ ಮಸ್ಕ್ ಕಳೆದ ಒಂದು ವರ್ಷದಲ್ಲಿ ಮಾಡಿದ ಟ್ವೀಟ್‌ಗಳು ಇದಕ್ಕೆ ಪುಷ್ಠಿ ನೀಡಿದೆ. ಈ ನಡುವೆ ಟ್ವಿಟ್ಟರ್ ಬೆಳೆದು ಬಂದ ಹಾದಿ, ಇತಿಹಾಸವನ್ನು ನಾವು ತಿಳಿಯೋಣ ಮುಂದೆ ಓದಿ...

ಟ್ವಿಟ್ಟರ್ ಆರಂಭ ಯಾವಾಗ?
ಟ್ವಿಟರ್ ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆ 2006 ರಲ್ಲಿ ಹೊಂದಿದ್ದ ಕಲ್ಪನೆಯಂತೆ ಟ್ವಿಟ್ವರ್ ಆರಂಭವಾಯಿತು. ಡಾರ್ಸೆ ಮೂಲತಃ ಟ್ವಿಟ್ಟರ್ ಅನ್ನು ಎಸ್‌ಎಂಎಸ್ ಆಧಾರಿತ ಸಂವಹನ ವೇದಿಕೆಯಾಗಿ ಕಲ್ಪಿಸಿಕೊಂಡಿದ್ದರು. ಸ್ನೇಹಿತರ ಗುಂಪುಗಳು ತಮ್ಮ ಸ್ಟೇಟಸ್ ಅಪ್‌ಡೇಟ್‌ಗಳ ಆಧಾರದ ಮೇಲೆ ಪರಸ್ಪರ ಏನು ಮಾಡುತ್ತಿದ್ದಾರೆ ಎಂಬುದರ ಕುರಿತು ತಿಳಿಯುವ ಸಲುವಾಗಿ ಆರಂಭದಲ್ಲಿ ಬಳಕೆ ಮಾಡುವಂತಾಗಿತ್ತು.
ಆದರೆ ಪಾಡ್‌ಕಾಸ್ಟಿಂಗ್ ಕಂಪನಿ Odeo ನಲ್ಲಿ ಮೊದಲು Dorsey ಈ ಎಸ್‌ಎಂಎಸ್ ಆಧಾರಿತ ವೇದಿಕೆಯನ್ನು Odeo ನ ಸಹ-ಸಂಸ್ಥಾಪಕ ಇವಾನ್ ವಿಲಿಯಮ್ಸ್ ಗೆ ಪ್ರಸ್ತಾಪ ಮಾಡಿದ್ದರು. ಇವಾನ್ ಹಾಗೂ ಸಹ-ಸಂಸ್ಥಾಪಕ ಬಿಜ್ ಸ್ಟೋನ್ ಇದನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ನೀಡಿದರು. ಅದರ ಆರಂಭಿಕ ದಿನಗಳಲ್ಲಿ, ಟ್ವಿಟರ್ ಅನ್ನು twttr ಎಂದು ಉಲ್ಲೇಖಿಸಲಾಗಿದೆ. ಸಾಫ್ಟ್‌ವೇರ್ ಡೆವಲಪರ್ ನೋಹ್ ಗ್ಲಾಸ್ ಮೂಲ ಹೆಸರು twttr ಅನ್ನು ಟ್ವಿಟ್ಟರ್ ಆಗಿ ಬದಲಾವಣೆ ಮಾಡಿದರು.
ಮೊದಲ ಟ್ವೀಟ್ ಯಾವುದು?
ಮಾರ್ಚ್ 21, 2006 ರಂದು 9:50 p.m. ರಂದು ಜ್ಯಾಕ್ Twitter ನಲ್ಲಿ ಮೊದಲ ಸಂದೇಶವನ್ನು ಕಳುಹಿಸಿದರು. ಅದರಲ್ಲಿ "ನನ್ನ twttr ಅನ್ನು ಜಸ್ಟ್ ಟೆಸ್ಟ್ ಮಾಡುತ್ತಿದ್ದೇನೆ," ಎಂದು ಬರೆಯಲಾಗಿದೆ. Twitter ಅಭಿವೃದ್ಧಿಯ ಸಮಯದಲ್ಲಿ, ತಂಡದ ಸದಸ್ಯರು ತಮ್ಮ ವೈಯಕ್ತಿಕ ಫೋನ್ ಬಿಲ್‌ಗಳಿಗೆ ಎಸ್‌ಎಂಎಸ್ ಶುಲ್ಕಗಳಲ್ಲಿ ನೂರಾರು ಡಾಲರ್‌ಗಳನ್ನು ಸಂಗ್ರಹಿಸಿದ್ದಾರೆ. ಆ ಬಳಿಕ ಟ್ವಿಟ್ಟರ್‌ನಲ್ಲಿ ಹಲವಾರು ಬದಲಾವಣೆಗಳು ಕಂಡು ಬಂದಿದೆ. 2012 ರ ಹೊತ್ತಿಗೆ, 100 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ದಿನಕ್ಕೆ 340 ಮಿಲಿಯನ್ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.












Click it and Unblock the Notifications