Tata Winger Car: ಅತೀ ಕಡಿಮೆ ಬೆಲೆಗೆ ಸಿಗಲಿದೆ 14 ಸೀಟರ್‌ನ ಈ ಕಾರು-ದರ, ವಿಶೇಷತೆಗಳು ಇಲ್ಲಿವೆ
Tata Winger: ಭಾರತದ ಟಾಟಾ ಕಂಪನಿ ಆಗಾಗ ಜನರ ಅನುಕೂಲಕ್ಕೆ ತಕ್ಕಂತೆ ಕೈಗೆಟುಕುವ ದರದಲ್ಲಿ ಉತ್ತಮ ಮೈಲೇಜ್ ಕೊಡುವ ಕಾರುಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ಕುಟುಂಬ ಪ್ರಯಾಣ ಮಾಡುವಂತಹ ಕಾರೊಂದನ್ನು ಪರಚಿಯಿಸಿದೆ. ಹಾಗಾದರೆ ಇದರ ದರ, ವಿಶೇಷತೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹೆಚ್ಚು ಸದಸ್ಯರನ್ನೊಳಗೊಂಡ ಕುಟುಂಬದವರು ಅತಿ ಕಡಿಮೆ ಬೆಲೆಯಲ್ಲಿ ಕಾರನ್ನು ಖರೀದಿಸುವ ಪ್ಲಾನ್ ಮಾಡಿದ್ದರೆ, 14 ಸೀಟ್‌ನ ಟಾಟಾ ವಿಂಗರ್ ಕಾರು ಅತ್ಯುತ್ತಮ ಆಯ್ಕೆಯಾಗಿದೆ. ಇದು ತುಂಬಾ ವಿಶಾಲವಾದ ಒಳಾಂಗಣ, 14 ಜನರು ಆರಾಮದಾಯಕವಾಗಿ ಕುಳಿತು ಪ್ರಯಾಣಿಸಬಹುದಾದ ಸೌಲಭ್ಯವನ್ನು ಒಳಗೊಂಡಿದೆ.

ಗಾಳಿ ಬರುವಂತಹ ಬೃಹತಾಕಾರದ ಕಿಟಕಿಗಳನ್ನು ಹೊಂದಿರುವ ಟಾಟಾ ವಿಂಗರ್ ಕಾರು, ಇತ್ತೀಚಿಗಷ್ಟೇ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಗೆ ಬಂದಿದೆ. ಸಾಮಾನ್ಯ ಜನರಿಗೆ ಕೈಗೆಟಕುವಂತಹ ದರದಲ್ಲಿ ಅತ್ಯಾಕರ್ಷಕ ಬಣ್ಣ ವೈಶಿಷ್ಟ್ಯತೆ ಹಾಗೂ ಮೈಲೇಜ್ ಕೊಡುವ ಕಾರು ಇದಾಗಿದೆ.
ನಗರದಿಂದ ನಗರಕ್ಕೆ ಟಾಟಾ ಕಂಪನಿಯ ವಿಂಗರ್ 14 ಸೀಟಿನ ಕಾರಿನ ದರ ವ್ಯತ್ಯಾಸ ಇರುತ್ತದೆ. ನವದೆಹಲಿಯಲ್ಲಿ ಎಕ್ಸ್ ಶೋರೂಮ್ ಬೆಲೆ 15,00,000 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಅಂದಾಜು ಮಾಡಲಾಗಿದೆ. ಟಾಪ್ ವೇರಿಯಂಟ್‌ಗಳ ಮೇಲಿನ ಬೆಲೆಯಲ್ಲಿ ಸ್ವಲ್ಪ ಏರಿಕೆ ಇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಾಮಾನ್ಯವಾಗಿ ನೋಡುವುದಾದರೆ ಟಾಟಾ ಕಂಪನಿಯ ಎಲ್ಲಾ ಕಾರುಗಳು ಸಹ ಕೈಗೆಟುಕುವ ದರದಲ್ಲಿ ಸಿಗಲಿವೆ. ಅಲ್ಲದೆ, ಉತ್ತಮ ಮೈಲೇಜ್ ಸಾಮರ್ಥ್ಯವನ್ನು ಒದಗಿಸುತ್ತವೆ. ಇವುಗಳಂತೆಯೇ ಟಾಟಾ ವಿಂಗರ್ ಸಹ ತನ್ನ ರೇಂಜ್‌ನಲ್ಲಿ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿಂಗರ್ 17 Kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಇದರಿಂದ ಪ್ರತಿದಿನ ಡೀಸೆಲ್ ಹಣವನ್ನು ಉಳಿತಾಯ ಮಾಡಬಹುದಾಗಿದೆ.
14 ಸೀಟ್‌ನ ಟಾಟಾ ವಿಂಗರ್ ಕಾರಿನಲ್ಲಿ ಹೊಸ ಹೊಸ ವೈಶಿಷ್ಟ್ಯತೆಗಳನ್ನು ಕಾಣಬಹುದಾಗಿದೆ. ಇದರಲ್ಲಿ ತುಂಬಾ ಆರಾಮದಾಯಕವಾಗಿ ಕುಳಿತು ಪ್ರಯಾಣ ಮಾಡಬಹುದಂತಹ ಸೀಟುಗಳನ್ನು ಅಳವಡಿ ಮಾಡಲಾಗಿರುತ್ತದೆ. ಯಾವುದೇ ಆತಂಕವಿಲ್ಲ ದೂರದ ಊರುಗಳಿಗೂ ಪ್ರಯಾಣ ಬೆಳೆಸಬಹುದಾಗಿದೆ. ಇನ್ನು ಇದರಲ್ಲಿ 2.2L ಟರ್ಬೊ ಚಾರ್ಗೆ ಡೀಸೆಲ್ ಇಂಜಿನ್ ವ್ಯವಸ್ಥೆ ಇದ್ದು, ಆಫ್ ರೋಡ್ ಮತ್ತು ಆನ್ ರೋಡ್ ಸಂಚಾರಕ್ಕೆ ಹೇಳಿ ಮಾಡಿಸಿದ ಕಾರ್ ಆಗಿದೆ.
ಟಾಟಾ ವಿಂಗರ್ ಕಾರಿನಲ್ಲಿ ಸಂಪೂರ್ಣ ಸುರಕ್ಷತೆಯ ವ್ಯವಸ್ಥೆಯನ್ನು ಅಳವಡಿಮೆ ಮಾಡಬಹುದಾಗಿರುತ್ತದೆ. ಹಲವು ಏರ್ ಬ್ಯಾಗ್ಗಳೊಂದಿಗೆ ಎಬಿಎಸ್ ಹಾಗೂ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ನಂತಹ ಸೇಫ್ಟಿ ಸೌಲಭ್ಯಗಳನ್ನು ಹೊಂದಿರುತ್ತದೆ. ಇನ್ನು ಕಾರಿನ ಮೇಲ್ಭಾಗವನ್ನು ಉತ್ತಮವಾದ ಮೆಟಲ್‌ನಿಂದ ಮಾಡಲಾಗಿರುತ್ತದೆ. ಒಟ್ಟಿನಲ್ಲಿ ಇದರಲ್ಲಿ 10-12 ಮಂದಿ ಸದ್ಯಸ್ಯರನ್ನೊಳಗೊಂಡ ಒಂದು ಕುಟುಂಬವು ಯಾವುದೇ ಆತಂಕವಿಲ್ಲದೇ ಸೇಪ್ಟಿಯಾಗಿ ಪ್ರಯಾಣ ಮಾಡಬಹುದಾಗಿದೆ.












Click it and Unblock the Notifications