ಉತ್ತಮ ಆರೋಗ್ಯಕ್ಕಾಗಿ ವಿಚಿತ್ರ ಡಯಟ್: 3 ವರ್ಷಗಳಿಂದ ಹಸಿ ಮಾಂಸ ತಿನ್ನುತ್ತಿರುವ ಭೂಪ
ನೆಬ್ರಸ್ಕಾ(ಅಮೆರಿಕ), ಅಕ್ಟೋಬರ್ 13: ಆರೋಗ್ಯ ಕಾಪಾಡಿಕೊಳ್ಳಲು ಜನ ನಾನಾ ಆಹಾರ ಪದ್ದತಿಗಳನ್ನು ರೂಢಿಸಿಕೊಳ್ಳುತ್ತಾರೆ. ದೇಹಕ್ಕೆ ಶಕ್ತಿ ಬರಲೆಂದು ಕೆಲವರು ಹೆಚ್ಚಾಗಿ ಹಣ್ಣುಗಳನ್ನು ತಿನ್ನುತ್ತಾರೆ. ಇನ್ನೂ ಕೆಲವರು ಹಸಿ ತರಕಾರಿ ಮತ್ತು ಸೊಪ್ಪುಗಳನ್ನು ಎತ್ತೇಚ್ಚವಾಗಿ ನಿತ್ಯದ ಆಹಾರದಲ್ಲಿ ಬಳಕೆ ಮಾಡುತ್ತಾರೆ. ಕೆಲವರಂತೂ ಎಣ್ಣೆಯಲ್ಲಿ ಕರಿದ ಆಹಾರಗಳಿಂದ ಸಂಪೂರ್ಣವಾಗಿ ದೂರವಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಉತ್ತಮ ಆರೋಗ್ಯಕ್ಕಾಗಿ ಹಸಿ ಮಾಂಸದ ಮೊರೆ ಹೋಗಿದ್ದಾನೆ.
ಹೌದು, ನಂಬಲು ಅಸಾಧ್ಯವಾದರೂ ಇದು ನಿಜ. ಅಮೆರಿಕದ ನೆಬ್ರಸ್ಕಾದ ರೋವೆ (Rowe) ಎಂಬ ವ್ಯಕ್ತಿ ತಾನು ಕಳೆದು ಮೂರು ವರ್ಷಗಳಿಂದ ನಿತ್ಯ ಹಸಿ ಮಾಂಸ, ಹಸಿ ಮೊಟ್ಟೆ ಇತ್ಯಾದಿಗಳನ್ನು ತಿನ್ನುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ವಾಕರಿಕೆಯನ್ನುಂಟು ಮಾಡುವ ಈ ಹೇಳಿಕೆಯನ್ನು ವೆಸ್ಟನ್ ರೋವೆ ತನ್ನ ಯೂಟ್ಯೂಬ್ ಚಾನೆಲ್ 'ದಿ ನ್ಯಾಚುರಲ್ ಹ್ಯೂಮನ್ ಡಯಟ್' ನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ ಈ ಆಹಾರ ಪದ್ಧತಿಯಿಂದ ತಾವು ದಿನವಿಡೀ ಶಕ್ತಿಯುತವಾಗಿ ಇರುವುದಾಗಿ ಹೇಳಿಕೊಂಡಿದ್ದಾರೆ.
ಈತ ಹಸಿ ಮಾಂಸ ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ದಿ ಇಂಡಿಪೆಂಡೆಂಟ್ ನಲ್ಲಿ ಕಚ್ಚಾ ಆಹಾರ ಹೇಗೆ ತನ್ನ ಆರೋಗ್ಯದ ಮೇಲೆ ಒಟ್ಟಾರೆ ಪ್ರಯೋಜನವನ್ನು ಬೀರುತ್ತದೆ ಎಂದು ರೋವೆ ವಿವರಿಸಿದ್ದಾರೆ. ರೋವ್ ಉತ್ತಮ ಮಾನಸಿಕ ಮತ್ತು ದೈಹಿಕ ಸ್ಥಿತಿಯಲ್ಲಿದ್ದು 'ನಾನು ಹಿಂದೆಂದಿಗಿಂತಲೂ ಉತ್ತಮ'ನಾಗಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ಅವರು ಈ ಹಸಿ ಮಾಂಸದ ಆಹಾರವನ್ನು ಪ್ರಾರಂಭಿಸಿದ ನಂತರ ಎಂದಿಗೂ ಅನಾರೋಗ್ಯಕ್ಕೆ ಒಳಗಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಡೈಲಿ ಮೇಲ್‌ನ ಇನ್ನೊಂದು ವರದಿಯಲ್ಲಿ, ರೋವ್ ನಿಯಮಿತವಾಗಿ ತಾಜಾ ಮಾಂಸ, ಚಿಕನ್, ಮೊಟ್ಟೆ ಇತ್ಯಾದಿಗಳನ್ನು ತಿನ್ನುತ್ತಿದ್ದಾನೆ. ಈ ವಿಶಿಷ್ಟವಾದ ಆಹಾರಕ್ರಮವು ಸಾಮಾನ್ಯ ಆಹಾರಕ್ರಮಕ್ಕೆ ಹೋಲಿಸಿದರೆ ಅವನ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ಹೇಳಲಾಗಿದೆ.
ಆದಾಗ್ಯೂ ಹಸಿ ಕೋಳಿ ಮಾಂಸದಿಂದ ಸಾಲ್ಮೊನೆಲ್ಲಾ ಸೋಂಕು ಹರಡುತ್ತದೆ. ಇದು ಆಹಾರ ಅಥವಾ ನೀರಿನ ಮಾಲಿನ್ಯದಿಂದ ಉಂಟಾಗುವ ರೋಗ. ಹಸಿ ಮಾಂಸ ಸೇವನೆಯಿಂದ ಈ ಸೋಂಕು ಹರಡಿ ತೊಂದರೆಗೀಡಾಗುತ್ತಾರೆಯೇ ಎಂದು ಕೇಳಿದಾಗ, ರೋವ್ "ಇದು ಬಹಳ ವಿವಾದಾಸ್ಪದವಾಗಿದೆ. ಆದರೆ ಹಸಿ ಮಾಂಸವು ನಮ್ಮ ದೇಹದೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ನೈಸರ್ಗಿಕ ಸಮತೋಲನವನ್ನು ಹೊಂದಿದೆ ಎಂದು ನಾನು ನಂಬುತ್ತೇನೆ" ನ್ಯೂಯಾರ್ಕ್ ಪೋಸ್ಟ್‌ಗೆ ಹೇಳಿದರು.
ನೀವು ವೆಸ್ಟನ್ ರೋವ್ ಹಸಿ ಮಾಂಸದ ಆಹಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ಅವರ ಯೂಟ್ಯೂಬ್ ಚಾನೆಲ್ 'ದಿ ನ್ಯಾಚುರಲ್ ಹ್ಯೂಮನ್ ಡಯಟ್' ಅನ್ನು ನೋಡಬಹುದು. ವಿಡಿಯೋ ಲಿಂಕ್












Click it and Unblock the Notifications