ವಿಶ್ವದ ಅಗ್ರ ಸುರಕ್ಷಿತ ರಾಷ್ಟ್ರಗಳು: ಈ ಪಟ್ಟಿಯಲ್ಲಿ ಯಾವೆಲ್ಲಾ ದೇಶಗಳಿವೆ?
ನವದೆಹಲಿ, ಅಕ್ಟೋಬರ್ 17: ಈ ಕೊರೊನಾವೈರಸ್ ಸೋಂಕು ಸಂದರ್ಭದಲ್ಲಿ ನಾವು ಯಾವ ದೇಶಕ್ಕೆ ಹೋಗುವುದು ಸುರಕ್ಷಿತ ಎಂದು ಹಲವಾರು ಮಂದಿ ಯೋಚನೆ ಮಾಡುತ್ತಿರಬಹುದು. ಈ ಸಂದರ್ಭದಲ್ಲಿ ನಾವು ಯಾವ ದೇಶಕ್ಕೆ ಹೋಗುವುದು ಸುರಕ್ಷಿತ ಎಂಬ ಬಗ್ಗೆ ಸುದ್ದಿಯನ್ನು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆಂಷನ್ ಆಂಡ್ ಕಂಟ್ರೋಲ್ (ಇಸಿಡಿಸಿ) ನೀಡಿದೆ.
ಯುರೋಪಿಯನ್ ಯೂನಿಯನ್(ಇಯು) ದೇಶಗಳ ಪೈಕಿ ಸ್ಪೇನ್, ಫ್ರಾನ್ಸ್, ಇಟಲಿ ಹಾಗೂ ಪೋಲ್ಯಾಂಡ್ ದೇಶಗಳು ಈ ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಸುರಕ್ಷಿತ ಎಂದು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆಂಷನ್ ಆಂಡ್ ಕಂಟ್ರೋಲ್ (ಇಸಿಡಿಸಿ) ಹೇಳಿದೆ. ಈ ದೇಶಗಳಲ್ಲಿ ಅತೀ ಕಡಿಮೆ ಕೊರೊನಾ ವೈರಸ್ ಸೋಂಕು ಪ್ರರಕಣಗಳು ವರದಿ ಆಗುತ್ತಿದೆ ಎಂದು ಮಾಧ್ಯಮದ ವರದಿಗಳು ಹೇಳಿದೆ.
ಸ್ಪೇನ್, ಫ್ರಾನ್ಸ್, ಇಟಲಿ ಹಾಗೂ ಪೋಲ್ಯಾಂಡ್ ದೇಶಗಳಲ್ಲಿ ಕಡಿಮೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿ ಆಗಿದೆ ಎಂದು ಸಂಶೋಧನೆಯು ಹೇಳಿದೆ. ಒಂದು ಲಕ್ಷ ಜನರ ಪೈಕಿ 50 ಕ್ಕೂ ಕಡಿಮೆ ಕೊರೊನಾ ವೈರಸ್ ಪ್ರಕರಣಗಳು ವರದಿ ಆಗಿದೆ. ಕಳೆದ ಎರಡು ವಾರಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪಾಸಿಟಿವಿಟಿ ಪ್ರಮಾಣವು ನಾಲ್ಕು ಶೇಕಡಕ್ಕಿಂತ ಕಡಿಮೆ ಇದೆ. ಹಾಗಾದರೆ ನೀವು ಯಾವೆಲ್ಲಾ ದೇಶಗಳಿಗೆ ನೀವು ಭೇಟಿ ನೀಡುವುದು ಸುರಕ್ಷಿತ, ಆ ದೇಶಗಳ ಪೈಕಿ ಯಾವ ಪ್ರದೇಶಕ್ಕೆ ನೀವು ಭೇಟಿ ನೀಡುವುದು ಸುರಕ್ಷಿತ ಎಂಬುವುದನ್ನು ಇಲ್ಲಿ ವಿವರಿಸಲಾಗಿದೆ. ಮುಂದೆ ಓದಿ...

ಯಾವ ಪ್ರದೇಶಕ್ಕೆ ನೀವು ಭೇಟಿ ನೀಡುವುದು ಸುರಕ್ಷಿತ?
* ಇಟಲಿ: ಅಕ್ವಿಲಾ, ಮೊಲಿಸಾ, ಅಬ್ರೂಜು, ಉಂಬಿರಿಯಾ, ಸರ್ದೇನಿಯಾ, ಪೀಡ್‌ಮಾಂಟ್, ಲಿಗುರಿಯಾ, ಲೊಂಬಾರ್ಡಿ, ಫ್ರಿಯುಲಿ-ವೆನೆಜಿಯಾ ಗಿಯುಲಿಯಾ
* ಫ್ರಾನ್ಸ್: ಬ್ರೆಟೇನ್, ನಾರ್ಮಂಡಿ, ಹಾಟ್ಸ್-ಡಿ-ಫ್ರಾನ್ಸ್, ಗ್ರ್ಯಾಂಡ್ ಎಸ್ಟೇಟ್, ಬೌರ್ಗೊನ್-ಫ್ರಾಂಚೆ-ಕಾಮೆಟ್, ಸೆಂಟರ್-ವಾಲ್ ಡಿ ಲೊಯಿರ್, ನೌವೆಲ್ಲೆ-ಅಕ್ವಿಟೈನ್
* ಸ್ಪೇನ್: ಗೆಲಿಸಿಯಾ, ಅಸ್ತೂರಿಯಸ್, ಕ್ಯಾಸ್ಟೈಲ್ ಆಂಡ್ ಲಿಯಾನ್, ಎಕ್ಸ್‌ಟ್ರೆಮದುರಾ, ಆಂಡಲೂಸಿಯಾ, ಲಾ ರಿಯೋಜಾ, ನವರೆ, ಮುರ್ಸಿಯಾ, ವೆಲೆನ್ಸಿಯಾ
* ಪೋಲ್ಯಾಂಡ್: ಪೊಮೆರೇನಿಯನ್, ಕುಯಾವಿಯಾ-ಪೊಮೆರೇನಿಯಾ, ಗ್ರೇಟರ್ ಪೋಲೆಂಡ್, ಲುಬುಜ್, ಲೋವರ್ ಸಿಲೇಸಿಯಾ, ಒಪೋಲ್ ಸಿಲೇಸಿಯಾ, ಕಡಿಮೆ ಪೋಲೆಂಡ್, ಸಬ್‌ಕಾರ್ಪತಿ, ಹೋಲಿ ಕ್ರಾಸ್ ಪ್ರಾಂತ್ಯ, ಲಾಡ್ಜ್
ಇನ್ನು ಈ ದೇಶಗಳಿಗೆ ಹೋಗುವ ಪ್ರಯಾಣಿಕರು ಕೋವಿಡ್ ಪರೀಕ್ಷೆಗೆ ಒಳಗಾಗುವುದು ಹಾಗೂ ಸ್ವಯಂ ಕ್ವಾರಂಟೈನ್‌ಗೆ ಒಳಗಾಗುವುದು ಕಡ್ಡಾಯವಾಗಿಲ್ಲ. ಹಾಗಾಗಿ ಜನರು ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ತಮ್ಮ ಚಳಿಗಾಳದ ರಜೆಯನ್ನು ಕಳೆಯಬಹುದಾಗಿದೆ. ಇನ್ನು ಈ ಮೇಲೆ ತಿಳಿಸಿದ ರಾಷ್ಟ್ರಗಳು ತಮ್ಮ ದೇಶದಲ್ಲಿ ಕೊರೊನಾ ವೈರಸ್ ವಿರುದ್ಧವಾಗಿ ಲಸಿಕೆ ನೀಡುವ ಅಭಿಯಾನವನ್ನು ಕೂಡಾ ಯಶಸ್ವಿಯಾಗಿ ನಡೆಸಿದೆ. ಈ ದೇಶಗಳ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುವ ಸಮದರ್ಭದಲ್ಲಿ ಪ್ರಯಾಣಿಕರು ಆರೋಗ್ಯ ಪಾಸ್ ಅನ್ನು ಹೊಂದಿರುವುದು ಮುಖ್ಯ. ಇದನ್ನು ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ರೂಪಕ್ಕೆ ತರಲಾಗಿದೆ. ಆದರೆ ನೀವು ಆ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಆ ಸಂದರ್ಭದಲ್ಲಿ ಇರುವ ನಿಯಮದ ಬಗ್ಗೆ ತಿಳಿಯುವುದನ್ನು ಮರೆಯಬೇಡಿ.

ಈ ನಡುವೆ ಭಾರತದ ಪರಿಸ್ಥಿತಿಯು ವಿಭಿನ್ನವಾಗಿದೆ. ನವೆಂಬರ್ 15 ರಿಂದ ಭಾರತಕ್ಕೆ ವಿದೇಶಿ ಪ್ರವಾಸಿಗರ ಪ್ರವೇಶಕ್ಕೆ ಭಾರತವು ಅವಕಾಶ ನೀಡಿದೆ. ಮಾರ್ಚ್ 2020 ರಿಂದ ಭಾರತದಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಭಾರತಕ್ಕೆ ವಿದೇಶಿ ಪ್ರಯಾಣಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ವಿದೇಶಿಗರು ಭಾರತಕ್ಕೆ ಬಂದ ಬಳಿಕ ಕ್ವಾರಂಟೈನ್‌ಗೆ ಒಳಗಾಗಬೇಕೇ?, ಸಂಪೂರ್ಣವಾಗಿ ಕೊರೊನಾ ವೈರಸ್ ಲಸಿಕೆ ಹಾಕಿಸಿಕೊಳ್ಳಬೇಕೇ? ಅಥವಾ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರಬೇಕೇ? ಎಂಬುವುದು ಈವರೆಗೂ ಸ್ಪಷ್ಟವಾಗಿಲ್ಲ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಈ ಪ್ರವಾಸೋದ್ಯಮದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಪ್ರಯಾಣ ನಿರ್ಬಂಧವನ್ನು ಸಡಿಲಿಕೆ ಮಾಡುವುದರಿಂದ ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಏರಿಕೆಗೆ ಕಾರಣವಾಗಬಹುದು ಎಂಬುವುದು ಈ ಆತಂಕಕ್ಕೆ ಕಾರಣವಾಗಿದೆ.
(ಒನ್‌ಇಂಡಿಯಾ ಸುದ್ದಿ)
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications