ಮಹಿಳೆಯ ಕಿವಿಯಲ್ಲಿ ಹಾವು: ಶಾಕಿಂಗ್ ವಿಡಿಯೋ ವೈರಲ್

ಸಾಮಾನ್ಯವಾಗಿ ಕಿವಿಯಲ್ಲಿ ಸಣ್ಣ ಇರುವೆ ಹೊಕ್ಕರೆ ನೋವು ತಡೆಯಲಾಗದೆ ಒದ್ದಾಡುವಂತಾಗುತ್ತದೆ. ಹೀಗಿರುವಾಗ ದೊಡ್ಡ ಇರುವೆನೋ ಅಥವಾ ಇದಕ್ಕಿಂತ ದೊಡ್ಡ ಕೀಟಗಳನ್ನು ನಾವು ಕಿವಿ ಒಳಗೆ ಹೊಕ್ಕರೆ ಅದರಿಂದಾಗುವ ನೋವು ಕಲ್ಪಿಸಿಕೊಳ್ಳಲಾಗದು. ಹೀಗಿರುವಾಗ ನಾವು ನೀವು ಎಂದೂ ಕೇಳಿ ಕಂಡರಿಯದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೊವೊಂದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಹಳದಿ ಬಣ್ಣದ ಹಾವು ಮಹಿಳೆಯ ಕಿವಿಯೊಳಗೆ ಗಟ್ಟಿಯಾಗಿ ಸಿಲುಕಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅದು ಹೊರಬರುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ. ಕೈಗವಸುಗಳನ್ನು ಧರಿಸಿರುವ ವೈದ್ಯರು ಹಾವನ್ನು ಕಿವಿಯಿಂದ ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ಘಟನೆಯ ಸ್ಥಳ ಅಥವಾ ಸಮಯವನ್ನು ವಿಡಿಯೊದಲ್ಲಿ ಬಹಿರಂಗಪಡಿಸಲಾಗಿಲ್ಲ.

ಮಹಿಳೆಯ ಕಿವಿಯಿಂದ ಹಾವನ್ನು ತೆಗೆದುಹಾಕುವ ನಿರಂತರ ಪ್ರಯತ್ನದಲ್ಲಿ ವೈದ್ಯರಿರುವುದು ಕಾಣಬಹುದು. ಪ್ರತಿ ಪ್ರಯತ್ನದಲ್ಲೂ ವೈದ್ಯರು ವಿಫಲರಾಗುತ್ತಿದ್ದಾರೆ. ಸಸ್ಪೆನ್ಸ್ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ನೋಡುಗರನ್ನು ದಿಗ್ಭ್ರಮೆಗೊಳಿಸಿದೆ. ಆದರೆ ವಿಡಿಯೋ ಮಾತ್ರ ಹಾವನ್ನು ತೆಗೆದುಹಾಕಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಬಹಿರಂಗಪಡಿಸದೆ ಕೊನೆಗೊಳ್ಳುತ್ತದೆ.

ಚಂದನ್ ಸಿಂಗ್ ಎಂಬ ಹೆಸರಿನ ಫೇಸ್ ಬುಕ್ ಬಳಕೆದಾರರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದರ ಶೀರ್ಷಿಕೆ, "ಹಾವು ಕಿವಿಯೊಳಗೆ ಹೋಯಿತು" ಎಂದು ಮಾತ್ರವಿದೆ. ವಿಡಿಯೊ 87,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ ಮತ್ತು ಸುಮಾರು 100 ಲೈಕ್ಸ್‌ಗಳನ್ನು ಹೊಂದಿದೆ. ಕ್ಲಿಪ್‌ನಿಂದಾಗಿ ಹಲವಾರು ಜನ ಆಘಾತಕ್ಕೊಳಗಾಗಿದ್ದಾರೆ ಮತ್ತು ಭಯಭೀತರಾಗಿದ್ದಾರೆ. ಹೀಗೂ ನಡೆಯಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಹಲವಾರು ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

Snake in womans ear: Shocking video goes viral

ಕೆಲವರು ಕ್ಲಿಪ್ ಶೇರ್ ಮಾಡಿದ ಫೇಸ್‌ಬುಕ್ ಬಳಕೆದಾರರಿಗೆ ಸಂಪೂರ್ಣ ವಿಡಿಯೊವನ್ನು ಪೋಸ್ಟ್ ಮಾಡಲು ಕೇಳಿದರೆ, ಇತರರು ಹಾವು ಕಿವಿಯೊಳಗೆ ಹೇಗೆ ಪ್ರವೇಶಿಸಿತು ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವು ಬಳಕೆದಾರರು ಇದನ್ನು ನಕಲಿ ವಿಡಿಯೊ ಎಂದು ಕರೆದರೆ, ಇನ್ನೂ ಕೆಲವರು "ಇದನ್ನು 100% ವೀಕ್ಷಣೆಗಾಗಿ ಪೋಸ್ಟ್ ಮಾಡಲಾಗಿದೆ" ಎಂದು ಬರೆದಿದ್ದಾರೆ.

ಹಾವು ಭೂಮಿಯ ಮೇಲೆ ಮಾರಣಾಂತಿಕ ಮತ್ತು ಅತ್ಯಂತ ವಿಷಕಾರಿ ಪ್ರಾಣಿಗಳಲ್ಲಿ ಒಂದು. ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನೆಯ ಪ್ರಕಾರ, ಪ್ರತಿ ವರ್ಷ 138,000 ಸಾವುಗಳು ಹಾವು ಕಡಿತದಿಂದ ಸಂಭವಿಸುತ್ತವೆ. ಜೊತೆಗೆ ಸರಿಸುಮಾರು ಮೂರು ಪಟ್ಟು ಹೆಚ್ಚು ತೊಡಕುಗಳು ಮತ್ತು ಇತರ ಶಾಶ್ವತ ಅಂಗವೈಕಲ್ಯಗಳನ್ನು ಉಂಟುಮಾಡುತ್ತದೆ.

ಹಿಂದೆ, ಮಾನವರು ಹಲವಾರು ಭಯಾನಕ ಹಾವಿನ ಹೊಡೆತಗಳಿಗೆ ಬಲಿಯಾಗಿದ್ದರು, ಆದರೆ ಕೆಲವೊಮ್ಮೆ, ಜನರು ಸಂಪೂರ್ಣ ಆಘಾತಕ್ಕೆ ಒಳಗಾಗುವ ಸಂದರ್ಭಗಳು ಸಂಭವಿಸುತ್ತವೆ. ಕಟ್ಟಡಗಳು ಮತ್ತು ಸುತ್ತುವರಿದ ಜಾಗಗಳಲ್ಲಿ ಸುಪ್ತವಾಗಿರುವ ಹಾವುಗಳು ಜನರಿಗೆ ಚಿರಪರಿಚಿತ ದೃಶ್ಯವಾಗಿದೆ. ಆದರೆ, ಹಿಂದೆಂದೂ ಕಾಣದ ಈ ವಿಚಿತ್ರ ವಿಡಿಯೋ ಆನ್‌ಲೈನ್ ಬಳಕೆದಾರರನ್ನು ಬೆರಗುಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+