Wine: ವೈನ್‌ಗೆ ಐಸ್‌ ಕ್ಯೂಬ್ ಸೇರಿಸುವುದರಿಂದ ಟೇಸ್ಟ್‌ ಚೇಂಜ್ ಆಗುತ್ತಾ ?

Wine: ವೈನ್ ತೆಗೆದುಕೊಳ್ಳುವ ಬಗ್ಗೆ ಹಲವರಲ್ಲಿ ಗೊಂದಗಳು ಇವೆ. ಸಾಮಾನ್ಯವಾಗಿ ಕೆಲವು ಮದ್ಯ ಪ್ರಿಯರಿಗೆ ವೈನ್ ಮತ್ತು ವಿಸ್ಕಿಗೆ ಏನು ಮಿಕ್ಸ್‌ ಮಾಡಿಕೊಳ್ಳನಬೇಕು ಎನ್ನುವ ಗೊಂದಲಗಳು ಮೂಡುವುದು ಸಹಜ. ವೈನ್‌ಗೆ ಐಸ್‌ಕ್ಯೂಬ್ ಸೇರಿಸಿಕೊಳ್ಳಬೇಕೇ ಅಥವಾ ಬೇಡವೇ ಎನ್ನುವ ಗೊಂದಲ ಹಲವರಲ್ಲಿ ಇದೆ. ನೀವು ವೈನ್‌ಗೆ ಐಸ್ ಕ್ಯೂಬ್‌ಗಳನ್ನು ಸೇರಿಸಬೇಕೇ ಬೇಡವೇ ಎನ್ನುವ ಗೊಂದಲದಲ್ಲಿ ಇದ್ದೀರಾ ಹಾಗಾದರೆ, ವೈನ್‌ಗೆ ಏನು ಸೇರಿಸಿಕೊಳ್ಳಬೇಕು - ಸೇರಿಸಿಕೊಳ್ಳಬಾರದು ಎನ್ನುವ ಡೀಟೆಲ್ಸ್‌ ಇಲ್ಲಿದೆ.

ವೈನ್‌ಗೆ ಐಸ್ ಕ್ಯೂಬ್‌ಗಳನ್ನು ಸೇರಿಸುವುದನ್ನು ಒಳ್ಳೆಯದು ಅಥವಾ ಕೆಟ್ಟದಾ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಲ್ಲೇ ಇರುತ್ತವೆ. ಸಾಮಾನ್ಯವಾಗಿ ವೈನ್‌ಗೆ ಐಸ್‌ ಕ್ಯೂಬ್ ಸೇರಿಸುವುದರಿಂದ ದೊಡ್ಡ ಬದಲಾವಣೆ ಏನು ಆಗುವುದಿಲ್ಲ. ವಿಶೇಷವಾಗಿ ವೈನ್‌ನ ರುಚಿ ಹಾಗೂ ಸುವಾಸನೆಯ ವಿಷಯದಲ್ಲಿ ಸಣ್ಣಪುಟ್ಟ ಬದಲಾವಣೆಗಳು ಆಗುವ ಸಾಧ್ಯತೆ ಇರುತ್ತದೆ. ಆದರೆ ಮದ್ಯ ಪ್ರಿಯರು ವೈನ್‌ಗೆ ಐಸ್‌ಕ್ಯೂಬ್‌ ಸೇರಿಸುವುದನ್ನು ಇಷ್ಟಪಡುವುದಿಲ್ಲ. ವೈನ್ - ವಿಸ್ಕಿ & ಬ್ರಾಂದಿಗಿಂತ ಭಿನ್ನವಾಗಿದೆ.

Should You Add Ice to Wine Taste Impact Explained

ಸಾಮಾನ್ಯವಾಗಿ ವೈನ್‌ನಲ್ಲಿ ಐಸ್ ಹಾಕಿದರೆ, ಐಸ್ ಕರಗುತ್ತಿದ್ದಂತೆ ವೈನ್ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಇಲ್ಲವೇ ವೈನ್‌ನಲ್ಲಿರುವ ಕಿಕ್ ಕಡಿಮೆ ಆಗುತ್ತದೆ. ಅದರಲ್ಲೂ ವೈನ್‌ನಲ್ಲಿರುವ ಸುವಾಸೆ ಹಾಗೂ ದ್ರವ ತನ್ನ ಟೇಸ್ಟ್‌ ಕಳೆದುಕೊಳ್ಳುತ್ತದೆ. ತಾಪಮಾನದ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ. ಐಸ್ ಸೇರಿಸುವುದರಿಂದ ವೈನ್ ಬೇಗ ಅತಿಯಾಗಿ ತಣ್ಣಗಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಬಿಳಿ ಮತ್ತು ಗುಲಾಬಿಯ ವೈನ್ ಸುವಾಸನೆ ಕಳೆದುಕೊಳ್ಳುತ್ತದೆ. ಮಾತ್ರವಲ್ಲ ಅದರ ಒರಿಜಿನಲ್ ಟೇಸ್ಟ್‌ ಕಡಿಮೆಯಾಗುತ್ತದೆ.

ವೈನ್‌ನ ಬೇರೆ ಬೇರೆ ಹವಾಮಾನಕ್ಕೆ ತಕ್ಕಂತೆ ಬಳಸುವವರು ಸಹ ಇದ್ದಾರೆ. ಸಾಮಾನ್ಯವಾಗಿ ಚಳಿ ಅಥವಾ ಮಳೆ ಬರುವ ಸಂದರ್ಭಗಳಲ್ಲಿ ವೈನ್‌ಗೆ ಐಸ್‌ಕ್ಯೂಬ್ ಸೇರಿಸುವುದಿಲ್ಲ. ಅದೇ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಸಂದರ್ಭದಲ್ಲಿ ವೈನ್‌ಗೆ ಕೆಲವರು ಐಸ್ ಕ್ಯೂಬ್ ಸೇರಿಸುವುದು ಇದೆ. ವೈನ್ ಸರಿಯಾಗಿ ತಣ್ಣಗಾಗದಿದ್ದರೆ ಅಥವಾ ಫ್ರಿಡ್ಜ್‌ನಲ್ಲಿ ಇರಿಸಲು ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ಐಸ್ ಕ್ಯೂಬ್‌ಗಳನ್ನು ಸೇರಿಸುವುದು ಸಹ ಇದೆ. ಕೊನೆಯದಾಗಿ ವೈನ್ ಸೇವಿಸುವಾಗ ಐಸ್‌ಕ್ಯೂಸ್‌ ಸೇರಿಸಬೇಕೇ ಅಥವಾ ಬೇಡವೇ ಎನ್ನುವುದು ಮದ್ಯ ಪ್ರಿಯರ ಆಯ್ಕೆಯಾಗಿದೆ.

ಈ ವೈನ್‌ಗಳಿಗೆ ಸಾಮಾನ್ಯವಾಗಿ ಬಳಸಲ್ಲ: ಇನ್ನು ವೈನ್‌ನಲ್ಲಿ ಹಲವು ಮಾದರಿಗಳಿವೆ. ಗುಲಾಬಿ ಹಾಗೂ ಹಣ್ಣುಗಳಿಂದ ವೈನ್ ತಯಾರಿಸುವುದು ಇದೆ. ಆದರೆ ಕೆಲವೊಂದು ವೈನ್‌ಗಳಿಗೆ ಐಸ್‌ಕ್ಯೂಬ್‌ಗಳನ್ನು ಸೇರಿಸುವುದಿಲ್ಲ. ಇನ್ನು ಐಸ್ ಅನೇಕ ವೈನ್ ಕಾಕ್‌ಟೇಲ್‌ಗಳು ಹಾಗೂ ಸ್ಪ್ರಿಟ್ಜರ್‌ಗಳ ಅತ್ಯಗತ್ಯವಾಗಿದೆ ಒಟ್ಟಾರೆ ಸುವಾಸನೆ ಹೆಚ್ಚಾಗುವುದಕ್ಕೂ ಅವಕಾಶವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+