ಅನಗತ್ಯ ಹಾರ್ನ್‌ಗೆ ಬೇಸತ್ತ ಟ್ರಕ್ ಸವಾರ ಮಾಡಿದ್ದೇನು? ವಿಡಿಯೋ..
ಸಿಗ್ನಲ್ ವೇಳೆ ಅನಗತ್ಯ ಹಾರ್ನ್ ಮಾಡಿದ ಕಾರು ಚಾಲಕನಿಗೆ ಟ್ರಕ್ ಚಾಲಕ ಮಾಡಿದ್ದೇನು ಗೊತ್ತಾ?
ರಸ್ತೆ ಮೇಲೆ ವಾಹನ ಸಂಚಾರ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಅದರಲ್ಲೂ ವಾಹನ ಸವಾರರಿಗೆ ಹೆಚ್ಚು ತಾಳ್ಮೆ ಇರಬೇಕು. ತಾಳ್ಮೆ ಕಳೆದುಕೊಳ್ಳುವ ಸವಾರ ಇತರ ಸವಾರರಿಗೂ ಅಪಾಯವನ್ನು ತಂದೊಡ್ಡಬಲ್ಲನು. ಹೀಗಾಗಿ ವಾಹನ ಸವಾರಿ ವೇಳೆ ಎಷ್ಟು ಜಾಗರೂಕತೆಯಿಂದ ಇದ್ದರೂ ಕಡಿಮೆಯೇ. ಹೀಗೊಂದು ವಿಡಿಯೋ ಅನಗತ್ಯ ಹಾರ್ನ್‌ನಿಂದಾಗಿ ಮುಂಬದಿ ಸವಾರನಿಗೆ ಎಷ್ಟು ಕಿರಿಕಿರಿಯಾಗುತ್ತದೆ ಎನ್ನುವುದನ್ನು ತೋರಿಸುತ್ತದೆ.
Aaja bhai andar aaja 😂 pic.twitter.com/tDOZslP6uZ
— Godman Chikna (@Madan_Chikna) February 11, 2023
ವೈರಲ್ ವಿಡಿಯೋದಲ್ಲಿ ಕಾರು ಚಾಲಕ ತಾಳ್ಮೆ ಕಳೆದುಕೊಂಡು ಹಾರ್ನ್ ಮಾಡುವುದನ್ನು ಕೇಳಬಹುದು. ಆದರೆ ಸುಖಾ ಸುಮ್ಮನೆ ಹಾರ್ನ್ ಮಾಡುವ ಸವಾರರು ಇತರ ಸವಾರರ ಮನಸ್ಸಿನ ಶಾಂತಿಯನ್ನು ಘಾಸಿಗೊಳಿಸುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ವಾಹನ ತುಂಬಿದ ರಸ್ತೆಯಲ್ಲಿ ಸಿಗ್ನಲ್ ವೇಳೆ ಅನಗತ್ಯವಾಗಿ ಕಾರು ಚಾಲಕ ಹಾರ್ನ್ ಮಾಡುತ್ತಾನೆ. ಇದರಿಂದ ಬೇಸತ್ತ ಮುಂಬದಿ ಟ್ರಕ್ ಚಾಲಕ ವಾಹನದಿಂದ ಕೆಳಗಿಳಿದು ಬಂದು ಟ್ರಕ್‌ನ ಬಾಗಿಲನ್ನು ತೆಗೆದು ಅದರ ಒಳಗೆ ಹೋಗುವಂತೆ ಕಾರು ಚಾಲಕನಿಗೆ ಸೂಚಿಸುತ್ತಾನೆ. ಈ ಘಟನೆಯ ವಿಡಿಯೋ ನೋಡುಗರಿಗೆ ತಮಾಷೆ ಎನಿಸಿದರೂ ಟ್ರಕ್ ಚಾಲಕನ ಬೇಸರವನ್ನು ಸೂಚಿಸುತ್ತದೆ.

ಹೆಚ್ಚಾಗಿ ಅಧಿಕ ಸಮಯದ ಸಿಗ್ನಲ್‌ಗಳಲ್ಲಿ ಪವರ್ ನ್ಯಾಪ್ ಮಾಡುವ ಸವಾರರು ನಮ್ಮಲ್ಲಿ ಅಧಿಕ ಜನರಿರುತ್ತಾರೆ. ಇಂತವರ ನಡುವೆಯೂ ಸಿಗ್ನಲ್ ಬಿದ್ದಾಗಲೂ ಸುಖಾ ಸುಮ್ಮನೆ ಹಾರ್ನ್ ಮಾಡುವ ಮೂಲಕ ಕಿರಿಕಿರಿಯನ್ನುಂಟು ಮಾಡುವ ವಾಹನ ಸವಾರರೂ ನಮ್ಮ ನಡುವೆ ಹೆಚ್ಚಾಗಿ ಕಂಡು ಬರುತ್ತಾರೆ. ಇದರಿಂದಾಗಿ ರಸ್ತೆಯಲ್ಲಿ ಜಗಳಗಳು, ಹೊಡೆದಾಟ, ಬಡಿದಾಟಗಳೇ ನಡೆದು ಹೋಗಿವೆ. ಟ್ರಾಫಿಕ್ ಜಾಮ್‌ನಲ್ಲಿ ಅಥವಾ ರೆಡ್ ಸಿಗ್ನಲ್‌ನಲ್ಲಿ ಹಾರ್ನ್‌ಗಳನ್ನು ಮಾಡುವುದು ಹುಚ್ಚುತನವೇ ಸರಿ. ಈ ಹುಚ್ಚುತನಕ್ಕೆ ಟ್ರಕ್ ಚಾಲಕನೊಬ್ಬ ಸರಿಯಾಗಿ ಪ್ರತಿಕ್ರಿಯೆ ನೀಡಿದ್ದು ಈ ವಿಡಿಯೋ ನೋಡುಗರನ್ನು ನಗಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ನಡೆದ ಘಟನೆ ನೋಡುಗರಿಗೆ ನಗು ತರಿಸಿದರೂ ತಾಳ್ಮೆ ಕಳೆದುಕೊಂಡಾಗ ಆಗುವ ಕಿರಿಕಿರಿಯನ್ನು ತೋರಿಸುತ್ತದೆ. ಜೊತೆಗಿದೊಂದು ವಾಹನ ಸವಾರರಿಗೆ ಪಾಠವಾಗಿದೆ.












Click it and Unblock the Notifications