ತಡವಾಗಿ ಬಂದಿದ್ದಕ್ಕೆ ಶಿಕ್ಷಕಿಗೆ ಥಳಿಸಿದ ಶಾಲೆಯ ಪ್ರಾಂಶುಪಾಲರು- ವಿಡಿಯೋ ವೈರಲ್
ಆಗ್ರಾ ಮೇ 5: ಶಾಲೆಯ ಮಹಿಳಾ ಪ್ರಾಂಶುಪಾಲರೊಬ್ಬರು ತಡವಾಗಿ ಬಂದಿದ್ದಕ್ಕೆ ಶಿಕ್ಷಕಿಗೆ ಥಳಿಸಿದ ಘಟನೆ ಆಗ್ರಾದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸಾಮಾನ್ಯವಾಗಿ ಶಾಲೆಗೆ ತಡವಾಗಿ ಬಂದರೆ ಶಿಕ್ಷಕರು ಮಕ್ಕಳನ್ನು ಥಳಿಸುವುದನ್ನು ನಾವು ಕೇಳಿದ್ದೇವೆ. ಆದರೆ ವೈರಲ್ ವಿಡಿಯೋದಲ್ಲಿ ತಡವಾಗಿ ಬಂದಿದ್ದಕ್ಕಾಗಿ ಶಿಕ್ಷಕಿಗೆ ಪ್ರಾಂಶುಪಾಲರು ಥಳಿಸಿದ್ದಾರೆ. ಇತ್ತೀಚೆಗಷ್ಟೇ ಯುಪಿಯ ಶಾಲೆಯೊಂದರ ಪ್ರಾಂಶುಪಾಲರು ತಾವು ಫೇಶಿಯಲ್ ಮಾಡಿಸುತ್ತಿದ್ದ ವಿಡಿಯೋ ಮಾಡಿದ ಶಿಕ್ಷಕರಿಗೆ ಕಚ್ಚಿದ್ದರು. ಈ ಘಟನೆ ನಡೆದು ಕೆಲವು ವಾರಗಳ ನಂತರ ಇನ್ನೊಂದು ಶಾಲೆಯ ಪ್ರಾಂಶುಪಾಲರು ತಡವಾಗಿ ಬಂದಿದ್ದಕ್ಕಾಗಿ ಶಿಕ್ಷಕಿಗೆ ಥಳಿಸಿದ ಆರೋಪ ಕೇಳಿ ಬಂದಿದೆ.

ಆಗ್ರಾದ ಸೀಗಾನಾ ಗ್ರಾಮದ ಮಾಧ್ಯಮಿಕ ಶಾಲೆಯ ಮಾಜಿ ಪ್ರಾಂಶುಪಾಲರೊಬ್ಬರು ಶಿಕ್ಷಕಿ ಗುಂಜನ್ ಚೌಧರಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಆಕೆಯ ಬಟ್ಟೆಯನ್ನು ಹರಿದು ಹಾಕಲು ಯತ್ನಿಸಿದ್ದಾರೆನ್ನುವ ಆರೋಪದ ವಿಡಿಯೋ ವೈರಲ್ ಆಗಿದೆ. ಪ್ರಾಂಶುಪಾಲರ ಚಾಲಕ ಮೊದಲು ಇಬ್ಬರನ್ನು ಬೇರ್ಪಡಿಸಲು ಯತ್ನಿಸಿದ್ದು, ಬಳಿಕ ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವುದು ಕಂಡು ಬಂದಿದೆ.
A Principal in Agra beat up a teacher this bad just because she came late to the school. Just look at her facial expressions. She's a PRINCIPAL 😭 @agrapolice pic.twitter.com/db8sKvnNvs
— Deepika Narayan Bhardwaj (@DeepikaBhardwaj) May 3, 2024
ಈ ದೃಶ್ಯವನ್ನು ಮಹಿಳೆಯೊಬ್ಬರು ತಮ್ಮ ಫೋನ್‌ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನು ರೆಕಾರ್ಡ್ ಮಾಡಲಾಗುತ್ತಿದೆ ಎಂದು ವಿಡಿಯೋದಲ್ಲಿ ಅವರು ಹೇಳುತ್ತಿರುವುದು ಕೇಳಿ ಬಂದಿದೆ. "ಇದನ್ನು ರೆಕಾರ್ಡ್ ಮಾಡಲಾಗುತ್ತಿದೆ... ಮೇಡಂ, ಇದು ಅಸಭ್ಯವಾಗಿದೆ. ಇದು ನಿಮಗೆ ಸರಿಯೇ?" ಎಂದು ವೀಡಿಯೋ ಮಾಡುತ್ತಿರುವ ಮಹಿಳೆ ಹೇಳುತ್ತಿರುವುದು ಕೇಳಿ ಬರುತ್ತದೆ. ಹೊಡೆದಾಟದ ಸಮಯದಲ್ಲಿ ಶಿಕ್ಷಕಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.
ಇಬ್ಬರು ಮಹಿಳಾ ಶಿಕ್ಷಕಿಯರು 'ನಾಚಿಕೆಯಿಲ್ಲದ ಮಹಿಳೆ' ಎಂದು ಬೈದಾಡಿಕೊಳ್ಳುತ್ತಾ ಶಾಲೆಗೆ ತಡವಾಗಿ ಬರುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಾಂಶುಪಾಲರು ಹಾಗೂ ಶಿಕ್ಷಕರು ತಮ್ಮ ಜಗಳದ ವೇಳೆ ಅವರು ಓದಿದ ಶಾಲೆಗೆ ಅಥವಾ ಅವಳ ವೃತ್ತಿಗೆ ಸೂಕ್ತವಲ್ಲದ ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿದ್ದಾರೆ. ಹಲ್ಲೆಯ ಸಂಪೂರ್ಣ ಘಟನೆಯ ನಂತರ ಶಾಲೆಯ ಪ್ರಾಂಶುಪಾಲರು ಶಿಕ್ಷಕಿಯ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications