ಹಲೋ ಇಲ್ಕೇಳಿ, ವಿಶ್ವ ಹಲೋ ದಿನಕ್ಕೆ 'ಹಲೋ' ಹೇಳಿ!

Posted By:
Subscribe to Oneindia Kannada

ಜಗತ್ತಿನಲ್ಲಿ ಅತೀ ಹೆಚ್ಚು ಬಳಕೆಯಾದ ಪದ 'ಹಲೋ' ಎಂಬುದೇ ಇರಬೇಕು! ಫೋನ್ ಕಿವಿಗಿಡುತ್ತಿದ್ದಂತೆ, ನಾಲಿಗೆಯ ಮೇಲೆ ಅರಿವಿಲ್ಲದೆ ಹುಟ್ಟುವ ಪದ, 'ಹಲೋ...', ಯಾರನ್ನಾದರೂ ಮೊದಲ ಬಾರಿ ಪರಿಚಯಿಸಿಕೊಂಡಾಗ, ಕೈಕುಲುಕುವ ಮೊದಲೇ ಬಾಯಲ್ಲಿ ಉಚ್ಚಾರವಾಗುವ ಪದ 'ಹಲೋ...', ಎಷ್ಟೋ ಸಂಭಾಷಣೆಯ ಆರಂಭದ ಮೌನ ಮುರಿಯುವ ಪದವೂ 'ಹಲೋ...!'

ಶಾಂತಿ ನೊಬೆಲ್ ಸ್ವೀಕರಿಸಿದ ಸತ್ಯಾರ್ಥಿ, ಮಲಾಲಾ

ಪ್ರತಿವರ್ಷವೂ ನವೆಂಬರ್ 21 ಅನ್ನು 'ವಿಶ್ವ ಹಲೋ ದಿನ' ಎಂದು ಆಚರಿಸಿ ಸಂವಹನ ಪ್ರಕ್ರಿಯೆಯಲ್ಲಿ ಮಹತ್ವದ ಸ್ಥಾನ ಪಡೆದ ಹಲೋ ಎಂಬ ಪದಕ್ಕೆ ಗೌರವ ನೀಡುತ್ತೇವೆ!

ಶಾಂತಿ ಬೇಕಿದ್ದರೆ ಗಾಢವಾಗಿ ಪ್ರೀತಿಸುವುದ ಕಲಿಯಿರಿ

ಈ ದಿನ ಹತ್ತು ಜನರಿಗೆ ಹಲೋ ಹೇಳುವ ಮೂಲಕ ಒಳಿತನ್ನು ಪಡೆಯಬಹುದು ಅನ್ನೋ ನಂಬಿಕೆ ಪಾಶ್ಚಾತ್ಯರಲ್ಲಿದೆಯಂತೆ! ಅಷ್ಟಕ್ಕೂ ಏನಿದು ವಿಶ್ವ ಹಲೋ ದಿನ? ಏನಿದರ ಮಹತ್ವ?

ಹಲೋ ದಿನದ ಹಿನ್ನಲೆ

'ಹಲೋ' ದಿನ ಎಂಬುದು ಕೇಳುವುದಕ್ಕೆ ಸ್ವಲ್ಪ ವಿಚಿತ್ರವೆನ್ನಿಸಿದರೂ, ಅದರ ಉದ್ದೇಶ ಮಾತ್ರ ಮಹತ್ತರವಾದುದು. ಯುದ್ಧವನ್ನೆಲ್ಲ ಬಿಟ್ಟು, ಶತ್ರುಗಳು ಪರಸ್ಪರ ಮುಖಾಮುಖಿಯಾಗಿ 'ಹಲೋ' ಎಂದು, ಶಾಂತಿಗೆ ಮುನ್ನುಡಿ ಬರೆಯಲಿ ಎಂಬ ಉದ್ದೇಶಕ್ಕಾಗಿ ಈ ದಿನ ಆಚರಣೆಗೊಳ್ಳುತ್ತದೆ. ಈಜಿಫ್ಟ್ ಮತ್ತು ಇಸ್ರೇಲ್ ನಡುವೆ ಕದನ ನಡೆಯುತ್ತಿದ್ದ ಸಮಯದಲ್ಲಿ ಹಿಂಸೆಯನ್ನೆಲ್ಲ ತೊರೆದು ಪರಸ್ಪರ ಶಾಂತಿಯುತ ಸಂಧಾನ ನಡೆಯಬೇಕೆಂದು ಮೈಕೆಲ್ ಮ್ಯಾಕ್ ಕೊರ್ಮಾಕ್ ಮತ್ತು ಬ್ರಿಯಾನ್ ಮ್ಯಾಕ್ ಕೊರ್ಮಾಕ್ ಎಂಬ ಸಹೋದರರು ಮೊಟ್ಟ ಮೊದಲ ಬಾರಿಗೆ ವಿಶ್ವ ಹಲೋ ದಿನ ಆಚರಿಸಲು ನಾಂದಿ ಹಾಡಿದರು. ಆ ದಿನ 1973 ನವೆಂಬರ್ 21! 'ಕದನಗಳು ಸಂವಹನದಿಂದ ಪರಿಹಾರಗೊಳ್ಳಬೇಕು, ಬಲದಿಂದಲ್ಲ' ಎಂಬುದು ಹಲೋ ದಿನದ ಕಳಕಳಿ.

ವಿಶ್ವ ಶಾಂತಿಗೆ ಮುನ್ನುಡಿ

ನೊಬೆಲ್ ಶಾಂತಿ ಪುರಸ್ಕಾರ ಪಡೆದ 30 ಕ್ಕೂ ಹೆಚ್ಚು ಜನರು ವಿಶ್ವ ಹಲೋ ದಿನವನ್ನು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ, ವಿಶ್ವಶಾಂತಿಯೇ ಈ ಹಲೋ ದಿನದ ಮಹತ್ವ ಎಂದಿದ್ದಾರೆ. ಯುದ್ಧ ಎಲ್ಲಕ್ಕೂ ಉತ್ತರವಲ್ಲ, ಶಾಂತಿಯುತ ಮಾತುಕತೆಯಿಂದ ಬಗೆಹರಿಸುವ ಪ್ರಯತ್ನ ನಡೆಯಬೇಕು. ಶಾಮತಿಯುತ ಸಂಧಾನಕ್ಕೆ 'ಹಲೋ' ಎಂಬುದು ಒಂದು ನಾಂದಿಯಷ್ಟೇ. ಶಾಂತಿಯನ್ನು ಸಂಕೇತಿಸುವುದೇ 'ಹಲೋ ದಿನ'ದ ಆದ್ಯ ಗುರಿ.

ಯಾರು ಈ ಮ್ಯಾಕ್ ಕೊರ್ಮಾಕ್ ಸಹೋದರರು?

ಹಲೋ ದಿನವನ್ನು ಆರಂಭಿಸಿದ ಮೈಕೆಲ್ ಮ್ಯಾಕ್ ಕೊರ್ಮಾಕ್ ಮತ್ತು ಬ್ರಿಯಾನ್ ಮ್ಯಾಕ್ ಕೊರ್ಮಾಕ್ ಸಹೋದರರು. ಮೈಕಲ್ ಮ್ಯಾಕ್ ಕೊರ್ಮಾಕ್ ಒಬ್ಬ ಬರಹಗಾರ. 'ಗಾಂಧೀಸ್ ಲಾಸ್ಟ್ ಬುಕ್' ಸೇರಿದಂತೆ ಹಲವು ಕಾದಂಬರಿಗಳನ್ನೂ ಆತ ರಚಿಸಿರುವ ಮೈಕೆಲ್ ನಟನಾಗಿಯೂ ಪ್ರಸಿದ್ಧಿ ಪಡೆದವರು.

ಬಿಗುಮಾನ ಬಿಡಿ, ಹಲೋ ಅನ್ನಿ...

ವಿಶ್ವ ಹಲೋ ದಿನದಂದು ಎಲ್ಲ ಬಿಗುಮಾನ, ಅಹಂಕಾರವನ್ನೂ ಬಿಟ್ಟು ಮುನಿಸಿಕೊಂಡ ಸ್ನೇಹಿತರಿಗೆ, ಮಾತನಾಡದ ಆಪ್ತರಿಗೆ ಎಲ್ಲರಿಗೂ ಒಮ್ಮೆ ಹಲೋ ಅನ್ನಿ. ಸಂಬಂಧಗಳ ಮಧ್ಯೆ ಗೋಡೆಯನ್ನು ಎಬ್ಬಿಸಿದ ಅಹಂಕಾರವನ್ನು 'ಹಲೋ' ಎಂಬ ಆಪ್ತ ಪದವೊಂದು ಬೀಳಿಸಲಿ. ಆಪ್ತ ಭಾವ ಮೂಡಿಸಿ, ಬಂಧ ಬೆಸೆಯಲಿ. ವಿಶ್ವ ಹಲೋ ದಿನದ ಶುಭಾಶಯಗಳು!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Every year, November 21st is World Hello Day. The day is celebrating all over the world to express that conflicts should be resolved through communication rather than the use of force. World Hello Day is trending in twitter today..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ