ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಮೇಲೆ 10000 ರಿಯಾಯಿತಿ
ಭಾರತದಲ್ಲಿ ಇತ್ತೀಚಿಗೆ ಮೊಟೊರೊಲಾ ಭರ್ಜರಿ ಮಾರಾಟವಾಗುತ್ತಿದೆ. ಇನ್ನು ಹೆಚ್ಚಿನ ಗ್ರಾಹಕರನ್ನು ಟಾರ್ಗೆಟ್ ಮಾಡಲು ಮೊಟೊ ಮತ್ತೊಂದು ಪ್ಲ್ಯಾನ್ ಮಾಡಿಕೊಂಡಿದೆ. ಈ ಬಾರಿ ಮೊಟೊರೊಲಾ ನೂತನವಾಗಿ ಬಿಡುಗಡೆಯಾದ ಮೊಬೈಲ್ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಿದೆ.
Motorola ನ ಇತ್ತೀಚಿನ ಪ್ರಮುಖ Motorola Edge 50 Ultra ಈಗ ಅಧಿಕೃತವಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಇಂದಿನಿಂದ ಅಂದರೆ ಜೂನ್ 24 ರಿಂದ ಖರೀದಿಗೆ ಲಭ್ಯವಿದೆ. ವಿಶೇಷವೆಂದರೆ ಈ ಸ್ಮಾರ್ಟ್‌ಫೋನ್‌ನ ಹಿಂಭಾಗ ಕಟ್ಟಿಗೆಯಿಂದ ನಿರ್ಮಿತವಾಗಿದೆ. ಈ ಫೋನ್ ಆಕರ್ಷಕ್ ಫೀಚರ್ಸ್ ಹೊಂದಿದ್ದು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ. ಶಕ್ತಿಶಾಲಿ ಕ್ಯಾಮೆರಾ, Motorola AI ಮ್ಯಾಜಿಕ್ ಕ್ಯಾನ್ವಾಸ್, StyleSync ಮತ್ತು ಇತರ ಹಲವು Moto AI ವೈಶಿಷ್ಟ್ಯಗಳನ್ನು ಕೂಡ ಹೊಂದಿದೆ.

ಮೊಟೊರೊಲಾ ಎಡ್ಜ್ 50 ಅಲ್ಟ್ರಾ 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ 144 Hz ರಿಫ್ರೇಶ್ ದರ ಹಾಗೂ 2,500 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ. ಈ ಫೋನ್‌ನಲ್ಲಿ ಕ್ವಾಲ್ಕಕಾಂ ಸ್ನ್ಯಾಪ್ ಡ್ರ್ಯಾಗನ್ 8 ಜನರೇಷನ್ 3 ಚಿಪ್ ಸೆಟ್ ನೀಡಲಾಗಿದೆ. ಈ ಮೊಬೈಲ್ 128 ಜಿಬಿ ರ್ಯಾಮ್, 512 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಈ ಮೊಬೈಲ್ ನೊಂದಿಗೆ 4,500mAh ಬ್ಯಾಟರಿ ನೀಡಲಾಗುತ್ತದೆ. ಇದರೊಂದಿಗೆ 125W USB ಟೈಪ್ C ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿತವಾಗಿದೆ. ಫೋನ್ 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ.
ಸಂಪರ್ಕಕ್ಕಾಗಿ, ಫೋನ್ Wi-Fi, GPS, NFC ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದು 50MP ಮುಖ್ಯ, 64MP ಟೆಲಿಫೋಟೋ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾ ಸಂವೇದಕವನ್ನು ಹೊಂದಿದೆ.

ಮೊಟೊರೊಲಾ ಎಡ್ಜ್ 50 ಅಲ್ಟ್ರಾ: ಬೆಲೆ ಎಷ್ಟು?
ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಬೆಲೆಯು 12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಈ ಮೊಬೈಲ್ ಸಿಂಗಲ್ ವೆರಿಯಂಟ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ಮೊಬೈಲ್ ಲಾಂಚ್ ಪ್ರೈಸ್ ರೂ 54,999 ಆಗಿದೆ. ಈ ಮೊಬೈಲ್ ಫಾರೆಸ್ಟ್ ಗ್ರೇ ಮತ್ತು ಪೀಚ್ ಮಿಠಾಯಿ ಬಣ್ಣಗಳಲ್ಲಿ ಬರುತ್ತದೆ. ಇದು ಕಂಪನಿಯ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಗಳಲ್ಲಿ ಖರೀದಿಗೆ ಲಭ್ಯವಿದೆ.
ಕಂಪನಿಯು ಸ್ಮಾರ್ಟ್‌ಫೋನ್‌ನ ಮೇಲೆ 10,000 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಅದೇ ಸಮಯದಲ್ಲಿ, ಗ್ರಾಹಕರು HDFC ಮತ್ತು ICICI ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಮೂಲಕ ಹೆಚ್ಚುವರಿ 5,000 ರೂ. ಉಳಿಸಬಹುದು. ಕಂಪನಿಯು ಯಾವುದೇ ವೆಚ್ಚದ EMI ಆಯ್ಕೆಯನ್ನು ಸಹ ನೀಡುತ್ತಿದೆ, ಅದರ ಮೂಲಕ ನೀವು ತಿಂಗಳಿಗೆ 4,584 ರೂ ಪಾವತಿಸಿ ಫೋನ್ ಖರೀದಿಸಬಹುದು. ಇನ್ನು ಗ್ರಾಹಕರಿಗೆ ಬೇಕಾದ ಹಾಗೆ ಮೂರು ಮಾದರಿಯಲ್ಲಿ ಇಎಂಐ ಆಕ್ಷನ್ ನೀಡಲು ಕಂಪನಿ ಮುಂದಾಗಿದೆ.












Click it and Unblock the Notifications