Sankashti Chaturthi 2022: ಸಂಕಷ್ಟ ಚತುರ್ಥಿ ದಿನಾಂಕ, ವ್ರತ ಕಥಾ, ಪೂಜಾ ವಿಧಿ, ಮಹತ್ವ

ಈ ದಿನದಂದು ಯಾರು ಗಣಪತಿಯನ್ನು ಮನಃಪೂರ್ವಕವಾಗಿ ಪೂಜಿಸುತ್ತಾರೋ ಅವರ ಎಲ್ಲಾ ಕಷ್ಟಗಳು, ದುಃಖಗಳು ಮತ್ತು ಪಾಪಗಳು ದೂರವಾಗುತ್ತವೆ ಎಂಬ ನಂಬಿಕೆ ಸಂಕಷ್ಟಿ ಚತುರ್ಥಿಯಲ್ಲಿದೆ.

ಹಿಂದೂ ಸಂಪ್ರದಾಯದಲ್ಲಿ ಸಂಕಷ್ಟಿ ಚತುರ್ಥಿಗೆ ಬಹಳ ಪ್ರಾಮುಖ್ಯತೆ ಇದೆ. ಈ ಉಪವಾಸವನ್ನು ಮಗುವಿನ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ಆಚರಿಸಲಾಗುತ್ತದೆ. ಪ್ರತಿ ತಿಂಗಳು ಎರಡು ಗಣೇಶ ಚತುರ್ಥಿಗಳಿದ್ದರೂ ಮಾಘ ಮಾಸದಲ್ಲಿ ಬರುವ ಸಂಕಷ್ಟ ಚತುರ್ಥಿಯನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಈ ಬಾರಿ ಈ ಹಬ್ಬವನ್ನು ಜನವರಿ 21 ರಂದು ಆಚರಿಸಲಾಗುತ್ತಿದೆ. ಈ ವ್ರತವು ಬೆಳಿಗ್ಗೆ ಸೂರ್ಯೋದಯದಿಂದ ಪ್ರಾರಂಭವಾಗಿ ರಾತ್ರಿ ಚಂದ್ರನಿಗೆ ಪ್ರಾರ್ಥನೆ ಅರ್ಪಿಸಿದ ನಂತರ ಕೊನೆಗೊಳ್ಳುತ್ತದೆ. ಈ ದಿನದಂದು ಎಳ್ಳು ಮತ್ತು ಬೆಲ್ಲದಿಂದ ಮಾಡಿದ ವಸ್ತುಗಳನ್ನು ತಯಾರಿಸಲಾಗುತ್ತದೆ ಮತ್ತು ಅವುಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ನಂತರ ಅದನ್ನು ಪ್ರಸಾದವೆಂದು ಸ್ವೀಕರಿಸಲಾಗುತ್ತದೆ. ಆದುದರಿಂದ ಇದನ್ನು ತಿಲಕೂಟ ಚೌತ್ ಎಂದೂ ಕರೆಯುತ್ತಾರೆ. ಇಂದು ಅನೇಕ ಭಕ್ತರು ಶ್ರೀ ಭಗವಾನ್ ಗಣೇಶನ ಆಶೀರ್ವಾದ ಪಡೆಯಲು ಉಪವಾಸ ಮಾಡುತ್ತಾರೆ. ಈ ಉಪವಾಸಕ್ಕೆ ಸಂಬಂಧಿಸಿದ ಪೌರಾಣಿಕ ಕಥೆಯನ್ನು ತಿಳಿಯಿರಿ.

ಸಂಕಷ್ಟ ಚತುರ್ಥಿ

ಒಂದು ದಂತಕಥೆಯ ಪ್ರಕಾರ, ಒಂದು ಪಟ್ಟಣದಲ್ಲಿ ಕುಂಬಾರನೊಬ್ಬ ವಾಸಿಸುತ್ತಿದ್ದನು. ಒಮ್ಮೆ ಈತ ತಯಾರಿಸಿದ ಮಡಕೆಯಲ್ಲಿ ಆಹಾರ ಬೆಂದಿರಲಿಲ್ಲ. ಇದನ್ನು ಕಂಡು ಕುಂಬಾರನು ಬೇಸರಗೊಂಡು ರಾಜನ ಬಳಿಗೆ ಹೋದನು. ರಾಜನು ಪಂಡಿತನನ್ನು ಕರೆದು ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ಬಯಸಿದನು. ಆಗ ಪಂಡಿತ, ಪ್ರತಿ ದಿನವೂ ಗ್ರಾಮದ ಪ್ರತಿ ಮನೆಯಿಂದ ಒಂದು ಮಗುವನ್ನು ಬಲಿ ನೀಡಿದರೆ, ಸಮಸ್ಯೆ ಪರಿಹಾರವಾಗುತ್ತದೆ ಎಂದು ಪಂಡಿತರು ಹೇಳಿದರು. ಇಡೀ ನಗರದಿಂದ ಪ್ರತಿದಿನ ಒಂದು ಮಗುವನ್ನು ಬಲಿಕೊಡಬೇಕೆಂದು ರಾಜನು ಆದೇಶಿಸಿದನು. ರಾಜನ ಆದೇಶದಂತೆ ಪ್ರತಿದಿನ ಪ್ರತಿಯೊಂದು ಮನೆಯಿಂದ ಬಲಿಗಾಗಿ ಕಳುಹಿಸಲಾಗುತ್ತಿತ್ತು.

 Sankashti Chaturthi 2022 Date, Vrat Katha, Puja Vidhi, Significance, Moon Rise Time in Kannada
ಮಗುವಿನ ದೀರ್ಘಾಯುಷ್ಯ ಮತ್ತು ಸಂತೋಷಕ್ಕಾಗಿ ಆಚರಿಸುವ ಹಬ್ಬ

ಪ್ರತಿ ಕುಟುಂಬದಿಂದ ಒಂದು ಮಗುವನ್ನು ತ್ಯಾಗಕ್ಕಾಗಿ ಒಂದೊಂದು ದಿನ ಕಳುಹಿಸಲಾಯಿತು. ಕೆಲ ದಿನಗಳ ನಂತರ ಮುದುಕಿಯ ಮನೆಯ ಸರದಿ ಬಂದಿತು. ಈ ವೇಳೆ ಅಜ್ಜಿಗೆ ತನ್ನ ಮನೆಯ ಹುಡುಗನನ್ನು ಕಳುಹಿಸಲು ಮನಸ್ಸಾಗಲಿಲ್ಲ. ಬೇಸರಗೊಂಡ ಮುದುಕಿ ರಾಜನ ಬಳಿಗೆ ಹೋಗಲು ನಿರ್ಧರಿಸಿದಳು. ಆಕೆಗೆ ತನ್ನ ಮಗನನ್ನು ಕಳುಹಿಸಲು ಇಷ್ಟವಿಲ್ಲ ಎಂದು ರಾಜನ ಬಳಿ ಹೇಳಿದಳು. ಜೊತೆಗೆ ಅವರ ವೃದ್ಧಾಪ್ಯದ ಏಕೈಕ ಆಸರೆ ಆ ಹುಡುಗನಾಗಿರುವುದರಿಂದ ಮದುಕಿ ಇದಕ್ಕೆ ಒಪ್ಪಲಿಲ್ಲ. ಈ ಸಂಕಷ್ಟದಿಂದ ಹೊರಬರಲು ಮುದುಕಿ ತನ್ನ ಮಗನನ್ನು ಯಜ್ಞಕ್ಕೆ ಕಳುಹಿಸುವ ಮೊದಲು ವೀಳ್ಯದೆಲೆ ಹಿಡಿದು ದೇವರ ನಾಮದೊಂದಿಗೆ ಮಗ್ನಳಾದಳು. ಮಗನನ್ನು ಬಲಿಗಾಗಿ ಕೂಡಿಸಿದಾಗ ಮುದುಕಿ ತನ್ನ ಮಗನ ರಕ್ಷಣೆಗಾಗಿ ಪೂಜೆಯಲ್ಲಿ ತೊಡಗಿದಳು. ಇದರಿಂದ ಹಿಂದೆ ಅಡುಗೆ ಮಾಡಲು ಬಹಳ ದಿನಗಳಾಗುತ್ತಿದ್ದ ಮಡಕಿಯಲ್ಲಿ ಆಹಾರ ಬೆಂದಿತ್ತು. ಮುಂಜಾನೆ ಕುಂಬಾರ ಅದನ್ನು ತೆಗೆದು ನೋಡಿದಾಗ ಆಹಾರ ಬೆಂದಿತ್ತು ಮತ್ತು ಮದುಕಿಯ ಮಗ ಸುರಕ್ಷಿತವಾಗಿದ್ದನು. ಸಂಕಷ್ಟ ದೇವರ ಕೃಪೆಯಿಂದ ಬಲಿಯಾಗಬೇಕಿದ್ದ ಊರಿನ ಆ ಮಕ್ಕಳೂ ಬದುಕಿದರು. ಅಂದಿನಿಂದ, ನಗರದ ನಿವಾಸಿಗಳು ತಾಯಿಯ ಸಂಕಷ್ಟ ಮಹಿಮೆಯನ್ನು ಸ್ವೀಕರಿಸಿದರು. ಸಂಕಷ್ಟ ಮಾತೆಯ ಪೂಜೆ ಮತ್ತು ಉಪವಾಸದ ನಿಯಮವನ್ನು ಪ್ರಾರಂಭಿಸಿದರು.

 Sankashti Chaturthi 2022 Date, Vrat Katha, Puja Vidhi, Significance, Moon Rise Time in Kannada
ಗಣೇಶನ ಪೂಜೆ ಶ್ರೇಷ್ಠ

ಸಂಕಷ್ಟ ಚತುರ್ಥಿ ಹಬ್ಬವೆಂದರೆ ಅದುವೇ ಗಣೇಶ ದೇವನಿಗೆ ಅಥವಾ ಗಣಪತಿಗೆ ಅರ್ಪಿಸಲಾದ ವ್ರತವಾಗಿದೆ. ಈ ದಿನ ವಿಧಿ ವಿಧಾನಗಳ ಮೂಲಕ ಗಣಪತಿ ದೇವನನ್ನು ಪೂಜಿಸಲಾಗುತ್ತದೆ. ಹಾಗೂ ಉಪವಾಸ ವ್ರತವನ್ನು ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಈ ಬಾರಿ ಸಂಕಷ್ಟ ಚತುರ್ಥಿ ಹಬ್ಬವನ್ನು 2022 ರ ಜನವರಿ 21 ರಂದು ಆಚರಿಸಲಾಗುವುದು. ಸಂಕಷ್ಟ ಚತುರ್ಥಿ ವ್ರತವು ಮಂಗಳವಾರ ಬಂದಾಗ ಆ ಸಂಕಷ್ಟ ಚತುರ್ಥಿಯನ್ನು ಅಂಗಾರಕಿ ಸಂಕಷ್ಟ ಚತುರ್ಥಿಯೆಂದು ಮತ್ತು ಗಜಾನನ ಸಂಕಷ್ಟ ಚತುರ್ಥಿಯೆಂದು ಕರೆಯಲಾಗುತ್ತದೆ.ಣೇಶನನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ. ಗಣೇಶನಿಗೆ ಮೊದಲೊಂದಿಪನೆಂಬ ಬಿರುದು ಕೂಡ ಇದೆ. ಸಂಕಷ್ಟ ಎಂಬುದು ಸಂಸ್ಕೃತ ಪದ. ಬಿಕ್ಕಟ್ಟಿನ ಸಮಯದಿಂದ ಸ್ವಾತಂತ್ರ್ಯ ಪಡೆಯುವುದು ಇದರ ಅರ್ಥವಾಗಿದೆ. ಈ ದಿನ ಗಣೇಶನನ್ನು ಪೂಜಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಈ ದಿನ ಗಣಪತಿಯನ್ನು ಪೂಜಿಸಿದ ನಂತರ ಆತನಿಗೆ ಆರತಿ ಮಾಡಬೇಕು. ಇದು ನಿಮಗೆ ಸಮೃದ್ಧಿಯನ್ನು ತರುತ್ತದೆ.

ಸಮಯ

ಈ ಬಾರಿ ಸಂಕಷ್ಟಿಯಂದು ಸೂರ್ಯೋದಯವು ಜ. 21 ರಂದು 04:20 AM to 05:03 AMರ ಹೊತ್ತಿಗೆ ಸಂಭವಿಸಲಿದೆ. ಚಂದ್ರೋದಯವು ಜ.21 ರಂದು ಸಂಜೆ 3.21 ಕ್ಕೆ ಆಗಿಲಿದೆ. ಫೂಜೆಗೆ ಶುಭ ಮುಹೂರ್ತಮಧ್ಯರಾತ್ರಿ 2.30 ರಿಂದ 4.09ರವರೆಗೆ ಇದೆ. ಶಂಕಷ್ಟ ಚತುರ್ಥಿಯಂದು ಓಂ ಗಂ ಗಣಪತಯೇ ನಮಃ ಹಾಗೂ ಓಂ ವಕ್ರತುಂಡಾಯಂ ಮಂತ್ರ ಶ್ರೇಷ್ಠವಾಗಿದೆ.

ಪೂಜಾ ವಿಧಾನ

ಈ ದಿನ ಗಣಪತಿಯನ್ನು ಕ್ರಮಬದ್ಧವಾಗಿ ಪೂಜಿಸುವುದರಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಈ ದಿನ ಗಣೇಶನಿಗೆ ಆತನ ನೆಚ್ಚಿನ ವಸ್ತುಗಳನ್ನು ಅರ್ಪಿಸಬೇಕು ಎಂದು ನಂಬಲಾಗಿದೆ. ಇದರೊಂದಿಗೆ, ದೂರ್ವಾ ಹುಲ್ಲನ್ನು ಅರ್ಪಿಸಬೇಕು. ಈ ದಿನ, ಮುಂಜಾನೆ ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ ಮತ್ತು ಉಪವಾಸದ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ. ಇದರ ನಂತರ, ಗಂಗಾಜಲವನ್ನು ದೇವರಿಗೆ ಅರ್ಪಿಸಿ ಮತ್ತು ಅಭಿಷೇಕ ಮಾಡಿ. ಹೂವುಗಳನ್ನು ನೀಡಿ. ಗಣೇಶನಿಗೆ ಸಿಂಧೂರವನ್ನು ಅರ್ಪಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+