ಸಾಗರ ಚುನಾವಣಾ ಚಿತ್ರಣ; ಬೇಳೂರು ಗೋಪಾಲಕೃಷ್ಣ ಪರಿಚಯ
ಕರ್ನಾಟಕ ವಿಧಾನಸಭೆ ಚುನಾವಣೆ 2023ರ ದಿನಾಂಕ ಘೋಷಣೆಯಾಗಿದೆ. ಮೇ 10ರ ಬುಧವಾರ ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಸಹ ಒಂದು. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಹರತಾಳು ಹಾಲಪ್ಪ.
ಕಾಂಗ್ರೆಸ್ ಪಕ್ಷ ಚುನಾವಣೆ ದಿನಾಂಕ ಘೋಷಣೆಗೆ ಮೊದಲೇ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಾಗರ ಕ್ಷೇತ್ರಕ್ಕೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಸಾಗರಕ್ಕೆ ಇನ್ನೂ ಘೋಷಣೆ ಮಾಡಿಲ್ಲ. ಆದರೆ ಆಮ್ ಆದ್ಮಿ ಪಕ್ಷ ಕೆ. ದಿವಾಕರ ಅಭ್ಯರ್ಥಿ ಎಂದು ಪಟ್ಟಿ ಬಿಡುಗಡೆ ಮಾಡಿದೆ.

ಸಾಗರ ಕ್ಷೇತ್ರದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. 1972ರಿಂದಲೂ ಅವರು ಕ್ಷೇತ್ರದಲ್ಲಿ ಸೋಲು-ಗೆಲುವು ಕಂಡಿದ್ದಾರೆ. ಆದರೆ 90 ವರ್ಷ ವಯಸ್ಸಿನ ಅವರಿಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂಬ ಸುದ್ದಿ ಇತ್ತು. ಒಂದು ವೇಳೆ ಕಾಗೋಡು ತಿಮ್ಮಪ್ಪಗೆ ಟಿಕೆಟ್ ನೀಡದಿದ್ದರೆ ಕಾಗೋಡು ತಿಮ್ಮಪ್ಪ ಪುತ್ರ ಡಾ. ರಾಜನಂದಿನಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ಕ್ಷೇತ್ರದ ಮಾಜಿ ಶಾಸಕ ಕಾಗೋಡು ತಿಮ್ಮಪ್ಪ ಸೋದರಳಿಯ (ಅಕ್ಕನ ಮಗ) ಬೇಳೂರು ಗೋಪಾಲಕೃಷ್ಣ ಪಾಲಾಗಿದೆ.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪ್ರಭಾವದಿಂದ ರಾಜಕೀಯಕ್ಕೆ ಬಂದ ಬೇಳೂರು ಗೋಪಾಲಕೃಷ್ಣ ಸಾಗರದಲ್ಲಿ ಏಳು-ಬೀಳು ಕಂಡವರು. 2004ರ ಚುನಾವಣೆಯಲ್ಲಿ ಎಸ್. ಬಂಗಾರಪ್ಪ ಕಾಗೋಡು ತಿಮ್ಮಪ್ಪ ಸೋಲಿಸಲು ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದ ಬೇಳೂರು ಗೋಪಾಲಕೃಷ್ಣರನ್ನು ಕರೆತಂದು ಅಭ್ಯರ್ಥಿ ಮಾಡಿದರು. ಮೊದಲ ಚುನಾವಣೆಯಲ್ಲಿಯೇ ಅವರು 15,173 ಮತಗಳನ್ನು ಪಡೆದು ಗೆಲುವು ಕಂಡರು. ಆದರೆ ಚುನಾವಣೆ ನಡೆದ ಎರಡು ವರ್ಷದಲ್ಲೇ ಎಸ್. ಬಂಗಾರಪ್ಪ ಬಿಜೆಪಿ ಬಿಟ್ಟರು. ಆದರೆ ಬೇಳೂರು ಗೋಪಾಲಕೃಷ್ಣ ರಾಜಕೀಯ ಗುರುವನ್ನು ಅನುಸರಿಸಲಿಲ್ಲ. ಬಿಜೆಪಿಯಲ್ಲಿಯೇ ಉಳಿದರು. ಬಿ. ಎಸ್. ಯಡಿಯೂರಪ್ಪ ಬೆಂಬಲಿಗರಾದರು.

ಬಿ. ಎಸ್. ಯಡಿಯೂರಪ್ಪ 2008ರ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣಗೆ ಬಿಜೆಪಿ ಟಿಕೆಟ್ ಕೊಡಿಸಿದರು. ಮತ್ತೆ ಮಾವ-ಅಳಿಯ ಆಗಿರುವ ಕಾಗೋಡು ತಿಮ್ಮಪ್ಪ, ಬೇಳೂರು ಗೋಪಾಲಕೃಷ್ಣ ಮುಖಾಮುಖಿಯಾದರು. ಚುನಾವಣೆಯಲ್ಲಿ ಭಾರೀ ಪೈಪೋಟಿ ನಡೆಯಿತು. ಬಿಜೆಪಿಯ ಬೇಳೂರು ಗೋಪಾಲಕೃಷ್ಣಗೆ ಕಾಗೋಡು ತಿಮ್ಮಪ್ಪ 54,861 ಮತಗಳನ್ನು ಪಡೆದು ಪ್ರಬಲ ಪೈಪೋಟಿ ಕೊಟ್ಟರು. ಅಂತಿಮವಾಗಿ ಬೇಳೂರು ಗೋಪಾಲಕೃಷ್ಣ 57,706 ಮತಗಳನ್ನು ಪಡೆದು ಜಯಗಳಿಸಿದರು.
ಶಾಸಕ ಸ್ಥಾನದಿಂದ ಅನರ್ಹ; ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹರತಾಳು ಹಾಲಪ್ಪಗೆ ಮಂತ್ರಿಗಿರಿ ಕೊಟ್ಟರು, ತಮ್ಮನ್ನು ಕಡೆಗಣಿಸಿದರು ಎಂದು ಅಸಮಾಧಾನಗೊಂಡ ಬೇಳೂರು ಗೋಪಾಲಕೃಷ್ಣ ಇತರ ಬಿಜೆಪಿ ಶಾಸಕರ ಜೊತೆ ಸೇರಿ ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದರು. ಶಾಸಕ ಸ್ಥಾನದಿಂದ ಅನರ್ಹಗೊಂಡರು. ಇದರಿಂದಾಗಿ ರಾಜಕೀಯವಾಗಿ ತ್ರಿಶಂಕು ಸ್ಥಿತಿಗೆ ತಲುಪಿದರು. ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್ ತನಕ ಹೋಗಿ ಅನರ್ಹತೆ ರದ್ದುಪಡಿಸಿಕೊಂಡು ಬಂದರು. ಆಗ 2013ರ ಚುನಾವಣೆ ಬಂತು.
ಬಿಜೆಪಿಯಲ್ಲಿದ್ದ ಬಿ. ಎಸ್. ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು. ಸಾಗರ ಕ್ಷೇತ್ರದ ಟಿಕೆಟ್ ಅನ್ನು ಬಿ. ಆರ್. ಜಯಂತ್‌ಗೆ ನೀಡಿದರು. ಬೇಳೂರು ಗೋಪಾಲಕೃಷ್ಣ ಅಸಮಾಧಾನಗೊಂಡು ಜೆಡಿಎಸ್ ಸೇರಿದರು. ಎಸ್. ಬಂಗಾರಪ್ಪ ನಿಧನದ ಕಾರಣ ಅವರ ಪ್ರಭಾವ ಸಾಗರದಲ್ಲಿ ಕೆಲಸ ಮಾಡಲಿಲ್ಲ. ಕಾಂಗ್ರೆಸ್‌ನಿಂದ ಕಾಗೋಡು ತಿಮ್ಮಪ್ಪ, ಜೆಡಿಎಸ್‌ನಿಂದ ಬೇಳೂರು ಗೋಪಾಲಕೃಷ್ಣ, ಕೆಜೆಪಿಯಿಂದ ಬಿ. ಆರ್. ಜಯಂತ್, ಬಿಜೆಪಿಯಿಂದ ಶರಾವತಿ ಸಿ. ರಾವ್ ಅಭ್ಯರ್ಥಿಯಾದರು. ಕಾಗೋಡು ತಿಮ್ಮಪ್ಪ 71,960 ಮತಗಳನ್ನು ಪಡೆದು ಗೆದ್ದರು. ಜೆಡಿಎಸ್‌ನ ಬೇಳೂರು ಗೋಪಾಲಕೃಷ್ಣ 23,217 ಮತಗಳನನ್ನು ಪಡೆದು 3ನೇ ಸ್ಥಾನ ಪಡೆದರು.
ಟಿಕೆಟ್ ಸಿಗಲೇ ಇಲ್ಲ; ಬಿ. ಎಸ್. ಯಡಿಯೂರಪ್ಪ ಬಿಜೆಪಿಗೆ ವಾಪಸ್ ಆದಾಗ ಬೇಳೂರು ಗೋಪಾಲಕೃಷ್ಣ ಅವರ ಜೊತೆ ಹೋದರು. 2018ರ ಚುನಾವಣೆಯಲ್ಲಿ ಅವರು ಸಾಗರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ 2013ರಲ್ಲಿ ಸೊರಬದಲ್ಲಿ ಮಧು ಬಂಗಾರಪ್ಪ ವಿರುದ್ಧ ಸೋಲು ಕಂಡಿದ್ದ ತಮ್ಮ ನಂಬಿಕಸ್ಥ ಹಾರತಾಳು ಹಾಲಪ್ಪಗೆ ಯಡಿಯೂರಪ್ಪ ಸಾಗರದ ಬಿಜೆಪಿ ಟಿಕೆಟ್ ಕೊಡಿಸಿದರು. ಕಾಗೋಡು ತಿಮ್ಮಪ್ಪ ಮತ್ತು ಹರತಾಳು ಹಾಲಪ್ಪ ಮುಖಾಮುಖಿಯಾದರು. 78,475 ಮತಗಳನ್ನು ಪಡೆದು ಹರತಾಳು ಹಾಲಪ್ಪ ಗೆದ್ದರು. 70,436 ಮತ ಪಡೆದಿದ್ದ ಕಾಗೋಡು ಸೋತರು. ಆಗ ಬೇಳೂರು ಗೋಪಾಲಕೃಷ್ಣ ಕಾಗೋಡು ತಿಮ್ಮಪ್ಪ ಜೊತೆ ಹೋದರು.
ಈ ಬಾರಿಯ ಚುನಾವಣೆಯೂ ಕುತೂಹಲಕ್ಕೆ ಕಾರಣವಾಗಿದೆ. ಹಾರತಾಳು ಹಾಲಪ್ಪ ವಿರುದ್ಧ ಬಿಜೆಪಿಯಲ್ಲಿಯೇ ಅಸಮಾಧಾನವಿದೆ. ಬೇಳೂರು ಗೋಪಾಲಕೃಷ್ಣ ಕಾಗೋಡು ತಿಮ್ಮಪ್ಪ ಒಂದಾಗಿರುವುದರಿಂದ ಕಾಂಗ್ರೆಸ್ ಮೇಲೆ ನಿರೀಕ್ಷೆ ಹೆಚ್ಚಿದೆ. ಜೆಡಿಎಸ್, ಆಮ್ ಆದ್ಮಿ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಚುನಾವಣಾ ಚಿತ್ರಣ ಬದಲಾಗಲ್ಲ ಎಂಬುದು ಕ್ಷೇತ್ರದ ಜನರಿಗೂ ಗೊತ್ತು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications