ಗಂಗು ಬೈಕು ಕಲಿಸಿಕೊಡು ನಂಗು...! ನಡು ರೋಡಲ್ಲೇ ಚಲಿಸುವ ಗಾಡಿ ಮೇಲೆ ರೊಮ್ಯಾನ್ಸ್- ವಿಡಿಯೋ ವೈರಲ್
ವೈರಲ್ ವೈರಲ್ ವೈರಲ್.... ಸಾಮಾಜಿಕ ಜಾಲತಾಣದಲ್ಲಿ ಎಲ್ಲವೂ ವೈರಲ್ ಆಗಿಬಿಡುತ್ತವೆ. ಹೀಗಾಗಿ ಎಷ್ಟು ಜಾಗ್ರತೆಯಿಂದಿದ್ದರೂ ಕಡಿಮೆನೇ. ಅದರಲ್ಲೂ ಮೈಮರೆತು ವರ್ತಿಸುವ ಕೆಲ ಯುವ ಜೋಡಿಗಳ ವೀಡಿಯೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿಬಿಡುತ್ತವೆ. ಹೀಗೊಂದು ವಿಡಿಯೋದಲ್ಲಿ ಯುವ ಜೋಡಿಯೊಂದು ನಡು ರೋಡಲ್ಲೇ ಚಲಿಸುವ ಗಾಡಿ ಮೇಲೆ ರೊಮ್ಯಾನ್ಸ್ ಮಾಡುವುದು ಕಂಡು ಬಂದಿದೆ.
ಹಿಂಬದಿ ಸವಾರರು ಈ ದೃಶ್ಯವನ್ನು ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯ ಮುಂಬೈನದ್ದು ಎಂದು ಹೇಳಲಾಗಿದೆ. ಇದು ನೋಡುಗರ ಕೋಪವನ್ನು ನೆತ್ತಿಗೇರಿಸಿದೆ. ಮುಂಬೈನ ನಡು ರಸ್ತೆಯಲ್ಲಿ ಯುವ ಜೋಡಿಯೊಂದು ತಮ್ಮ ಸ್ಕೂಟರ್‌ನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವೈರಲ್ ಆಗಿರುವ ವೀಡಿಯೊ ಬಾಂದ್ರಾ ರಿಕ್ಲಮೇಷನ್ ರಸ್ತೆಯಲ್ಲಿ ಸೆರೆಹಿಡಿದ ದೃಶ್ಯವಾಗಿದೆ. ಈ ವಿಡಿಯೋ ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಸ್ಕೂಟಿ ಮೇಲೆ ಕುಳಿತ ಹುಡುಗನ ಮೇಲೆ ಹುಡುಗಿ ಕುಳಿತಿದ್ದಾಳೆ. ಜೊತೆಗೆ ಅವರಿಬ್ಬರು ಶಾಲ್ ಅನ್ನು ಹೊದ್ದುಕೊಂಡಿದ್ದಾರೆ. ಹುಡುಗ ಸ್ಕೂಟಿ ಚಲಾಯಿಸುತ್ತಿದ್ದರೆ ಹುಡುಗಿ ಆತನನ್ನು ಗಟ್ಟಿಯಾಗಿ ಅಪ್ಪಿಕೊಂಡು ಕುಳಿತಿದ್ದಾಳೆ. ಇಬ್ಬರೂ ಶಾಲಿನ ಕೆಳಗೆ ಭಾಗಶಃ ಮರೆಯಾಗಿದ್ದಾರೆ. ಇವರಿಬ್ಬರೂ ಹೆಲ್ಮೆಟ್ ಕೂಡ ಧರಿಸಿಲ್ಲ. ಸಂಚಾರ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡವರು "ಈ ಧೈರ್ಯಶಾಲಿ ಜೋಡಿಯನ್ನು ಬಾಂದ್ರಾ ರಿಕ್ಲಮೇಷನ್‌ನಲ್ಲಿ ಗುರುತಿಸಲಾಯಿತು. ಅವರ ಅಸಾಂಪ್ರದಾಯಿಕ ಸ್ಕೂಟರ್ ರೈಡ್ ತಲೆ ತಿರುಗಿಸಿದೆ. @MumbaiPolice ರಸ್ತೆಗಳಲ್ಲಿ ಪ್ರತಿಯೊಬ್ಬರ ಸುರಕ್ಷತೆಯನ್ನು ಕಾಪಾಡಲು ನಿಮ್ಮ ಗಮನವನ್ನು ಇತ್ತ ಹರಿಸುವಂತೆ ವಿನಂತಿಸುತ್ತೇವೆ," ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
This daring duo was spotted at Bandra Reclamation, turning heads with their unconventional scooter ride. @MumbaiPolice we kindly request your attention to ensure everyone's safety on the roads. 🛵 pic.twitter.com/mKrqCILXog
— Bandra Buzz (@bandrabuzz) January 13, 2024
ಇನ್ನೂ ಸಹ ಪ್ರಯಾಣಿಕರಿಂದ ರೆಕಾರ್ಡ್ ಮಾಡಿದ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಇದಕ್ಕೆ ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಮತ್ತು ತಕ್ಷಣದ ಪೊಲೀಸ್ ಮಧ್ಯಸ್ಥಿಕೆಗೆ ಕರೆ ನೀಡಿದ್ದಾರೆ.
ನೆಟ್ಟಿಗರ ಕಾಮೆಂಟ್ ಹೀಗಿದೆ:-
'ಇವರು ಇತರ ಸವಾರರ ಪ್ರಾಣಕ್ಕೆ ಕುತ್ತು ತರುತ್ತಾರೆ. ಮುಂಬೈ ಪೊಲೀಸರು ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ನೆಟ್ಟಿಗರರೊಬ್ಬರು ಕಾಮೆಂಟ್ ಮಾಡಿದ್ದಾರೆ.
'ಮುಂಬೈನಲ್ಲಿ ತುಂಬಾ ಚಳಿಯಂತೆ, ಹೀಗಿರುವಾಗ ಮನೆ ಬಿಟ್ಟು ಹೊರಬರಲು ಆಗದವರು ಹೀಗೆ ಮಾಡೋದು ಅನಿಸುತ್ತೆ' ಮತ್ತೊಬ್ಬರು ಕುಟುಕಿದ್ದಾರೆ.
'ಮುಂಬೈನಲ್ಲಿ ಚಳಿ ನಡುವೆ ಹೀಗೂ ಹೊರಬರಬಹುದಾ? ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.
'ಚಳಿಗಾಲ ಮುಗಿದ ಬಳಿಕ ಈ ದೃಶ್ಯ ನೋಡಲು ಇನ್ನೂ ಕೆಟ್ಟದಾಗಿರುತ್ತದೆ' ಎಂದು ಮತ್ತೊಬ್ಬರು ಬರೆದಿದ್ದಾರೆ.
ಜನನಿಬಿಡ ರಸ್ತೆಯಲ್ಲಿ ಇಂತಹ ಘಟನೆ ದಾಖಲಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ದೆಹಲಿಯ ರಸ್ತೆಗಳಲ್ಲಿ ಸ್ಕೂಟರ್ ಸವಾರಿ ಮಾಡುವಾಗ ಜೋಡಿಯೊಂದು ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.












Click it and Unblock the Notifications