Get Updates
Get notified of breaking news, exclusive insights, and must-see stories!

ರವಿ ಚನ್ನಣ್ಣನವರ್ ವರ್ಗಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವೇನು?

ಪೂರ್ವಾಪರ ಯೋಚಿಸದೇ ವ್ಯಕ್ತಿಗಳನ್ನು ರಾತ್ರೋರಾತ್ರಿ ಅಟ್ಟಕ್ಕೇರಿಸುವ ನಮ್ಮ ಜನ ಅಷ್ಟೇ ವೇಗದಲ್ಲಿ ಕೆಳಗಿಳಿಸಬಲ್ಲರು ಎನ್ನುವುದಕ್ಕೆ ಹಲವು ನಿದರ್ಶನಗಳು ನಮ್ಮ ಮುಂದಿವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಇದರಲ್ಲಿ ಬಹಳ ದೊಡ್ಡದು.

ನ್ಯಾಯಾಲಯಗಳ ಮೂಲಕ ಮಾಧ್ಯಮಗಳಿಗೆ ಮೂಗುದಾರ ತೊಡಿಸಬಹುದೇ ವಿನಃ, ಸಾಮಾಜಿಕ ಜಾಲತಾಣಕ್ಕೆ ಇದು ಅಸಾಧ್ಯವೆಂದು ಎಷ್ಟೋ ಬಾರಿ ಇದು ಸಾಬೀತಾಗಿ ಹೋಗಿದೆ. ಪರಿಣಾಮಕಾರಿ ಮತ್ತು ದುಷ್ಪರಿಣಾಮ ಬೀರುವ ಸುದ್ದಿಗಳಿಗೆ ಸಾಮಾಜಿಕ ತಾಣದಲ್ಲಿ ಬರ ಇರುವುದಿಲ್ಲ.

ಕೆಲವು ದಿನಗಳ ಹಿಂದೆ ಹತ್ತೊಂಬತ್ತು ಐಎಎಸ್ ಶ್ರೇಣಿಯ ಅಧಿಕಾರಿಗಳನ್ನು ಸರಕಾರ ವಿವಿಧ ಇಲಾಖೆಗಳಿಗೆ ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೇ ಗುರುವಾರ (ಜ 27) ಮತ್ತೆ ಒಂಬತ್ತು ಐಪಿಎಸ್ ಅಧಿಕಾರಿಗಳನ್ನು ಸರಕಾರ ವರ್ಗಾವಣೆಯನ್ನು ಮಾಡಿ ಆಡಳಿತ ಯಂತ್ರ ಚುರುಕುಗೊಳಿಸುವ ಮುನ್ಸೂಚನೆಯನ್ನು ನೀಡಿದೆ.

ಒಂಬತ್ತು ಐಪಿಎಸ್ ವರ್ಗಾವಣೆಯಲ್ಲಿ ರವಿ.ಡಿ.ಚೆನ್ನಣ್ಣನವರ್ ಕೂಡಾ ಒಬ್ಬರು. ಸಿಐಡಿ ಎಸ್ಪಿಯಾಗಿದ್ದ ಚನ್ನಣ್ಣನವರ್ ಅವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಾಡಿ ಹೊಸ ಜಬಾಬ್ದಾರಿಯನ್ನು ನೀಡಿದೆ. ಈ ವರ್ಗಾವಣೆಯ ಹಿಂದೆ ಹಲವು ಅಂಶಗಳನ್ನು ವ್ಯಾಖ್ಯಾನಿಸಬಹುದಾಗಿದೆ.

 ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಕೆಯಾಗಿದ್ದ ದೂರು

ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಕೆಯಾಗಿದ್ದ ದೂರು

ಕ್ರಷರ್‌ ಉದ್ಯಮಿ ಸೇರಿ ಹಲವರಿಂದ ಕೋಟ್ಯಾಂತರ ರೂಪಾಯಿ ವಂಚನೆಯಾಗಿದೆ ಎಂದು ಮಂಜುನಾಥ್‌ ಎಂಬವರಿಂದ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಕೆಯಾಗಿದ್ದ ದೂರನ್ನು ಆಧರಿಸಿ, ದಿ ಫೈಲ್ ಎನ್ನುವ ಸ್ವತಂತ್ರ ಮಾಧ್ಯಮವೊಂದು ರವಿ ಚನ್ನಣ್ಣನವರ್ ವಿಚಾರದಲ್ಲಿ ಮೊದಲು ಸುದ್ದಿಯನ್ನು ಪ್ರಕಟಿಸುತ್ತದೆ. ಇದನ್ನು, ಆಧರಿಸಿ ಇತರ ಮಾಧ್ಯಮಗಳೂ ಇದಕ್ಕೆ ಸಂಬಂಧಿಸಿದ ಆರ್ಟಿಕಲ್ ಅನ್ನು ಪಬ್ಲಿಶ್ ಮಾಡುತ್ತವೆ. ಇದರ ಬೆನ್ನಲ್ಲೇ, ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗುತ್ತದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಇವರ ಪರವಿರೋಧ ಸುದ್ದಿಗಳಿಗೆ ಬ್ರೇಕ್ ಬೀಳುವುದಿಲ್ಲ.

 ದಿ ಫೈಲ್ ಪತ್ರಿಕೆ ಮೊದಲು ವರದಿಯನ್ನು ಮಾಡಿತ್ತು

ದಿ ಫೈಲ್ ಪತ್ರಿಕೆ ಮೊದಲು ವರದಿಯನ್ನು ಮಾಡಿತ್ತು

"ಚೀಫ್ ಸೆಕ್ರೆಟರಿಗೆ ಸಲ್ಲಿಕೆಯಾದ ದೂರಿನ ಆಧಾರದ ಮೇಲೆ ನಾವು ಸುದ್ದಿ ಮಾಡಿದ್ದೆವು. ಇದು ಸಾಮಾಜಿಕ ತಾಣದಲ್ಲಿ ವೈರಲ್ ಆದಾಗ, ವಕೀಲರೊಬ್ಬರು ಈ ವಿಚಾರದ ಬಗ್ಗೆ ಇನ್ನಷ್ಟು ದಾಖಲೆಗಳನ್ನು ಸಂಗ್ರಹಿಸಲು ಮುಂದಾದರು. ಆ ವೇಳೆ, ಮೈಸೂರಿನಲ್ಲಿ ರವಿ ಚನ್ನಣ್ಣನವರ್ ತಮ್ಮ ತಾಯಿಯ ಹೆಸರಿನಲ್ಲಿದ್ದ ಜಮೀನಿನ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಆಸ್ತಿದಾಯಿತ್ವ ಪಟ್ಟಿಯಲ್ಲಿ ಘೋಷಣೆಯನ್ನು ಮಾಡಿರುವುದಿಲ್ಲ. ಇದು ಕೂಡಾ ಸುದ್ದಿಯಾಯಿತು.

ಅವರು ಸಾವಿರಾರು ಕೋಟಿ ಆಸ್ತಿಯನ್ನು ಹೊಂದಿದ್ದಾರೆ ಎನ್ನುವ ಸುದ್ದಿಗಳು ವೈರಲ್ ಆಗುತ್ತಾ ಹೋದವು. ಆದರೆ, ಇದಕ್ಕೆ ಸಂಬಂಧಪಟ್ಟ ದಾಖಲೆಗಳು ಲಭ್ಯವಾಗಿದ್ದೇ ಆದಲ್ಲಿ ಇದೊಂದು ಆದಾಯಕ್ಕೆ ಮೀರಿದ ಆಸ್ತಿ ಎನ್ನುವುದು ಸಾಬೀತು ಆದಂಗಾಗುತ್ತದೆ"ಎಂದು ದಿ ಫೈಲ್ ಪತ್ರಿಕೆಯ ಜಿ. ಮಹಾಂತೇಶ್ ಹೇಳಿದ್ದಾರೆ.

 ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ

ಸಾಮಾಜಿಕ ಜಾಲತಾಣದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ರವಿ ಚನ್ನಣ್ಣನವರ್ ಅವರ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಸರಕಾರ ಅವರನ್ನು ವಾಲ್ಮೀಕಿ ಮಂಡಳಿಗೆ ವರ್ಗಾವಣೆಯನ್ನು ಮಾಡಿದೆ. ಚನ್ನಣ್ಣನವರ್ ಕೂಡಾ ಅದೇ ಸಮುದಾಯದವರು ಎನ್ನುವುದು ಗಮನಿಸಬೇಕಾದ ವಿಚಾರ. ಎಕ್ಸಿಕ್ಯೂಟೀವ್ ನಿಂದ ನಾನ್ ಎಕ್ಸಿಕ್ಯೂಟೀವ್ ಶ್ರೇಣಿಗೆ ಇವರು ವರ್ಗಾವಣೆಯಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅಂಶಗಳು.

 ರವಿ ಚನ್ನಣ್ಣನವರ್ ವರ್ಗಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವೇನು?

ರವಿ ಚನ್ನಣ್ಣನವರ್ ವರ್ಗಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವೇನು?

ಉತ್ತಮ ವಾಗ್ಮಿಯೂ ಆಗಿರುವ ರವಿ ಚನ್ನಣ್ಣನವರ್ ತಮ್ಮ ಭಾಷಣಗಳಲ್ಲಿ ದೇಶ, ರಾಷ್ಟ್ರೀಯತೆಯ ವಿಚಾರದ ಬಗ್ಗೆ ಪ್ರಸ್ತಾವಿಸುವುದು ಹೆಚ್ಚು. ಯುವಕರ ಪಾಲಿಗೆ ಐಕಾನ್ ನಂತಿದ್ದ ಇವರ ಇಮೇಜಿಗೆ ಸಾಮಾಜಿಕ ಜಾಲತಾಣದ ಮೂಲಕ ಬಹಳಷ್ಟು ಡ್ಯಾಮೇಜ್ ಆಗಿದೆ ಎನ್ನುವುದು ಸತ್ಯ. ಇವರನ್ನು ಸಮರ್ಥಿಸಿಕೊಳ್ಳುವ, ವಿರೋಧಿಸುವ ಪೋಸ್ಟುಗಳು ಎಗ್ಗಿಲ್ಲದಂತೇ ಈಗಲೂ ಹರಿದಾಡುತ್ತಿವೆ. ಹಾಗಾಗಿ, ಮಾಧ್ಯಮಗಳನ್ನು ಕೋರ್ಟ್ ಮೂಲಕ ನಿರ್ಬಂಧಿಸಿದರೂ, ಸಾಮಾಜಿಕ ಜಾಲತಾಣ ಎನ್ನುವುದು ಸರಕಾರ ಇವರ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರಭಾವಶಾಲಿಯೇ ಎನ್ನುವುದಿಲ್ಲಿ ಪ್ರಶ್ನೆ.

Recommended Video

      Russia Ukraine ಸಂಘರ್ಷದಿಂದ ಭಾರತಕ್ಕಿರುವ ಅಪಾಯವೇನು? | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+