Motorola vs Realme: ಬಜೆಟ್ ಫ್ರೆಂಡ್ಲಿ ಫೋನ್ಸ್‌ಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಭಾರತೀಯ ಮೊಬೈಲ್ ಮಾರುಕಟ್ಟೆಗೆ ದಿನವೂ ಒಂದಿಲ್ಲಾ ಒಂದು ಹೊಸ ಕಂಪನಿಯ ಮೊಬೈಲ್‌ಗಳು ಲಾಂಚ್ ಆಗುತ್ತವೆ. ದಿನವೂ ಹೊಸ ತಂತ್ರಜ್ಞನಾವನ್ನು ಮೈಗೂಡಿಸಿಕೊಂಡು ಕಂಪನಿಗಳು ಮೊಬೈಲ್ ಬಿಡುಗಡೆ ಮಾಡುತ್ತವೆ. ಈ ದೊಡ್ಡ ಮಾರುಟ್ಟೆಯಲ್ಲಿ ಈಗ ಎರಡು ಕಂಪನಿಯ ಫೋನ್‌ಗಳು ಬಿಡುಗಡೆ ಆಗಿದ್ದು ಭಾರೀ ಸದ್ದು ಮಾಡುತ್ತಿವೆ. ಹಾಗಿದ್ದರೆ ಈ ಎರಡೂ ಫೋನ್‌ಗಳಲ್ಲಿ ಯಾವುದು ಬೆಸ್ಟ್ ಎಂದು ತಿಳಿದುಕೊಳ್ಳುವ ಪ್ರಯತ್ನ ಇಲ್ಲಿದೆ.
ರಿಯಲ್‌ಮಿ ಕಂಪನಿಯ ಜಿಟಿ 6ಟಿ ಇತ್ತೀಚಿಗೆ ಲಾಂಚ್ ಆಗಿದ್ದು, ಮೊಟೊರಾಲಾ ಎಡ್ಜ್ 50 ಪ್ರೊ ಸಹ ಬಿಡುಗಡೆ ಆಗಿದೆ. ಎರಡೂ ಫೋನ್‌ಗಳು ತಮ್ಮ ಆಕರ್ಷಕ ಲುಕ್‌ನಿಂದ ಗ್ರಾಹಕರನ್ನು ಸೆಳೆಯುತ್ತಿವೆ. ಅಲ್ಲದೆ ಎರಡೂ ಫೋನ್‌ಗಳಲ್ಲಿ ಅಪ್‌ಡೇಟ್ ಇರುವ ತಂತ್ರಜ್ಞನಾ ವಿದೆ. ಹಾಗಿದ್ದರೆ ಈ ಎರಡೂ ಫೋನ್‌ಗಳ ಹೋಲಿಕೆ ಇಲ್ಲಿದೆ.

ರಿಯಲ್‌ಮಿ ಜಿಟಿ 6ಟಿ vs ಮೊಟೊರಾಲಾ ಎಡ್ಜ್ 50 ಪ್ರೊ: ಡಿಸ್‌ಪ್ಲೇ ಹೇಗಿದೆ?
- ರಿಯಲ್‌ಮಿ ಜಿಟಿ 6ಟಿ ಕಂಪನಿಯ ಫೋನ್ 6.78 ಇಂಚ್ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ದರವನ್ನು ಹೊಂದಿದೆ. ಅಲ್ಲದೆ ಈ ಫೋನಿನ ಗರಿಷ್ಠ ಹೊಳಪು 6000 ನಿಟ್ಸ್ ಆಗಿದೆ. ಇದರಲ್ಲಿ ಕ್ರೋನಿಂಗ್ ಗೋರಿಲ್ಲಾ ಗ್ಲಾಸ್ ಬಳಸಲಾಗಿದೆ.
- ಮೊಟೊರಾಲಾ ಫೋನಿನ ಡಿಸ್‌ಪ್ಲೇ ಆಲ್‌ಮೋಸ್ಟ್ ಸೇಮ್ ಇದೆ. ಈ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 144 Hz ರಿಫ್ರೆಶ್ ದರವನ್ನು ಹೊಂದಿದೆ. ಇದರಲ್ಲಿ ಪಿ ಓಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, ಇದರ ನಿಟ್ಸ್ ರೇಟ್ ಗರಿಷ್ಠ 2000 ಆಗಿದೆ.
- ಎರಡೂ ಫೋನಿನ ಡಿಸ್‌ಪ್ಲೇ ಉತ್ತಮವಾಗಿದ್ದು, ಉತ್ತಮ ರಿಫ್ರೆಶ್ ರೇಟ್ ಹೊಂದಿವೆ. ಅಲ್ಲದೆ ಉತ್ತಮ ಮಟ್ಟದ ಹೊಳಪನ್ನು ನೀಡುತ್ತವೆ.
ರಿಯಲ್‌ಮಿ ಜಿಟಿ 6ಟಿ vs ಮೊಟೊರಾಲಾ ಎಡ್ಜ್ 50 ಪ್ರೊ: ವಿಶೇಷತೆ
- ರಿಯಲ್‌ಮಿ ಜಿಟಿ 6ಟಿ ಸ್ನ್ಯಾಪ್ ಡ್ರಾಗನ್ ಎ ಜನರೇಷನ್ ಎಸ್‌ಒಸಿ ಬೆಂಬಲಿಸುತ್ತದೆ. ಅಲ್ಲದೆ 12 ಜಿಬಿ ರ್ಯಾಮ್ ಹಾಗೂ 512 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ.
- ಮೊಟೊರಾಲಾ ಎಡ್ಜ್ 50 ಪ್ರೊ ಸಹ ಸ್ನ್ಯಾಪ್ ಡ್ರಾಗನ್ ಎ ಜನರೇಷನ್ ಎಸ್‌ಒಸಿ. ಈ ಸ್ಮಾರ್ಟ್ ಫೋನ್ 12 ಜಿಬಿ ಹಾಗೂ 256 ಇಂಟರ್ನಲ್ ಸ್ಟೋರೇಜ್ ಹೊಂದಿದೆ.
- ಈ ಎರಡು ಮೊಬೈಲ್‌ಗಳನ್ನು ತುಲನೆ ಮಾಡಿದಾಗ ರಿಯಲ್‌ಮಿ ಕೊಂಚ ಸುಧಾರಿತ ಟೆಕ್ನಾಲಜಿ ಹೊಂದಿದ್ದಾಗಿ ತಿಳಿಯುತ್ತದೆ.
- ರಿಯಲ್‌ಮಿ ಆಂಡರ್ಯಾಡ್ 14 ಬೆಂಬಲಿಸಿದರೆ, ಮೊಟೊ ಇದನ್ನೇ ಹೋಲುವ ಸಾಫ್ಟ್‌ವೇರ್ ಹೊಂದಿದೆ. ಎರಡೂ ಕಂಪನಿಗಳು ಮೂರು ಬಾರಿ ಸಾಫ್ಟ್‌ವೇರ್ ಅಪ್‌ಡೇಟ್‌ಗೆ ಅವಕಾಶ ನೀಡುತ್ತದೆ.

ರಿಯಲ್‌ಮಿ ಜಿಟಿ 6ಟಿ vs ಮೊಟೊರಾಲಾ ಎಡ್ಜ್ 50 ಪ್ರೊ: ಕ್ಯಾಮೆರಾ
- ರಿಯಲ್‌ಮಿ ಜಿಟಿ 6ಟಿ ಹಿಂಬಾಗದಲ್ಲಿ ಎರಡು ಕ್ಯಾಮೆರಾ ಸೆಟಪ್ ಹೊಂದಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿದ್ದು, ಸೆಂಕಡ್ರಿ ಕ್ಯಾಮೆರಾ ಅಲ್ಟ್ರಾ ವೈಡ್‌ಗೆ ಫೋಟೋಗೆ ನೆರವಾಗುತ್ತದೆ. ಇನ್ನು ಮುಂಭಾಗಲ್ಲಿ 32 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಅಲ್ಲದೆ ಇದರಲ್ಲಿ ಸೋನಿ LYT 600 ಸೆನ್ಸಾರ್ ಇದೆ.
- ಮೊಟೊರಾಲಾ ಎಡ್ಜ್ 50 ಪ್ರೊ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್, ಅಲ್ಟ್ರಾವೈಡ್ ಕ್ಯಾಮೆರಾ 13 ಮೆಗಾ ಪಿಕ್ಸಲ್ ಹಾಗೂ 10 ಮೆಗಾ ಪಿಕ್ಸಲ್ ಮೂರನೇ ಕ್ಯಾಮೆರಾ ಹೊಂದಿದೆ. ಅಲ್ಲದೆ ವಿಡಿಯೋ ಕರೆಗಳು ಹಾಗೂ ಸೆಲ್ಫಿಗಾಗಿ 50 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ.
- ಎರಡೂ ಫೋನ್‌ಗಳ ಕ್ಯಾಮೆರಾಗಳು ಉತ್ತಮವಾಗಿವೆ. ಆದರೆ ಈ ವಿಭಾಗದಲ್ಲಿ ಮೊಟೊ ಕ್ಯಾಮೆರಾ ಕೊಂಚ ಉತ್ತಮವಾಗಿದೆ.
ರಿಯಲ್‌ಮಿ ಜಿಟಿ 6ಟಿ vs ಮೊಟೊರಾಲಾ ಎಡ್ಜ್ 50 ಪ್ರೊ: ಬ್ಯಾಟರಿ
- ರಿಯಲ್‌ಮಿ ಜಿಟಿ 6ಟಿ 5500 ಎಂಎಎಚ್ ಬ್ಯಾಟರಿ ಹೊಂದಿದ್ದು, 120 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲಿಸುತ್ತದೆ. ಈ ಮೊಬೈಲ್ ಜಸ್ಟ್ 10 ನಿಮಿಷದಲ್ಲಿ ಫುಲ್ ಚಾರ್ಜ್ ಆಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.
- ಮೊಟೊರಾಲಾ ಎಡ್ಜ್ 50 ಪ್ರೊ 4500 ಎಂಎಎಚ್ ಬ್ಯಾಟರಿ ಹಾಗೂ 125 ವ್ಯಾಟ್ ಟರ್ಬೋ ಚಾರ್ಜಿಂಗ್ ಮತ್ತು50 ವ್ಯಾಟ್ ವೈರಲೆಸ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.
- ರಿಯಲ್‌ಮಿ ಬ್ಯಾಟರಿ ಹೆಚ್ಚು ಕಾಲ ಬರುವ ಭರವಸೆ ನೀಡಿದರೆ, ಮೊಟೊ ವಿಭಿನ್ನ ಚಾರ್ಜಿಂಗ್ ಸೌಲಭ್ಯ ನೀಡುತ್ತವೆ.
ಯಾವುದು ಬೆಸ್ಟ್?
ರಿಯಲ್‌ಮಿ ಜಿಟಿ 6ಟಿ ಮತ್ತು ಮೊಟೊರಾಲಾ ಎಡ್ಜ್ 50 ಪ್ರೊ ಎರಡು ಮೊಬೈಲ್‌ಗಳು ಒಳ್ಳೆಯ ಸ್ಮಾರ್ಟ್‌ಫೋನ್‌ಗಳು. ಇನ್ನು ಬೆಲೆಯ ವಿಚಾರಕ್ಕೆ ಬಂದರೆ ರಿಯಲ್‌ಮಿ ಜಿಟಿ 6ಟಿ 30,999ರೂ.ಗೆ ಲಭ್ಯ. ಮೊಟೊರಾಲಾ ಎಡ್ಜ್ 50 ಪ್ರೊ 31,999 ರೂ.ಗೆ ಲಭ್ಯ. ರಿಯಲ್‌ಮಿ ದೊಡ್ಡ ಹಾಗೂ ಕ್ಲೀನ್ ಡಿಸ್‌ಪ್ಲೇ, ಬಹುಕಾಲ ಬಾಳಿಕೆ ಬರುವ ಚಾರ್ಜಿಂಗ್ ಸೌಲಭ್ಯ ಹೊಂದಿದರೆ, ಮೊಟೊ ಕ್ಯಾಮೆರಾ ಸೆಟಪ್ ಸೊಗಸಾಗಿದೆ. ಅಲ್ಲದೆ ವೈರಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ.












Click it and Unblock the Notifications