ಶಾಸಕರ ಮೌಲ್ಯ ಮಾಪನ; ಧಾರವಾಡ ಜಿಲ್ಲೆಯ ಶಾಸಕರಿಗೆ ಅಂಕ ಕೊಡಿ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕರ್ನಾಟಕ ಸಿದ್ಧವಾಗುತ್ತಿದೆ. ರಾಜಕೀಯ ಪಕ್ಷಗಳು ಚುನಾವಣೆಯ ತಯಾರಿ ಆರಂಭಿಸಿವೆ. 2023ರ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಕಳೆದ ಚುನಾವಣೆಯಲ್ಲಿ ಜನರು ಆಯ್ಕೆ ಮಾಡಿದ ಶಾಸಕರು ಮಾಡಿದ ಕೆಲಸಗಳಿಗೆ ಅಂಕ ನೀಡಲು ಈಗ ಅವಕಾಶ ನೀಡಲಾಗಿದೆ.
ಶಾಸಕರು ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿದ್ದು ಹೇಗೆ?, ಕೋವಿಡ್ ಸಮಯದಲ್ಲಿ ಶಾಸಕರ ಕಾರ್ಯ ವೈಖರಿ ಹೇಗಿತ್ತು?, ಎಂದು ಜನರು ಮೌಲ್ಯ ಮಾಪನ ಮಾಡಬಹುದು. ಒನ್ ಇಂಡಿಯಾ ಕನ್ನಡ ಶಾಸಕರ ಮೌಲ್ಯ ಮಾಪನ ಮಾಡಲು Rate your MLA ಎಂಬ ಅಭಿಯಾನ ನಡೆಸುತ್ತಿದೆ. ನಿಮ್ಮ ಕ್ಷೇತ್ರದ ಶಾಸಕರು ಮಾಡಿದ ಕೆಲಸಗಳಿಗೆ ನೀವು ಇಲ್ಲಿ ಸ್ಟಾರ್‌ಗಳನ್ನು ನೀಡುವ ಮೂಲಕ ಅಂಕ ಕೊಡಬಹುದು.
ಈ ಪುಟದಲ್ಲಿ ಜನರು ಧಾರವಾಡ ಜಿಲ್ಲೆಯ ಶಾಸಕರ ಕಾರ್ಯ ವೈಖರಿಗೆ ಅಂಕ ನೀಡಬಹುದು. ಮತದಾನ ಪೂರ್ಣಗೊಂಡ ಬಳಿಕ ಪುಟದ ಕೊನೆಯಲ್ಲಿ ಜನರು ನೀಡಿದ ಸರಾಸರಿ ಅಂಕ ನೋಡಬಹುದು. ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಪುಟವನ್ನು ಶೇರ್ ಮಾಡಬಹುದು.
ಒಟ್ಟು 9 ಅಂಶಗಳ ಆಧಾರದ ಮೇಲೆ ಜನರು ಶಾಸಕರ ಕಾರ್ಯ ವೈಖರಿ ಮೌಲ್ಯ ಮಾಪನ ಮಾಡಬಹುದು. ಸ್ಟಾರ್ ರೇಟಿಂಗ್ ಮೂಲಕ ಅಂಕ ನೀಡಬಹುದು. ಜನರು ವೋಟ್ ಮಾಡಿದ ಬಳಿಕ ಪುಟವನ್ನು ಹಂಚಿಕೆ ಮಾಡಬಹುದು. ಶಾಸಕರ ಲಭ್ಯತೆ, ಕ್ಷೇತ್ರದ ಅಭಿವೃದ್ಧಿ ಕಾರ್ಯ, ವಿಧಾನಸಭೆಯಲ್ಲಿ ಮಾತನಾಡಿದ್ದು, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ಮೂಲ ಸೌಕರ್ಯ ಮುಂತಾದ ಅಂಶಗಳ ಆಧಾರದ ಮೇಲೆ ಜನರು ವೋಟ್ ಮಾಡಲು ಅವಕಾಶ ಕೊಡಲಾಗಿದೆ.

ನವಲಗುಂದ ಕ್ಷೇತ್ರದ ಶಾಸಕರು
ಧಾರವಾಡ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳ ಪೈಕಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ಕ್ಷೇತ್ರದ ಶಾಸಕರು ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಕ್ಕರೆ ಕೈಮಗ್ಗ ಖಾತೆ ಸಚಿವರು. 2018ರ ಚುನಾವಣೆಯಲ್ಲಿ 65,718 ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ. ಶಾಸಕರಿಗೆ ವೋಟ್ ಮಾಡಲು ಲಿಂಕ್

ಕುಂದಗೋಳದ ಶಾಸಕರು
ಕುಂದಗೋಳ ಕ್ಷೇತ್ರದ ಶಾಸಕರು ಕಾಂಗ್ರೆಸ್‌ನ ಕುಸುಮಾವತಿ ಸಿ. ಶಿವಳ್ಳಿ. 2018ರಲ್ಲಿ ಸಿ. ಎಸ್. ಶಿವಳ್ಳಿ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಆದರೆ ಹೃದಯಾಘಾತದಿಂದ ಅವರು ಮೃತಪಟ್ಟ ಕಾರಣ 2019ರಲ್ಲಿ ಉಪ ಚುನಾವಣೆ ಎದುರಾಯಿತು. ಕಾಂಗ್ರೆಸ್-ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿ ಸಿ. ಎಸ್. ಶಿವಳ್ಳಿ ಪತ್ನಿ ಕುಸುಮಾವತಿ ಶಿವಳ್ಳಿ ಕಣಕ್ಕಿಳಿದರು. ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾದರು. ಶಾಸಕರಿಗೆ ಅಂಕ ನೀಡಲು ಲಿಂಕ್

ಧಾರವಾಡ ಕ್ಷೇತ್ರದ ಶಾಸಕರು
ಧಾರವಾಡ ಕ್ಷೇತ್ರದ ಶಾಸಕರು ಬಿಜೆಪಿಯ ಅಮೃತ ಅಯ್ಯಪ್ಪ ದೇಸಾಯಿ. 2018ರ ಚುನಾವಣೆಯಲ್ಲಿ ಅವರು 85,123 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಶಾಸಕರ ಕಾರ್ಯ ವೈಖರಿಗೆ ಅಂಕ ನೀಡಲು ಕ್ಲಿಕ್ ಮಾಡಿ.

ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ
ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕರು ಕಾಂಗ್ರೆಸ್‌ನ ಪ್ರಸಾದ್ ಅಬ್ಬಯ್ಯ. 2018ರ ಚುನಾವಣೆಯಲ್ಲಿ ಅವರು 77,080 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಶಾಸಕರ ಕಾರ್ಯ ವೈಖರಿಗೆ ಅಂಕ ನೀಡಲು ಕ್ಲಿಕ್ ಮಾಡಿ.

ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರ
ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಶಾಸಕರು ಬಿಜೆಪಿಯ ಜಗದೀಶ್ ಶೆಟ್ಟರ್. ಮಾಜಿ ಮುಖ್ಯಮಂತ್ರಿಗಳು ಆಗಿರುವ ಜಗದೀಶ್ ಶೆಟ್ಟರ್ 2018ರ ಚುನಾವಣೆಯಲ್ಲಿ 75,794 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಶಾಸಕರ ಕಾರ್ಯ ವೈಖರಿಗೆ ಮತ ನೀಡಲು ಕ್ಲಿಕ್ ಮಾಡಿ.

ಅರವಿಂದ್ ಬೆಲ್ಲದ್‌ಗೆ ಅಂಕ ನೀಡಿ
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರು ಬಿಜೆಪಿಯ ಅರವಿಂದ್ ಬೆಲ್ಲದ್. 2018ರ ಚುನಾವಣೆಯಲ್ಲಿ 96,462 ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ. ಶಾಸಕರಿಗೆ ಅಂಕ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಕಲಘಟಗಿ ಕ್ಷೇತ್ರದ ಶಾಸಕರು
ಕಲಘಟಗಿ ಕ್ಷೇತ್ರದ ಬಿಜೆಪಿ ಶಾಸಕರು ಸಿ. ಎಂ. ನಿಂಬಣ್ಣನವರ್. 2018ರ ಚುನಾವಣೆಯಲ್ಲಿ 83,267 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಶಾಸಕರ ಕಾರ್ಯ ವೈಖರಿಗೆ ಅಂಕ ನೀಡಲಿ ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications