
ಶಾಸಕರ ಮೌಲ್ಯ ಮಾಪನ; ಸಿದ್ದರಾಮಯ್ಯ ಕಾರ್ಯ ವೈಖರಿಗೆ ಅಂಕ ನೀಡಿ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇದೆ. ನಿಮ್ಮ ಅಮೂಲ್ಯ ಮತವನ್ನು ನೀಡಿ ಆಯ್ಕೆ ಮಾಡಿದ ಶಾಸಕರು ನಾಲ್ಕೂವರೆ ವರ್ಷ ಮಾಡಿದ್ದೇನು?.
ಒನ್ ಇಂಡಿಯಾ ಕನ್ನಡ ಶಾಸಕರ ಮೌಲ್ಯ ಮಾಪನ ಮಾಡಲು Rate your MLA ಎಂಬ ಅಭಿಯಾನ ಆರಂಭಿಸಿದೆ. ಇಲ್ಲಿ ನಿಮ್ಮ ಕ್ಷೇತ್ರದ ಶಾಸಕರು ಮಾಡಿದ ಕೆಲಸಗಳಿಗೆ ನೀವು ಅಂಕ ನೀಡಬಹುದು.
ಶಾಸಕರ ಮೌಲ್ಯ ಮಾಪನ; ಬಸವರಾಜ ಬೊಮ್ಮಾಯಿ ಕಾರ್ಯ ವೈಖರಿಗೆ ಅಂಕ ನೀಡಿ
ಒಟ್ಟು 9 ಅಂಶಗಳ ಆಧಾರದ ಮೇಲೆ ನೀವು ಶಾಸಕರ ಮೌಲ್ಯ ಮಾಪನ ಮಾಡಬಹುದು. ಇದರಲ್ಲಿ ನೀವು ಸ್ಟಾರ್ ರೇಟಿಂಗ್ ಮೂಲಕ ಅಂಕ ನೀಡಬಹುದು. ಈ ಪುಟವನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಇತರರು ಸಹ ಮತ ನೀಡುವಂತೆ ಮನವಿ ಮಾಡಬಹುದಾಗಿದೆ.
ಶಾಸಕರ ಲಭ್ಯತೆ, ಕ್ಷೇತ್ರದ ಅಭಿವೃದ್ಧಿ ಕಾರ್ಯ, ವಿಧಾನಸಭೆಯಲ್ಲಿ ಮಾತನಾಡಿದ್ದು, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ಮೂಲ ಸೌಕರ್ಯ ಮುಂತಾದ ಅಂಶಗಳ ಆಧಾರದ ಮೇಲೆ ನೀವು ವೋಟ್ ಮಾಡಬೇಕು.
ಈ ಪುಟದಲ್ಲಿ ನೀವು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದರಾಮಯ್ಯಗೆ ವೋಟ್ ಮಾಡಬಹುದಾಗಿದೆ. ಪುಟದ ಕೊನೆಯಲ್ಲಿ ನೀವು ಎಷ್ಟು ಅಂಕ ನೀಡಿದ್ದೀರಿ? ಎಂಬ ಸರಾಸರಿ ತೋರಿಸುತ್ತದೆ.
ಈ ಪುಟದಲ್ಲಿ ಬಾದಾಮಿ ಕ್ಷೇತ್ರದ ವಿವರ, 2018ರ ಚುನಾವಣೆಯಲ್ಲಿ ಅಭ್ಯರ್ಥಿಗಳ ವಿವರ, ಪಡೆದ ಮತಗಳು ಸೇರಿದಂತೆ ಇತರ ವಿವರಗಳಿವೆ. ಚುನಾವಣೆ ಹತ್ತಿರವಾಗುತ್ತಿರುವಾಗ ನೀವು ಶಾಸಕರ ಮೌಲ್ಯ ಮಾಪನ ಮಾಡಿ, ಶಾಸಕರಿಗೆ ಮತ ನೀಡಿ.
2013ರ ಚುನಾವಣೆಯಲ್ಲಿ ಗೆದ್ದ ಬಳಿಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 2018ರ ಚುನಾವಣೆಗೆ ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು. ಚಾಮುಂಡೇಶ್ವರಿಯಲ್ಲಿ ಸೋತರು ಮತ್ತು ಬಾದಾಮಿಯಲ್ಲಿ 67,599 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ವಿರುದ್ಧ ಗೆಲುವು ಸಾಧಿಸಿದರು.