ಶಾಸಕರ ಮೌಲ್ಯ ಮಾಪನ; ಹೆಚ್. ಡಿ. ರೇವಣ್ಣ ಕಾರ್ಯ ವೈಖರಿಗೆ ಅಂಕ ನೀಡಿ
ಹಾಸನ, ಸೆಪ್ಟೆಂಬರ್ 01; ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2018ರ ಚುನಾವಣೆಯಲ್ಲಿ ಜನರು ಮತದಾನ ಮಾಡಿ ಆಯ್ಕೆ ಮಾಡಿದ ಶಾಸಕರು ಮಾಡಿದ ಕೆಲಸಗಳೇನು?, ಕ್ಷೇತ್ರದ ಸಮಸ್ಯೆಗೆ ಅವರು ಸ್ಪಂದಿಸಿದ್ದು ಹೇಗೆ?, ಕೋವಿಡ್ ಸಮಯದಲ್ಲಿ ಅವರ ಕಾರ್ಯ ವೈಖರಿ ಹೇಗಿತ್ತು? ಎಂದು ಜನರು ಮೌಲ್ಯ ಮಾಪನ ಮಾಡುವ ಸಮಯ ಬಂದಿದೆ.
ಒನ್ ಇಂಡಿಯಾ ಕನ್ನಡ ಶಾಸಕರ ಮೌಲ್ಯ ಮಾಪನ ಮಾಡಲು Rate your MLA ಎಂಬ ಅಭಿಯಾನ ನಡೆಸುತ್ತಿದೆ. ನಿಮ್ಮ ಕ್ಷೇತ್ರದ ಶಾಸಕರು ಮಾಡಿದ ಕೆಲಸಗಳಿಗೆ ನೀವು ಸ್ಟಾರ್‌ಗಳನ್ನು ನೀಡುವ ಮೂಲಕ ಅಂಕ ಕೊಡಬಹುದು. ಜನರು ತಮ್ಮ ಶಾಸಕರಿಗೆ ಆನ್‌ಲೈನ್ ಮೂಲಕ ಮತದಾನ ಮಾಡಲು ಒನ್ ಇಂಡಿಯಾ ಕನ್ನಡ ವೇದಿಕೆ ಒದಗಿಸಿದೆ.
ಈ ಪುಟದಲ್ಲಿ ಜನರು ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಹೆಚ್. ಡಿ. ರೇವಣ್ಣ ಕಾರ್ಯ ವೈಖರಿಗೆ ಅಂಕ ನೀಡಬಹುದು. ವೋಟ್ ಪೂರ್ಣಗೊಂಡ ಬಳಿಕ ಪುಟದ ಕೊನೆಯಲ್ಲಿ ನೀವು ನೀಡಿದ ಸರಾಸರಿ ಅಂಕ ತೋರಿಸುತ್ತದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ಪುಟವನ್ನು ಶೇರ್ ಮಾಡಲು ಲಿಂಕ್ ಸಿಗುತ್ತದೆ.

ಹೆಚ್. ಡಿ. ರೇವಣ್ಣ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರು. ಅಲ್ಲದೇ ಎಲ್ಲಾ ಪಕ್ಷದ ನಾಯಕರ ಜೊತೆ ಉತ್ತಮಮ ಬಾಂಧವ್ಯ ಹೊಂದಿದ್ದಾರೆ. ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಹೆಚ್. ಡಿ. ರೇವಣ್ಣ ತಮ್ಮ ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳುವಷ್ಟು ಚಾಕಚಕ್ಯತೆ ಹೊಂದಿದ್ದಾರೆ.
2018ರ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಹೆಚ್. ಡಿ. ರೇವಣ್ಣ 108541 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಹೆಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆಗ ಹೆಚ್. ಡಿ. ರೇವಣ್ಣ ಲೋಕೋಪಯೋಗಿ ಖಾತೆ ಸಚಿವರಾದರು.
ಒಟ್ಟು 9 ಅಂಶಗಳ ಆಧಾರದ ಮೇಲೆ ಜನರು ಶಾಸಕ ಹೆಚ್. ಡಿ. ರೇವಣ್ಣ ಕಾರ್ಯ ವೈಖರಿ ಮೌಲ್ಯ ಮಾಪನ ಮಾಡಬಹುದು. ಸ್ಟಾರ್ ರೇಟಿಂಗ್ ಮೂಲಕ ಅಂಕ ನೀಡಬಹುದು. ಜನರು ವೋಟ್ ಮಾಡಿದ ಬಳಿಕ ಈ ಪುಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಇತರರು ಸಹ ಮತ ನೀಡುವಂತೆ ಮನವಿ ಮಾಡಬಹುದು.
ಶಾಸಕರ ಲಭ್ಯತೆ, ಕ್ಷೇತ್ರದ ಅಭಿವೃದ್ಧಿ ಕಾರ್ಯ, ವಿಧಾನಸಭೆಯಲ್ಲಿ ಮಾತನಾಡಿದ್ದು, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ಮೂಲ ಸೌಕರ್ಯ ಮುಂತಾದ ಅಂಶಗಳ ಆಧಾರದ ಮೇಲೆ ಜನರು ವೋಟ್ ಮಾಡಲು ಅವಕಾಶ ನೀಡಲಾಗಿದೆ. ಈಗಲೇ ನಿಮ್ಮ ಶಾಸಕರಿಗೆ ರೇಟಿಂಗ್ ಕೊಡಿ.
ಇನ್ನು ಇದು ಚುನಾವಣಾ ಪುಟವಾಗಿದೆ. ಹೊಳೆನರಸೀಪುರ ಕ್ಷೇತ್ರದ ವಿವರ, 2018ರ ಚುನಾವಣೆಯಲ್ಲಿನ ಅಭ್ಯರ್ಥಿಗಳ ವಿವರ, ಪಡೆದ ಮತಗಳು ಸೇರಿದಂತೆ ಇತರ ವಿವರಗಳಿವೆ. ಹಿಂದಿನ ಹಲವು ಚುನಾವಣೆಯಲ್ಲಿ ಕಣದಲ್ಲಿದ್ದ ಅಭ್ಯರ್ಥಿಗಳು, ಪಡೆದ ಮತಗಳು ಸೇರಿದಂತೆ ಇತರ ವಿವರಗಳಿವೆ. ಚುನಾವಣೆ ಹತ್ತಿರವಾಗುತ್ತಿರುವಾಗ ನೀವು ಶಾಸಕರ ಮೌಲ್ಯ ಮಾಪನ ಮಾಡಿ.
ಕಾಂಗ್ರೆಸ್-ಜೆಡಿಎಸ್ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗುವ ಹೊಳೆನರಸೀಪುರ ಕ್ಷೇತ್ರ ದೇಶಕ್ಕೆ ಒಬ್ಬರು ಪ್ರಧಾನಿ, ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದೆ. ಮಾಜಿ ಸಂಸದ ಜಿ. ಪುಟ್ಟಸ್ವಾಮಿ ಗೌಡ ನಿಧನದ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ಪ್ರಾಬಲ್ಯ ಎದುರಿಸುವಮಟ್ಟಿಗೆ ಬೆಳೆದಿಲ್ಲ.
ಎಚ್. ಡಿ. ದೇವೇಗೌಡರು 6 ಬಾರಿ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಹೆಚ್. ಡಿ. ರೇವಣ್ಣ 1999ರ ಸೋಲು ಹೊರತುಪಡಿಸಿದರೆ 5 ಬಾರಿ ಗೆಲುವು ಕಂಡಿದ್ದಾರೆ. ಜಿ. ಪುಟ್ಟಸ್ವಾಮಿ ಗೌಡರು 1 ಬಾರಿ, ದೊಡ್ಡೇಗೌಡರು 1 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.












Click it and Unblock the Notifications