ಶಾಸಕರ ಮೌಲ್ಯ ಮಾಪನ; ವಿ. ಸೋಮಣ್ಣ ಕಾರ್ಯ ವೈಖರಿಗೆ ಅಂಕ ನೀಡಿ
ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಚುನಾವಣೆಯ ತಯಾರಿಯೂ ಜೋರಾಗಿದೆ. ಕಳೆದ ಚುನಾವಣೆಯಲ್ಲಿ ಜನರು ಮತದಾನ ಮಾಡಿ ಆಯ್ಕೆ ಮಾಡಿದ ಶಾಸಕರು ಮಾಡಿದ ಕೆಲಸಗಳಿಗೆ ಅಂಕ ನೀಡಲು ಇದು ಸಮಯವಾಗಿದೆ.
ನಿಮ್ಮ ಶಾಸಕರು ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿದ್ದು ಹೇಗೆ?, ಕೋವಿಡ್ ಸಮಯದಲ್ಲಿ ನಿಮ್ಮ ಶಾಸಕರ ಕಾರ್ಯ ವೈಖರಿ ಹೇಗಿತ್ತು?, ಎಂದು ಜನರು ಮೌಲ್ಯ ಮಾಪನ ಮಾಡುವ ಸಮಯ ಈಗ ಬಂದಿದೆ. ಒನ್ ಇಂಡಿಯಾ ಕನ್ನಡದ ಮೂಲಕ ಶಾಸಕರಿಗೆ ನೀವು ಅಂಕ ನೀಡಬಹುದಾಗಿದೆ.
ಒನ್ ಇಂಡಿಯಾ ಕನ್ನಡ ಶಾಸಕರ ಮೌಲ್ಯ ಮಾಪನ ಮಾಡಲು Rate your MLA ಎಂಬ ಅಭಿಯಾನ ನಡೆಸುತ್ತಿದೆ. ನಿಮ್ಮ ಕ್ಷೇತ್ರದ ಶಾಸಕರು ಮಾಡಿದ ಕೆಲಸಗಳಿಗೆ ನೀವು ಇಲ್ಲಿ ಸ್ಟಾರ್‌ಗಳನ್ನು ನೀಡುವ ಮೂಲಕ ಅಂಕ ನೀಡಬಹುದಾಗಿದೆ.
ಈ ಪುಟದಲ್ಲಿ ಜನರು ಬೆಂಗಳೂರು ನಗರದ ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಶಾಸಕ ರಾಮಲಿಂಗಾ ರೆಡ್ಡಿ ಕಾರ್ಯ ವೈಖರಿಗೆ ಅಂಕ ನೀಡಬಹುದು. ಮತದಾನ ಪೂರ್ಣಗೊಂಡ ಬಳಿಕ ಪುಟದ ಕೊನೆಯಲ್ಲಿ ಜನರು ನೀಡಿದ ಸರಾಸರಿ ಅಂಕ ನೋಡಬಹುದು. ಸಾಮಾಜಿಕ ಜಾಲತಾಣದಲ್ಲಿ ಪುಟ ಶೇರ್ ಮಾಡಬಹುದು.
ವಿ. ಸೋಮಣ್ಣ ಬಿಜೆಪಿ ಹಿರಿಯ ನಾಯಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ವಸತಿ ಸಚಿವರು. 2018ರ ಚುನಾವಣೆಯಲ್ಲಿ ಸೋಮಣ್ಣ 79,135 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವಿ. ಸೋಮಣ್ಣ ಬೆಂಗಳೂರು ನಗರದ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಮೂಲತಃ ಜನತಾ ಪರಿವಾರದ ವಿ. ಸೋಮಣ್ಣ ಬಳಿಕ ಕಾಂಗ್ರೆಸ್ ಸೇರಿದರು. 2009ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.
ಒಟ್ಟು 9 ಅಂಶಗಳ ಆಧಾರದ ಮೇಲೆ ಜನರು ಶಾಸಕ ವಿ. ಸೋಮಣ್ಣ ಕಾರ್ಯ ವೈಖರಿ ಮೌಲ್ಯ ಮಾಪನ ಮಾಡಬಹುದು. ಸ್ಟಾರ್ ರೇಟಿಂಗ್ ಮೂಲಕ ಅಂಕ ನೀಡಬಹುದು. ಜನರು ವೋಟ್ ಮಾಡಿದ ಬಳಿಕ ಈ ಪುಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಬಹುದು.
ಶಾಸಕರ ಲಭ್ಯತೆ, ಕ್ಷೇತ್ರದ ಅಭಿವೃದ್ಧಿ ಕಾರ್ಯ, ವಿಧಾನಸಭೆಯಲ್ಲಿ ಮಾತನಾಡಿದ್ದು, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ಮೂಲ ಸೌಕರ್ಯ ಮುಂತಾದ ಅಂಶಗಳ ಆಧಾರದ ಮೇಲೆ ಜನರು ವೋಟ್ ಮಾಡಲು ಅವಕಾಶ ಕೊಡಲಾಗಿದೆ.
ಇದು ಚುನಾವಣಾ ಪುಟವಾಗಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿವರ, 2018ರ ಚುನಾವಣೆಯಲ್ಲಿ ಕಣದಲ್ಲಿದ್ದ ಅಭ್ಯರ್ಥಿಗಳ ವಿವರ, ಪಡೆದ ಮತಗಳು ಇತರ ಮಾಹಿತಿ ಇಲ್ಲಿದೆ.













Click it and Unblock the Notifications