Petrol Bank Scam: ಮೊಬೈಲ್‌ನಲ್ಲಿ ಸಂಗಾತಿ ಜೊತೆ ಮಾತನಾಡಿಕೊಂಡು ಪೆಟ್ರೋಲ್ ಹಾಕಿಸಿಕೊಳ್ಳುವ ಪುರುಷರು ಓದಲೇಬೇಕಾದ ಸ್ಟೋರಿ....
ಪೆಟ್ರೋಲ್ ಬಂಕ್‌ನಲ್ಲಿ ಮೀಟರ್ ರೀಡಿಂಗ್ ಸೆಟ್ ಮಾಡುವ ಮೂಲಕ ಗ್ರಾಹಕರಿಗೆ ಮೋಸ ಮಾಡಲಾಗುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಪೆಟ್ರೋಲ್ ಬಂಕ್‌ನಲ್ಲಿ ಆಗುವ ಸ್ಕ್ಯಾಮ್‌ನಿಂದಾಗಿ ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಅಲ್ಲದೆ ವಂಚನೆಯಿಂದಾಗಿ ವಾಹನಗಳು ಬಹುಬೇಗ ಹಾಳಾಗುತ್ತಿವೆ. ಹಾಗಾದರೆ ಇದನ್ನು ತಪ್ಪಿಸಿಕೊಳ್ಳುವುದು ಹೇಗೆ?
ಸಾಮಾನ್ಯವಾಗಿ ವಾಹನಕ್ಕೆ ಪೆಟ್ರೋಲ್ ಡಿಸೇಲ್ ಹಾಕಿಸುವಾಗ ಗ್ರಾಹಕರು 100, 200, 500 ಹೀಗೆ ರೌಂಡ್ ಫಿಗರ್ ಹಣಕ್ಕೆ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುತ್ತಾರೆ. ಆದರೆ ಇದನ್ನ ಮೊದಲು ನಿಲ್ಲಿಸಬೇಕು.

ಯಾಕೆಂದರೆ ಕೆಲವು ಪೆಟ್ರೋಲ್ ಬಂಕ್ ಮಾಲೀಕರು ರೌಂಡ್ ಫಿಗರ್‌ಗೆ ಮೀಟರ್ ಅನ್ನು ಮಾನ್ಯುಪುಲೇಟ್(Manipulate) ಮಾಡುತ್ತಾರೆ. ಇದರಿಂದ ಗ್ರಾಹಕರು ಮೋಸಮಾಡಲಾಗುತ್ತದೆ. ಹೀಗಾಗಿ ಪೆಟ್ರೋಲ್ ಹಾಕಿಸುವಾಗ 176, 243, 585 ರೂ. ಹೀಗೆ ರಾಂಡಮ್ ಆಗಿ ಪೆಟ್ರೋಲ್ ಅನ್ನು ಹಾಕಿಸಿಕೊಳ್ಳಿ.
ಜೊತೆಗೆ ವಾಹನ ಸವಾರರು ಬಂಕ್ ವಂಚನೆಯಿಂದ ತಪ್ಪಿಸಿಕೊಳ್ಳಲು ವಾಹನಗಳಿಗೆ ಇಂಧನ ತುಂಬಿಸುವ ಮೊದಲು ಪೆಟ್ರೋಲ್ ಡೆನ್ಸಿಟಿ Petrol: 720KG To 775KG/CUBIC METER ಹಾಗೂ ಡಿಸೇಲ್ ಡೆನ್ಸಿಟಿ DIESEL: 820KG To 860KG/CUBIC METER ಇದಿಯಾ ಅಂತ ಚೆಕ್ ಮಾಡಿ. ನಂತರವಷ್ಟೇ ನಿಮ್ಮ ವಾಹನಕ್ಕೆ ಪೆಟ್ರೋಲ್ ಡಿಸೇಲ್ ಹಾಕಿಸಿ.
ಬಂಕ್‌ಗಳಲ್ಲಿನ ಮೀಟರ್ ಸೊನ್ನೆಯಿಂದ ಮೂರರವರೆಗೆ ಜಂಪ್ ಆಗ್ತಾಯಿದ್ದರೆ ಅದು ನಾರ್ಮಲ್ ಇದೆ ಎಂದು ಅರ್ಥ. ಬದಲಾಗಿ ಮೀಟರ್ 5, 10, 15ಗೆ ಜಂಪ್ ಆಗ್ತಾಯಿದ್ದರೆ ಮೀಟರ್ ಅಲ್ಲಿ ಏನೋ ಮಾನ್ಯುಪುಲೇಟ್ ಮಾಡಿದ್ದಾರೆ ಎಂದು ನೀವು ಅರ್ಥೈಸಿಕೊಳ್ಳಬೇಕು.

ಇನ್ನೂ ಕಲಬೆರಿಕೆ ಇರುವ ಇಂಧನವನ್ನು ವಾಹನಕ್ಕೆ ಹಾಕಿಸುತ್ತಾ ಹೋದರೆ ನಿಮ್ಮ ವಾಹನದ ಮೈಲೇಜ್ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಾ ಹೋಗುತ್ತದೆ. ಅದಕ್ಕಾಗಿ ಗ್ರಾಹಕರು ಅನುಮಾನ ಬಂದರೆ ಇಂಧನವನ್ನು ಹಾಕಿಸಿಕೊಳ್ಳುವಾಗ ಪರಿಶೀಲಿಸುವುದು ತುಂಬಾ ಮುಖ್ಯ. ಪೆಟ್ರೋಲ್ ಬಂಕ್‌ನಲ್ಲಿ ಅನುಮಾನ ಬಂದರೆ ಅಲ್ಲಿ 'ಫಿಲ್ಟರ್ ಪೇಪರ್' ಅನ್ನು ಕೇಳಿ ಪಡೆದುಕೊಳ್ಳಿ.
ಆ ಪೇಪರ್ ಮೇಲೆ ಒಂದು ಡ್ರಾಪ್ ಪೆಟ್ರೋಲ್ ಅನ್ನು ಹಾಕಿ. ನಂತರ ಪೇಪರ್ ಮೇಲೆ ಪೆಟ್ರೋಲ್ ಒಣಗಿದರೆ ಅದು ನಿಜವಾದ ಪೆಟ್ರೋಲ್ ಎಂದು ಅರ್ಥ. ಒಂದು ವೇಳೆ ಪೇಪರ್ ಮೇಲೆ ಕಲೆ ಕಾಣಿಸಿಕೊಂಡರೆ ಅದು ಕಲಬೆರಿಕೆ ಎಂದು ಗುರುತಿಸಬಹುದು.
ಅಲ್ಲದೆ ಹೀಗೆ ಪೆಟ್ರೋಲ್ ಬಂಕ್‌ನಲ್ಲಿ ನಿಮಗೆ ಯಾವುದೋ ರೀತಿಯ ಸ್ಕ್ಯಾಮ್ ಇದೆ ಎನ್ನುವುದು ಗೊತ್ತಾರೆ ಈ ನಂಬರ್‌ಗೆ ಕರೆ ಮಾಡಿ- 1800 2333 555, 1800 22 3023, 1800 1200 330 ನಿಮ್ಮ ದೂರುಗಳನ್ನು ದಾಖಲಿಸಬಹುದು. ಒಂದು ವೇಳೆ ಸ್ಕ್ಯಾಮ್ ಸಾಬೀತಾದರೆ ಅವರ ಲೈಸನ್ಸ್ ಕೂಡ ರದ್ದಾಗುತ್ತದೆ.
ಪೆಟ್ರೋಲ್ ಡೀಸೆಲ್ ವಂಚನೆ ಪ್ರಕರಣ
ಮೀಟರ್‌ನಲ್ಲಿ ನಕಲಿ ಮೀಟರ್ ಅಳವಡಿಕೆ ಮೂಲಕ ವಂಚನೆ ಮಾಡುವ ಪ್ರಕರಣಗಳು ಕರ್ನಾಟಕದ ಹುಬ್ಬಳ್ಳಿ, ಮಹಾರಾಷ್ಟ್ರ, ಪುಣೆ, ಥಾಣೆ, ನಾಸಿಕ್, ರಾಯಘಡ, ನಾಗಪುರ, ಕೊಲ್ಲಾಪುರ ಹಾಗೂ ಧುಳೆಯಲ್ಲಿ ಯವತವಾಳ, ಚಂದ್ರಪುರ, ಡಳಘಾಂವ, ಸಾಂಗ್ಲಿ ಹಾಗೂ ಸಾತಾರಾನ ಪೆಟ್ರೋಲ್ ಬಂಕ್ ಗಳಿಗೆ ಕಂಡು ಬಂದಿವೆ. ಇಲ್ಲಿ ನಕಲಿ ಚಿಪ್ ಅಳವಡಿಸಿರುವುದು ಈ ಹಿಂದೆ ಪತ್ತೆಯಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಿಂದ ವಂಚನೆಯಲ್ಲಿ ಭಾಗಿಯಾದ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ.
ಹೀಗಾಗಿ ಬಂಕ್‌ಗಳಲ್ಲಿ ಪೆಟ್ರೋಲ್-ಡಿಸೇಲ್ ಹಾಕಿಸಿಕೊಳ್ಳುವಾಗ ಮೊಬೈಲ್‌ನಲ್ಲಿ ಮಾತನಾಡುವುದು, ಗಮನ ಹರಿಸದೇ ಇರುವ ತಪ್ಪು ಮಾಡಬೇಡಿ. ಇದರಿಂದ ನೀವು ಮೋಸ ಹೋಗುವುದು ಮಾತ್ರವಲ್ಲದೆ ನಿಮ್ಮ ವಾಹನ ಬಹುಬೇಗ ಹಾಳಾಗುತ್ತದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications