Oppo: ಭರ್ಜರಿ ಫೀಚರ್ಸ್ ಹೊಂದಿರುವ ಮಿಡ್ ರೆಂಜ್ ಮೊಬೈಲ್ ಭಾರತದಲ್ಲಿ ಬಿಡುಗಡೆ
ಭಾರತೀಯ ಮಾರುಕಟ್ಟೆಗೆ ಚೀನಾ ಮೂಲದ ಒಪ್ಪೋ ಮತ್ತೊಂದು ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮತ್ತೊಂದು ಫೋನ್ ಲಾಂಚ್ ಮಾಡಿದೆ. ಗ್ರಾಹಕರ ಬಹು ದಿನಗಳ ಕಾಯುವಿಕೆಗೆ ಬ್ರೇಕ್ ಬಿದ್ದಿದೆ. ಕಂಪನಿ OPPO A3 Pro 5G ಅನ್ನು ಪರಿಚಯಿಸಿದೆ. ಈ ಫೋನ್ ಕೈ ಜಾರಿ ಕೆಳಗೆ ಬಿದ್ದರೂ ಏನು ಆಗದು ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿಯು ಭಾರತದಲ್ಲಿ ಬಿಡುಗಡೆಯಾದ ರೂಪಾಂತರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಕೆಲವು ಸಮಯದ ಹಿಂದೆ, Oppo ಈ ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿತ್ತು. ಆದರೆ ಈ ಫೋನ್ ವಿಭಿನ್ನ ವಿನ್ಯಾಸದೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಲಿದೆ. ವಿಶೇಷವೆಂದರೆ ಇದರ ಕ್ಯಾಮೆರಾ ಮಾಡ್ಯೂಲ್ ಸಾಕಷ್ಟು ವಿಭಿನ್ನವಾಗಿದೆ. ಚೀನಾದಲ್ಲಿ ಬಿಡುಗಡೆಯಾದ ಫೋನ್ ವೃತ್ತಾಕಾರದ ಮಾಡ್ಯೂಲ್ ಅನ್ನು ಹೊಂದಿತ್ತು.

ಒಪ್ಪೋ ಎ3 ಪ್ರೋ 5ಜಿ ಡಿಸ್ಪ್ಲೇ ಮತ್ತು ಪ್ರೊಸೆಸರ್
ಹೊದ ಸ್ಮಾರ್ಟ್‌ಫೋನ್ 6.67 ಇಂಚಿನ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ 120Hz ನ ರಿಫ್ರೆಶ್ ದರವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮಿಡ್ ರೇಂಜ್ ಸೆಗ್‌ಮೆಂಟ್‌ನಲ್ಲಿ ಗ್ರಾಹಕರನ್ನು ಸೆಳೆಯಲು ಇದು ಬೆಸ್ಟ್ ಚಾಯ್ಸ್ ಆಗಿರಲಿದೆ. ಈ ಮೊಬೈಲ್‌ನಲ್ಲಿ ನೀವು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಅನ್ನು ಪಡೆಯುತ್ತೀರಿ.
ಒಪ್ಪೋ ಎ3 ಪ್ರೋ 5ಜಿ ಕ್ಯಾಮೆರಾ ಮತ್ತು ಬ್ಯಾಟರಿ
ಒಪ್ಪೋ ಎ3 ಪ್ರೋ 5ಜಿ ನಲ್ಲಿ Oppo ಉತ್ತಮವಾದ ಕ್ಯಾಮೆರಾ ಸೆಟಪ್ ಅನ್ನು ಒದಗಿಸಿದೆ. Oppo A3 ಹಿಂಭಾಗದ ಪ್ಯಾನೆಲ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒದಗಿಸಲಾಗಿದೆ. ಪ್ರೈಮರಿ ಕ್ಯಾಮೆರಾ 50MP ಹೊಂದಿದ್ದು, 2 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

Oppo A3 ನಲ್ಲಿ, ಕಂಪನಿಯು 5100mAh ನ ದೊಡ್ಡ ಬ್ಯಾಟರಿಯನ್ನು ನೀಡಿದೆ. ಅಲ್ಲದೆ ಇದರಲ್ಲಿ ನೀವು 45W ಸೂಪರ್ ವಾಕ್ ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆಯುತ್ತೀರಿ.
OPPO A3 Pro 5G ರೂಪಾಂತರಗಳು ಮತ್ತು ಬೆಲೆ
ಕಂಪನಿಯು ಒಪ್ಪೋ ಎ3 ಪ್ರೋ 5ಜಿ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಮತ್ತು ಎರಡನೆಯ ರೂಪಾಂತರವು 8GB RAM ಮತ್ತು 256GB ಸಂಗ್ರಹಣೆಯೊಂದಿಗೆ ಬರುತ್ತದೆ.
128GB ಸ್ಟೋರೇಜ್ ಹೊಂದಿರುವ ರೂಪಾಂತರವನ್ನು ಖರೀದಿಸಲು, ಗ್ರಾಹಕ 17,999 ರೂಪಾಯಿಗಳಲ್ಲಿ ಪಡೆಯಬಹುದು. 256GB ಇಂಟರ್ನಲ್ ಸ್ಟೋರೇಜ್ ಇರುವು ಫೋನ್‌ನ್ನು ಖರೀದಿಸಲು ನೀವು 19,999 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.
ಬಾಕ್ಸ್‌ನಲ್ಲಿ ಏನಿದೆ?
OPPO A3 Pro 5G ಮೊಬೈಲ್
ಬ್ಯಾಕ್ ಕವರ್
ಡಾಕ್ಯುಮೆಂಟ್
ಸಿಮ್ ಇಜೆಕ್ಟ್ ಟೂಲ್
45 ವ್ಯಾಟ್ ಚಾರ್ಜರ್
ಸಿ ಟೈಪ್ ವೈರ್ ಚಾರ್ಜರ್
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications