OMG: ಎರಡು ಉಡಾಗಳ ಕಾದಾಟ: ವಿಡಿಯೋ ವೈರಲ್!
ಎರಡು ಉಡಾಗಳು ಎದ್ದು ನಿಂತು ಕಾದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಡುಪ್ರಾಣಿಗಳ ನಡುವಿನ ಘೋರ ಕಾದಾಟದ ವಿಡಿಯೋಗಳು ಅಂತರ್ಜಾಲದಲ್ಲಿ ಹೇರಳವಾಗಿವೆ. ಅಂತಹ ಒಂದು ದೃಶ್ಯವನ್ನು ಇತ್ತೀಚೆಗೆ ಕ್ಯಾಮರಾದಲ್ಲಿ ಸೆರೆಹಿಡಿದು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಎರಡು ಉಡಾಗಳು ಎದ್ದುನಿಂತು ಹೋರಾಡುತ್ತಿರುವುದನ್ನು ವಿಡಿಯೊ ಚಿತ್ರಿಸಲಾಗಿದೆ. ಆಕರ್ಷಕ ವಿಡಿಯೊವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಐಐಎಂ ಕೋಲ್ಕತ್ತಾ ಕ್ಯಾಂಪಸ್‌ನಲ್ಲಿ ಎರಡು ಸರೀಸೃಪಗಳು ಕಾದಾಡುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. "IIM ಕೋಲ್ಕತ್ತಾದಿಂದ ಮುಂಜಾನೆಯ ದೃಶ್ಯ... " ಎಂದು IFS ಅಧಿಕಾರಿ ವಿಡಿಯೊ ಕ್ಲಿಪ್‌ಗೆ ಶೀರ್ಷಿಕೆ ನೀಡಿದ್ದಾರೆ. ವಿಡಿಯೊವನ್ನು Twitter ನಲ್ಲಿ ಹಂಚಿಕೊಂಡಾಗಿನಿಂದ 392.6k ವೀಕ್ಷಣೆಗಳು, ಸುಮಾರು 2,000 ಲೈಕ್ಸ್ ಅನ್ನು ಪಡೆದಿದೆ ಮತ್ತು ಹಲವಾರು ಕಾಮೆಂಟ್‌ಗಳನ್ನು ಸ್ವೀಕರಿಸಲಾಗಿದೆ.

ವೈರಲ್ ಕ್ಲಿಪ್ ಇಲ್ಲಿದೆ:
Learning to manage conflicts🤔
— Susanta Nanda (@susantananda3) March 1, 2023
Early morning scene from IIM Kolkata…
( As received in WA) pic.twitter.com/6jXGYkWQyA
"ಎರಡು ಉಡಾಗಳು ಜಗಳವಾಡುತ್ತಿವೆ. ಸಂತಾನೋತ್ಪತ್ತಿಗಾಗಿ ಗಂಡು ಮತ್ತು ಹೆಣ್ಣು ಉಡಾಗಳು ಈ ರೀತಿ ಜಗಳವಾಡುವುದಿಲ್ಲ. ಅವು ನೆಲದ ಮೇಲೆ ಇರುತ್ತವೆ"ಒಬ್ಬ ಬಳಕೆದಾರರೊಬ್ಬರು ಬರೆದಿದ್ದಾರೆ.. "OMG...ಆಕರ್ಷಕವಾಗಿದೆ. ಪ್ರಕೃತಿ ಅದ್ಭುತವಾಗಿದೆ " ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications