ಭರ್ಜರಿ ಪ್ರೊಸೆಸರ್ ಹಾಗೂ ಕ್ಯಾಮೆರಾದೊಂದಿಗೆ ಗ್ರಾಹಕರನ್ನು ಸೆಳೆಯಲಿದೆ ನಥಿಂಗ್ 2 ಎ ಪ್ಲಸ್
ಭಾರತದಲ್ಲಿ ಈಗಾಗಲೇ ತನ್ನ ಪ್ರಭುತ್ವ ಸಾಧಿಸಿರುವ ನಥಿಂಗ್ ಫೋನ್ ಈಗ ಮತ್ತೊಂದು ಫೋನ್ ಲಾಂಚ್ ಮಾಡಿದೆ. ನಥಿಂಗ್ 2 ಎ ನಿಂದ ಈಗಾಗಲೇ ಸದ್ದು ಮಾಡಿ, ಈಗಾಗಲೇ ಗ್ರಾಹಕರ ಮನಸ್ಸು ಕದ್ದಿದೆ. ಈಗ ಈ ಫೋನಿನ ಅಪ್‌ಡೇಟ್ ವರ್ಷನನ್ನು ಭಾರತದಲ್ಲಿ ರಿಲೀಸ್ ಮಾಡಿದೆ. ಕಂಪನಿಯು ಫೋನ್‌ನ ಲುಕ್ ಮತ್ತು ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಆದಾಗ್ಯೂ, ಹೊಸ ರೂಪಾಂತರದ ಹಾರ್ಡ್‌ವೇರ್ ವೈಶಿಷ್ಟ್ಯಗಳನ್ನು ನವೀಕರಿಸಲಾಗಿದೆ.
ನಥಿಂಗ್ 2 ಎ ನಲ್ಲಿನ ಪ್ರೊಸೆಸರ್ ಹಾಗೂ ಕ್ಯಾಮೆರಾಗಳನ್ನು ಅಪ್‌ಡೇಟ್ ಮಾಡಿರುವ, ಕಂಪನಿ ಮತ್ತೊಮ್ಮೆ ಮಾರುಕಟ್ಟೆಗೆ ಬಿಟ್ಟಿದೆ. ಈ ಫೋನ್‌ಗೆ ನಥಿಂಗ್ 2 ಎ ಪ್ಲಸ್ ಎಂದು ಹೆಸರು ಇಡಲಾಗಿದೆ. ಈ ಫೋನ್‌ನ್ನು ಕೊಳ್ಳಲು ಗ್ರಾಹಕರು ಸದ್ಯ ಮುಗಿ ಬೀಳುತ್ತಾ ಇದ್ದಾರೆ. ನಥಿಂಗ್ ನ ಈ ಫೋನ್ ಅನ್ನು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಪಟ್ಟಿ ಮಾಡಲಾಗಿದೆ.

ನಥಿಂಗ್ ಪೋನ್ (2a) ಪ್ಲಸ್ 6.7-ಇಂಚಿನ ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇನ್ನು 120Hz ಹೆಚ್ಚಿನ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಅಲ್ಲದೆ, ಗರಿಷ್ಠ ಹೊಳಪು 1,300 ನಿಟ್‌ಗಳವರೆಗೆ ಇರುತ್ತದೆ.
ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ, ಇದರೊಂದಿಗೆ 50W USB ಟೈಪ್ C ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಬೆಂಬಲಿಸಲಾಗುತ್ತದೆ. ಆಂಡ್ರಾಯ್ಡ್ 14 ಆಧಾರಿತ Nothing OS 2.6 ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ.

ಪ್ರೋಸೆಸರ್ ಹೇಗಿದೆ?
ಈ ಹೊಸ ನಥಿಂಗ್ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7350 ಪ್ರೊ 5 ಜಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಕಂಪನಿಯು 12GB RAM ಮತ್ತು 256GB ವರೆಗೆ ಆಂತರಿಕ ಸಂಗ್ರಹಣೆಯನ್ನು ನೀಡುತ್ತದೆ. ಇದರಲ್ಲಿ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಫೋನ್‌ನ ಸಂಗ್ರಹಣೆಯನ್ನು ವಿಸ್ತರಿಸಬಹುದು.
ಕ್ಯಾಮೆರಾ ಎಷ್ಟಿದೆ?
ಈ ಫೋನ್‌ನ ಹಿಂಭಾದಲ್ಲಿರುವ ಪ್ರೈಮರಿ ಕ್ಯಾಮೆರಾ 50 ಎಂಪಿ ಇದೆ. ಹಿಂಭಾಗದಲ್ಲಿ ಡ್ಯೂಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇನ್ನು ಮುಂಭಾಗದಲ್ಲಿ ವಿಡಿಯೋ ಹಾಗೂ ಸೆಲ್ಫಿಗಾಗಿ 50 ಎಂಪಿ ಕ್ಯಾಮೆರಾವನ್ನು ಕಂಪನಿ ನೀಡಲಿದೆ.
ಬಿಡುಗಡೆ ಯಾವಾಗ?
ನಥಿಂಗ್‌ನ ಈ ಫೋನ್ ಎರಡು ರೂಪಾಂತರಗಳಲ್ಲಿ ಹೊರ ಬುರವ ಸಾಧ್ಯತೆ ಇದೆ. 8GB RAM + 256GB ಇಂಟರ್ನಲ್ ಸ್ಟೋರೇಜ್ ಮತ್ತು 12GB RAM + 256GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದರ ಆರಂಭಿಕ ಬೆಲೆ 27,999 ರೂ. ಇಂದ ಆರಂಭವಾಗಿ ರೂ 29,999 ಕ್ಕೆ ಬರುತ್ತದೆ.
ಈ ನಥಿಂಗ್ ಫೋನ್‌ನ ಮೊದಲ ಮಾರಾಟ ಆಗಸ್ಟ್ 7 ರಂದು ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗಿದೆ. ಮೊದಲ ಮಾರಾಟದಲ್ಲಿ, ಕಂಪನಿಯು ಫೋನ್ ಖರೀದಿಯ ಮೇಲೆ ರೂ 2,000 ವರೆಗೆ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ನೀಡುತ್ತಿದೆ. ನೀವು ಈ ಫೋನ್ ಅನ್ನು ಕಪ್ಪು ಮತ್ತು ಬೂದು ಬಣ್ಣದಲ್ಲಿ ಲಭ್ಯವಿದ್ದು ಗ್ರಾಹಕರನ್ನು ಸೆಳೆಯಲಿದೆ.












Click it and Unblock the Notifications