ಭೂಮಿಗೂ ಕೇಳಿಸಿದ ಮಂಗಳ ಗ್ರಹದ ಸದ್ದು..! ಶತಮಾನದ ವಿಸ್ಮಯ ನಡೆದಿದ್ದೇಗೆ.?

ಭೂಮಿ ಹಾಗೂ ಮಂಗಳ ಗ್ರಹದ ನಡುವೆ ಸುಮಾರು 21 ಕೋಟಿ ಕಿಲೋ ಮೀಟರ್ ಅಂತರ ಇದೆ. ಆದರೂ ಭೂಮಿಗೆ ಮಂಗಳ ಗ್ರಹದ ಸದ್ದು ಕೇಳಿದೆ..! ಹೇಗೆ ಅಂತಾ ಹೆಚ್ಚು ಯೋಚಿಸಬೇಡಿ, ಏಕೆಂದರೆ ಈ ಕಾರ್ಯ ಸಾಧಿಸಿದ್ದು ಬೇರಾರೂ ಅಲ್ಲ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ. ಹೌದು, ಫೆಬ್ರವರಿ 18ರಂದು ಮಂಗಳನ ಮೇಲೆ ಲ್ಯಾಂಡ್ ಆಗಿದ್ದ ನಾಸಾ ಸಂಸ್ಥೆಯ 'ಪೆರ್‌ಸೆವೆರನ್ಸ್' ನೌಕೆ ತೆಗೆದ ಆಡಿಯೋ ಸಹಿತ ವಿಡಿಯೋ ಈಗ ಬಿಡುಗಡೆ ಆಗಿದೆ.

ಮಂಗಳ ಗ್ರಹದ ಕಕ್ಷೆಯಿಂದ ಮಂಗಳನ ವಾತಾವರಣಕ್ಕೆ ಜಾರಿ, ಅಲ್ಲಿನ ಅತೀವ ಗುರುತ್ವ ಬಲದ ವಿರುದ್ಧ ಸೆಣೆಸಾಡಿ ಗೆದ್ದು 'ಪೆರ್‌ಸೆವೆರನ್ಸ್' ಹೇಗೆ ಲ್ಯಾಂಡ್ ಆಯ್ತು ಎಂಬುದರ ಇಂಚಿಂಚು ಮಾಹಿತಿ ಈ ವಿಡಿಯೋದಲ್ಲಿ ದಾಖಲಾಗಿದೆ. ಅಷ್ಟೇ ಅಲ್ಲ, ಇದೇ ಮೊಟ್ಟಮೊದಲ ಬಾರಿಗೆ ಮಂಗಳ ಗ್ರಹದ ಆಡಿಯೋ ಅಂದರೆ ಧ್ವನಿಯನ್ನ ಸೆರೆ ಹಿಡಿಯುವಲ್ಲಿ ಮಾನವ ಯಶಸ್ವಿಯಾಗಿದ್ದಾನೆ.

ಈ ಸಾಧನೆಯ ಕೀರ್ತಿ ನಾಸಾ ಸಂಸ್ಥೆ ವಿಜ್ಞಾನಿಗಳಿಗೆ ಸೇರಬೇಕಿದೆ. ಅದರಲ್ಲೂ ಪೆರ್‌ಸೆವೆರನ್ಸ್ ಯೋಜನೆಗೆ ಸಾಥ್ ನೀಡಿದ್ದ ಭಾರತ ಮೂಲದ ಡಾ. ಸ್ವಾತಿ ಮೋಹನ್ ಅವರಿಗೂ ಈ ಯೋಜನೆಯ ಯಶಸ್ಸು ಸಲ್ಲಬೇಕಿದೆ.

ಅಲ್ಲೋಲ ಕಲ್ಲೋಲ ವಾತಾವರಣ..!

ಅಲ್ಲೋಲ ಕಲ್ಲೋಲ ವಾತಾವರಣ..!

14 ಕೋಟಿ ಕಿಲೋ ಮೀಟರ್ ವಿಸ್ತೀರ್ಣ ಅಂದರೆ ಸೈಜ್ ಹೊಂದಿರುವ ಮಂಗಳ ಗ್ರಹ ಸೂರ್ಯನ ಸುತ್ತಲೂ 86 ಸಾವಿರ ಕಿಲೋಮೀಟರ್ ವೇಗದಲ್ಲಿ ತಿರುಗುತ್ತದೆ. ಇಂತಹ ವಾತಾವರಣದಲ್ಲಿ ಮಂಗಳ ಗ್ರಹದ ಕಕ್ಷೆಯನ್ನ ಕ್ಯಾಚ್ ಮಾಡಿ, ಅದರ ನೆಲದ ಮೇಲೆ ರೋವರ್ ಲ್ಯಾಂಡ್ ಮಾಡುವುದು ಸಾಹಸದ ಕೆಲಸವೇ ಸರಿ. ಇದನ್ನ ನಾಸಾ ಸಲೀಸಾಗಿ ಮಾಡಿ ತೋರಿಸಿದೆ. ನಾಸಾ ನೌಕೆ ಲ್ಯಾಂಡ್ ಆಗುವ ದೃಶ್ಯದ ಇಂಚಿಂಚು ಸೀನ್ ರೆಕಾರ್ಡ್ ಆಗಿದ್ದು, ಮಂಗಳ ಗ್ರಹದ ಮೇಲೆ ಗಾಳಿ ಸದ್ದು ಹಾಗೂ ಲ್ಯಾಂಡ್ ಆಗುವಾಗ ರೋವರ್ ಮತ್ತು ರಾಕೆಟ್‌ ಸದ್ದು ದಾಖಲಾಗಿದೆ. ಇಂಟರ್ನೆಟ್‌ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮಂಗಳನ ಮೇಲೆ ಪ್ರತಿದಿನವೂ ಆಷಾಢ..!

ಮಂಗಳನ ಮೇಲೆ ಪ್ರತಿದಿನವೂ ಆಷಾಢ..!

ಆಷಾಢ ಮಾಸ ಬಂತೆಂದರೆ ಸಾಕು ಗಾಳಿಯದ್ದೇ ಚಿಂತೆ. ಜೋರಾಗಿ ಬೀಸುವ ಗಾಳಿ, ಈ ಗಾಳಿ ವೇಗಕ್ಕೆ ಬಟ್ಟೆ, ಕೊಡೆ, ಪೊರಕೆ ಇನ್ನೇನು ಸಾಧ್ಯವೋ ಎಲ್ಲಾ ಗಾಳಿಯಲ್ಲಿ ತೇಲಿಬಿಡುತ್ತವೆ. ಹಾಗೆ ನೋಡಿದರೆ ಮಂಗಳ ಗ್ರಹದ ಮೇಲೆ ಪ್ರತಿದಿನವೂ ಆಷಾಢ ಮಾಸದಂತೆ ಇರುತ್ತದೆ. ಏಕೆಂದರೆ ಮಂಗಳನ ಮೇಲೆ ನಿರಂತರವಾಗಿ ಧೂಳಿನ ಬಿರುಗಾಳಿ ಏಳುತ್ತದೆ. ಹೀಗಾಗಿ ಇಲ್ಲಿ ಮಾಮೂಲಿಯಾಗಿ ಬೀಸುವ ಗಾಳಿ ವೇಗ 100 ಕಿಲೋ ಮೀಟರ್ ಮೀರಿ ಬಿಡುತ್ತದೆ. ಅದರಲ್ಲೂ ರಾತ್ರಿ ವೇಳೆ ಗಾಳಿ ಆರ್ಭಟ ಎಂತಹ ಗಟ್ಟಿ ಹೃದಯದ ವ್ಯಕ್ತಿಯನ್ನೂ ಬೆಚ್ಚಿಬೀಳಿಸುತ್ತದೆ.

 ಮಲ್ಲಿಗೆ ಹೂವಿನಂತೆ ಲ್ಯಾಂಡಿಂಗ್..!

ಮಲ್ಲಿಗೆ ಹೂವಿನಂತೆ ಲ್ಯಾಂಡಿಂಗ್..!

'ಪೆರ್‌ಸೆವೆರನ್ಸ್' ಲ್ಯಾಂಡ್ ಆಗುವ ಕ್ಷಣದ ದೃಶ್ಯ, ಯಾವುದೋ ಬಾಹ್ಯಾಕಾಶ ಸಂಬಂಧಿ ಸಿನಿಮಾ ನೋಡಿದ ಅನುಭವ ನೀಡುತ್ತದೆ. ಮಂಗಳನ ಕಕ್ಷೆಯಿಂದ ದುಪ್ಪೆಂದು ಧುಮುಕುವ 'ಪೆರ್‌ಸೆವೆರನ್ಸ್' ರೋವರ್ ಇದ್ದ ಲಾಕರ್, ಮೊದಲೇ ಪ್ಲ್ಯಾನ್ ಮಾಡಿದಂತೆ ಮೊದಲಿಗೆ ತನ್ನಲ್ಲಿದ್ದ ಪ್ಯಾರಾಚೂಟ್ ತೆಗೆಯುತ್ತದೆ. ಬಳಿಕ ತನ್ನಲ್ಲಿ ಅಡಗಿಸಿದ್ದ 'ಪೆರ್‌ಸೆವೆರನ್ಸ್' ರೋವರ್‌ನ ನಿಧಾನವಾಗಿ ಮಂಗಳ ಗ್ರಹದ ನೆಲದ ಮೇಲೆ ಇಳಿಸಲು ರಾಕೆಟ್ ಮಾದರಿ ಫ್ಯೂಲ್ ಬರ್ನ್ ಮಾಡುತ್ತದೆ. ಹೀಗೆ ಮಂಗಳ ಗ್ರಹದ ಗುರುತ್ವ ಬಲವನ್ನು ನುಂಗಿ ನೀರು ಕುಡಿದ ನಂತರ, ನಿಧಾನವಾಗಿ ಪೆರ್‌ಸೆವೆರನ್ಸ್ ರೋವರ್‌ನ ಮಲ್ಲಿಗೆ ಹೂವಿನಂತೆ ಲ್ಯಾಂಡ್ ಮಾಡುತ್ತದೆ ರಾಕೆಟ್.

200 ಕೋಟಿ ವರ್ಷಗಳಷ್ಟು ಹಳೇ ಕೆರೆ

200 ಕೋಟಿ ವರ್ಷಗಳಷ್ಟು ಹಳೇ ಕೆರೆ

ಪೆರ್‌ಸೆವೆರನ್ಸ್ ರೋವರ್ ಲ್ಯಾಂಡ್ ಆಗಿರುವುದು ಮಂಗಳನ 'ಜೆಝೀರೋ' ಕುಳಿಯ ಮೇಲೆ. ಅಷ್ಟಕ್ಕೂ ಇದು ಕುಳಿ ಅಥವಾ ದೊಡ್ಡ ಗುಂಡಿ ಅಲ್ಲ. 200 ಕೋಟಿ ವರ್ಷಗಳ ಹಿಂದೆ ಇಲ್ಲೊಂದು ಕೆರೆ ಇತ್ತು. ಮಂಗಳ ಗ್ರಹದ ಬಹುತೇಕ ಪ್ರದೇಶಗಳಿಗೆ ಇದೇ ಕುಳಿಯಿಂದ ನೀರು ಹರಿಯುತ್ತಿತ್ತು. ಜೀವಿಗಳು ಈ ನೀರನ್ನು ಬಳಸಿ, ಬದುಕು ಕಟ್ಟಿಕೊಂಡಿದ್ದವು ಎಂಬ ವಾದವಿದೆ. ಆದರೆ ಕಾಲ ಕ್ರಮೇಣ ಆ ಕೆರೆ ನಾಶವಾಗಿ ಹೋಗಿದೆ ಎನ್ನುತ್ತಾರೆ ವಿಜ್ಞಾನಿಗಳು. ನಾಸಾ ವಿಜ್ಞಾನಿಗಳ ವಾದಕ್ಕೆ ಬಲ ನೀಡುವಂತೆ, 'ಜೆಝೀರೋ' ಕುಳಿ ಆಚೆ ಮತ್ತು ಈಚೆ ನೀರು ಬರಲು ಹಾಗೂ ಹೋಗಲು ದಾರಿ ಕೂಡ ಕಾಣುತ್ತದೆ. ಹೀಗಾಗಿ ಅಲ್ಲಿ ಜೀವಿಗಳು ಬದುಕಿರಬಹುದು ಅಥವಾ ಮೂಳೆ, ಪಳಿಯುಳಿಕೆ ಸಿಗಬಹುದು ಎಂಬ ವಿಶ್ವಾಸ ನಾಸಾ ವಿಜ್ಞಾನಿಗಳಿಗೆ ಇದೆ.

6 ಚಕ್ರದ ರೋವರ್..!

ಪೆರ್‌ಸೆವೆರನ್ಸ್ ಭೂಮಿಯಿಂದ ಉಡಾವಣೆಯಾದಾಗ ಸುಮಾರು 1 ಟನ್ ತೂಕವಿತ್ತು. ಹಾಗೂ ರೋವರ್‌ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು ಕೂಡ 6 ಅಡಿಗಿಂತ ಉದ್ದವೇ ಇದೆ. ಮತ್ತು 6 ಚಕ್ರಗಳನ್ನು ಪೆರ್‌ಸೆವೆರನ್ಸ್ ಹೊಂದಿದ್ದು, 2020ರ ಜುಲೈನಲ್ಲಿ ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾರಿತ್ತು. ಇದೀಗ ಮಂಗಳ ಗ್ರಹದ ಮೇಲೆ ಏಕಾಂಗಿಯಾಗಿ ಅಧ್ಯನ ನಡೆಸಲಿದೆ. ಉದ್ದವಾದ ರೊಬೊಟಿಕ್ ಕ್ರೇನ್ ಹಾಗೂ ಡ್ರಿಲ್ಲರ್ 'ಪೆರ್‌ಸೆವೆರನ್ಸ್'ಗೆ ಸಹಾಯ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+