N. A. Haris Profile: ಕಾಂಗ್ರೆಸ್‌ನ ಶ್ರೀಮಂತ ನಾಯಕರಲ್ಲಿ ಒಬ್ಬರಾದ ಎನ್.ಎ ಹ್ಯಾರಿಸ್ ಪರಿಚಯ
2000 ರ ದಶಕದ ಆರಂಭದಲ್ಲಿ, ಎನ್.ಎ ಹ್ಯಾರಿಸ್ ಮತ್ತು ಕೆ.ಜೆ. ಜಾರ್ಜ್ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ವಿಶ್ವಾಸಾರ್ಹ ಸಹಾಯಕರಾದರು.
ಬೆಂಗಳೂರು, ಮಾರ್ಚ್ 07: ಶಾಂತಿನಗರದ ಶಾಸಕ ನಲಪಾಡ್ ಅಹಮದ್ ಹ್ಯಾರಿಸ್ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ. ಜೊತೆಗೆ ಪಕ್ಷದ ಶ್ರೀಮಂತ ನಾಯಕರಲ್ಲಿ ಒಬ್ಬರು. ಭಾರತದ ಜಪ್ರಿಯ ಉದ್ಯಮಿಯಾಗಿರುವ ಇವರು ಬರೀ ರಾಜಕಾರಣಿಯಲ್ಲ. ಉದ್ಯಮ, ಕ್ರೀಡಾ ಕ್ಷೇತ್ರಗಳಲ್ಲಿಯೂ ತಮ್ಮ ಹೆಸರು ದಾಖಲಿಸಿದ್ದಾರೆ. 2008 ರಿಂದ ಕರ್ನಾಟಕ ವಿಧಾನಸಭೆಯಲ್ಲಿ ಶಾಂತಿ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ನಲಪಾಡ್ ಅಹಮದ್ ಹಾರಿಸ್ (ಎನ್.ಎ ಹ್ಯಾರಿಸ್) 1967 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಎನ್.ಎ. ಮೊಹಮ್ಮದ್ ಅವರು 1960ರಲ್ಲಿ ಕೇರಳದ ಕಾಸರಗೋಡಿನಿಂದ ಕರ್ನಾಟಕದ ಭದ್ರಾವತಿಗೆ ವ್ಯಾಪಾರಕ್ಕಾಗಿ ಬಂದವರು. ನಂತರ ಬೆಂಗಳೂರಿಗೆ ತೆರಳಿ ಸರ್ಕಾರದ ನಿರ್ಮಾಣ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಇದರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕೂಡ ಒಂದು. ಈ ಯೋಜನೆಯಲ್ಲಿ ಮಾಡಿದ ಹಣದಿಂದ ಮೊಹಮ್ಮದ್ ಹೋಟೆಲ್ ಬೆಂಗಳೂರು ಇಂಟರ್ನ್ಯಾಷನಲ್ ಅನ್ನು ಸ್ಥಾಪಿಸಿದರು. 1978 ರಲ್ಲಿ ಮೊಹಮ್ಮದ್ ನಲಪಾಡ್ ಗ್ರೂಪ್ ಆಫ್ ಹೋಟೆಲ್ಸ್ ಅನ್ನು ಸ್ಥಾಪಿಸಿದರು. ಎನ್.ಎ ಹ್ಯಾರಿಸ್ 1997 ರಲ್ಲಿ ಕುಟುಂಬ ವ್ಯವಹಾರಕ್ಕೆ ಸೇರಿದರು.

ನಲಪಾಡ್ ಗ್ರೂಪ್‌ನ ವ್ಯವಹಾರವನ್ನು ನಲಪಾಡ್ ಪೈಪ್ಸ್, ನಲಪಾಡ್ ಸುರಕ್ಷಾ, ನಲಪಾಡ್ ಇನ್ಫೋಟೆಕ್ ಮತ್ತು ನಲಪಾಡ್ ಎನರ್ಜಿಯಾಗಿ ವೈವಿಧ್ಯಗೊಳಿಸುವಲ್ಲಿ ಎನ್.ಎ.ಹ್ಯಾರಿಸ್ ಪ್ರಮುಖ ಪಾತ್ರ ವಹಿಸಿದ್ದಾರೆ. ಎನ್.ಎ.ಹ್ಯಾರಿಸ್ ಕುಟುಂಬ ನಲಪಾಡ್ ಇಂಟರ್‌ನ್ಯಾಶನಲ್ ಸ್ಕೂಲ್ ಕೂಡ ಸ್ಥಾಪಿಸಿದೆ.
ಇತ್ತ, ಎನ್.ಎ. ಮೊಹಮ್ಮದ್ ಅವರಿಗೆ ರಾಜಕೀಯದಲ್ಲಿ ಆಸಕ್ತಿಯಿತ್ತು ಎಂದು ಹ್ಯಾರಿಸ್ ಕುಟುಂಬದ ಮೂಲಗಳು ಹೇಳುತ್ತವೆ. ಎನ್ ಎ ಹ್ಯಾರಿಸ್ ತಮ್ಮ ತಂದೆಯ ಕನಸನ್ನು ನನಸು ಮಾಡಿ ಶೀಘ್ರವಾಗಿ ರಾಜಕೀಯ ಮೆಟ್ಟಿಲು ಏರಿದರು. ಇದಕ್ಕೆ ಸಾಥ್ ಕೊಟ್ಟವರು ಮತ್ತೊಬ್ಬ ಶ್ರೀಮಂತ ರಾಜಕಾರಣಿ ಕೇರಳದವರಾದ ಕೆ.ಜೆ.ಜಾರ್ಜ್. ಉದ್ಯಮದಲ್ಲಿ ಜೊತೆಯಾಗಿದ್ದ ಇವರು ಹ್ಯಾರಿಸ್‌ಗೆ ರಾಜಕೀಯವಾಗಿಯೂ ಸಾಥ್ ನೀಡಿದ್ದರು.

2000 ರ ದಶಕದ ಆರಂಭದಲ್ಲಿ, ಎನ್.ಎ ಹ್ಯಾರಿಸ್ ಮತ್ತು ಕೆ.ಜೆ. ಜಾರ್ಜ್ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ವಿಶ್ವಾಸಾರ್ಹ ಸಹಾಯಕರಾದರು. ಇದು ಕಾಂಗ್ರೆಸ್ ಇದು ಪಕ್ಷದೊಳಗೆ ಅವರ ಸ್ಥಾನಕ್ಕೆ ಭದ್ರ ಬುನಾದಿ ಹಾಕಲು ಸಹಾಯ ಮಾಡಿತು. 41 ನೇ ವಯಸ್ಸಿನಲ್ಲಿ, ಎನ್.ಎ ಹ್ಯಾರಿಸ್ 2008 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶಾಂತಿ ನಗರದಿಂದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು.
ಎನ್.ಎ ಹ್ಯಾರಿಸ್ ಅವರು ದತ್ತಿ ಕಾರ್ಯಗಳ ಮೂಲಕ ಜನಪ್ರಿಯತೆಯನ್ನು ಗಳಿಸಿದರು, ವಿಶೇಷವಾಗಿ ಎನ್ ಎ ಹ್ಯಾರಿಸ್ ಪ್ರತಿಷ್ಠಾನದ ಮೂಲಕ ಹಿಂದುಳಿದ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಿದ್ದು, ಉದ್ಯೋಗ ಮೇಳಗಳನ್ನು ಆಯೋಜಿಸಿದ್ದು, ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚು ಮಾಡಿತು. ಇದರಿಂದಲೇ ಅವರು 2013 ರಲ್ಲಿ ಮರು ಆಯ್ಕೆಯಾದರು. 2013 ರ ವಿಧಾನಸಭಾ ಚುನಾವಣೆಯಲ್ಲಿ 19,000 ಮತಗಳ ಅಂತರದಿಂದ ಸ್ಥಾನವನ್ನು ಗೆದ್ದರು. ನಂತರ 2018 ರ ವಿಧಾನಸಭೆ ಚುನಾವಣೆಯಲ್ಲಿಯೂ ಮರು ಆಯ್ಕೆಯಾದರು. 1 ಸೆಪ್ಟೆಂಬರ್ 2022 ರಂದು, ಎನ್ಎ. ಹ್ಯಾರಿಸ್ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇಂದು ಕಾಂಗ್ರೆಸ್ ಪಕ್ಷದಲ್ಲಿ ಭದ್ರ ಬುನಾದಿ ಹಾಕಿಕೊಂಡು ಪ್ರಭಾವಿ ನಾಯಕ ಎನಿಸಿಕೊಂಡಿರುವ ಎನ್.ಎ ಹ್ಯಾರಿಸ್ ಈ ಬಾರಿಯ ಚುನಾವಣೆಯಲ್ಲಿಯೂ ನಿರಾಯಾಸವಾಗಿ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳಿವೆ. ಅವರ ಮಗ 28 ವರ್ಷದ ಮಗ ಮೊಹಮ್ಮದ್ ನಲಪಾಡ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ನಲಪಾಡ್ ಅವರನ್ನು 19 ಫೆಬ್ರವರಿ 2018 ರಂದು ಬೆಂಗಳೂರಿನ ಸಿಟಿಯ ಪಬ್‌ನ ಹೊರಗೆ ನಡೆ ಗಲಾಟೆ ವಿಷಯದಲ್ಲಿ ಕೊಲೆ ಯತ್ನ ಆರೋಪದಲ್ಲಿ ನಗರ ಪೊಲೀಸರು ಬಂಧಿಸಿದ್ದರು.
ಒಟ್ಟಾರೆ, ಉದ್ಯಮಿಯಾಗಿ, ರಾಜಕಾರಣಿಯಾಗಿ ಶಾಂತಿನಗರದ ಶಾಸಕರಾಗಿರುವ ಎನ್.ಎ. ಹ್ಯಾರಿಸ್ ಕರ್ನಾಟಕ ರಾಜಕಾರಣದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ. ಈ ಬಾರಿಯೂ ಚುನಾವಣೆಯಲ್ಲಿ ಗೆಲ್ಲುವ ಕುದುರೆಯಾಗಿರುವ ಇವರಿಗೆ ಬೇರೆ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನೀಡಲಾಗಿದೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ












Click it and Unblock the Notifications