ಗ್ರಾಹಕರ ಚಿತ್ತ ಕದಿಯಲು ಸಿದ್ಧವಾಗಿವೆ motorola ಮೊಬೈಲ್ಸ್: ಮುಂದಿನ ತಿಂಗಳು ಲಾಂಚ್?
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಹೊಂದಿರುವ ಮೊಟೊರೊಲಾ ಮತ್ತೆರೆಡು ಮೊಬೈಲ್‌ಗಳನ್ನು ಸದ್ಯದಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಎರಡೂ ಮೊಬೈಲ್‌ಗಳು ಪ್ರೀಮಿಯಂ ಹಾಗೂ ಮಿಡ್ ರೇಂಜ್‌ನಲ್ಲಿ ಲಾಂಚ್ ಆಗಲಿವೆ. ಈ ಮೊಬೈಲ್‌ಗಳನ್ನು ಕೊಳ್ಳಲು ಇಲ್ಲಿನ ಗ್ರಾಹಕರು ತಯಾರಿದ್ದು, ಈಗಾಗಲೇ ಇದರ ವಿಶೇಷತೆಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ.
ಮೊಟೊರೊಲಾದ ಫೋಲ್ಡಬಲ್ ಮೊಬೈಲ್ ರೇಜರ್ 50 ಮತ್ತು ರೇಜರ್ 50 ಅಲ್ಟ್ರಾ ಜೂನ್ 25 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಮೊಬೈಲ್‌ನಲ್ಲಿ AI ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಎರಡು ಸಾಧನಗಳ ಜೊತೆಗೆ, ಮೊಟೊರೊಲಾ S50 ನಿಯೋವನ್ನು ಸಹ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈಮೊಬೈಲ್ ಜಾಗತಿಕ ಮಾರುಕಟ್ಟೆಗೆ ಮುಂದಿನ ತಿಂಗಳು ಕಾಲಿಡುವ ಸಾಧ್ಯತೆ ಇದೆ.

ಮೊಟೊರೊಲಾ ಫ್ಲ್ಯಾಗ್‌ಶಿಪ್‌ನ ವೈಶಿಷ್ಟ್ಯಗಳು ಸೋರಿಕೆಯಲ್ಲಿ ಬಹಿರಂಗವಾಗಿವೆ. ಟಿಪ್‌ಸ್ಟರ್ ಪ್ರಕಾರ, ಸರಣಿಯ ಅಲ್ಟ್ರಾ ರೂಪಾಂತರವು 2640 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.9-ಇಂಚಿನ OLED ಡಿಸ್ಪ್ಲೇಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಆದರೆ ಇದು 3.6 ಇಂಚಿನ ಕವರ್ ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ.
ಕ್ಯಾಮೆರಾ ಹೇಗಿರಬಹುದು?
ಈ ಕ್ಯಾಮೆರಾ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿರಲಿದ್ದು, ಛಾಯಗ್ರಹಣದಲ್ಲಿ ಇಷ್ಟ ಇರುವವರಿಗೆ ಇದು ಉತ್ತಮ ಆಯ್ಕೆ ಆಗುವ ಸಾಧ್ಯತೆ ಇದೆ. ಈ ಮೊಬೈಲ್ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದ್ದು, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಉಪಯೋಗಿಸಬಹುದಾಗಿದೆ.
ಮೋಟೊರೊಲಾ ರೇಜರ್ 50 ಅಲ್ಟ್ರಾ ವೈಶಿಷ್ಠ್ಯ ಏನು?
Motorola Razr 50 Ultra ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8sGen 3 ಮತ್ತು 4,000mAH ಬ್ಯಾಟರಿಯನ್ನು ಒಳಗೊಂಡಿರುತ್ತದೆ ಎಂದು ಸೋರಿಕೆಯಾದ ಮಾಹಿತಿಯಿಂದ ತಿಳಿದು ಬಂದಿದೆ. ಈ ಮೊಬೈಲ್ 12GB RAM ಮತ್ತು 256GB ವರೆಗೆ ಇಂಟರ್ನಲ್ ಸ್ಟೋರೇಜ್‌ನಿಂದ ಹೊರ ಬರುವ ಸಾಧ್ಯತೆ ಇದೆ. ಇದು ಮೊಟೊರೊಲಾ ನ Hello UI ನೊಂದಿಗೆ ಇತ್ತೀಚಿನ Android 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರಬಹುದು.

ಮೋಟೊರೊಲಾ ರೇಜರ್ 50 ಹೇಗಿರಲಿದೆ?
Motorola Razr 50, 3.6-ಇಂಚಿನ ಕವರ್ ಡಿಸ್ಪ್ಲೇಯೊಂದಿಗೆ 6.9-ಇಂಚಿನ ಓಎಲ್‌ಇಡಿ ಪ್ಯಾನೆಲ್ ಅನ್ನು ಹೊಂದಿರಬಹುದು. ಆದಾಗ್ಯೂ, ಈ ಫೋನ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎಕ್ಸ್ ಚಿಪ್‌ಸೆಟ್ ಅನ್ನು ಅಳವಡಿಸಿರುವ ಸಾಧ್ಯತೆ ಇದೆ. ಈ ಮೊಬೈಲ್ 33W ಚಾರ್ಜಿಂಗ್ ವೇಗದೊಂದಿಗೆ 3,950mAH ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆ ಇದೆ.
Intelligence inside and out. Discover more on 06.25.2024. #FlipTheScript pic.twitter.com/y84930QeSc
— motorola (@Moto) June 17, 2024
ಬೆಲೆ ಎಷ್ಟು?
ಮೊಟೊರೊಲಾ ರೇಜರ್ 40 ಅಲ್ಟ್ರಾವನ್ನು ರೂ 89,999 ಕ್ಕೆ ಬಿಡುಗಡೆ ಮಾಡಲಾಯಿತು ಮತ್ತು ಈಗ ಮುಂಬರುವ ಮೊಬೈಲ್ ಸಹ ಇದೇ ರೇಂಜನ್‌ಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಮೊಟೊರೊಲಾ ರೇಜರ್ 50 ಬೆಲೆ 58,000 ಗಳ ಆಸುಪಾಸಿನಲ್ಲಿ ಇರುತ್ತದೆ. ಈ ಮೊಬೈಲ್ ಮಾರುಕಟ್ಟೆಯಲ್ಲಿರುವ ಫ್ಲೋಡೆಬಲ್ ಮೊಬೈಲ್ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications