Motorola: ಭಾರತದ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ ಮೊಟೊರೊಲಾ ಎಡ್ಜ್ ಅಲ್ಟ್ರಾ 50
ಭಾರತದಲ್ಲಿ ಮೊಟೊರೊಲಾ ಕಂಪನಿಯ ಫೋನ್‌ಗಳಿಗೆ ಭಾರೀ ಬೇಡಿಕೆ. ಈ ಕಂಪನಿಯ ಈ ಮಾರುಕಟ್ಟೆಯಲ್ಲಿ ತನ್ನ ಪ್ರಭುತ್ವ ಮುಂದುವರೆಸಲು ಸತತ ಪ್ರಯತ್ನ ಮಾಡುತ್ತಲೇ ಇದೆ. ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್ ನಿಂದ ಹಿಡಿದು ಪ್ರೀಮಿಯಂ ಫೋನ್‌ಗಳನ್ನು ಸಹ ಕಂಪನಿ ಲಾಂಚ್ ಮಾಡಿದೆ. ಈಗ ಟೆಕ್ ಕಂಪನಿ ಮೊಟೊರೊಲಾ ಮಂಗಳವಾರ ಭಾರತದಲ್ಲಿ Motorola Edge 50 Ultra ಬಿಡುಗಡೆ ಮಾಡಿದೆ.
ಈ ಫೋನ್ 3D ಕರ್ವ್ ಡಿಸ್ಪ್ಲೇ, ಮರದ ಫಿನಿಶ್, ಸಿಲಿಕೋನ್ ಲೆದರ್ ಬ್ಯಾಕ್ ಪ್ಯಾನೆಲ್, 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, ನೀರು ಮತ್ತು ಧೂಳು ರಕ್ಷಣೆ ಹೀಗೆ ಹತ್ತು ಹಲವು ವೈಶಿಷ್ಠ್ಯಗಳನ್ನು ಹೊಂದಿದ್ದು ಗ್ರಾಹಕರನ್ನು ಕೈ ಬೀಸಿ ಕರೆಯಲಿದೆ.

ಈ ಫೋನಿನ್ ಡಿಸ್‌ಪ್ಲೇ ಹೇಗಿದೆ?
ಮೊಟೊರೊಲಾ 6.7 ಇಂಚಿನ pOLED 3 ಡಿ ಕರ್ವ್ ಡಿಸ್‌ಪ್ಲೇ ಹೊಂದಿದೆ. ಇದರ ಗರಿಷ್ಠ ಹೊಳಪು 2800 ಆಗಿದೆ. 144Hz ರಿಫ್ರೆಶ್ ದರದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನಿನಲ್ಲಿ ಉತ್ತಮ ಧ್ವನಿಗಾಗಿ ಡಾಲ್ಬಿ ಎಟ್ಮಾಸ್ ಸಹ ನೀಡಲಾಗಿದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಹಲವು AI ವೈಶಿಷ್ಟ್ಯಗಳನ್ನು ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಬೆಂಬಲಿಸುತ್ತದೆ.
ಕ್ಯಾಮೆರಾ ಹೇಗಿದೆ?
ಈ ಫೋನ್ ಹಿಂಬಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದು ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿದ್ದು, ಓಐಎಸ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಈ ಫೋನಿನಲ್ಲಿ 50MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 64MP ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗು ವಿಡಿಯೋ ಕರೆಗಳಿಗೆ 50 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ.
ಈ ಮೊಬೈಲ್‌ನಲ್ಲಿ 4500mAh ಬ್ಯಾಟರಿಯನ್ನು ನೀಡಲಾಗಿದೆ. ಇದನ್ನು ಚಾರ್ಜ್ ಮಾಡಲು, ಇದು 125W ವೇಗದ ಚಾರ್ಜಿಂಗ್, 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ನೀಡಲಾಗುತ್ತದೆ. ಫಾರೆಸ್ಟ್ ಗ್ರೇ, ನಾರ್ಡಿಕ್ ವುಡ್ ಮತ್ತು ಪೀಚ್ ಫಡ್ಜ್ ಎಂಬ ಮೂರು ಬಣ್ಣದ ಆಯ್ಕೆಗಳು ಫೋನ್‌ನಲ್ಲಿ ಲಭ್ಯ.

ಈ ಮೊಬೈಲ್ ಒಂದೇ ರೂಪಾಂತರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 12 ಜಿಬಿ ರ್ಯಾಮ್, 512 ಜಿಬಿ ಇಂಟರನಲ್ ಸ್ಟೋರೇಜ್ ಹೊಂದಿದ್ದು, ನೀವು ಎಸ್‌ಡಿ ಕಾರ್ಡ್ ಬಳಸಿ 1 ಟಿಬಿ ಒರೆಗೂ ಬೆಳೆಸಿಕೊಳ್ಳಬಹುದು. ಇದರ ಬೆಲೆ 54,999 ರೂ. ಇದ್ದು, ಬ್ಯಾಂಕ್ ಆಫರ್‌ಗಳು ಸಹ ಲಭ್ಯ ಇವೆ. ಕಂಪನಿಯ ಅಧಿಕೃತ ವೆಬ್‌ಸೈಟ್, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ನಲ್ಲಿ ಲಭ್ಯ.
ಬಾಕ್ಸ್‌ನಲ್ಲಿ ಏನಿದೆ?
ಮೊಬೈಲ್
ಟೈಪ್ ಸಿ ಟು ಟೈಪ್ ಸಿ ಕೇಬಲ್
125 ವ್ಯಾಟ್ ಚಾರ್ಜರ್
ಮೊಬೈಲ್ ಬ್ಯಾಕ್ ಕವರ್
ಡಾಕ್ಯೂಮೆಂಟೇಷನ್
196 ಗ್ರಾಮ್
ಮೊಬೈಲ್ ಕೆಳಭಾಗದಲ್ಲಿ ಏನಿದೆ?
ಸ್ಪೀಕರ್ ಗ್ರೀಲ್
ಯುಎಸ್‌ಬಿ ಟೈಪ್ ಸಿ ಚಾರ್ಜರ್
ಮೈಕ್ರೋಫೋನ್
ಸಿಮ್ ಕಾರ್ಡ್ ಟ್ರೇ
ಮೊಬೈಲ್ ಮೇಲ್ಭಾಗದಲ್ಲಿ ಏನಿದೆ?
ಸ್ಪೀಕರ್ ಗ್ರಿಲ್
ನಾಯ್ಸ್ ಕ್ಯಾನ್ಸಲಿಂಗ್ ಮೈಕ್ರೋಫೋನ್
ಬಲಗಡೆ ಭಾಗದಲ್ಲಿ ಏನಿದೆ?
ವ್ಯಾಲ್ಯೂಮ್ ಬಟನ್
ಆನ್ ಆಫ್ ಬಟನ್
ಮೈಕ್ರೋಫೋನ್
ಕನೆಕ್ಟಿವಿಟಿ
5ಜಿ ಬ್ಯಾಂಡ್
4ಜಿ ವೋಲ್ಟ್
ವೈಫೈ 7
ಬ್ಲ್ಯೂಟುತ್ 5.4












Click it and Unblock the Notifications