Motorola Edge 50 ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಸಿದ್ಧತೆ: ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?

ಭಾರತದ ಮಾರುಕಟ್ಟೆಯಲ್ಲಿ ಮೊಬೈಲ್‌ ಫೋನ್‌ಗಳ ಹಾವಳಿ ಜೋರಾಗಿದೆ. ಈ ಸಾಲಿನಲ್ಲಿ ಹಲವು ಚೀನಾ ಕಂಪನಿಗಳು ಮುಂಚೂಣಿಯಲ್ಲಿವೆ. ಈ ಸ್ಮಾರ್ಟ್‌ಫೋನ್‌ ಕಂಪನಿಗಳ ಗ್ರಾಹಕರನ್ನು ತನ್ನತ್ತ ಸೆಳೆಯಲು ಹಲವು ಸರ್ಕಸ್‌ ಮಾಡುತ್ತಲೇ ಇರುತ್ತದೆ. ಈ ಮಧ್ಯ ಹಲವು ಕಂಪನಿಗಳು ತಂತ್ರಜ್ಞಾನವನ್ನು ಮೈಗೊಡಿಸಿಕೊಂಡು, ಗ್ರಾಹಕರನ್ನು ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿವೆ.

ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಹಲವು ಕಂಪನಿಗಳಲ್ಲಿ ಮೊಟೊರೊಲಾ ಇಂಡಿಯಾ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಮೊಟೊರೊಲಾ ಸ್ಮಾರ್ಟ್‌ಫೋನ್ ಕಳೆದ ತಿಂಗಳಷ್ಟೇ ಜಾಗತಿಕವಾಗಿ ಬಿಡುಗಡೆಯಾಗಿತ್ತು. Motorola Edge 50 Pro ನಂತರ, ಕಂಪನಿಯು ಈ ಸರಣಿಯ ಮತ್ತೊಂದು ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ.

Motorola Edge 50 Fusion Set for India Debut Explore Specs and Anticipated Pricing

ಮೊಟೊರಾಲಾ ನೂತನ ಫೋನ್ ಬಿಡುಗಡೆ

ಮೊಟೊರೊಲಾ ಇಂಡಿಯಾ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಿಂದ ಈ ಫೋನ್‌ನ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ. ಸಸ್ಯಾಹಾರಿ ಚರ್ಮದ ವಿನ್ಯಾಸದೊಂದಿಗೆ 50MP ಕ್ಯಾಮೆರಾವನ್ನು ಫೋನ್‌ನ ಹಿಂಭಾಗದಲ್ಲಿ ಒದಗಿಸಲಾಗುತ್ತದೆ.

ಮೊಟೊರೊಲಾ ತನ್ನ ಇತ್ತೀಚಿನ ಫೋನ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇತ್ತೀಚೆಗೆ ಕಂಪನಿಯು ಮೊಟೊರೊಲಾ ಎಡ್ಜ್ 50 ಅನ್ನು ಬಿಡುಗಡೆ ಮಾಡಿತ್ತು. ಕಂಪನಿಯು ಇದೇ ಸರಣಿಯ ಹೊಸ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ನಂಬಲಾಗಿದೆ.

Motorola Edge 50 Fusion Set for India Debut Explore Specs and Anticipated Pricing

ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ?

ಈ ಫೋನ್ ಈಗಾಗಲೇ ಹಲವು ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದೆ. ಈಗ ಈ ಫೋನ್ ಭಾರತದಲ್ಲಿ BIS ನಲ್ಲಿ ಗುರುತಿಸಲ್ಪಟ್ಟಿದೆ, ಅಂದರೆ ಅದರ ಭಾರತ ಬಿಡುಗಡೆಯು ತುಂಬಾ ಹತ್ತಿರದಲ್ಲಿದೆ. ಇದಲ್ಲದೆ, Motorola Edge 50 Pro ಗೆ ಹೋಲಿಸಿದರೆ ಈ ಫೋನ್‌ನಲ್ಲಿ ನಿಮಗೆ ವಿಭಿನ್ನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬರಲಿದೆ. ಮೊಟೊರೊಲಾ ಇಂಡಿಯಾದ ಎಕ್ಸ್ ಹ್ಯಾಂಡಲ್‌ನಿಂದ ಬಿಡುಗಡೆಯಾದ ವೀಡಿಯೋ ಟೀಸರ್‌ನಲ್ಲಿ, ಈ ವಿಭಾಗದ ಅತ್ಯುತ್ತಮ ಕ್ಯಾಮೆರಾ ಫೋನ್ ಎಂದು ವಿವರಿಸಲಾಗಿದೆ.

ಈ ಮೊಟೊರೊಲಾ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಈ ಫೋನ್‌ ಡಿಸ್‌ಪ್ಲೇ ಹೊಂದಿದೆ. ಇದು ಮೊಟೊರೊಲಾ ಎಡ್ಜ್ 50 ಫ್ಯೂಷನ್ 5G ಆಗಿರುವ ಸಾಧ್ಯತೆ ಇದೆ. ಈ ಫೋನ್‌ನ ವಿಡಿಯೋ ಟೀಸರ್‌ನಲ್ಲಿ 'ಫ್ಯೂಷನ್' ಹೊರ ಬಂದಿದೆ.

ಸಂಭಾವ್ಯ ವೈಶಿಷ್ಟ್ಯಗಳು

ಈ ಮೊಟೊರೊಲಾ ಫೋನ್‌ನ ಡಿಸ್‌ಪ್ಲೇ 6.7 ಇಂಚಿನ ಫುಲ್‌ ಎಚ್‌ಡಿ ಡಿಸ್‌ಪ್ಲೇ ಪೋಲೆಡ್ 3D ಕರ್ವ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್‌ನ ಡಿಸ್‌ಪ್ಲೇ 144Hz ಹೈ ರಿಫ್ರೆಶ್ ರೇಟ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಇದರ 1600 ನಿಟ್‌ ಹೊಳಪು ಹೊಂದಿದೆ.

ಮೊಟೊರೊಲಾ ಈ ಮಿಡ್‌ ಬಜೆಟ್‌ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್‌ 7s ಜನರೇಷನ್‌ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 12GB RAM ಜೊತೆಗೆ 256GB ಇಂಟರ್ನಲ್‌ ಸ್ಟೋರೆಜ್‌ ಹೊಂದಿರುವ ಸಾಧ್ಯತೆ ಇದೆ.

ಕ್ಯಾಮೆರಾ ವೈಶಿಷ್ಠ್ಯಗಳೇನು?

ಈ ಫೋನ್‌ನ 50 ಮೆಗಾ ಪಿಕ್ಸಲ್‌ ಕ್ಯಾಮೆರಾ, 13MP ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ. ಇನ್ನು ಫ್ರಂಟ್‌ ಕ್ಯಾಮೆರಾ 32 ಮೆಗಾ ಪಿಕ್ಸಲ್‌ ಕ್ಯಾಮೆರಾವನ್ನು ಹೊಂದಿದೆ. ಮೊಟೊರಾಲಾ ಎಡ್ಜ್ 50 ಫ್ಯೂಸನ್ 5ಜಿ 68 ವ್ಯಾಟ್‌ ಟರ್ಬೊ ಫಾಸ್ಟ್ USB ಟೈಪ್ C ಚಾರ್ಜಿಂಗ್ ವೈಶಿಷ್ಟ್ಯ ಹೊಂದಿದ್ದು, 5 ಸಾವಿರ ಎಂಎಎಚ್‌ ಬ್ಯಾಟರಿ ಹೊಂದಿದೆ.

ಈ ಫೋನ್ ಪ್ರೀಮಿಯಂ ದರ್ಜೆಯ IP68 ರೇಟಿಂಗ್‌ನೊಂದಿಗೆ ಬರಲಿದೆ. Android 14 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+