Mothers Day 2023: ಅಮ್ಮಾ... ಊರೇನೇ ಅಂದರೂ ನೀ ನನ್ನ ದೇವರು...

ಅಮ್ಮ..... ಜನ್ಮದಾತೆ... ಅನ್ನದಾತೆ.... ತ್ಯಾಗಮಯಿ... ಮಕ್ಕಳಿಗಾಗಿ ಸದಾ ಶ್ರಮಿಸುವ, ಪ್ರೀತಿಸುವ ದೇವರು. ಮನೆಯೇ ಮೊದಲ ಪಾಠ ಶಾಲೆ, ಅಮ್ಮನೇ ಮೊದಲ ಗುರು. ಅಮ್ಮ ಅಂದರೆ ಸೆಳೆತ, ಕಣ್ಮುಂದೆ ಇಲ್ಲದ್ದಿದ್ದರೂ ಕೆರೆದಂತೆ, ಮಾತಾಡಿದಂತೆ, ಹಾರೈಸಿದಂತೆ, ವಿಚಾರಿಸಿದಂತೆ, ಪ್ರೀತಿತೋರುವಂತೆ ಭಾವನೆಗಳನ್ನು ಹುಟ್ಟು ಹಾಕುವ ನಿಷ್ಕಲ್ಮಷ ಪ್ರೀತಿ ತೋರುವವಳು ಅಮ್ಮ.

ಅನಾರೋಗ್ಯದ ವೇಳೆ ವೈದ್ಯಳಾಗಿ, ಆಸರೆಯಾಗಿ, ಸದಾ ಸಂತೋಷವನ್ನೇ ಬಯಸುವ, ಹೆಗಲಿಗೆ ಕೈ ಕೊಟ್ಟು ನಿಲ್ಲುವ ಅಮ್ಮನ್ನನ್ನು ಹೊಗಳು ಪದಗಳೇ ಇಲ್ಲ. ಈ ದಿನ ಅಮ್ಮಂದಿರ ದಿನಾಚರಣೆ. ಇದನ್ನು ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ಆಚರಿಸಲಾಗುತ್ತದೆ. ಈ ವರ್ಷ ಮೇ 14ರಂದು ತಾಯಂದಿರ ದಿನವನ್ನು ಆಚರಣೆ ಮಾಡಲಾಗುತ್ತಿದೆ.

Mothers Day

ಈ ದಿನ ಅಮ್ಮ ನಮಗಾಗಿ ಮಾಡಿದ ತ್ಯಾಗವನ್ನು ನೆನೆಯುವ ದಿನ. ಅವಳನ್ನು ಖುಷಿಯಾಗಿ ಸಂತೋಷವಾಗಿ ನೋಡಿಕೊಳ್ಳಲು ಶಪತ ಮಾಡುವ ದಿನ. ಅವಳಿಗಾಗಿ ಕಳೆಯುವ ದಿನ. ಹಲವೆಡೆ ತಾಯಂದಿರ ದಿನವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

ಹಲವಾರು ಕಾರ್ಯಕ್ರಮಗಳನ್ನು ತಾಯಂದಿರ ದಿನದಂದು ಆಯೋಜಿಸುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನ ಮಕ್ಕಳು ತಮ್ಮ ತಾಯಿಗೆ ವಿಶೇಷ ಕೃತಜ್ಞತೆ ಸಲ್ಲಿಸಲು ಪ್ರಯತ್ನಗಳನ್ನು ಮಾಡುತ್ತಾರೆ. ತಮ್ಮ ಸುತ್ತಲಿನ ಜನರ ಜೀವನದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ತಾಯಂದಿರಿಗೆ ಕೃತಜ್ಞತೆ ಸಲ್ಲಿಸಲು ಈ ದಿನವು ಒಂದು ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ.

Mothers Day

ಇತಿಹಾಸ

ತಾಯಂದಿರ ದಿನ (Mothers Day) ವನ್ನು 1908ರಲ್ಲಿ ಅಮೆರಿಕದಲ್ಲಿ ಆಚರಿಸಲು ಪ್ರಾರಂಭ ಮಾಡಲಾಯಿತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. 1905ರಲ್ಲಿ ಅನಾ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನ ಆಯ್ಕೆ ಮಾಡಿಕೊಂಡಿದ್ದರು. ಅವರು ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು. ಬಳಿಕ ಅಮೆರಿಕದ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಮೇ 9, 1914ರಂದು ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ ಎಂದು ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನು ಜಾರಿ ಮಾಡಿದ ನಂತರ ಅಮೆರಿಕ, ಭಾರತ ಹಾಗೂ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.

ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಲಂಡನ್‍ನಲ್ಲಿ ತಾಯಂದಿರ ದಿನವನ್ನು ಮಾರ್ಚ್ ತಿಂಗಳ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತದೆ. ಗ್ರೀಸ್ ದೇಶದಲ್ಲಿ ಫೆಬ್ರವರಿ 2ರಂದು ಆಚರಿಸಲಾಗುತ್ತದೆ. ಭಾರತ ಸೇರಿ ಹಲವಾರು ದೇಶಗಳಲ್ಲಿ ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನ ಆಚರಿಸಲಾಗುತ್ತದೆ. ಈ ವರ್ಷ ಮೇ 8ರಂದು ತಾಯಂದಿರ ದಿನ ಆಚರಿಸಲಾಗುತ್ತದೆ.

ಮಹತ್ವ

ಈ ದಿನ ತಾಯಂದಿರ ಅಸ್ತಿತ್ವವನ್ನು ಆಚರಿಸಲಾಗುತ್ತದೆ ಮತ್ತು ಅವರು ತಮ್ಮ ಮಕ್ಕಳಿಗಾಗಿ ಮಾಡುವ ಎಲ್ಲಾ ಕಾರ್ಯಗಳನ್ನು ಪ್ರಶಂಸಿಸುವುದರಿಂದ ಈ ದಿನವು ಮಹತ್ವದ್ದಾಗಿದೆ. ಇದು ತಾಯಂದಿರನ್ನು ಗೌರವಿಸುತ್ತದೆ. ಜೊತೆಗೆ ಮಾತೃತ್ವ, ತಾಯಿಯ ಬಂಧಗಳು ಮತ್ತು ಸಮಾಜದಲ್ಲಿ ತಾಯಂದಿರ ಪ್ರಭಾವವನ್ನು ಗೌರವಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+