ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡ ಕ್ರೂರ ಸಾಮ್ರಾಜ್ಯಗಳು... ಬೆಚ್ಚಿಬೀಳಿಸುವ ಭಯಾನಕತೆಗಳು!
ಇತಿಹಾಸದಲ್ಲಿ ಅನೇಕ ಸಾಮ್ರಾಜ್ಯಗಳು ಬಂದು ಹೋಗಿವೆ. ಕೆಲವು ಸಾಮ್ರಾಜ್ಯಗಳು ಮಾನವ ನಾಗರಿಕತೆಯ ಬೆಳವಣಿಗೆ ಮತ್ತು ಪ್ರಗತಿಗೆ ಕೊಡುಗೆ ನೀಡಿದರೆ, ಕೆಲವು ಸಾಮ್ರಾಜ್ಯಗಳು ತಮ್ಮ ಕ್ರೂರ ಚಟುವಟಿಕೆಗಳಿಂದ ಅಸಂಖ್ಯಾತ ಜನರನ್ನು ಕೊಂದು ಅಪಖ್ಯಾತಿ ಗಳಿಸಿವೆ.
ಈ ದಬ್ಬಾಳಿಕೆಯ ರಾಜ್ಯಗಳು ತಮ್ಮ ಶತ್ರುಗಳಿಗೆ ಮಾತ್ರವಲ್ಲದೆ ತಮ್ಮ ಪ್ರಜೆಗಳಿಗೂ ಕರುಣೆ ತೋರಿಸಿದವಲ್ಲ. ಕೆಲ ಸಾಮ್ರಾಜ್ಯಗಳ ದೌರ್ಜನ್ಯ ಲಕ್ಷಾಂತರ ಅಮಾಯಕ ಪ್ರಜೆಗಳ ಸಾವಿಗೆ ಕಾರಣವಾಗಿವೆ. ಹಾಗಾದರೆ ಈಗ ಮಾನವರ ಮೇಲೆ ಕರುಣೆ ಇಲ್ಲದೆ ದಬ್ಬಾಳಿಕೆ ಮಾಡಿ ಪ್ರಾಣ ಕಸಿದುಕೊಂಡ ಕೆಲ ಸಾಮ್ರಾಜ್ಯಗಳ ಬಗ್ಗೆ ತಿಳಿಯೋಣ.

*ಕೋಮಾಂಚೆ ಸಾಮ್ರಾಜ್ಯ (Comanche Empire)
ಕೋಮಾಂಚೆ ಸಾಮ್ರಾಜ್ಯವನ್ನು ಮಾನವನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಸಾಮ್ರಾಜ್ಯವೆಂದು ಪರಿಗಣಿಸಲಾಗಿದೆ. ಕೊಮಾಂಚೆ ಸಾಮ್ರಾಜ್ಯ ಅಮೆರಿಕದ ಅತಿದೊಡ್ಡ ಬುಡಕಟ್ಟುಗಳಲ್ಲಿ ಒಂದಾಗಿದೆ. ಈ ಸಾಮ್ರಾಜ್ಯ ಮಧ್ಯ ಅಮೇರಿಕನ್ ಬಯಲು ಪ್ರದೇಶವನ್ನು ವ್ಯಾಪಿಸಿತ್ತು.
ಈ ಸಾಮ್ರಾಜ್ಯದಲ್ಲಿ ಯಾರೂ ಕೂಡ ಕಂಡರಿಯದಷ್ಟು ಕ್ರೂರವಾಗಿ ಪ್ರಜೆಗಳನ್ನು ನಡೆಸಿಕೊಳ್ಳಲಾಗುತ್ತಿತ್ತು. ಮಹಿಳೆಯರು ಮಕ್ಕಳು ಎನ್ನದೇ ಚಿತ್ರಹಿಂಸೆ ನೀಡಿ ವಿಚಿತ್ರವಾಗಿ ಜನರನ್ನು ಕೊಲ್ಲುತ್ತಿದ್ದರು. ತಮ್ಮ ಸಾಮ್ರಾಜ್ಯದಲ್ಲಿ ಪ್ರಜೆಗಳನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು.
*ಸೆಲ್ಟ್ಸ್ ಸಾಮ್ರಾಜ್ಯ (celts)
ಪ್ರಾಚೀನ ಕಾಲದಲ್ಲಿ, ಸೆಲ್ಟ್ಸ್ ಈಗಿನ ಫ್ರಾನ್ಸ್, ಬೆಲ್ಜಿಯಂ ಮತ್ತು ಇಂಗ್ಲೆಂಡ್ ಅನ್ನು ಆಳಿದರು. ಈ ಸೆಲ್ಟ್ಸ್ ಸಾಮ್ರಾಜ್ಯ ಅದೆಷ್ಟು ಬಲಿಷ್ಟವಾಗಿತ್ತು ಅಂದರೆ ಯಾವೊಂದು ಸೈನ್ಯವೂ ಅವರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಸೆಲ್ಟ್ಸ್ ಕೂಡ ಯಾರೂ ಕೂಡ ಊಹಿಸಲಾಗದಷ್ಟು ಕ್ರೂರಿಗಳಾಗಿದ್ದರು.
ಯುದ್ಧದಲ್ಲಿ ಸೆಲ್ಟ್ಸ್ ಎಂದಿಗೂ ಸಾವಿಗೆ ಹೆದರಿದವರಲ್ಲ. ಬಲಿಷ್ಟರಾಗಿದ್ದ ಇವರು ಯುದ್ಧದಲ್ಲಿ ಜಯ ಗಳಿಸಿ ತಮ್ಮ ಶತ್ರುಗಳ ಎಲ್ಲಾ ತಲೆಗಳನ್ನು ಕತ್ತರಿಸಿ ವಿಜಯದ ಟ್ರೋಫಿಗಳಾಗಿ ಮನೆಗೆ ತರುತ್ತಿದ್ದರು.
*ಮಾವೋರಿ ನಾಗರಿಕತೆ(Maori Civilization)
ನ್ಯೂಜಿಲೆಂಡ್‌ನ ಸ್ಥಳೀಯ ಬುಡಕಟ್ಟು ಜನಾಂಗದ ಮಾವೋರಿಗಳು ಕ್ರೂರ ಯೋಧರಾಗಿದ್ದರು. ನರಭಕ್ಷಕರಾದ ಇವರು ಗುಲಾಮ ವ್ಯಾಪಾರಿಗಳನ್ನು ಬೇಟೆಯಾಡುತ್ತಿದ್ದರು. ಇವರ ಯುದ್ಧಗಳೂ ಎಲ್ಲರನ್ನೂ ನಡುಗಿಸುತ್ತಿದ್ದವು.
ಆಧುನಿಕ ಸೈನ್ಯವನ್ನು ಹೊಂದಿದ್ದ ಬ್ರಿಟಿಷ್ ಸಾಮ್ರಾಜ್ಯವೂ ಅವರನ್ನು ಸಮೀಪಿಸಲು ಬಯಸಲಿಲ್ಲ. ನಂತರದಲ್ಲಿ ಬ್ರಿಟಿಷರು ಮತ್ತು ಮಾವೋರಿಗಳ ನಡುವಿನ ಯುದ್ಧವು ಹಲವು ವರ್ಷಗಳ ಕಾಲ ನಡೆಯಿತು. ಭೀಕರ ಯುದ್ಧದಲ್ಲಿ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು.
*ಬೆಲ್ಜಿಯನ್ ವಸಾಹತುಶಾಹಿ ಸಾಮ್ರಾಜ್ಯ (Belgium Colonialism in Africa)
ಬೆಲ್ಜಿಯನ್ ವಸಾಹತುಶಾಹಿ ಸಾಮ್ರಾಜ್ಯವು ಮೂರು ಆಫ್ರಿಕನ್ ವಸಾಹತುಗಳನ್ನು ಒಳಗೊಂಡಿತ್ತು. ಇದು ಬೆಲ್ಜಿಯಂಗಿಂತ 76 ಪಟ್ಟು ದೊಡ್ಡದಾಗಿತ್ತು. ಇದು ಆಫ್ರಿಕಾದ ಮೂರನೇ ಪ್ರಮುಖ ವಸಾಹತುವಾಗಿತ್ತು.
ಈ ಸಾಮ್ರಾಜ್ಯದ ರಾಜ ಲಿಯೋಪೋಲ್ಡ್ II ಲಕ್ಷಾಂತರ ಕಾಂಗೋಲೀಸ್ ಜನರನ್ನು ರಬ್ಬರ್ ತೋಟಗಳಲ್ಲಿ ಕೆಲಸ ಮಾಡಲು ಒತ್ತಾಯಿಸಿ ಕ್ರೂರವಾಗಿ ಕೊಂದು ಹಾಕಿದನು. ದಿನದ ಕೆಲಸ ಮುಗಿಸಲು ಸಾಧ್ಯವಾಗದವರ ಕೈಗಳನ್ನು ಕತ್ತರಿಸುತ್ತಿದ್ದನು. ಹೀಗೆ ಪ್ರಜೆಗಳ ರಕ್ತ ಹೀರಿರುವ ಸಾಮ್ರಾಜ್ಯಗಳಲ್ಲಿ ಇದು ಕೂಡ ಸೇರಿದೆ.
*ಮಂಗೋಲ್ ಸಾಮ್ರಾಜ್ಯ
1206 ರಿಂದ 1405 ರವರೆಗಿನ ಮಂಗೋಲ್ ಸಾಮ್ರಾಜ್ಯ ವಿಶ್ವ ಇತಿಹಾಸದಲ್ಲಿ ದೀರ್ಘಾವಧಿಯ ಸಾಮ್ರಾಜ್ಯವಾಗಿದೆ. ಇದನ್ನು ಗೆಂಘಿಸ್ ಖಾನ್ ಪ್ರಾರಂಭಿಸಿದರು. ಅವರದ್ದು ಕೊಲೆಗಾರರ ಸೈನ್ಯವಾಗಿತ್ತು. ಬಹುಪಾಲು ಜನಸಂಖ್ಯೆ ಹೊಂದಿರುವ ನಗರಗಳನ್ನು ವಶಪಡಿಸಿಕೊಳ್ಳಲು ಕ್ರೂರ ಯುದ್ಧ ತಂತ್ರಗಳನ್ನು ಈ ಸೈನ್ಯ ಮಾಡುತ್ತಿತ್ತು.
ವಶಪಡಿಸಿಕೊಂಡ ಪ್ರದೇಶದ ಜನರು ಕಟ್ಟಳೆಯನ್ನು ಅನುಸರಿಸದಿದ್ದರೆ, ಅವರ ನಗರವನ್ನು ಜೀವಂತವಾಗಿ ನಾಶ ಮಾಡಲಾಗುತ್ತಿತ್ತು. ಅವರ ಆಳ್ವಿಕೆಯಲ್ಲಿ ಅಂದಾಜು 30 ಮಿಲಿಯನ್ ಜನರು ಕೊಲ್ಲಲ್ಪಟ್ಟರು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications