ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯವೇಕೆ ಭಾರತೀಯರೇ; ಮಂಕಿಪಾಕ್ಸ್ ಬಗ್ಗೆ ಓದಿ, ತಿಳಿದು ಜಾಗೃತರಾಗಿರಿ

|
Google Oneindia Kannada News

ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿ ಸುದ್ದಿಯಾದ ಮಂಕಿಪಾಕ್ಸ್ ಸೋಂಕಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಭಾರತದಲ್ಲಿ ಅದೇ ಮಂಕಿಪಾಕ್ಸ್ ರೋಗವು ಹೊಸ ಆತಂಕವನ್ನು ಸೃಷ್ಟಿಸಿದೆ. ವಿದೇಶ ಪ್ರವಾಸದ ಹಿನ್ನೆಲೆ ಇಲ್ಲದ ವ್ಯಕ್ತಿಯಲ್ಲಿ ಸೋಂಕು ಖಾತ್ರಿ ಆಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ರೋಗಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಆ ಮೂಲಕ ಸೋಂಕಿನ ಬಗ್ಗೆ ಜನರು ಎಚ್ಚರಿಕೆ ವಹಿಸುವಂತೆ ಮುನ್ಸೂಚನೆಯನ್ನು ನೀಡಿದೆ. ದೆಹಲಿಯಲ್ಲಿ ಪತ್ತೆಯಾದ ಅದೊಂದು ಮಂಕಿಪಾಕ್ಸ್ ಪ್ರಕರಣ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.

ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿನ ಭೀತಿ ಹೆಚ್ಚಾಗುವುತ್ತಿರುವುದು ಏಕೆ?, ಮಂಕಿಪಾಕ್ಸ್ ಸೋಂಕಿನ ಲಕ್ಷಣಗಳು ಏನು?, ಮಂಕಿಪಾಕ್ಸ್ ಸೋಂಕಿನ ಬಗ್ಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳುವುದೇನು?, ಮಂಕಿಪಾಕ್ಸ್ ಸೋಂಕಿನಿಂದ ಯಾರಿಗೆ ಹೆಚ್ಚು ಅಪಾಯ?, ಮಂದಿಪಾಕ್ಸ್ ಸೋಂಕು ಹರಡುವುದು ಹೇಗೆ? ಮಂಕಿಪಾಕ್ಸ್ ರೋಗದಿಂದ ರಕ್ಷಣೆ ಪಡೆದುಕೊಳ್ಳುವುದು ಹೇಗೆ ಎಂಬುದು ಸೇರಿದಂತೆ ಮಂಕಿಪಾಕ್ಸ್ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ವರದಿಯನ್ನು ಓದಿ.

Breaking: ಕೇರಳದಲ್ಲಿ ಮೂರನೇ ಮಂಕಿಪಾಕ್ಸ್ ಪ್ರಕರಣ ಪತ್ತೆBreaking: ಕೇರಳದಲ್ಲಿ ಮೂರನೇ ಮಂಕಿಪಾಕ್ಸ್ ಪ್ರಕರಣ ಪತ್ತೆ

ಮಂಕಿಪಾಕ್ಸ್ ಇತ್ತೀಚಿಗೆ ಪತ್ತೆಯಾದ ಹೊಸ ರೋಗವಲ್ಲ

ಮಂಕಿಪಾಕ್ಸ್ ಇತ್ತೀಚಿಗೆ ಪತ್ತೆಯಾದ ಹೊಸ ರೋಗವಲ್ಲ

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ರೋಗಗಳು ಎಂದರೆ ಜನರು ಬೆಚ್ಚಿ ಬೀಳುವಂತಹ ವಾತಾವರಣ ಸೃಷ್ಟಿಯಾಗಿ ಬಿಟ್ಟಿದೆ. ಆದರೆ ಮಂಕಿಪಾಕ್ಸ್ ಬಗ್ಗೆ ಜನರು ಯಾವುದೇ ರೀತಿ ಆತಂಕಕ್ಕೆ ಒಳಗಾಗುವ ಕಾರಣವಿಲ್ಲ. ಏಕೆಂದರೆ ಮಂಕಿಪಾಕ್ಸ್ ಹೊಸ ರೋಗವೇನಲ್ಲ. ಈ ರೋಗವು ಮೊದಲು 1950ರ ದಶಕದ ಉತ್ತರಾರ್ಧದಲ್ಲಿ ಮಂಗಗಳಲ್ಲಿ ಪತ್ತೆಯಾಗಿತ್ತು. ಈ ವೈರಸ್ ವೇರಿಯೊಲಾ ಎಂಬ ಸಿಡುಬಿಗೆ ಕಾರಣವಾಗುವ ರೋಗಾಣುವನ್ನು ಹೋಲುತ್ತದೆ. 1958ರಲ್ಲಿ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿರುವ ಸಂಶೋಧನಾ ಪ್ರಯೋಗಾಲಯ ಪರೀಕ್ಷೆಯು ಕೋತಿಗಳ ಗುಂಪಿನಲ್ಲಿ ಏಕಾಏಕಿ ಕಾಣಿಸಿಕೊಂಡ ರೋಗಕ್ಕೆ ಒಂದು ಹೆಸರು ನೀಡಲಾಯಿತು. ಅದುವೇ ಮಂಕಿಪಾಕ್ಸ್.

ಹುಷಾರ್: ಮಂಕಿಪಾಕ್ಸ್ ಸೋಂಕಿಗೂ 21 ದಿನ ಕ್ವಾರೆಂಟೈನ್!ಹುಷಾರ್: ಮಂಕಿಪಾಕ್ಸ್ ಸೋಂಕಿಗೂ 21 ದಿನ ಕ್ವಾರೆಂಟೈನ್!

ಈ ಝೂನೋಟಿಕ್ ಕಾಯಿಲೆ ಹೇಗೆ ಹರಡುತ್ತದೆ?

ಈ ಝೂನೋಟಿಕ್ ಕಾಯಿಲೆ ಹೇಗೆ ಹರಡುತ್ತದೆ?

"ಮಂಕಿಪಾಕ್ಸ್ ಸೋಂಕಿನ ಹರಡುವಿಕೆಯಲ್ಲಿ ಪ್ರಾಣಿಗಳ ಪಾತ್ರ ಮಹತ್ತರವಾಗಿದೆ. ಮನುಷ್ಯ ಮತ್ತು ಮಂಗಗಳು ಎರಡಕ್ಕೂ ಆಕಸ್ಮಿಕವಾಗಿ ಈ ವೈರಸ್ ಅಂಟಿಕೊಂಡಿದೆ. ಪಶ್ಚಿಮ ಆಫ್ರಿಕಾದಿಂದ ಪ್ರತ್ಯೇಕಿಸಲಾದ ತಳಿಯು ಮಧ್ಯ ಆಫ್ರಿಕಾಕ್ಕಿಂತ ಕಡಿಮೆ ರೋಗಾಣುವನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ. ಇದು ಕ್ಲಾಡ್ 2 ಅಂದರೆ ಪಶ್ಚಿಮ ಆಫ್ರಿಕಾದ ತಳಿಯು ಪ್ರಪಂಚದಾದ್ಯಂತ ಹರಡುತ್ತಿದೆ, "ಎಂದು ಸರ್ ಗಂಗಾರಾಮ್ ಆಸ್ಪತ್ರೆಯ ಹಿರಿಯ ಆರೋಗ್ಯ ಸಲಹೆಗಾರ ಡಾ ಧೀರೇನ್ ಗುಪ್ತಾ ಹೇಳಿದ್ದಾರೆ.

ಮಂಗಗಳು, ಅಳಿಲು ಮತ್ತು ಕಾಡು ದಂಶಕಗಳೊಂದಿಗಿನ ದೀರ್ಘಾವಧಿಯ ಸಂಪರ್ಕ, ಪ್ರಾಣಿಗಳ ಮಾಂಸ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ 2 ರಿಂದ 3 ಮೀಟರ್ ಹತ್ತಿರದ ಸಂಪರ್ಕವು ರೋಗ ಹರಡುವುದಕ್ಕೆ ಕಾರಣವಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಈ ಸೋಂಕು ಗಾಳಿಯ ಮೂಲಕ ಹರಡುವುದಿಲ್ಲ, ಬದಲಿಗೆ ಸೋಂಕಿತರ ಜೊತೆಗಿನ ಸಂಪರ್ಕವು ರೋಗವನ್ನು ಅಂಟಿಸುತ್ತದೆ. ದ್ವಿತೀಯ ಸಂಪರ್ಕದಿಂದ ಸೋಂಕು ಹರಡುವಿಕೆ ಪ್ರಮಾಣವು ಶೇ.7ರಷ್ಟಿದೆ. ಮಂಕಿಪಾಕ್ಸ್ ಎನ್ನುವುದು ಸಿಡುಬು ಮತ್ತು ಚಿಕನ್ ಪಾಕ್ಸ್ ರೋಗಕ್ಕಿಂತ ಕಡಿಮೆ ಹರಡುವಿಕೆಯನ್ನು ಹೊಂದಿದೆ.

ಮಂಕಿಪಾಕ್ಸ್ ರೋಗದಿಂದ ಯಾವ ವರ್ಗಕ್ಕೆ ಹೆಚ್ಚು ಅಪಾಯ?

ಮಂಕಿಪಾಕ್ಸ್ ರೋಗದಿಂದ ಯಾವ ವರ್ಗಕ್ಕೆ ಹೆಚ್ಚು ಅಪಾಯ?

ಪುರುಷರಲ್ಲಿ ಮಂಕಿಪಾಕ್ಸ್ ರೋಗವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಪುರುಷರೊಂದಿಗೆ ಅಥವಾ ತೃತೀಯ ಲಿಂಗಿಯರೊಂದಿಗೆ ಲೈಂಗಿಕ ಸಂಪರ್ಕವನ್ನು ಹೊಂದುವ ಪುರುಷರಿಗೆ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯು ಉಲ್ಲೇಖಿಸಿದೆ. ಮಂಕಿಪಾಕ್ಸ್ ರೋಗಿಗೆ ಚಿಕಿತ್ಸೆ ನೀಡಲು ದೀರ್ಘಕಾಲದ ಮತ್ತು ನಿಕಟವಾಗಿ ಸಂಪರ್ಕ ಹೊಂದುವ ವೈದ್ಯಕೀಯ ಸಿಬ್ಬಂದಿಗೆ ರೋಗಿಗಳ ಚರ್ಮದ ಹನಿಗಳ ಮೂಲಕವೂ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ. ರೋಗ ನಿರೋಧಕ ಶಕ್ತಿಯ ಪ್ರಮಾಣ ಕಡಿಮೆಯಿರುವ ವ್ಯಕ್ತಿಗಳು ಅಥವಾ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಮಂಕಿಪಾಕ್ಸ್ ಲೈಂಗಿಕತೆಯಿಂದ ಮಾತ್ರ ಹರಡುತ್ತಾ?

ಮಂಕಿಪಾಕ್ಸ್ ಲೈಂಗಿಕತೆಯಿಂದ ಮಾತ್ರ ಹರಡುತ್ತಾ?

"ಸದ್ಯದ ಮಟ್ಟಿಗೆ ಪುರುಷರೊಂದಿಗೆ ಲೈಂಗಿಕ ಸಂಪರ್ಕವನ್ನು ಹೊಂದುವ ಪುರುಷರಲ್ಲಿ ಅಥವಾ ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕವನ್ನು ಹೊಂದಿರುವ ಜನರಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆಯು ಗಮನಿಸಿದೆ," ಎಂದು ಪ್ರಧಾನ ಕಾರ್ಯದರ್ಶಿ ಡಾ.ಟೆಡ್ರೂಸ್ ಹೇಳಿದ್ದಾರೆ. ಎಲ್ಲಾ ದೇಶಗಳು ಪುರುಷರೊಂದಿಗೆ ಲೈಂಗಿಕತೆ ಹೊಂದಿರುವ ಪುರುಷರ ಸಮುದಾಯಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುತ್ತದೆ. ಪರಿಣಾಮಕಾರಿ ಮಾಹಿತಿ ಮತ್ತು ಸೇವೆಗಳ ವಿನ್ಯಾಸ ಮತ್ತು ಪೀಡಿತ ಸಮುದಾಯಗಳ ಆರೋಗ್ಯ, ಮಾನವ ಹಕ್ಕುಗಳು ರಕ್ಷಣೆಗೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ," ಎಂದಿದ್ದಾರೆ.

ಹಾಗಿದ್ದರೆ ಲೈಂಗಿಕ ಸಂಪರ್ಕದಿಂದ ಮಾತ್ರವೇ ಈ ಮಂಕಿಪಾಕ್ಸ್ ರೋಗ ಹರಡುವುದೇ ಎಂಬ ಪ್ರಶ್ನಿಗೆ ಇದುವರೆಗೂ ಯಾವುದೇ ಉತ್ತರ ಸಿಕ್ಕಿಲ್ಲ. ಲೈಂಗಿಕತೆಯಿಂದ ಮಾತ್ರ ಮಂಕಿಪಾಕ್ಸ್ ರೋಗ ಹರಡುತ್ತೆ ಎಂಬುದನ್ನು ಹೇಳುವುದಕ್ಕೆ ಸಾಕ್ಷ್ಯಗಳಿಲ್ಲ. ಇದು ಹೆಚ್ಐವಿ ರೀತಿಯ ರೋಗವಲ್ಲ. ಇದನ್ನು ಹೆಚ್ಐವಿ ರೀತಿಯಲ್ಲಿ ಪ್ರತ್ಯೇಕಿಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಮಂಕಿಪಾಕ್ಸ್ ಹರಡುವುದಕ್ಕೆ ಬೇರೆ ಮಾರ್ಗಗಳೂ ಸಹ ಇವೆ. ಅಸುರಕ್ಷಿತ ರಕ್ತ ವರ್ಗಾವಣೆಯಿಂದಲೂ ರೋಗ ಹರಡುತ್ತದೆ," ಎಂದು ಫ್ರೊ. ಡಾ. ಸಂಜಯ್ ರಾಯ್ ತಿಳಿಸಿದ್ದಾರೆ.

 ರೋಗದ ಲಕ್ಷಣಗಳಲ್ಲಿನ ಹಂತಗಳು ಯಾವುವು?

ರೋಗದ ಲಕ್ಷಣಗಳಲ್ಲಿನ ಹಂತಗಳು ಯಾವುವು?

ಮಂಕಿಪಾಕ್ಸ್ ರೋಗದ ಲಕ್ಷಣಗಳಿಗೆ ಸಂಬಂಧಿಸಿದಂತೆ ವಿವಿಧ ಹಂತಗಳ ಬಗ್ಗೆ ಡಾ. ಗುಪ್ತಾ ಮಾಹಿತಿ ನೀಡಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಸಾಮಾನ್ಯವಾಗಿ ಐದು ದಿನಗಳವರೆಗೆ ಈ ಲಕ್ಷಣಗಳು ಗೋಚರಿಸುತ್ತವೆ. ತದನಂತರದಲ್ಲಿ ಜ್ವರ, ತೀವ್ರವಾದ ತಲೆನೋವು, ಲಿಂಫಾಡೆನೋಪತಿ, ಬೆನ್ನು ನೋವು, ಮೈಯಾಲ್ಜಿಯಾ ಮತ್ತು ತೀವ್ರ ಆಯಾಸ ಕಾಣಿಸಿಕೊಳ್ಳುತ್ತದೆ. ದೇಹದ ವಿವಿಧ ಪ್ರದೇಶದಲ್ಲಿ ದುಗ್ಧರಸ ಗ್ರಂಥಿಗಳ ಊತ(ಗುಳ್ಳೆ) ಆಗುತ್ತದೆ.

ಸಾಮಾನ್ಯವಾಗಿ ಜ್ವರ ಕಾಣಿಸಿಕೊಂಡ ಒಂದರಿಂದ ನಾಲ್ಕು ದಿನಗಳಲ್ಲಿ ಚರ್ಮದ ದದ್ದು(Rash) ಪತ್ತೆಯಾಗುತ್ತದೆ. ಅದು ಎರಡರಿಂದ ಮೂರು ವಾರಗಳವರೆಗೆ ಇರುತ್ತದೆ. ದದ್ದು ನೋವಿನಿಂದ ಕೂಡಿದ್ದರೂ ತುರಿಕೆ ಆಗುತ್ತದೆ. ರಾಶ್ ಸಾಮಾನ್ಯವಾಗಿ 2 ರಿಂದ 5 ಮಿಮೀ ವ್ಯಾಸದ ಮ್ಯಾಕುಲ್‌ಗಳಾಗಿ ಪ್ರಾರಂಭವಾಗುತ್ತದೆ. ಮ್ಯಾಕ್ಯುಲ್‌ಗಳು ತರುವಾಯ ಪಪೂಲ್‌ಗಳು, ಕೋಶಕಗಳು ಮತ್ತು ನಂತರ ಪಸ್ಟಲ್‌ಗಳಾಗಿ ಬೆಳೆಯುತ್ತದೆ.

ದದ್ದಿನ ಸುತ್ತಲೂ ಗಾಯಗಳು ಕಾಣಿಸಿಕೊಳ್ಳುವುದರ ಜೊತೆಗೆ ಅದು ಆಳವಾಗುತ್ತಾ ಹೋಗುತ್ತದೆ. ಇದು ಮುಖದಿಂದ ಪ್ರಾರಂಭವಾಗಿ ನಂತರ ಅಂಗೈ ಮತ್ತು ಪಾದದ ಅಡಿಭಾಗದವರೆಗೂ ಆಗುತ್ತದೆ.

ನಿಮಗೆ ಮಂಕಿಪಾಕ್ಸ್ ಅಂಟಿಕೊಂಡರೆ ಮಾಡುವುದೇನು?

ನಿಮಗೆ ಮಂಕಿಪಾಕ್ಸ್ ಅಂಟಿಕೊಂಡರೆ ಮಾಡುವುದೇನು?

"ಮಂಕಿಪಾಕ್ಸ್ ಸೋಂಕಿನ ಲಕ್ಷಣಗಳು ಕಂಡು ಬಂದ 4 ದಿನಗಳಲ್ಲೇ ಸಿಡುಬಿನ ಲಸಿಕೆಯನ್ನು ನೀಡದರೆ, ಈ ಸೋಂಕಿನ ಹರಡುವಿಕೆಯಿಂದ ರಕ್ಷಿಸಿಕೊಳ್ಳಬಹುದು. 14 ದಿನಗಳೊಳಗೆ ಈ ಲಸಿಕೆಯನ್ನು ನೀಡುವುದು ಸೂಕ್ತ ಎಂದು ಹೇಳಲಾಗುತ್ತದೆ. ಅದಾಗ್ಯೂ, 4 ದಿನಗಳೊಳಗೆ ಲಸಿಕೆ ನೀಡುವುದರಿಂದ ಸೋಂಕಿನ ಲಕ್ಷಣಗಳನ್ನು ಕಡಿಮೆ ಮಾಡುವುದಕ್ಕೆ ಹಾಗೂ ರೋಗವನ್ನು ತಡೆಯುವುದಕ್ಕೆ ಸಾಧ್ಯವಾಗುತ್ತದೆ," ಎಂದು ಡಾ ಗುಪ್ತಾ ಹೇಳಿದ್ದಾರೆ.

ಸೂಚಿಸಿದ ಚಿಕಿತ್ಸೆಯು ತೀವ್ರತರವಾದ ಕಾಯಿಲೆ ಇರುವವರು ಮತ್ತು ತೀವ್ರತರವಾದ ಕಾಯಿಲೆಯ ಅಪಾಯದಲ್ಲಿ ಇರುವ 8 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು, ಸೋಂಕಿನ ತೊಂದರೆಗಳನ್ನು ಹೊಂದಿರುವ ರೋಗಿಗಳು, ರೋಗನಿರೋಧಕ ಶಕ್ತಿ ಹೊಂದರದ ರೋಗಿಗಳಿಗೆ ಹೆಚ್ಚು ಉಪಯುಕ್ತಕರ ಎನಿಸಿದೆ. ಈ ಸಮಯದಲ್ಲಿ ಟೆಕೊವಿರಿಮಾಟ್ ಆಯ್ಕೆಯ ಚಿಕಿತ್ಸೆಯಾಗಿದೆ, ಆದರೂ ಕೆಲವು ತಜ್ಞರು ತೀವ್ರವಾದ ಕಾಯಿಲೆಯ ರೋಗಿಗಳಲ್ಲಿ ಟೆಕೊವಿರಿಮಾಟ್ ಮತ್ತು ಸಿಡೋಫೊವಿರ್‌ನೊಂದಿಗೆ ಡ್ಯುಯಲ್ ಥೆರಪಿಯನ್ನು ಸೂಚಿಸಬಹುದು," ಎಂದು ಡಾ ಗುಪ್ತಾ ಹೇಳುತ್ತಾರೆ.

ಮಂಕಿಪಾಕ್ಸ್ ಸೋಂಕಿನ ಹರಡುವಿಕೆ ನಿಯಂತ್ರಣ ಹೇಗೆ?

ಮಂಕಿಪಾಕ್ಸ್ ಸೋಂಕಿನ ಹರಡುವಿಕೆ ನಿಯಂತ್ರಣ ಹೇಗೆ?

ಎಲ್ಲಾ ಗಾಯಗಳು ಮಾಸುವ ಅಥವಾ ಒಳಗುವುದಕ್ಕೆ ಮೂರು ವಾರಗಳವರೆಗೂ ರೋಗಿಗಳನ್ನು ಪ್ರತ್ಯೇಕವಾಗಿ ಕೋಣೆಯಲ್ಲಿ ಇರಿಸುವುದು. ಏಕೆಂದರೆ ಮಂಕಿಪಾಕ್ಸ್ ಸೋಂಕಿನ ಕಾವು 5 ರಿಂದ 13 ದಿನಗಳವರೆಗೂ ಇರುತ್ತದೆ. ಅದಾಗ್ಯೂ, ಸೋಂಕಿನ ಪ್ರಭಾವ 4 ರಿಂದ 21 ದಿನಗಳವರೆಗೂ ಇರುತ್ತದೆ. ಹೀಗಾಗಿ ರೋಗಿಗಳು ಮೂರು ವಾರಗಳವರೆಗೆ ಪ್ರತ್ಯೇಕವಾಗಿ ಇರುವುದಕ್ಕೆ ವೈದ್ಯರು ಸಲಹೆ ನೀಡುತ್ತಾರೆ.

ಮಂಕಿಪಾಕ್ಸ್ ವೇಗ 50 ವರ್ಷಗಳಲ್ಲೇ ಹೊಸ ದಾಖಲೆ

ಮಂಕಿಪಾಕ್ಸ್ ವೇಗ 50 ವರ್ಷಗಳಲ್ಲೇ ಹೊಸ ದಾಖಲೆ

ಕಳೆದ 50 ವರ್ಷಗಳಿಗೆ ಹೋಲಿಸಿದರೆ ಮಂಕಿಪಾಕ್ಸ್ ದಾಖಲೆಯ ವೇಗ ಪಡೆದುಕೊಂಡಿದೆ. 2022ರ ವರ್ಷಾರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, 47 ರಾಷ್ಟ್ರಗಳಲ್ಲಿ 3040 ಪ್ರಕರಣಗಳು ವರದಿಯಾಗಿದ್ದವು. ಅಲ್ಲಿಂದ ಈವರೆಗೆ 75 ರಾಷ್ಟ್ರಗಳಿಗೆ ಹರಡಿರುವ ಮಂಕಿಪಾಕ್ಸ್ ಮೂಲಕ 16,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಐವರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು WHO ಪ್ರಧಾನ ಕಾರ್ಯದರ್ಶಿ ಡಾ.ಟೆಡ್ರೂಸ್ ಹೇಳಿದ್ದಾರೆ. 1970ರಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ರೋಗವು ಕಾಣಿಸಿಕೊಂಡಿತ್ತು. ಅಲ್ಲಿಂದ 50 ವರ್ಷಗಳಲ್ಲೇ ಮೊದಲ ಬಾರಿಗೆ ಅತಿಹೆಚ್ಚು ಸೋಂಕಿತ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ವರದಿಯಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.

ಮಂಕಿಪಾಕ್ಸ್ ರೋಗಕ್ಕೆ ಯಾವ ಲಸಿಕೆ ಪಡೆಯಬೇಕು?

ಮಂಕಿಪಾಕ್ಸ್ ರೋಗಕ್ಕೆ ಯಾವ ಲಸಿಕೆ ಪಡೆಯಬೇಕು?

ಜಗತ್ತಿನಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಮಂಕಿಪಾಕ್ಸ್ ರೋಗದಿಂದ ರಕ್ಷಣೆ ನೀಡುವುದಕ್ಕೆ ಎರಡು ಲಸಿಕೆಗಳು ಲಭ್ಯವಿದೆ. ಮಾರ್ಪಡಿಸಿದ ಲಸಿಕೆ ಅಂಕಾರಾ (MVA) ಲಸಿಕೆ (ಯುನೈಟೆಡ್ ಸ್ಟೇಟ್ಸ್‌ನಲ್ಲಿ JYNNEOS, ಯುರೋಪಿಯನ್ ಒಕ್ಕೂಟದಲ್ಲಿ IMVANEX ಮತ್ತು ಕೆನಡಾದಲ್ಲಿ IMVAMUNE) ಮತ್ತು ACAM2000 ಲಸಿಕೆಯನ್ನು ನೀಡಲಾಗುತ್ತದೆ. ಸಿಡುಬಿನ ಲಸಿಕೆಯು ಮಂಕಿಪಾಕ್ಸ್ ವಿರುದ್ಧ ಶೇ.82 ರಿಂದ ಶೇ.85ರಷ್ಟು ರಕ್ಷಣೆ ನೀಡುತ್ತದೆ," ಎಂದು ಡಾ ರೈ ಹೇಳಿದ್ದಾರೆ.

ಆದರೆ "ಈ ಲಸಿಕೆಗಳು ಅಪಾಯದಿಂದ ಮುಕ್ತವಾಗೇನೂ ಇಲ್ಲ. ಇಂಥ ಲಸಿಕೆಗಳಿಂದ ಗಂಭೀರವಾದ ಅಡ್ಡ ಪರಿಣಾಮಗಳು ಇರುತ್ತವೆ ಎಂದು ತಿಳಿದು ಬಂದಿದೆ, ಅವುಗಳನ್ನು ಅಷ್ಟು ಸುಲಭಕ್ಕೆ ಬಳಸಲಾಗುವುದಿಲ್ಲ," ಎಂದು ಡಾ ಬಾಬು ಹೇಳಿದ್ದಾರೆ. ಅಲ್ಲದೇ ಭವಿಷ್ಯದಲ್ಲಿ ಸನ್ನಿಹಿತವಾಗುವ ಯಾವುದೇ ತುರ್ತು ಪರಿಸ್ಥಿತಿಗಾಗಿ ಭಾರತವು ಈ ಲಸಿಕೆಗಳನ್ನು ಸಂಗ್ರಹಿಸಬೇಕಾಗಬಹುದು. "ಸಿಡುಬಿನ ನಿರ್ಮೂಲನೆಯ ನಂತರ ಸಿಡುಬಿಗೆ ಭಾರತೀಯ ಲಸಿಕೆ ಸಂಗ್ರಹವನ್ನು ಕೈಬಿಡಲಾಯಿತು. ಲಸಿಕೆ ದಾಸ್ತಾನುಗಳನ್ನು ಹೊಂದಲು ನಾವು ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಸಾವಿನ ಮನೆಗೆ ಕರೆದೊಯ್ಯುವುದಿಲ್ಲ ಮಂಕಿಪಾಕ್ಸ್ ರೋಗ!

ಸಾವಿನ ಮನೆಗೆ ಕರೆದೊಯ್ಯುವುದಿಲ್ಲ ಮಂಕಿಪಾಕ್ಸ್ ರೋಗ!

"ಮಂಕಿಪಾಕ್ಸ್ ರೋಗದ ಬಗ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಏಕೆಂದರೆ ಈ ಸೋಂಕು ತಗುಲಿದವರಲ್ಲಿ ಸಾವಿನ ಅಪಾಯ ತೀರಾ ವಿರಳವಾಗಿರುತ್ತದೆ. 1977ಕ್ಕೂ ಪೂರ್ವದಲ್ಲಿ ಜನಿಸಿದವರು ಸಿಡುಬಿನ ಲಸಿಕೆಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಅಂಥವರು ಹೆಚ್ಚಿನ ರಕ್ಷಣೆಯನ್ನು ನೀಡಬೇಕಾಗುತ್ತದೆ. ಆದರೆ ಮಂಕಿಪಾಕ್ಸ್ ಸೋಂಕು ತಗುಲಿದವರ ಪೈಕಿ ಸಾವಿನ ಮನೆ ಸೇರಿದವರ ಸಂಖ್ಯೆ ತೀರಾ ವಿರಳವಾಗಿದೆ. ಹಲವು ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಮಂಕಿಪಾಕ್ಸ್ ಸೋಂಕು ತಗುಲಿದವರ ಪೈಕಿ ಶೇ.10ರಷ್ಟು ಮಂದಿ ಮೃತಪಟ್ಟಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಂಕಿಪಾಕ್ಸ್ ಸಾವಿನ ಪ್ರಮಾಣ ಆಫ್ರಿಕಾದಲ್ಲಿ ಶೇ.3ರಷ್ಟಿದೆ," ಎಂದು ಡಾ.ಗುಪ್ತಾ ಹೇಳಿದ್ದಾರೆ.

English summary
India reported four monkeypox cases with the latest being a 31-year-old Delhi man with no foreign travel history. Know symptoms, how does it spread and prevention in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X