Get Updates
Get notified of breaking news, exclusive insights, and must-see stories!

B Sriramulu Profile: ನಾಯಕ ಸಮುದಾಯದ ಪ್ರಬಲ ರಾಜಕಾರಣಿ ಶ್ರೀರಾಮುಲು ಪರಿಚಯ

ಸಚಿವ ಶ್ರೀರಾಮುಲು ಅವರ ವಯಸ್ಸು, ಜೀವನ ಚರಿತ್ರೆ, ಕುಟುಂಬ, ರಾಜಕೀಯ ವೃತ್ತಿ, ಶಿಕ್ಷಣ, ಆಸ್ತಿ, ಜಾತಿ, ನಿವ್ವಳ ಮೌಲ್ಯ ಮತ್ತು ಇತ್ತೀಚಿನ ಸುದ್ದಿಗಳ ವಿವರ ಇಲ್ಲಿದೆ.

ಉತ್ತರ ಕರ್ನಾಟಕದಲ್ಲಿ ಪ್ರಬಲ ರಾಜಕಾರಣಿಗಳಲ್ಲಿ ಶ್ರೀರಾಮುಲು ಒಬ್ಬರು. ಅವರು ನಾಯಕ ಸಮುದಾಯದ ಪ್ರಬಲ ರಾಜಕಾರಣಿ. 2006ರಿಂದ ಐದು ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾಗಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷ ಬದಲಾಯಿಸಿ ನಂತರ ಪುನ: ಬಿಜೆಪಿಗೆ ಸೇರಿದ ಶ್ರೀರಾಮುಲು ಸದ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದಾರೆ. ಇವರ ಕಿರು ಪರಿಚಯ ಇಲ್ಲಿದೆ.

ಬಳ್ಳಾರಿ ಹಾಗೂ ಆಂಧ್ರಪ್ರದೇಶ ಗಡಿ ಭಾಗದ ಪುಟ್ಟ ತಾಲೂಕು ಮೊಳಕಾಲ್ಮೂರು ರೇಷ್ಮೆ ಸೀರೆಗಳ ತವರೂರು ಎಂದೆನಿಸಿಕೊಂಡಿದೆ. ನುಂಕಮಲೆ ಸಿದ್ಧೇಶ್ವರ ಜಾತ್ರೆ ಇಲ್ಲಿನ ಪ್ರಸಿದ್ದಿ. ರೇಷ್ಮೆ ಅಲ್ಲದೆ, ನೆಲಗಡಲೆ (ಕಡಲೆ ಕಾಯಿ), ಜೋಳ, ರಾಗಿ, ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು 2018ರಲ್ಲಿ ಶ್ರೀರಾಮುಲು ಬಿಜೆಪಿಯ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆ 2023ರಲ್ಲಿ ಸಚಿವ ಬಿ.ಶ್ರೀರಾಮುಲು ಮೊಳಕಾಲ್ಮೂರು, ಬಳ್ಳಾರಿ ಹಾಗೂ ಸಂಡೂರು ಮೂರು ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಿಂದ ಪ್ರತಿನಿಧಿಸುತ್ತಾರೆನ್ನುವುದು ಕುತೂಹಲ ಮೂಡಿಸಿದೆ.

ಬಿ. ಶ್ರೀರಾಮುಲು ವೈಯಕ್ತಿಕ ಜೀವನ

ಬಿ. ಶ್ರೀರಾಮುಲು ವೈಯಕ್ತಿಕ ಜೀವನ

ಬಿ. ಶ್ರೀರಾಮುಲು ಬಳ್ಳಾರಿಯಲ್ಲಿ 8 ಆಗಸ್ಟ್ 1917ರಂದು ಜನಿಸಿದರು. ಅವರು ಬಿ.ತಿಮ್ಮಪ್ಪ ಹಾಗೂ ಬಿ.ಹೊನ್ನೂರಮ್ಮ ಪುತ್ರ. ಪದವಿಧರರಾದ ಶ್ರೀರಾಮುಲು ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ ಜೊತೆಗೆ ವ್ಯಾಪಾರೋದ್ಯಮಿ ಆಗಿದ್ದಾರೆ.

ಇವರ ಪತ್ನಿಯ ಹೆಸರು ಬಿ.ಭಾಗ್ಯಲಕ್ಷ್ಮಿ. ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದು ಒಟ್ಟು 18.1 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.

ಗಣಿ ಹಗರಣದಿಂದ ಕುಖ್ಯಾತಿ ಪಡೆದ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಕಾರಣ ಶ್ರೀರಾಮುಲು ಸಾಕಷ್ಟು ವಿವಾದಗಳಿಗೆ ಕಾರಣರಾದರು. ಬಳ್ಳಾರಿ ವಿಧಾನ ಸಭಾ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಜಯ ಗಳಿಸಿದರು.

ರಾಜಕೀಯ ರಂಗ

ರಾಜಕೀಯ ರಂಗ

ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡ ಶ್ರೀರಾಮುಲು 1999 ರ ವೇಳೆಗೆ ರಾಜಕೀಯ ವಲಯದಲ್ಲಿ ಕಾಣಿಸಿಕೊಂಡರು. 1999 ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರಾದರೂ ಕಾಂಗ್ರೆಸ್ಸಿನ ದಿವಾಕರ ಬಾಬು ಅವರ ಎದುರು ಸೋಲು ಅನುಭವಿಸಿದರು. ಆದರೂ ಧೃತಿಗೆಡದ ಅವರು ಮತ್ತೊಮ್ಮೆ ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಿ 2004 ರಿಂದ ಸತತ ಮೂರು ಬಾರಿ ಶಾಸಕರಾಗಿ ಜಯಶಾಲಿಯಾದರು.

ಬಿಜೆಪಿಯಲ್ಲಿ ಇರುವಾಗ ಇವರು ಕೆಲ ವಿವಾದಗಳಿಗೆ ಗುರಿಯಾದರು. ನಂತರ ಪಕ್ಷದಲ್ಲಿ ತಮಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಪಕ್ಷ ತೊರೆದರು. ಮಾರ್ಚ್ 2014 ರಲ್ಲಿ ಅವರು ಮತ್ತೆ ಭಾರತೀಯ ಜನತಾ ಪಕ್ಷಕ್ಕೆ ಸೇರಿ ಮತ್ತು ಬಳ್ಳಾರಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆದ್ದರು.

2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಅವರು ಮೊಳಕಾಲ್ಮೂರು ಮತ್ತು ಬಾದಾಮಿಯಿಂದ ಸ್ಪರ್ಧಿಸಿದ್ದರು. ಮೊಳಕಾಲ್ಮೂರಿನಲ್ಲಿ ಗೆದ್ದರು. ಬಾದಾಮಿಯಲ್ಲಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸೋತರು. 27 ಜುಲೈ 2018 ರಂದು ಶ್ರೀರಾಮುಲು ಅವರು ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯಕ್ಕಾಗಿ, ಪ್ರತ್ಯೇಕ ರಾಜ್ಯಕ್ಕೆ ಕರೆಕೊಟ್ಟರು. ಸದ್ಯ ರಾಜ್ಯ ಸರ್ಕಾರದಲ್ಲಿ ಸಾರಿಗೆ ಮತ್ತು ಗಿರಿಜನ ಕಲ್ಯಾಣ ಸಚಿವರಾಗಿದ್ದಾರೆ. ಈ ಬಾರಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಅಧಿಪತಿ ಯಾರಾಗಲಿದ್ದಾರೆ ಎನ್ನುವ ಕೂತೂಹಲ ಕೆರಳಿಸಿದೆ.

ರಾಜ್ಯ ವಿಧಾನಸಭೆ ಚುನಾವಣೆ 2023

ರಾಜ್ಯ ವಿಧಾನಸಭೆ ಚುನಾವಣೆ 2023

ಸಚಿವ ಬಿ.ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2013ರಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಸಾಧಿಸಿದ್ದ ಮಾಜಿ ಶಾಸಕ ಎಸ್‌.ತಿಪ್ಪೇಸ್ವಾಮಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗಲಿಲ್ಲ. ಇದೇ ಕಾರಣದಿಂದ ಕಳೆದ 2018ರ ಚುನಾವಣೆಯಲ್ಲಿ ಶ್ರೀರಾಮುಲು ಅವರ ವಿರುದ್ಧವೇ ಬಂಡಾಯ ಸಾರಿದ್ದರು.

ಅಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಾರು 40 ಸಾವಿರ ಮತಗಳನ್ನು ಪಡೆದು, ಶ್ರೀರಾಮುಲು ವಿರುದ್ಧ ಸೋಲನುಭವಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸೋತ ತಿಪ್ಪೇಸ್ವಾಮಿ, 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆಯಾಗಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ತಿಪ್ಪೇಸ್ವಾಮಿ ಇಂದು ಸಚಿವ ಶ್ರೀರಾಮುಲು, ಹಿರಿಯ ಶಾಸಕ ಜಿಹೆಚ್. ತಿಪ್ಪಾರೆಡ್ಡಿ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.

ಈ ಬಾರಿ ಎಲ್ಲಿಂದ ಸ್ಪರ್ಧೆ?

ಈ ಬಾರಿ ಎಲ್ಲಿಂದ ಸ್ಪರ್ಧೆ?

ತವರು ಜಿಲ್ಲೆ ಬಳ್ಳಾರಿಯಾದರೂ 2006ರಿಂದ ಐದು ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾದರೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಪಡೆಯುವಲ್ಲಿ ವಿಫಲವಾಗಿರುವ ಸಾರಿಗೆ ಸಚಿವ, ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ಮುಂದಿನ ಬಾರಿ ತವರು ಕ್ಷೇತ್ರ ಬಳ್ಳಾರಿ ಗ್ರಾಮೀಣದಲ್ಲಿ ಸ್ಪರ್ಧಿಸಲಿದ್ದಾರೆಂಬ ಸುದ್ದಿ ಗಣಿ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ.

2008ರಲ್ಲಿ ಬಳ್ಳಾರಿ ಗ್ರಾಮೀಣದಿಂದ ಶಾಸಕರಾಗಿ, ಸಚಿವರಾದರೂ ಅಂದು ತಮ್ಮ ಆಪ್ತಮಿತ್ರ ಜನಾರ್ದನ ರೆಡ್ಡಿಯವರು ಉಸ್ತುವಾರಿ ಸಚಿವರಾಗಿದ್ದರಿಂದ ಉಸ್ತುವಾರಿ ಪಟ್ಟ ಸಿಗಲಿಲ್ಲ. 2010ರಲ್ಲಿ ಬಳ್ಳಾರಿ ಗ್ರಾಮೀಣದಲ್ಲಿ ಉಪ ಚುನಾವಣೆಯಲ್ಲಿ ಪಕ್ಷೇತರ ಶಾಸಕರಾದರು. 2013ರಲ್ಲಿ ಬಿಎಸ್‌ಆರ್‌ ಪಕ್ಷದಿಂದ ಬಳ್ಳಾರಿ ಗ್ರಾಮೀಣದಲ್ಲಿ ಶಾಸಕರಾದರು. ಆಗ ಸರಕಾರ ಇಲ್ಲದಿದ್ದರಿಂದ ಉಸ್ತುವಾರಿ ಸಚಿವ ಸ್ಥಾನ ಶ್ರೀರಾಮುಲು ಅವರ ಪಾಲಿಗೆ ದಕ್ಕದಾಯಿತು. ಇನ್ನು 2014ರಲ್ಲಿ ಬಿಜೆಪಿಗೆ ಬಂದು ಲೋಕಸಭಾ ಸದಸ್ಯರಾದರು. 2018ರಲ್ಲಿ ತವರು ಕ್ಷೇತ್ರ ಬಳ್ಳಾರಿ ಗ್ರಾಮೀಣ ಬಿಟ್ಟು, ಪಕ್ಕದ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರೂ ತವರು ಕ್ಷೇತ್ರ ಬಿಟ್ಟಿದ್ದೇ ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನದ ಹೊಣೆಯಿಂದ ವಂಚಿತರಾಗುವಂತೆ ಮಾಡಿದೆ ಎಂಬ ಭಾವನೆ ಸಚಿವರ ಆಪ್ತ ವಲಯದಲ್ಲಿ ಮೂಡಿದೆ.

ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ

ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ

ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಮೊಳಕಾಲ್ಮೂರು ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸ್ಪರ್ಧಿಸಿದ ಶ್ರೀರಾಮುಲು, ಈ ಬಾರಿ ಸೋಲಿನ ಭೀತಿ ಎದುರಾಗಿದೆ. ಹಾಗಾಗಿ ಬಳ್ಳಾರಿ ಕಡೆ ಮುಖ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಚಿವ ಬಿ.ಶ್ರೀರಾಮುಲು ಈ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹೈ ಕಮಾಂಡ್ ಬಯಸಿದರೆ ಈ ಬಾರಿಯೂ ಬಳ್ಳಾರಿ ಹಾಗೂ ಸಂಡೂರು ಕ್ಷೇತ್ರ ಎರಡು ಕಡೆ ಸ್ಪರ್ಧೆ ಮಾಡುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+