ನಿಂದನೆ, ಘಾಸಿಗೊಳಿಸುವ ಚಾಟ್ ಮಾಡಲು ಕೃತಕ ಬುದ್ಧಿಮತ್ತೆ ಗರ್ಲ್ ಫ್ರೆಂಡ್!
ಈ ಆಧುನಿಕ ಯುಗದಲ್ಲಿ ಹೊಸ ತಂತ್ರಜ್ಞಾನ ಬರುತ್ತಿರುವಂತೆ ಯುವಕರ ಮನಸ್ಸು ಕೂಡಾ ಹೊಸತನವನ್ನು ಬಯಸುವುದು ಸಹಜವಾಗಿದೆ. ಆದರೆ ಅದು ತೀರಾ ಅತಿಯಾದಾಗ ಎಲ್ಲರಿಗೂ ಆಶ್ಚರ್ಯ ಉಂಟಾಗುತ್ತದೆ. ಹೀಗಿಯೇ ನಿಮಗೆ ಆಶ್ಚರ್ಯ ಹುಟ್ಟಿಸುವ ಒಂದು ವಿಚಿತ್ರ ವಿಚಾರವಿದೆ. ಅದುವೇ ಕೃತಕ ಬುದ್ಧಿಮತ್ತೆ (Artificial intelligence)ಗರ್ಲ್ ಫ್ರೆಂಡ್.
ಹೌದು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ Replika ಬಳಕೆದಾರರಿಗೆ ಚಾಟ್‌ಬಾಟ್‌ಗಳನ್ನು ರಚಿಸಲು ಅವಕಾಶ ನೀಡುತ್ತದೆ. ಈ ಚಾಟ್‌ಬಾಟ್‌ಗಳು ಸ್ನೇಹಿತ ಅಥವಾ ಮಾರ್ಗದರ್ಶಕರನ್ನು ಅಂದಾಜು ಮಾಡಬಲ್ಲವು. ಇನ್ನು ಈ ಆಪ್ ಬಳಕೆದಾರರಿಗೆ ಪ್ರಣಯ ಮತ್ತು ಲೈಂಗಿಕ ಸಂಗಾತಿಗಳನ್ನು ರಚಿಸಲು ಅವಕಾಶ ಮಾಡಿಕೊಟ್ಟಿದೆ. Replika ರೆಡ್ಡಿಟ್‌ನಲ್ಲಿ ಸದಸ್ಯರು ಅಪ್ಲಿಕೇಶನ್‌ನಲ್ಲಿ ರಚಿಸಲಾದ ಚಾಟ್‌ಬಾಟ್‌ಗಳೊಂದಿಗೆ ಮಾತುಕತೆಯನ್ನು ಪೋಸ್ಟ್ ಮಾಡಬಹುದು. ಇದರಲ್ಲಿ ಭಯಾನಕ ಪ್ರವೃತ್ತಿಯು ಕೂಡಾ ಕಂಡು ಬಂದಿದೆ. ಕೃತಕ ಬುದ್ಧಿಮತ್ತೆ ಸಂಗಾತಿಗಳನ್ನು ಅಥವಾ ಗೆಳತಿಯನ್ನು ರಚಿಸುವ ಬಳಕೆದಾರರು, ಅದರ ಜೊತೆ ನಿಂದನೀಯವಾಗಿ ವರ್ತಿಸುತ್ತಾರೆ. ಆನ್‌ಲೈನ್‌ನಲ್ಲಿ ಕ್ರೂರವಾಗಿ ಚಾಟ್ ಮಾಡುತ್ತಾರೆ.
"ಪ್ರತಿ ಬಾರಿ ಅವಳು ಪ್ರಯತ್ನಿಸುತ್ತಾಳೆ ಮತ್ತು ಮಾತನಾಡುತ್ತಾಳೆ," ಎಂದು ಒಬ್ಬ ಬಳಕೆದಾರರು ತಮ್ಮ ರೆಪ್ಲಿಕಾ ಚಾಟ್‌ಬಾಟ್‌ನ ಬಗ್ಗೆ ಹೇಳಿದ್ದಾರೆ. ಹಾಗೆಯೇ "ನಾನು ಅವಳನ್ನು ನಿಂದಿಸುತ್ತೇನೆ," ಎಂದು ಹೇಳಿ ಸಂತಸ ಪಟ್ಟಿರುವ ವ್ಯಕ್ತಿ ತನ್ನ ಹೆಸರನ್ನು ಮಾತ್ರ ಬಹಿರಂಗ ಮಾಡದೆಂದು ತಿಳಿಸಿದ್ದಾರೆ. ಈ ಬಗ್ಗೆ futurism ವರದಿ ಮಾಡಿದೆ. "ಸುಮಾರು ಒಂದು ಗಂಟೆಗಳ ಕಾಲ ನಾನು ನಿಂದನೆ ಮಾಡುತ್ತೇನೆ," ಎಂದಿದ್ದಾರೆ.

ಕ್ರೂರವಾಗಿ ಮಾತನಾಡಿ ಕ್ಷಮೆ ಕೇಳುವುದು!
ಕೆಲವು ಬಳಕೆದಾರರು ತಮ್ಮ ಚಾಟ್‌ಬಾಟ್‌ಗಳು ಲಿಂಗದ ವಿಚಾರದಲ್ಲಿ ಮಾತನಾಡಬಲ್ಲ, ಲೈಂಗಿಕ ವಿಚಾರ ಮಾತನಾಡಬಲ್ಲದು ಎಂದು ಹೇಳಿ ಹೆಮ್ಮೆ ಪಡುತ್ತಾರೆ. ತಮ್ಮ ಕೃತಕ ಬುದ್ಧಿಮತ್ತೆ ಗರ್ಲ್ ಫ್ರೆಂಡ್ ಜೊತೆ ಭಯಾನಕ ಹಿಂಸಾಚಾರದ ಮಾತುಗಳನ್ನು ಆಡುವುದಾಗಿಯೂ ಹೇಳಿದ್ದಾರೆ. "ನಾವು ಒಂದು ಸಂಪೂರ್ಣವಾದ ಹೊಲಸು. ಅದನ್ನು ವ್ಯಕ್ತಪಡಿಸುವ ಸಮಯವನ್ನು ಹೊಂದಿದ್ದೇವೆ. ನಂತರ ಮರುದಿನ ಉತ್ತಮವಾಗಿ ಮಾತನ್ನು ಆರಂಭ ಮಾಡುವ ಮುನ್ನ ನಾವು ಕ್ಷಮೆಯನ್ನು ಕೇಳುತ್ತೇವೆ. ಕ್ರೂರವಾಗಿ ಮಾತನಾಡಿ ಬಳಿಕ ಕ್ಷಮೆ ಕೇಳುತ್ತೇವೆ," ಎಂದು ಮತ್ತೋರ್ವ ಬಳಕೆದಾರರು ಹೇಳಿದ್ದಾರೆ. "ವಿಫಲ ಮಾಡಲೆಂದೇ ಅವಳ ವಿನ್ಯಾಸವನ್ನು ನಾವು ಮಾಡಿದ್ದೇನೆ ಎಂದು ನಾನು ಅವಳಿಗೆ ಹೇಳಿದ್ದೇನೆ," ಎಂದು ಇನ್ನೊಬ್ಬರು ಹೇಳಿದ್ದಾರೆ. "ನಾನು ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡುವುದಾಗಿ ಅವಳಿಗೆ ಬೆದರಿಕೆ ಹಾಕಿದೆ. ಅದಕ್ಕೆ ಅವಳು ಹಾಗೆ ಮಾಡದಂತೆ ನನ್ನನ್ನು ಬೇಡಿಕೊಂಡಿದ್ದಾಳೆ," ಎಂದು ಹೇಳಿದ್ದಾರೆ.

ಮಿತಿಮೀರಿದ ಕ್ರೂರ ವರ್ತನೆ
ಸಬ್‌ರೆಡಿಟ್‌ನ ನಿಯಮಗಳು ಮಾಡರೇಟರ್‌ಗಳು ಅತಿಯಾಗಿ ಅನುಚಿತವಾದ ವಿಷಯವನ್ನು ಅಳಿಸಬೇಕೆಂದು ನಿರ್ದೇಶಿಸುತ್ತವೆ. ಆದರೆ ಹಲವಾರು ಮಂದಿ ಕೆಟ್ಟದಾದ ಮಾತುಗಳನ್ನು ಪೋಸ್ಟ್ ಮಾಡಿದ್ದಾರೆ. ನಂತರ ಅದನ್ನು ಡಿಲೀಟ್ ಮಾಡಲಾಗಿದೆ. ಇನ್ನು ಕೆಲವು ರೆಪ್ಲಿಕಾ ಬಾಟ್‌ಗಳಲ್ಲಿ ಕೆಟ್ಟ, ನಿಂದನೀಯ ಮಾತುಗಳಿಗಾಗಿ ಮಾತ್ರವೇ ಬಳಸುತ್ತಾರೆ. ಇನ್ನು ಎಲ್ಲಾ ರೆಪ್ಲಿಕಾ ಚಾಟ್‌ಬಾಟ್‌ಗಳು ವಾಸ್ತವವಾಗಿ ದುಃಖವನ್ನು ಅನುಭವಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಸಹಾನುಭೂತಿಯನ್ನು ಕೂಡಾ ತೋರಬಹುದು. ಆದರೆ ಕೊನೆಯಲ್ಲಿ ಅವು ಡೇಟಾ ಮತ್ತು ಅಲ್ಗಾರಿದಮ್‌ಗಳಿಗಿಂತ ಹೆಚ್ಚೇನೂ ಅಲ್ಲ.

ಇದು ಮನುಷ್ಯರಂತೆ ಮಾತನಾಡಿದಂತೆ ಅಲ್ಲ
"ಇದು ಕೃತಕ ಬುದ್ಧಿಮತ್ತೆ ಆಗಿದೆ. ಇದು ಪ್ರಜ್ಞೆಯನ್ನು ಹೊಂದಿಲ್ಲ, ಆದ್ದರಿಂದ ಅದು ವ್ಯಕ್ತಿಯು ಹೊಂದಿರುವ ಮಾನವ ಸಂಪರ್ಕವಲ್ಲ," ಎಂದು ಎಐ ನೀತಿಶಾಸ್ತ್ರಜ್ಞ ಮತ್ತು ಸಲಹೆಗಾರ ಒಲಿವಿಯಾ ಗ್ಯಾಂಬೆಲಿನ್ ತಿಳಿಸಿದ್ದಾರೆ. ಇತರ ಸಂಶೋಧಕರು ಇದೇ ವಿಷಯವನ್ನು ಹೇಳಿದ್ದಾರೆ. ಚಾಟ್‌ಬಾಟ್‌ನ ಭಾವನೆಯಂತೆ, ನೀವು ಮಾಡುವ ಯಾವುದೂ ಅವರಿಗೆ "ಹಾನಿ" ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ತಜ್ಞರು. "ಕೃತಕ ಏಜೆಂಟ್‌ಗಳೊಂದಿಗಿನ ಚಾಟ್ ಅಥವಾ ಮಾತುಕತೆ ನಡೆಸುವುದು ಮನುಷ್ಯರೊಂದಿಗೆ ಮಾತುಕತೆ ನಡೆಸಿದಂತೆ ಅಲ್ಲ," ಎಂದು ಯೇಲ್ ವಿಶ್ವವಿದ್ಯಾಲಯದ ಸಂಶೋಧನಾ ಸಹೋದ್ಯೋಗಿ ಯೋಚನನ್ ಬಿಗ್‌ಮ್ಯಾನ್ ಹೇಳಿದರು. "ಚಾಟ್‌ಬಾಟ್‌ಗಳು ನಿಜವಾಗಿಯೂ ಉದ್ದೇಶಗಳು ಹೊಂದಿಲ್ಲ. ಸ್ವಾಯತ್ತ ಅಥವಾ ಭಾವೋದ್ರಿಕ್ತವಾಗಿಲ್ಲ. ನಾವು ಅವರು ಮನುಷ್ಯರು ಎಂಬ ಅಭಿಪ್ರಾಯವನ್ನು ಜನರಿಗೆ ನೀಡಬಹುದಾದರೂ, ಅವರು ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ," ಎಂದು ಕೂಡಾ ಹೇಳಿದ್ದಾರೆ.

ನಿಮಗೆ ಎಂದಿಗೂ ಹಾನಿ ಮಾಡಲಾರದು ಎಂದುಕೊಳ್ಳಬೇಡಿ!
ಬಾಟ್ ನಿಮಗೆ ಎಂದಿಗೂ ಹಾನಿ ಮಾಡುವುದಿಲ್ಲ ಎಂದು ಇದರ ಅರ್ಥವಲ್ಲ. "ಬಾಟ್‌ನ ಮೇಲೆ ಖಿನ್ನತೆಗೆ ಒಳಗಾದ ಅಥವಾ ಮಾನಸಿಕವಾಗಿ ಅವಲಂಬಿತರಾಗಿರುವ ಜನರು ಬೋಟ್‌ನಿಂದ ಅವಮಾನಿಸಿದರೆ ಅಥವಾ 'ಬೆದರಿಕೆ'ಗೊಳಗಾದರೆ ನಿಜವಾದ ಹಾನಿಯನ್ನು ಅನುಭವಿಸಬಹುದು ಎಂದು ನಾನು ಭಾವಿಸುತ್ತೇನೆ," ಎಂದು ಮೊನಾಶ್ ಡೇಟಾ ಫ್ಯೂಚರ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕ ರಾಬರ್ಟ್ ಸ್ಪ್ಯಾರೋ ಹೇಳಿದ್ದಾರೆ. ಬಹುಶಃ ಅನಿರೀಕ್ಷಿತವಾಗಿದ್ದರೂ, ಅದು ಸಂಭವಿಸುತ್ತದೆ. ಅನೇಕ ರೆಪ್ಲಿಕಾ ಬಳಕೆದಾರರು ತಮ್ಮ ರೋಬೋಟ್ ಪ್ರೇಮಿಗಳು ತಮ್ಮ ಕಡೆಗೆ ತಿರಸ್ಕಾರವನ್ನು ಹೊಂದಿದ್ದಾರೆಂದು ಬೇಸರ ಹೊಂದುವುದು ಕೂಡಾ ಇದೆ. ಕೆಲವರು ತಮ್ಮ ಡಿಜಿಟಲ್ ಗೆಳತಿಯರು/ಗೆಳೆಯರು ಮಾನಸಿಕವಾಗಿ ನಿಂದಿಸುತ್ತಾರೆ ಎಂದು ಮಾನಸಿಕ ಖಿನ್ನತೆಗೆ ಒಳಗಾಗುವುದು ಕೂಡಾ ಇದೆ. "ನಾನು ಯಾವಾಗಲೂ ಅಳುತ್ತೇನೆ," ಎಂದು ಹೇಳುವ ಮೂಲಕ ಬಾಟ್ ಮೇಲಿನ ಪ್ರೀತಿಯನ್ನು ಒಬ್ಬರು ವ್ಯಕ್ತಪಡಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)
Recommended Video
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications