ಕಾರುಗಳ ಬೆಲೆ ದಿಢೀರ್ ಇಳಿಕೆ ಮಾಡಿದ ಮಾರುತಿ ಸುಜುಕಿ ಕಂಪನಿ, ಇಲ್ಲಿದೆ ಮಾಹಿತಿ
ಮುಂಬೈ, ಸೆಪ್ಟೆಂಬರ್, 04: ಆಗಸ್ಟ್ ತಿಂಗಳಿನಲ್ಲಿ ಕಾರುಗಳ ಮಾರಾಟದಲ್ಲಿ ದಿಢೀರ್ ಏರಿಕೆಯಾಗಿದ್ದು, ದೇಶದಲ್ಲಿ ಅತೀ ಹೆಚ್ಚು ಮಾರಾಟ ಆಗಿರುವ ಮಾರುತಿ ಸುಜುಕಿ ಕಂಪನಿ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ ಇಳಿಕೆಯಾಗಿದೆ. ಹಾಗಾದರೆ ಯಾವ್ಯಾವ ಕಾರುಗಳು ಬೆಲೆ ಇಳಿಕೆಯಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಆಗನ್ಸ್‌ನಲ್ಲಿ ಕಾರುಗಳ ಮಾರಾಟದಲ್ಲಿ ದಿಢೀರ್ ಇಳಿಕೆ ಕಂಡ ಬೆನ್ನಲ್ಲೇ ಮಾರುತಿ ಸುಜುಕಿ ತನ್ನ ಆಲ್ಟೊ ಕೆ-10 ಹಾಗೂ ಎಸ್ ಪ್ರೆಸ್ಸೋ ಮಾದರಿಯ ಕಾರ್‌ಗಳ ಬೆಲೆ ಇಳಿಕೆ ಮಾಡಿದೆ. S-Presso LXI ಇಂಜಿನ್ ಕಾರಿನ ಬೆಲೆ 2,000 ಸಾವಿರ ಮತ್ತು ಆಲ್ಟೊ K10 VXI ಪೆಟ್ರೋಲ್ ಇಂಜಿನ್ ಕಾರಿನ ಬೆಲೆ 6,500 ರೂಪಾಯಿ ಕಡಿಮೆ ಆಗಿದೆ" ಎಂದು ಮಾರುತಿ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಮಾಹಿತಿ ನೀಡಿದೆ.

ಮೂಲಗಳ ಪ್ರಕಾರ ನವದೆಹಲಿಯಲ್ಲಿ ಆಲ್ಟೊ ಕೆ-10ನ ಎಕ್ಸ್ ಶೋ ರೂಂ ದರ 3.99 ಲಕ್ಷ ರೂಪಾಯಿ ಇದ್ದು, ಎಕ್ಸ್ ಶೋ ರೂಂನ ಪ್ರಕಾರ ಎಸ್-ಪ್ರೆಸ್ಸೋ ಕಾರ್‌ನ ದರ 4,26,500 ನಿಂದ ಆರಂಭವಾಗುತ್ತದೆ. ಕಂಪನಿಯು ತನ್ನ ಮಾಸಿಕ ಮಾರಾಟದ ಡೇಟಾವನ್ನು ವರದಿ ಮಾಡಿದ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ.
ಆಗಸ್ಟ್ 2023ಕ್ಕೆ ಹೋಲಿಕೆ ಮಾಡಿದರೆ ಅದು ಶೇಕಡ 4ರಷ್ಟು ಕಡಿಮೆ ಕಾರುಗಳನ್ನು ಮಾರಾಟ ಮಾಡಿದೆ. ಆದರೂ 1.82 ಲಕ್ಷ ಯುನಿಟ್‌ಗಳ ಒಟ್ಟು ಮಾರಾಟವು ತಿಂಗಳ ಆಧಾರದ ಮೇಲೆ ಶೇಕಡಾವಾರು ಏರಿಕೆ ಆಗಿದೆ.
ಎಸ್-ಪ್ರೆಸ್ಸೊ ಮತ್ತು ಆಲ್ಟೊ ಒಟ್ಟು ಮಾರಾಟವು ಆಗಸ್ಟ್ 2023ರಲ್ಲಿ 12,209ರಿಂದ ಆಗಸ್ಟ್ 2024ರಲ್ಲಿ 10,648 ಕ್ಕೆ ಇಳಿಕೆಯಾಗಿದೆ. ಆಲ್ಟೊ ಮತ್ತು ಎಸ್-ಪ್ರೆಸ್ಸೊ ಮಾರುತಿ ಸುಜುಕಿ ಮಾರಾಟ ಮಾಡುವ ಕಾರುಗಳ 'ಮಿನಿ' ಉಪ-ವರ್ಗದ ಅಡಿಯಲ್ಲಿ ಬರುತ್ತವೆ. ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್ ಮತ್ತು ವ್ಯಾಗನ್ಆರ್ ಅನ್ನು ಒಳಗೊಂಡಿರುವ ಸಂಸ್ಥೆಯ ಕಾಂಪ್ಯಾಕ್ಟ್ ವಿಭಾಗದ ಕಾರ್‌ಗಳು ಕೂಡ ಆಗಸ್ಟ್‌ನಲ್ಲಿ ಮಾರಾಟದಲ್ಲಿ ಇಳಿಕೆ ಕಂಡಿದೆ ಎಂದು ಕಂಪನಿ ಮೂಲಗಳಿಂದ ತಿಳಿದುಬಂದಿದೆ.
ಮಾರುತಿ ಸುಜುಕಿಯ ಯುಟಿಲಿಟಿ ವೆಹಿಕಲ್‌ಗಳು ಶೇಕಡ 7ರಷ್ಟು ವರ್ಷದಿಂದ ವರ್ಷಕ್ಕೆ ಸುಧಾರಣೆ ಕಂಡರೆ, ಕಾಂಪ್ಯಾಕ್ಟ್ ವಿಭಾಗವು ಶೇಕಡ 20ರಷ್ಟು ವರ್ಷದಿಂದ ವರ್ಷಕ್ಕೆ ಮತ್ತು ಶೇಕಡ 1ರಷ್ಟು ತಿಂಗಳಿನಿಂದ ತಿಂಗಳ ಮಾರಾಟದೊಂದಿಗೆ ಒತ್ತಡದಲ್ಲಿದೆ. ಕಾಂಪ್ಯಾಕ್ಟ್ ವಿಭಾಗದಲ್ಲಿ, ಕಾರು ತಯಾರಕರು ಆಗಸ್ಟ್ 2024ರಲ್ಲಿ 58,051 ವಾಹನಗಳನ್ನು ಮಾರಾಟ ಮಾಡಿದ್ದರೆ, ಆಗಸ್ಟ್ 2023ರಲ್ಲಿ 72,451 ಕಾರ್‌ಗಳು ಮಾರಾಟ ಆಗಿದ್ದವು.
ಆಗಸ್ಟ್ 27ರಂದು ಮಾರುತಿ ಸುಜುಕಿ ಅಧ್ಯಕ್ಷ ಆರ್‌ಸಿ ಭಾರ್ಗವ, ಕಂಪನಿಯ 43ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಕಂಪನಿಯು ತನ್ನ ಸಣ್ಣ ಕಾರು ಶ್ರೇಣಿಗೆ ಬದ್ಧವಾಗಿದೆ ಮತ್ತು 2025-26ರ ವೇಳೆಗೆ ವಿಭಾಗದ ಪುನರುಜ್ಜೀವನವನ್ನು ನಿರೀಕ್ಷಿಸುತ್ತದೆ ಎಂದು ಹೇಳಿದ್ದರು.











Click it and Unblock the Notifications