Get Updates
Get notified of breaking news, exclusive insights, and must-see stories!

Manipur Zee News-DesignBoxed Exit Poll 2022: ಬಿಜೆಪಿ ಜಯಭೇರಿ

ಕೊರೊನಾ ಸಾಂಕ್ರಾಮಿಕದ ನಡುವೆ ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಪ್ರಕ್ರಿಯೆ ಮಾರ್ಚ್ 7ರಂದು ಮುಕ್ತಾಯ ಕಂಡಿದೆ. ಐದು ರಾಜ್ಯಗಳ ಪೈಕಿ ಮಣಿಪುರದ 60 ವಿಧಾನಸಭೆ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಸಲಾಯಿತು. ಮೊದಲ ಹಂತದಲ್ಲಿ ಶೇ 78.03ರಷ್ಟು ಶೇಕಡಾವಾರು ಮತದಾನ ಹಾಗೂ ಎರಡನೇ ಹಂತದಲ್ಲಿ 78.03ರಷ್ಟು ಶೇಕಡಾವಾರು ಮತದಾನ ದಾಖಲಾಗಿದೆ. ಮಾರ್ಚ್ 7ರಂದು ಸಂಜೆ ವೇಳೆ ಅನೇಕ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಟಿಸುತ್ತಿವೆ. ಇಲ್ಲಿ ಜೀ ನ್ಯೂಸ್ ಡಿಸೈನ್ ಬಾಕ್ಸ್ಡ್ (DesignBoxed )ಸಂಸ್ಥೆ ನೀಡಿರುವ ವರದಿ ವಿವರವಿದೆ. ಸಮೀಕ್ಷೆ ಫಲಿತಾಂಶದಂತೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದ್ದು, ಮತ್ತೆ ಜಯಭೇರಿ ಬಾರಿಸಲಿದೆ.

ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಸಲಾಗಿದೆ. ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಮತದಾನ ನಡೆಸಲಾಗಿದೆ.

ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

2017 ರಲ್ಲಿ ಮಣಿಪುರದಲ್ಲಿ

2017 ರಲ್ಲಿ ಮಣಿಪುರದಲ್ಲಿ

2017 ರಲ್ಲಿ ಮಣಿಪುರದಲ್ಲಿ 60 ಸ್ಥಾನ(31 ಮ್ಯಾಜಿಕ್ ನಂಬರ್) ಗಳ ಪೈಕಿ ಬಿಜೆಪಿಯು ಒಟ್ಟು 21 ವಿಧಾನಸಭೆ ಸ್ಥಾನಗಳೊಂದಿಗೆ ಸರ್ಕಾರವನ್ನು ನಡೆಸುತ್ತಿದೆ. ಈಗ 40 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಗುರಿಯನ್ನು ಮಣಿಪುರ ಬಿಜೆಪಿಯು ಹೊಂದಿದೆ. ಕಳೆದ ಚುನಾವಣೆಯಲ್ಲಿ 28 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದರೂ ಕೂಡ ಬಿಜೆಪಿ ಎನ್‌ಪಿಪಿ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚನೆ ಮಾಡಿದೆ. ಪ್ರಸ್ತುತ ಮಣಿಪುರ ಸರ್ಕಾರದ ಅವಧಿಯು ಮಾರ್ಚ್ 20, 2017 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 19, 2022 ರಂದು ಕೊನೆಗೊಳ್ಳಲಿದೆ.

ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ

ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ

ಪಕ್ಷ- ಸ್ಥಾನಗಳು
ಬಿಜೆಪಿ: 32-38
ಕಾಂಗ್ರೆಸ್: 12-17
ಎನ್‌ಪಿಪಿ: 2-4
ಎನ್‌ಪಿಎಫ್: 2-5
ಇತರೆ: 0

60 ಸ್ಥಾನಗಳ ಪೈಕಿ ಬಿಜೆಪಿಗೆ ಹೆಚ್ಚು ಸ್ಥಾನ ಸುಮಾರು 32 ರಿಂದ 38 ದಾಟಲಿದೆ. ಈ ಮೂಲಕ ಮತ್ತೊಮ್ಮೆ ಅಧಿಕಾರ ಗದ್ದುಗೇರಲಿದೆ. ಮ್ಯಾಜಿಕ್ ನಂಬರ್ 31 ಸುಲಭವಾಗಿ ದಾಟಲಿದ್ದು, ಇತರೆ ಪಕ್ಷಗಳ ನೆರವು ಅನಗತ್ಯ ಎಂದು ಸಮೀಕ್ಷೆ ಹೇಳಿದೆ.

Manipur K News India Exit Poll 2022: ಬಿಜೆಪಿ ಮತ್ತೆ ಅಧಿಕಾರ
ಪಕ್ಷ- 2022 % ಫಲಿತಾಂಶ

ಪಕ್ಷ- 2022 % ಫಲಿತಾಂಶ

ಪಕ್ಷ- 2022 % ಫಲಿತಾಂಶ (2017 %ಫಲಿತಾಂಶ) (+/- 5% margin of error)

ಬಿಜೆಪಿ: 39% (2017ರಲ್ಲಿ36.3%)
ಕಾಂಗ್ರೆಸ್: 30% (35.5%)
ಎನ್‌ಪಿಪಿ: 06% (5.1%)
ಎನ್‌ಪಿಎಫ್: 9%
ಇತರೆ: 16% (-)
+++
ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಸೂಕ್ತ?
ಎನ್ ಬಿರೇನ್ ಸಿಂಗ್: 36%
ಓಕ್ರಾಮ್ ಐಬೋಬಿ: 17%
ಯುಮ್ನಾಮ್ ಜೋಯ್ ಕುಮಾರ್ ಸಿಂಗ್: 11%
ಗಯಿಖೆಂಗಾಮ್: 10%
ಇತರೆ: 5%

ಚುನಾವಣಾಪೂರ್ವ ಸಮೀಕ್ಷೆಗಳು

ಚುನಾವಣಾಪೂರ್ವ ಸಮೀಕ್ಷೆಗಳು

Zee News-DesignBoxed ಪ್ರಕಾರ, ಬಿಜೆಪಿ 33-37 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 13-17 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ, NPF 4-6 ಸ್ಥಾನಗಳನ್ನು ಮತ್ತು NPP ಕೇವಲ 2-4 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಲಾಗಿತ್ತು.

**
ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಪ್ರಕಾರ ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಪ್ರಕಾರ, ಬಿಜೆಪಿಗೆ 31 ರಿಂದ 37 ಸ್ಥಾನಗಳು ಸಿಗುತ್ತವೆ. ಆಡಳಿತ ಪಕ್ಷಕ್ಕೆ ಕಠಿಣ ಪೈಪೋಟಿ ನೀಡದ ಕಾಂಗ್ರೆಸ್ 13-19 ಸ್ಥಾನಗಳನ್ನು ಪಡೆಯಬಹುದು. ಇದರ ಹೊರತಾಗಿ ಎನ್‌ಪಿಪಿ ಪಕ್ಷವು 3 ರಿಂದ 9 ಸ್ಥಾನ, ಎನ್‌ಪಿಎಫ್ ಪಕ್ಷವು 1 ರಿಂದ 5 ಸ್ಥಾನ, ಇತರರು 0 ರಿಂದ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಮಣಿಪುರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.

***
ಮಣಿಪುರ ಚುನಾವಣೆಯಲ್ಲಿ ಶೇ.33 ರಷ್ಟು ಮತಗಳನ್ನು ಪಡೆಯುವ ಮೂಲಕ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿ ಅಭ್ಯರ್ಥಿಗೆ ಅತ್ಯಂತ ಜನಪ್ರಿಯ ಆಯ್ಕೆ ಎಂದು ಜನತೆ ಭವಿಷ್ಯ ನುಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಒಕ್ರಾಮ್ ಇಬೋಬಿ ಸಿಂಗ್ ಅವರು ಶೇ 19 ರಷ್ಟು ಮತಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದಿದ್ದರೆ, ಮತ್ತೊಬ್ಬ ಕಾಂಗ್ರೆಸ್ ನಾಯಕ ಎನ್ ಲೋಕೇನ್ ಸಿಂಗ್ ಅವರು ಶೇ 12 ರೊಂದಿಗೆ ಮೂರನೇ ಆಯ್ಕೆಯಾಗಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+