ಮಲಾಲಾ ದಿನ 2022: ಇತಿಹಾಸ, ಮಹತ್ವ, ಪಾಕಿಸ್ತಾನಿ ಕಾರ್ಯಕರ್ತೆ ಬಗ್ಗೆ ಸಂಗತಿಗಳು
ಪಾಕಿಸ್ತಾನದಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ ಕಾರ್ಯಕರ್ತೆ ಮಲಾಲಾ ಯೂಸುಫ್‌ಜಾಯ್‌ಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಜುಲೈ 12 ರಂದು ಅಂತರರಾಷ್ಟ್ರೀಯ ಮಲಾಲಾ ದಿನವನ್ನು ಆಚರಿಸಲಾಗುತ್ತದೆ. ಈಗ ಜಗತ್ತಿನಾದ್ಯಂತ ಮಹಿಳೆಯರ ಶಿಕ್ಷಣದ ಹಕ್ಕಿಗಾಗಿ ಕೆಲಸ ಮಾಡುತ್ತಿರುವ ಮಲಾಲಾಗೆ ಚಿಕ್ಕ ಹುಡುಗಿಯಾಗಿದ್ದಾಗ ಶಾಲೆಗೆ ಪ್ರವೇಶಿಸಲು ಅವಕಾಶವಿರಲಿಲ್ಲ. ಆದರೆ ಅನೇಕರಂತೆ ಮಲಾಲಾ ಅದನ್ನು ಒಪ್ಪಿಕೊಳ್ಳಲಿಲ್ಲ ಮತ್ತು ಮನೆಯಲ್ಲಿ ಇರಲು ನಿರಾಕರಿಸಿದರು. ತಮ್ಮೊಂದಿಗೆ ಯುವತಿಯರಿಗೆ ಶಿಕ್ಷಣವನ್ನು ಒದಗಿಸುವುದಕ್ಕಾಗಿ ಅವರು ತನ್ನ ಧ್ವನಿಯನ್ನು ಎತ್ತಿದರು. ಈ ಹೋರಾಟಕ್ಕಾಗಿ ಅವರ ಮೇಲೆ ಹಲವಾರು ಬಾರಿ ದಾಳಿ ಕೂಡ ಮಾಡಲಾಯಿತು. ಇದೆಲ್ಲವನ್ನು ಮೆಟ್ಟಿ ನಿಂತ ಮಲಾಲಾ ಅವರು ಇಂದಿಗೂ ಮಹಿಳಾ ಶಿಕ್ಷಣಕ್ಕಾಗಿ ಹೋರಾಡುತ್ತಾರೆ. ಇವರ ಧೈರ್ಯಕ್ಕೆ ಮೆಚ್ಚಿ ಹಲವಾರು ಪ್ರಶಸ್ತಿಗಳು ಇವರಿಗೆ ಅವರಿಗೆ ಸಂದಿವೆ.
ಪಾಕಿಸ್ತಾನಿ ಕಾರ್ಯಕರ್ತೆ ಮಲಾಲಾ 16 ವರ್ಷವಿದ್ದಾಗ ಜುಲೈ 12, 2013 ರಂದು ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಿರರ್ಗಳ ಭಾಷಣ ಮಾಡಿದರು. ಮಹಿಳಾ ಶಿಕ್ಷಣಕ್ಕೆ ವಿಶ್ವಾದ್ಯಂತ ಪ್ರವೇಶದ ಅಗತ್ಯವನ್ನು ಅವರು ಎತ್ತಿ ತೋರಿಸಿದರು ಮತ್ತು ತಮ್ಮ ನೀತಿಗಳನ್ನು ಸುಧಾರಿಸಲು ವಿಶ್ವ ನಾಯಕರನ್ನು ಕರೆದರು. ಹದಿಹರೆಯದವಳು ತನ್ನ ಗಮನಾರ್ಹ ಭಾಷಣಕ್ಕಾಗಿ ಹಲವಾರು ಸುತ್ತಿನ ಚಪ್ಪಾಳೆಗಳನ್ನು ಪಡೆದರು. ಜುಲೈ 12 ಆಕೆಯ ಜನ್ಮದಿನವನ್ನು ಸಹ ಗುರುತಿಸುತ್ತದೆ. ಆದ್ದರಿಂದ ಯುವ ಕಾರ್ಯಕರ್ತನನ್ನು ಗೌರವಿಸಲು ಈ ದಿನವನ್ನು 'ಮಲಾಲಾ ದಿನ' ಎಂದು ಆಚರಿಸಲಾಗುವುದು ಎಂದು ಯುಎನ್ ತಕ್ಷಣವೇ ಘೋಷಿಸಿತು.

ತಾಲಿಬಾನ್‌ನಿಂದ ಮಲಾಲಾ ಮೇಲೆ ದಾಳಿ
1997 ರಲ್ಲಿ ಪಾಕಿಸ್ತಾನದ ಮಿಂಗೋರಾದಲ್ಲಿ ಜನಿಸಿದ ಮಲಾಲಾ ಅವರು 2008 ರಿಂದ ಶಿಕ್ಷಣದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಲು ಪ್ರಾರಂಭಿಸಿದರು. ತಾಲಿಬಾನ್ ದಶಕಗಳಿಂದ ಮಹಿಳಾ ಶಿಕ್ಷಣದ ವಿರುದ್ಧವಾಗಿದೆ ಎಂಬ ಅಂಶವನ್ನು ಅವರು ಚೆನ್ನಾಗಿ ತಿಳಿದಿದ್ದರು. ಆದರೂ ತಾಲಿಬಾನ್ ಆಕ್ರಮಣದ ಸಮಯದಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದರು.
ಹೀಗಾಗಿ ಅವರು ಶೀಘ್ರದಲ್ಲೇ ಜಗತ್ತಿನಾದ್ಯಂತ ಮಾಧ್ಯಮಗಳಿಂದ ಸಾರ್ವಜನಿಕ ಗಮನ ಸೆಳೆದರು. ಪತ್ರಿಕೆಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಹಲವಾರು ಸಂದರ್ಶನಗಳನ್ನು ನೀಡಿದರು. ಅಕ್ಟೋಬರ್ 2012 ರಲ್ಲಿ ಮಲಾಲಾ ತಾಲಿಬಾನ್ ಬಂದೂಕುಧಾರಿಗಳಿಂದ ದಾಳಿಗೊಳಗಾದರು. ತಾಲಿಬಾನ್ ಆಕೆಯ ಬಸ್ ಅನ್ನು ಹೈಜಾಕ್ ಮಾಡಿತ್ತು ಮತ್ತು ಮಲಾಲಾ ತಲೆ ಮತ್ತು ಕುತ್ತಿಗೆಗೆ ಗುಂಡು ಹಾರಿಸಲಾಯಿತು. ಗುಂಡಿನ ದಾಳಿ ಬಳಿಕ ಗಂಭೀರವಾಗಿದ್ದ ಮಲಾಲಾ ಅವರನ್ನು ಪಾಕಿಸ್ತಾನದಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ, ಮತ್ತಷ್ಟು ಚೇತರಿಸಿಕೊಳ್ಳಲು ಯುನೈಟೆಡ್ ಕಿಂಗ್‌ಡಮ್‌ಗೆ ಕಳುಹಿಸಲಾಯಿತು. ಗುಂಡು ಹಾರಿಸಿದ ಒಂಬತ್ತು ತಿಂಗಳ ನಂತರ ಚೇತರಿಸಿಕೊಂಡ ಮಲಾಲಾ ತನ್ನ 16 ನೇ ಹುಟ್ಟುಹಬ್ಬದಂದು, ಉಗ್ರ ಹೋರಾಟದ ಹುಡುಗಿ ಯುಎನ್ ಪ್ರಧಾನ ಕಛೇರಿಯಲ್ಲಿ ಮತ್ತೆ ಮಹಿಳಾ ಶಿಕ್ಷಣದ ಕುರಿತು ಭಾಷಣ ಮಾಡಿದಳು.

ಅಸರ್ ಮಲಿಕ್ ಅವರನ್ನು ವರಿಸಿದ ಮಲಾಲಾ
ಅಸ್ಸರ್ ಮಲಿಕ್ ತನ್ನ ಶಾಲಾ ಶಿಕ್ಷಣವನ್ನು ಪಾಕಿಸ್ತಾನದ ಲಾಹೋರ್‌ನಲ್ಲಿರುವ ಅಚಿನ್ಸನ್ ಕಾಲೇಜಿನಲ್ಲಿ ಮಾಡಿದರು. ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್‌ನಿಂದ ಪದವಿ ಪಡೆದಿದ್ದಾರೆ. ಇತ್ತೀಚೆಗಷ್ಟೇ ಮಲಾಲಾ ಯೂಸುಫ್‌ಜಾಯ್ ಅವರು ವಾಣಿಜ್ಯೋದ್ಯಮಿ ಅಸರ್ ಮಲಿಕ್ ಅವರೊಂದಿಗಿನ ತಮ್ಮ ನಿಕ್ಕಾದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. "ಇಂದು ನನ್ನ ಜೀವನದಲ್ಲಿ ಒಂದು ಅಮೂಲ್ಯ ದಿನ. ಅಸ್ಸರ್ ಮತ್ತು ನಾನು ದಾಂಪತ್ಯ ಜೀವನದಲ್ಲಿ ಪಾಲುದಾರರಾಗಿದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ಬರ್ಮಿಂಗ್ಹ್ಯಾಮ್‌ನಲ್ಲಿ ಮನೆಯಲ್ಲಿ ಒಂದು ಸಣ್ಣ ನಿಕ್ಕಾ ಸಮಾರಂಭವನ್ನು ಆಚರಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳನ್ನು ನಮಗೆ ಕಳುಹಿಸಿ. ನಾವು ಮುಂದಿನ ಪಯಣದಲ್ಲಿ ಒಟ್ಟಾಗಿ ನಡೆಯಲು ಉತ್ಸುಕರಾಗಿದ್ದೇವೆ" ಎಂದು ಮಲಾಲಾ ಯೂಸುಫ್‌ಜೈ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮಕ್ಕಳ ನೋಬೆಲ್ ಪ್ರಶಸ್ತಿ
ಇವರಿಗೆ 2003ರಲ್ಲಿ ಮಲಾಲ ಸಖರೊವ್ ಪ್ರೈಜ್ ಫಾರ್ ಫ್ರೀಡಮ್ ಆಫ್ ಥಾಟ್(ಯೋಚನೆಯ ಸ್ವಾತಂತ್ರ್ಯಕ್ಕೆ ಸಖರೊವ್ ಪ್ರಶಸ್ತಿ) ದೊರಕಿತು. ಇವರಿಗೆ 2000 ನೇ ಇಸವಿಯಿಂದ ಮಕ್ಕಳ ನೋಬೆಲ್ ಪ್ರಶಸ್ತಿಯೆಂದೇ ಗುರುತಿಸಲ್ಪಡುವ ವಿಶ್ವಮಕ್ಕಳ ಪ್ರಶಸ್ತಿಯನ್ನು ನೀಡಲಾಗಿದೆ. ಒಟ್ಟಾರೆ 110 ವಿಶ್ವದ ರಾಷ್ಟ್ರಗಳ 70 ಸಾವಿರ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ. ಜೊತೆಗೆ ಇವರಿಗೆ ನೋಬೆಲ್ ಶಾಂತಿ ಪ್ರಶಸ್ತಿ ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿಯೊಂದಿಗೆ ನೀಡಲಾಗಿದೆ. ಮಾತ್ರವಲ್ಲದೇ ಈವರೆಗೆ ಮಲಾಲ ಅವರಿಗೆ ನ್ಯಾಷಿನಲ್ ಯೂತ್ ಪೀಸ್ ಪ್ರೈಜ್, ಮದರ್ ತೆರೇಸ ಗ್ಲೋಬಲ್ ಅವಾರ್ಡ್, ಇಂಟರ್ನ್ಯಾಷಿನಲ್ ಚಿಲ್ಡ್ರನ್ಸ್ ಪ್ರೈಜ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯಕರ್ತೆ, 24 ವರ್ಷದ ಮಲಾಲ ಯೂಸುಫ್ ಝಾಯಿ ಅವರು ಇತಿಹಾಸದಲ್ಲಿ ಅತ್ಯಂತ ಕಿರಿಯ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾಗಿದ್ದಾರೆ.

ಪೋಷಕರ ಜೊತೆ ಗ್ರೂಪ್ ಫೋಟೋ
ಮಲಾಲಾ ಅವರು ನಿಕ್ಕಾ ಸಮಾರಂಭದ ನಾಲ್ಕು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು ತಮ್ಮ ಪತಿ ಅಸ್ಸರ್ ಮತ್ತು ಅವರ ಪೋಷಕರು ಜಿಯಾವುದ್ದೀನ್ ಯೂಸುಫ್‌ಜಾಯ್ ಮತ್ತು ತೂರ್ ಪೆಕೈ ಯೂಸುಫ್‌ಜಾಯ್ ಅವರೊಂದಿಗೆ ಇರುವುದನ್ನು ಕಾಣಬಹುದು. ವೆಡ್ಡಿಂಗ್ ಡೇಗೆ ಮಲಾಲಾ ಚಿನ್ನದ ಕಸೂತಿಯಿಂದ ಅಲಂಕರಿಸಲ್ಪಟ್ಟ ಗುಲಾಬಿ ಬಣ್ಣದ ಉಡುಪನ್ನು ಧರಿಸಿದ್ದರು. ನಿಕ್ಕಾ ಚಿತ್ರಗಳನ್ನು ಆಕೆಯ ಸ್ನೇಹಿತ, ಛಾಯಾಗ್ರಾಹಕ ಮತ್ತು ದೃಶ್ಯ ಪತ್ರಕರ್ತರಾದ ಮಲಿನ್ ಫೆಜೆಹೈ ಅವರು ಸೆರೆಹಿಡಿದಿದ್ದಾರೆ.
Recommended Video
-
ಏಪ್ರಿಲ್ 1 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭ: 9ನೇ ತರಗತಿಯ ಪರಿಷ್ಕೃತ NCERT ಪಠ್ಯಪುಸ್ತಕ ವಿಳಂಬ, ಹೆಚ್ಚಾದ ಗೊಂದಲ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications