Get Updates
Get notified of breaking news, exclusive insights, and must-see stories!

Makar Sankranti 2023 : ಖಗೋಳ ಶಾಸ್ತ್ರ, ಧಾರ್ಮಿಕ ನಂಬಿಕೆ: ಮಕರ ಸಂಕ್ರಾಂತಿ ಯಾಕೆ ಮಹತ್ವವನ್ನು ಪಡೆದುಕೊಂಡಿದೆ..?

ಮಕರ ಸಂಕ್ರಾಂತಿಯು ಹಿಂದೂ ಸಂಪ್ರದಾಯದ ಮಹತ್ವದ ಹಬ್ಬವಾಗಿದೆ. ವರ್ಷದ ಮೊದಲ ಹಬ್ಬವಾಗಿರುವ ಇದು ಹೊಸ ವರ್ಷದೊಂದಿಗೆ ಜನರಿಗೆ ಹೊಸ ಖುಷಿ ಸಂತೋಷವನ್ನು ಹೊತ್ತು ತರುತ್ತದೆ ಎನ್ನುವುದು ಹಲವರ ನಂಬಿಕೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಭಾರತದಲ್ಲಿ ಸಂಕ್ರಾಂತಿ, ಲೋಹ್ರಿ, ಪೊಂಗಲ್ ಮತ್ತು ಬಿಷು ಮುಂತಾದ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಚಳಿಗಾಲದಲ್ಲಿ ಬರುವ ಈ ಹಬ್ಬ ಸುಗ್ಗಿಯ ಖುಷಿಯನ್ನು ಕೊಡುತ್ತದೆ. ಈ ಬಾರಿ ಜನವರಿ 15ರಂದು ಮಕರ ಸಂಕ್ರಮಣ ನಡೆಯಲಿದೆ.

ಮಕರ ಸಂಕ್ರಾಂತಿಯ ಪುರಾಣದ ಉಲ್ಲೇಖವೇನು..?

ಮಕರ ಸಂಕ್ರಾಂತಿಯ ಪುರಾಣದ ಉಲ್ಲೇಖವೇನು..?

ಧಾರ್ಮಿಕ ನಂಬಿಕೆ ಜೊತೆಗೆ ಖಗೋಳ ಶಾಸ್ತ್ರದ ಪ್ರಕಾರವೂ ಮಕರ ಸಂಕ್ರಾಂತಿ ವಿಶೇಷವಾಗಿದೆ. ಈ ವೇಳೆ ಸಂಭವಿಸುವ ಗ್ರಹ ಗತಿಗಳ ಚಲನೆ ಎಲ್ಲರ ಜೀವನದಲ್ಲಿ ಮಂಗಳವನ್ನೇ ತರುತ್ತದೆ ಎನ್ನುವುದು ಜನರ ನಂಬಿಕೆಯಾಗಿದೆ. ಸೂರ್ಯನು ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಈ ದಿನ ಶ್ರೀರಾಮ ರಾವಣನನ್ನು ಸಂಹರಿಸಿ ಸೀತೆಯನ್ನು ತಂದ ದಿನವೆಂದು ಹೇಳುತ್ತಾರೆ. ಅಲ್ಲದೆ ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಈ ದಿನ ತಮ್ಮ-ತಮ್ಮ ಮನೆಯಂಗಳಕ್ಕೆ ಬರುತ್ತಾರೆಂದು ಹೇಳಲಾಗುತ್ತದೆ.

ಸಂಕ್ರಾಂತಿಯಂದು ರೈತರು ಸೂರ್ಯನನ್ನು ಪ್ರಾರ್ಥಿಸುವುದೇಕೆ..?

ಸಂಕ್ರಾಂತಿಯಂದು ರೈತರು ಸೂರ್ಯನನ್ನು ಪ್ರಾರ್ಥಿಸುವುದೇಕೆ..?

ಎಲ್ಲಾ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಸಂಕ್ರಾಂತಿಯನ್ನು ಸಂಭ್ರಮದಿಂದ ಮಕರ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಖಗೋಳ ಶಾಸ್ತ್ರದ ಪ್ರಕಾರ 6 ತಿಂಗಳ ಕಾಲ ಸೂರ್ಯನು ಉತ್ತರದ ಕಡೆಗೆ ಚಲಿಸುವ ಸಮಯ ಇದಾಗಿರುವುದರಿಂದ ಈ ಹಬ್ಬದಲ್ಲಿ ಸೂರ್ಯನು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತಾನೆ. ಸೂರ್ಯನನ್ನು ಕಣ್ಣಿಗೆ ಕಾಣುವ ದೇವರು ಎಂದು ಪರಿಗಣಿಸುವ ರೈತರು ಸಂಕ್ರಾಂತಿಯ ದಿನದಂದು ಸೂರ್ಯ ದೇವನಿಗೆ ನಮಸ್ಕರಿಸಿ ಉತ್ತಮ ಬೆಳೆ ಫಲಕ್ಕಾಗಿ ಪ್ರಾರ್ಥಿಸುತ್ತಾರೆ. ಸಂಕ್ರಾಂತಿ ಹಬ್ಬದಂದು ಮನೆಯನ್ನು ಸಿಂಗರಿಸಿ ಬಾಗಿಲಿಗೆ ತೋರಣ ಕಟ್ಟಿ ಹೊಸ ಬಟ್ಟೆ ಧರಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಸಂಕ್ರಾಂತಿ ಹಬ್ಬದಂದು ಎಳ್ಳುಬೆಲ್ಲವನ್ನು ಏಕೆ ನೀಡಬೇಕು..?

ಸಂಕ್ರಾಂತಿ ಹಬ್ಬದಂದು ಎಳ್ಳುಬೆಲ್ಲವನ್ನು ಏಕೆ ನೀಡಬೇಕು..?

ಇನ್ನು ಸಂಕ್ರಾಂತಿಯ ದಿನ ಮುಖ್ಯವಾಗಿ ಎಳ್ಳು ಬೆಲ್ಲವನ್ನು ಎಲ್ಲರಿಗೂ ಹಂಚಲಾಗುತ್ತದೆ. ಚಳಿಗಾಲದ ಸಮಯದಲ್ಲಿ ಎಳ್ಳು ಮತ್ತು ಬೆಲ್ಲ ಎರಡು ಪದಾರ್ಥಗಳಲ್ಲಿ ಪೌಷ್ಟಿಕಾಂಶ ಸಮೃದ್ಧವಾಗಿದ್ದು ದೇಹಕ್ಕೆ ಉಷ್ಣತೆಯನ್ನು ನೀಡುತ್ತವೆ. ಕೆಲವರು ಈ ಸಮಯದಲ್ಲಿ ಕಿಚಿಡಿ (ಅನ್ನ ಮತ್ತು ಬೇಳೆಕಾಳುಗಳಿಂದ ಮಾಡುವ ಪದಾರ್ಥವನ್ನು ಸೇವಿಸುತ್ತಾರೆ. ಜೊತೆಗೆ ಹಬ್ಬದೂಟವನ್ನು ಸಹ ಮಾಡಲಾಗುತ್ತದೆ. ಇನ್ನು ಎಳ್ಳಿನ ಸಿಹಿತಿಂಡಿಗಳನ್ನು ದಾನ ಮಾಡುವುದರಿಂದ ಅದೃಷ್ಟ ಬರುತ್ತದೆ ಎಂದು ಜನ ನಂಬುತ್ತಾರೆ. ಇನ್ನು ಸಂಕ್ರಾಂತಿ ಹಬ್ಬದಂದು ಎಳ್ಳಿನ ಲಡ್ಡು, ಸಿಹಿ ಪೊಂಗಲ್ ಮತ್ತು ವಡಾ ಪುಳಿಯೋಗರೆ ಅನ್ನ ಮತ್ತು ಪಾಯಸ ಮುಂತಾದ ವಿವಿಧ ಆಹಾರಗಳನ್ನು ತಯಾರಿಸಲಾಗುತ್ತದೆ. ಇನ್ನು ಎಳ್ಳು ಬೆಲ್ಲದ ಜೊತೆ ಕೊಬ್ಬರಿ, ಸಕ್ಕರೆ ಅಚ್ಚು, ಹುರಿಗಡಲೆ ಸೇರಿದಂತೆ ಇತರ ಸಿಹಿ ಪದಾರ್ಥಗಳನ್ನು ಸಹ ಸೇರಿಸಲಾಗುತ್ತದೆ.

ರೈತರ ಖುಷಿಗೆ ಸಾಕ್ಷಿಯಾಗುವ ಮಕರ ಸಂಕ್ರಾಂತಿ

ರೈತರ ಖುಷಿಗೆ ಸಾಕ್ಷಿಯಾಗುವ ಮಕರ ಸಂಕ್ರಾಂತಿ

ಇನ್ನು ಮಕರ ಸಂಕ್ರಾಂತಿಯ ದಿನ ಅನೇಕ ಆಚರಣೆಗಳನ್ನು ಮಾಡಲಾಗುತ್ತದೆ. ದೇಶದ ಕೆಲವು ಭಾಗಳಲ್ಲಿ ಮಕರ ಸಂಕ್ರಾಂತಿ ದಿನದಂದು ಗಾಳಿಪಟ ಹಾರಿಸಲಾಗುತ್ತದೆ. ಇಂದಿಗೂ ಈ ಆಚರಣೆ ನಡೆಯುತ್ತಿದ್ದು, ಎಲ್ಲಾ ವಯಸ್ಸಿನವರು ಈ ಆಚರಣೆಯಲ್ಲಿ ಭಾಗಿಯಾಗುತ್ತಾರೆ. ಈ ದಿನದಂದು ಹಲವು ಜಾತ್ರೆಗಳ ಉತ್ಸವ ನಡೆಯುತ್ತದೆ. ಈ ವೇಳೆ ಸಾಂಪ್ರದಾಯಕ ಕ್ರೀಡೆಗಳಾದ ಕುಸ್ತಿ, ರಂಗೋಲಿ, ಹಾಡು, ನೃತ್ಯ ಸೇರಿದಂತೆ ಇತರ ಸ್ಫರ್ಧೆಗಳನ್ನು ಆಯೋಜನೆ ಮಾಡಲಾಗುತ್ತೆ. ಇನ್ನು ಕರ್ನಾಟಕದ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಕಿಚ್ಚು ಹಾಯಿಸೋದು ಎನ್ನುವು ವಿಶೇಷ ಪದ್ಧತಿಯನ್ನು ಅನುಸರಿಸಲಾಗುತ್ತದೆ. ರೈತರು ತಮ್ಮ ಜಾನುವಾರುಗಳಿಗೆ ಅಲಂಕರಿಸಿ ಬೆಂಕಿಯ ಮೇಲೆ ಹಾಯಿಸುತ್ತಾರೆ. ಇದರಿಂದ ಜಾನುವಾರಗಳಿಗೆ ತಗಲುವ ರೋಗಗಳು ದೂರಾಗುತ್ತದೆ ಎನ್ನುವುದು ಜನರ ನಂಬಿಕೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+