ಮಹಾರಾಷ್ಟ್ರ ಚುನಾವಣೆ: Republic TV-ಜನ್ ಕಿ ಬಾತ್ ಎಕ್ಸಿ ಟ್ ಫೋಲ್

ಮುಂಬೈ, ಅಕ್ಟೋಬರ್ 21: ದೇಶದ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಅಕ್ಟೋಬರ್ 21ರಂದು ಮುಕ್ತಾಯಗೊಂಡಿದೆ. ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಳ್ಳುತ್ತಿದ್ದು, ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಜಯಸಿಗಲಿದೆ ಎಂದು ಬಹುತೇಕ ಸಮೀಕ್ಷೆ ಹೇಳಿವೆ.

ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಿತು. ಮತದಾನದ ಬಳಿಕ Republic TV-ಜನ್ ಕಿ ಬಾತ್ ಚುನಾವಣೋತ್ತರ ಸಮೀಕ್ಷೆ ನಡೆಸಿದವು. ಅ.21ರಂದು ಮಹಾರಾಷ್ಟ್ರದಲ್ಲಿ ಶೇ 55.45ರಷ್ಟು ಮತದಾನ ನಡೆದಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪಕ್ಷವನ್ನು ಪುನಃ ರಾಜ್ಯದಲ್ಲಿ ಅಧಿಕಾರಕ್ಕೆ ತರಲಿದ್ದಾರೆಯೇ? ಎಂದು ದೇಶವೇ ಕುತೂಹಲದಿಂದ ಕಾಯುತ್ತಿದೆ. ಚುನಾವಣಾ ಫಲಿತಾಂಶ ಅಕ್ಟೋಬರ್ 24ರಂದು ಪ್ರಕಟವಾಗಲಿದೆ.

Maharashtra assembly elections 2019: Republic TV - Jan ki Baat Exit Poll Results

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳ ನಡುವೆ ನಾಳೆ ಎರಡು ಲೋಕಸಭಾ ಕ್ಷೇತ್ರಗಳು ಮತ್ತು 51 ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಸಲಾಗಿದೆ. ಬಿಹಾರದ ಸಮಷ್ಟಿಪುರ್ ಮತ್ತು ಮಹಾರಾಷ್ಟ್ರದ ಸತಾರಾ ಲೋಕಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲಾಗಿದೆ.

ಉತ್ತರ ಪ್ರದೇಶ-11, ಗುಜರಾತ್-6, ಕೇರಳ ಮತ್ತು ಬಿಹಾರ್ ತಲಾ 5, ಪಂಜಾಬ್ ಮತ್ತು ಅಸ್ಸಾಂ ತಲಾ 4, ಸಿಕ್ಕಿಂ 3, ತಮಿಳುನಾಡು, ರಾಜಸ್ತಾನ ಮತ್ತು ಆಂಧ್ರಪ್ರದೇಶ ತಲಾ 2 ಹಾಗೂ ಒಡಿಶಾ , ತೆಲಂಗಾಣ, ಮಧ್ಯಪ್ರದೇಶ , ಛತ್ತೀಸ್ ಗಢ, ಮೇಘಾಲಯ, ಪುದುಚೆರಿ ಮತ್ತು ಅರುಣಾಚಲ ಪ್ರದೇಶಗಳ ತಲಾ ಒಂದೊಂದು ಸ್ಥಾನಗಳ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21 ಚುನಾವಣೆ ನಡೆಸಲಾಗಿದೆ. ಅಕ್ಟೋಬರ್ 24ರಂದು ಅಂತಿಮ ಫಲಿತಾಂಶ ಬರಲಿದೆ.

ಮಹಾರಾಷ್ಟ್ರ 288 ಸ್ಥಾನಗಳು ರಿಪಬ್ಲಿಕ್ ಜನ್ ಕಿ ಬಾತ್ ಸಮೀಕ್ಷೆಯಂತೆ:

ಬಿಜೆಪಿ ಪ್ಲಸ್ 223

ಕಾಂಗ್ರೆಸ್ 54

ಇತರೆ 11


ಶೇಕಡಾವಾರು ಮತಗಳಿಕೆ
ಬಿಜೆಪಿ 33%
ಶಿವಸೇನಾ 24%
ಕಾಂಗ್ರೆಸ್ 11%
ಎನ್ಸಿಪಿ 15%
ಇತರೆ 16%


ಜನ್ ಕಿ ಬಾತ್ ಪಕ್ಷವಾರು ಸ್ಥಾನಗಳು:
ಬಿಜೆಪಿ: 135-142
ಕಾಂಗ್ರೆಸ್: 24-20
ಶಿವಸೇನಾ: 81-88
ಎನ್ಸಿಪಿ:35-30
ಇತರೆ:12-8

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+