ಮಹಾರಾಷ್ಟ್ರ ಚುನಾವಣೆ ಗೆಲುವು ಯಾರಿಗೆ?: ನ್ಯೂಸ್ ಎಕ್ಸ್ ಸಮೀಕ್ಷೆ
ಬಿಜೆಪಿಯ ಮೈತ್ರಿ ಪಕ್ಷವಾದ ಶಿವಸೇನೆಯು ಎರಡನೇಯ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಹೇಳುತ್ತಿದ್ದು, 44-50 ಸ್ಥಾನದಲ್ಲಿ ಶೀವಸೇನೆ ಗೆಲುವು ಸಾಧಿಸಲಿದೆ.
ಬೆಂಗಳೂರು, ಅಕ್ಟೋಬರ್ 21: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2019 ಗೆ ಇದೀಗಷ್ಟೆ ಮತದಾನ ಮುಕ್ತಾಯವಾಗಿದ್ದು ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿವೆ.
ಬಹುತೇಕ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್-ಎನ್‌ಸಿಪಿಗೆ ನಿರಾಸೆ ಆಗಲಿದೆ. ಆದರೆ ಗೆಲುವಿನ ಅಂತರ ಹಾಗೂ ಅಂಕಿ-ಅಂಶಗಳು ಕುತೂಹಲ ಮೂಡಿಸಿವೆ.

ನ್ಯೂಸ್ ಎಕ್ಸ್ ಮತ್ತು ಪೋಲ್‌ಸ್ಟಾರ್ ಜಂಟಿಯಾಗಿ ಮಾಡಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿಯು 144 ರಿಂದ 150 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.
ಬಿಜೆಪಿಯ ಮೈತ್ರಿ ಪಕ್ಷವಾದ ಶಿವಸೇನೆಯು ಎರಡನೇಯ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಹೇಳುತ್ತಿದ್ದು, 44-50 ಸ್ಥಾನದಲ್ಲಿ ಶೀವಸೇನೆ ಗೆಲುವು ಸಾಧಿಸಲಿದೆ.
ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮುಖಭಂಗವಾಗಲಿದ್ದು, 40-50 ಸ್ಥಾನಗಳಲ್ಲಿ ಮಾತ್ರವೇ ಗೆಲುವು ಸಾಧಿಸಲಿದೆ. ಶರದ್ ಪವಾರ್ ಅವರ ಎನ್‌ಸಿಪಿ ಪಕ್ಷವು 34-39 ಸ್ಥಾನಗಳಲ್ಲಿ ಮಾತ್ರವೇ ಗೆಲುವು ಸಾಧಿಸಲಿದೆ. ಪಕ್ಷೇತರರು ಮತ್ತು ಇತರೆ ಪಕ್ಷಗಳು ಒಟ್ಟಾಗಿ 6-10 ಸ್ಥಾನಗಳಲ್ಲಷ್ಟೆ ಗೆಲುವು ಸಾಧಿಸಲಿದೆ.
ಅಲ್ಲಿಗೆ ಶಿವಸೇನೆ-ಬಿಜೆಪಿ ಮೈತ್ರಿಯು, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಯನ್ನು ಭಾರಿ ಅಂತರದಿಂದ ಮಣಿಸಿ ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ.












Click it and Unblock the Notifications