• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Lunar Eclipse 2022: ಭಾರತದಲ್ಲಿ 2022ರ ಮೊದಲ ಚಂದ್ರಗ್ರಹಣ ಯಾವಾಗ?

|
Google Oneindia Kannada News

2022 ರ ಮೊದಲ ಚಂದ್ರ ಗ್ರಹಣ ನಡೆಯಲ್ಲಿ. 2022 ವರ್ಷದಲ್ಲಿ ಒಟ್ಟು ಎರಡು ಚಂದ್ರ ಗ್ರಹಣಗಳು ನಡೆಯಲಿದ್ದು, ಮೇ ತಿಂಗಳಲ್ಲಿ ಮೊದಲ ಚಂದ್ರ ಗ್ರಹಣ ನಡೆಯಲಿದೆ. ಹಿಂದೂ ಪಂಚಾಂಗದ ಪ್ರಕಾರ, ಇದು ಸೂರ್ಯಗ್ರಹಣ ಸಂಭವಿಸಿ 15 ದಿನಗಳ ನಂತರ ಸಂಭವಿಸಲಿದೆ. ಇದೀಗ 2022ರ ಮೊದಲ ಚಂದ್ರಗ್ರಹಣವ ಮೇ 16 ರಂದು ಸೂರ್ಯಗ್ರಹಣದ 15 ದಿನಗಳ ನಂತರ ಸಂಭವಿಸಲಿದೆ. ಚಂದ್ರಗ್ರಹಣ ಮೇ 16 ರಂದು ಬೆಳಗ್ಗೆ 07:02 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:20 ಕ್ಕೆ ಕೊನೆಗೊಳ್ಳಲಿದೆ. ಚಂದ್ರನು ಭೂಮಿಯ ನೆರಳಿನಲ್ಲಿ ಚಲಿಸುತ್ತಾನೆ. ಆದರೆ 2022 ರ ಚಂದ್ರಗ್ರಹಣವು ಭಾರತದಲ್ಲಿ ಕಾಣಿಸುವುದಿಲ್ಲ.

2022 ರಲ್ಲಿ ಚಂದ್ರ ಗ್ರಹಣಗಳು

ಚಂದ್ರನ ಮೇಲೆ ಭೂಮಿಯ ನೆರಳು ಬಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅಷ್ಟೇ ಅಲ್ಲ ಚಂದ್ರಗ್ರಹಣ ಯಾವಾಗಲೂ ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ. ಚಂದ್ರಗ್ರಹಣದ ಸಮಯದಲ್ಲಿ ಹಲವು ರೀತಿಯ ಕೆಲಸಗಳನ್ನು ನಿಷಿದ್ಧ ಎನ್ನಲಾಗಿದೆ.

*ಮೊದಲ ಚಂದ್ರಗ್ರಹಣ: ಮೇ 16, 2022

*ಎರಡನೇ ಚಂದ್ರಗ್ರಹಣ: ನವೆಂಬರ್ 8, 2022

ಚಂದ್ರಗ್ರಹಣ 2022 ರ ಸಮಯ

ಭಾರತದಲ್ಲಿ 2022 ರ ಮೊದಲ ಚಂದ್ರಗ್ರಹಣ ಸೋಮವಾರ, 16 ಮೇ 2022 ರಂದು ಬೆಳಗ್ಗೆ 08:59 ರಿಂದ 10:23 ರವರೆಗೆ ಇರಲಿದೆ. ಜ್ಯೋತಿಷ್ಯದ ಪ್ರಕಾರ, ಬೆಳಗಿನ ಅವಧಿಯಾದ ಕಾರಣ ಈ ಗ್ರಹಣ ಗೋಚರಿಸುವುದಿಲ್ಲ ಎನ್ನಲಾಗಿದೆ, ಆದ್ದರಿಂದ ಅದರ ಸೂತಕ ಅವಧಿ ಭಾರತದಲ್ಲಿ ಮಾನ್ಯವಾಗಿರುವುದಿಲ್ಲ ಎಂದು ಹಿಂದೂ ಪಂಚಾಂಗ ಹೇಳುತ್ತದೆ.

Lunar Eclipse 2022: When is first chandra grahan of 2022 in India? Check date, timings in kannada

ಭಾರತದಲ್ಲಿ ಚಂದ್ರಗ್ರಹಣ 2022 ಕಾಣಿಸುತ್ತಾ?

ಚಂದ್ರಗ್ರಹಣ 2022 ಭಾರತದಲ್ಲಿ ಗೋಚರಿಸುವುದಿಲ್ಲ. ಆದಾಗ್ಯೂ, ಇದು ಇಡೀ ದಕ್ಷಿಣ ಅಮೆರಿಕಾ ಮತ್ತು ಉತ್ತರ ಅಮೆರಿಕಾದ ಪೂರ್ವ ಭಾಗಗಳಲ್ಲಿ ಗೋಚರಿಸುತ್ತದೆ. ಮೇ 16 ರಂದು ಸಂಭವಿಸಲಿರುವ ಚಂದ್ರಗ್ರಹಣವು ನೈಋತ್ಯ ಯುರೋಪ್, ನೈಋತ್ಯ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕದ ಬಹುತೇಕ ಭಾಗಗಳು, ದಕ್ಷಿಣ ಅಮೆರಿಕಾ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ, ಅಟ್ಲಾಂಟಿಕ್ ಮತ್ತು ಅಂಟಾರ್ಟಿಕಾ ಮುಂತಾದ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಗೋಚರಿಸಲಿದೆ. ಭಾರತದಲ್ಲಿ ಚಂದ್ರಗ್ರಹಣದ ಅನುಪಸ್ಥಿತಿಯ ಕಾರಣ, ಅದರ ಸೂತಕ ಅವಧಿಯು ಪರಿಣಾಮಕಾರಿಯಾಗಿರುವುದಿಲ್ಲ ಎಂಬುದು ಜೋತಿಷ್ಯ ಪಂಡಿತರ ಅಭಿಪ್ರಾಯ. ಭಾರತದಲ್ಲಿ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ? ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುತ್ತಿಲ್ಲವಾದ್ದರಿಂದ ಅದರ ಸೂತಕ ಕಾಲಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ. ಇದಲ್ಲದೆ ಈ ಚಂದ್ರಗ್ರಹಣದ ಯಾವುದೇ ಶುಭ ಅಥವಾ ಅಶುಭ ಪರಿಣಾಮ ಭಾರತದಲ್ಲಿ ಇರುವುದಿಲ್ಲ.

English summary
On May 16, 2022, the first Lunar Eclipse or Chandra Grahan will take place. Check date, timings in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X