ಪೋಲ್‌ಸ್ಟಾರ್ಟ್ ಸಮೀಕ್ಷೆ: ಮೋದಿಯೇ ಮತ್ತೆ ಪ್ರಧಾನಿ
ನವದೆಹಲಿ, ಮೇ 19: ಪೋಲ್‌ಸ್ಟಾರ್, ಇಂಡಿಯಾ ನ್ಯೂಸ್, ನ್ಯೂಸ್ ಎಕ್ಸ್ ಜಂಟಿಯಾಗಿ ಮಾಡಿರುವ ಲೋಕಸಭೆ ಚುನಾವಣೆ 2019ರ ಮತದಾನೋತ್ತರ ಸಮೀಕ್ಷೆ ಪ್ರಕಾರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಪೋಲ್‌ಸ್ಟಾರ್, ಇಂಡಿಯಾ ನ್ಯೂಸ್, ನ್ಯೂಸ್ ಎಕ್ಸ್ ಸಮೀಕ್ಷೆ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ 298 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಕೇವಲ 118 ಸ್ಥಾನಗಳನ್ನು ಗೆಲ್ಲಲಿದೆ, ಇತರೆ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು 126 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.
542 ಸ್ಥಾನಗಳಿಗೆ ಈ ಬಾರಿ ಚುನಾವಣೆ ನಡೆದಿದ್ದು, ಸರ್ಕಾರ ರಚಿಸಲು 272 ಸ್ಥಾನಗಳ ಅವಶ್ಯಕತೆ ಇದೆ, ಪೋಲ್‌ಸ್ಟಾರ್, ಇಂಡಿಯಾ ನ್ಯೂಸ್, ನ್ಯೂಸ್ ಎಕ್ಸ್ ಸಮೀಕ್ಷೆ ಪ್ರಕಾರ ಎನ್‌ಡಿಎಗೆ ಸ್ಪಷ್ಟ ಬಹುಮತ ಸಿಗಲಿದ್ದು, ಮೋದಿ ಮತ್ತೆ ಪ್ರಧಾನಿ ಆಗುವ ಸಾಧ್ಯತೆ ಬಹುಮಟ್ಟಿಗೆ ಇದೆ ಎನ್ನುತ್ತಿದೆ ಸಮೀಕ್ಷೆ.

ಯುಪಿಎಯು ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದಲ್ಲಿ ಅಲ್ಪ ಸುಧಾರಣೆ ಕಂಡುಕೊಂಡಿದೆಯಾದರೂ ಗೆಲುವಿನ ಸನಿಹಕ್ಕೂ ಅದು ಬರುತ್ತಿಲ್ಲ, ನಿರೀಕ್ಷೆ ಹುಟ್ಟಿಸಿದ್ದ ಮಹಾಘಟಬಂಧನ್ ಸಹ ಅಷ್ಟೇನೂ ಕ್ಷೇತ್ರಗಳಲ್ಲಿ ಗೆಲ್ಲುವುದು ವಿಫಲವಾಗಿದೆ ಎಂದು ಸಮೀಕ್ಷೆ ಹೇಳುತ್ತಿದೆ.












Click it and Unblock the Notifications