ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಆಸ್ತಿ ವಿವರ

ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ಅವರು ಮತ್ತೊಮ್ಮೆ ಸಂಸತ್ ಗೆ ಪ್ರವೇಶ ಬಯಸಿ, ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಡಿಂಪಲ್ ಯಾದವ್ ಆಸ್ತಿ ವಿವರ ಇಲ್ಲಿದೆ.

ಡಿಂಪಲ್ ಯಾದವ್ ಅವರು ಲೋಕಸಭಾ ಚುನಾವನೆಗೆ ಸ್ಪರ್ಧಿಸುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು. ಈ ಕ್ಷೇತ್ರದಿಂದ ಅವರ ಪತಿ ಅಖಿಲೇಶ್ ಯಾದವ್ ಮತ್ತೊಮ್ಮೆ ಸ್ಪರ್ಧಿಸುವ ಸಾಧ್ಯತೆ ಕಂಡು ಬಂದಿತ್ತು. ಈ ಕ್ಷೇತ್ರದಲ್ಲಿ 2014 ರಲ್ಲಿ ಡಿಂಪಲ್ ಯಾದವ್ ಕೇವಲ 19,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

1998 ರಲ್ಲಿ ಎಸ್ಪಿಯ ಪ್ರದೀಪ್ ಕುಮಾರ್ ಅವರು ಈ ಕ್ಷೇತ್ರದಿಂದ ಗೆಲುವು ಸಾಧಿಸಿದಾಗಿನಿಂದಲೂ ಇದು ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿದೆ.

Lok Sabha Elections 2019 : Kannauj SP Candidate Dimple Yadav Assets

2000 ರಿಂದ 2012 ರವರೆಗೆ ಸತತ ಮೂರು ಬಾರಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆಲುವು ಸಾಧಿಸಿದರು.

2012 ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಂತರ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆ ಸಂದರ್ಭದಲ್ಲಿ ತಮ್ಮ ಕ್ಷೇತ್ರವನ್ನು ಪತ್ನಿ ಡಿಂಪಲ್ ಯಾದವ್ ಗೆ ಬಿಟ್ಟುಕೊಟ್ಟರು.

2012 ರಲ್ಲಿ ನಡೆದ ಉಪಚುನಾವಣೆಯಲ್ಲಿ ಮತ್ತು 2014 ರ ಲೋಕಸಭಾ ಚುನಾವಣೆಯಲ್ಲಿ ಡಿಂಪಲ್ ಯಾದವ್ ಈ ಕ್ಷೇತ್ರದಿಂದ ಗೆಲುವು ಸಾಧಿಸಿದರು.

ಹೆಸರು : ಡಿಂಪಲ್ ಯಾದವ್
ಕ್ಷೇತ್ರ : ಕನೌಜ್
ಒಟ್ಟು ಆಸ್ತಿ : 37.78 ಕೋಟಿ ರು (2014ರಲ್ಲಿ 28.04 ಕೋಟಿ ರು)
ಸ್ಥಿರಾಸ್ತಿ : 26.20 ಕೋಟಿ ರು (2014ರಲ್ಲಿ 21.71 ಕೋಟಿ ರು)
ಚರಾಸ್ತಿ : 11.58 ಕೋಟಿ ರು (2014ರಲ್ಲಿ 6.33 ಕೋಟಿ ರು)
ಬಂಡವಾಳ ಹೂಡಿಕೆ : 55.50 ಲಕ್ಷ ರು
ಬ್ಯಾಂಕ್ ಠೇವಣಿ : 8.05 ಕೋಟಿ ರು
ಸಾಲ : 14.26 ಲಕ್ಷ ರು
* ಕ್ರಿಮಿನಲ್ ಮೊಕದ್ದಮೆ ಹೊಂದಿಲ್ಲ.

* 18.74 ಎಕರೆ , 8.39 ಕೋಟಿ ರು ಮೌಲ್ಯ
* 925.36 ಚದರಡಿ ನಿವೇಶನ, 2 ಮನೆ(ಪತಿ ಅಖಿಲೇಶ್ ಯಾದವ್ ಆಸ್ತಿ ಸೇರಿದೆ).
ಕನೌಜ್ ಲೋಕಸಭಾ ಕ್ಷೇತ್ರ: ಈ ಬಾರಿ ಗೆಲುವು ಯಾರಿಗೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+