Loan Fraud Alert: ನಿಮ್ಮ ಹೆಸರಿನಲ್ಲಿ ಯಾರಾದರೂ ಸಾಲ ತೆಗೆದುಕೊಂಡಿದ್ದಾರಾ? 5 ನಿಮಿಷದಲ್ಲಿ ಹೀಗೆ ಚೆಕ್ ಮಾಡಿ

ನೀವು ಯಾವುದೇ ಸಾಲ ತೆಗೆದುಕೊಂಡಿಲ್ಲ. ಆದರೆ ನಿಮ್ಮ ಹೆಸರಿನಲ್ಲಿ ಯಾರಾದರೂ ಲೋನ್ ತೆಗೆದುಕೊಂಡಿದ್ದಾರಾ ಎಂಬ ಅನುಮಾನ ಇದೆಯೇ? ಅಥವಾ ನಿಮ್ಮ ಪಾನ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ಯಾರಾದರೂ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆಯೇ ಎಂಬ ಆತಂಕವಿದೆಯೇ?

ಇದನ್ನು ತಿಳಿದುಕೊಳ್ಳಲು ಸುಲಭವಾದ ಮಾರ್ಗವೆಂದರೆ ನಿಮ್ಮ Credit Report ಪರಿಶೀಲಿಸುವುದು. ವಿಶೇಷವಾಗಿ ಸಿಬಿಲ್ ರಿಪೋರ್ಟ್‌ನಲ್ಲಿ ನಿಮ್ಮ ಹೆಸರಿನಲ್ಲಿರುವ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಖಾತೆಗಳ ವಿವರಗಳನ್ನು ನೋಡಬಹುದು.

Loan Fraud Alert think Someone Used Your Details for a Loan Here s How to Check Loans Linked to Your Name

ಸಿಬಿಲ್ ರಿಪೋರ್ಟ್‌ನಲ್ಲಿ ಏನೆಲ್ಲಾ ಗೊತ್ತಾಗುತ್ತದೆ?

ಸಿಬಿಲ್ ರಿಪೋರ್ಟ್ ಕೇವಲ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ತೋರಿಸುವುದಿಲ್ಲ. ನಿಮ್ಮ ಹೆಸರಿನಲ್ಲಿ ಇರುವ ವಿವಿಧ ಕ್ರೆಡಿಟ್ ಅಕಂಟ್ಸ್ ಮತ್ತು ಅವುಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ತೋರಿಸುತ್ತದೆ.

ಇದರಲ್ಲಿ ಸಾಮಾನ್ಯವಾಗಿ

- ಮನೆ ಸಾಲ

- ಪರ್ಸನಲ್ ಸಾಲ

- ವಾಹನ ಸಾಲ

- ಕ್ರೆಡಿಟ್ ಕಾರ್ಡ್

- ಓವರ್‌ಡ್ರಾಫ್ಟ್ ಮುಂತಾದ ಕ್ರೆಡಿಟ್ ಫೆಸಿಲಿಟಿ

- ಸಾಲ ನೀಡಿರುವ ಸಂಸ್ಥೆಯ ಹೆಸರು

- ಸಾಲದ ಅಕೌಂಟ್‌ನ ವಿವರಗಳು

- ಸಾಲದ ಮೊತ್ತ

- ಪ್ರಸ್ತುತ ಬಾಕಿ ಮೊತ್ತ

- ಅಕೌಂಟ್ ಓಪನ್ ಮಾಡಿದ ದಿನಾಂಕ

- ಪೇಮೆಂಟ್ ಹಿಸ್ಟರಿ

- ಲೋನ್‌ಗೆ ಸಂಬಂಧಿಸಿದ ಎ‌ನ್‌ಕ್ವೈರಿಗಳು

ಮುಂತಾದ ವಿವರಗಳನ್ನು ಪರಿಶೀಲಿಸಬಹುದು.

ನಿಮ್ಮ ಹೆಸರಿನಲ್ಲಿ ಸಾಲ ಇದೆಯೇ ಎಂದು ಹೀಗೆ ಚೆಕ್ ಮಾಡಿ

ಮೊದಲಿಗೆ ಅಧಿಕೃತ ಸಿಬಿಲ್ ವೆಬ್‌ಸೈಟ್‌ಗೆ ಹೋಗಿ. ಅಲ್ಲಿ ನಿಮ್ಮ ವಿವರಗಳನ್ನು ನೀಡಿ ಫ್ರೀ ಸಿಬಿಲ್ ಸ್ಕೋರ್ ‌ಮತ್ತು ರಿಪೋರ್ಟ್ ಪಡೆಯಬಹುದು. ಸಿಬಿಲ್ ಪ್ರಕಾರ, ವ್ಯಕ್ತಿಯೊಬ್ಬರು ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಮ್ಮೆ ಉಚಿತವಾಗಿ ಸಿಬಿಲ್ ಸ್ಕೋರ್ ಮತ್ತು ವರದಿ ಪಡೆಯಬಹುದು.

ರಿಪೋರ್ಟ್ ಬಂದ ನಂತರ ಅದರಲ್ಲಿರುವ "ಅಕೌಂಟ್ಸ್" ವಿಭಾಗವನ್ನು ಗಮನವಾಗಿ ಪರಿಶೀಲಿಸಿ. ನೀವು ತೆಗೆದುಕೊಂಡಿರುವ ಸಾಲ ಮತ್ತು ಕ್ರೆಡಿಟ್‌ ಕಾರ್ಡ್‌ ಖಾತೆಗಳು ಮಾತ್ರವೇ ಇವೆಯೇ ಎಂದು ನೋಡಿ. ನಿಮಗೆ ಸಂಬಂಧವಿಲ್ಲದ ಲೋನ್ ಅಕೌಂಟ್ ಕಂಡುಬಂದರೆ ಅದನ್ನು ನಿರ್ಲಕ್ಷಿಸಬೇಡಿ. ಸಾಲ ಮಾತ್ರವಲ್ಲ, ಲೋನ್ ಎನ್‌ಕ್ವೈರಿಯನ್ನೂ ಪರಿಶೀಲಿಸಿ. ಇದು ಬಹಳ ಮುಖ್ಯ.

ನಿಮ್ಮ ಸಿಬಿಲ್ ರಿಪೋರ್ಟ್‌ನಲ್ಲಿ "Enquiries" ವಿಭಾಗವಿರುತ್ತದೆ. ನೀವು ಸಾಲ ಅಥವಾ Credit Cardಗೆ ಅರ್ಜಿ ಸಲ್ಲಿಸಿದಾಗ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ನಿಮ್ಮ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುತ್ತದೆ. ಅಂತಹ ಪರಿಶೀಲನೆಗಳು Enquiryಯಾಗಿ ದಾಖಲಾಗುತ್ತವೆ. ಸಿಬಿಲ್ ರಿಪೋರ್ಟ್‌ನಲ್ಲಿ ಕಳೆದ 36 ತಿಂಗಳ ಲೋನ್ ಮತ್ತು Credit Card Enquiries ಕಾಣಬಹುದು.

ನೀವು ಯಾವುದೇ ಲೋನ್‌ಗೆ ಅರ್ಜಿ ಸಲ್ಲಿಸದಿದ್ದರೂ ನಿಮ್ಮ ಹೆಸರಿನಲ್ಲಿ ಹೊಸ ಲೋನ್ ಎನ್‌ಕ್ವಯರಿ ಕಂಡುಬಂದರೆ ಎಚ್ಚರಿಕೆ ವಹಿಸಿ. ಅದು ನಿಮ್ಮ ಅನುಮತಿಯಿಲ್ಲದೆ ಯಾರಾದರೂ ಲೋನ್ ಪಡೆಯಲು ಪ್ರಯತ್ನಿಸಿರುವ ಸೂಚನೆಯಾಗಿರಬಹುದು.

ಅಪರಿಚಿತ ಲೋನ್ ಕಂಡುಬಂದರೆ ಏನು ಮಾಡಬೇಕು?

ನಿಮ್ಮ ಸಿಬಿಲ್ ರಿಪೋರ್ಟ್‌ನಲ್ಲಿ ನಿಮಗೆ ಸೇರದ ಸಾಲದ ಅಕೌಂಟ್ ಅಥವಾ ಎನ್‌ಕ್ವಯರಿ ಕಂಡುಬಂದರೆ ಮೊದಲು ಆ ಲೋನ್ ನೀಡಿರುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಿ.

ನಂತರ ಸಿಬಿಲ್‌ನಲ್ಲಿ ತಗಾದೆ ದಾಖಲಿಸಬಹುದು. ಸಿಬಿಲ್ ಪ್ರಕಾರ, ನಿಮ್ಮ ರಿಪೋರ್ಟ್‌ನಲ್ಲಿ ತಪ್ಪಾದ ಅಕೌಂಟ್, ಎನ್‌ಕ್ವಯರಿ ಅಥವಾ ವೈಯಕ್ತಿಕ ವಿವರಗಳು ಕಂಡುಬಂದರೆ ಅವುಗಳನ್ನು ಡಿಸ್ಪ್ಯೂಟ್ ಮಾಡಬಹುದು.

ಅಂದರೆ, ಯಾರಾದರೂ ನಿಮ್ಮ ಹೆಸರನ್ನು ಬಳಸಿಕೊಂಡು ಸಾಲ ಪಡೆದಿರುವ ಅನುಮಾನವಿದ್ದರೆ, ಅದನ್ನು ಪತ್ತೆಹಚ್ಚಿದ ಕೂಡಲೇ ಸಂಬಂಧಪಟ್ಟ ಲೆಂಡರ್ ಮತ್ತು ಕ್ರೆಡಿಟ್ ಬ್ಯೂರೋಗೆ ಮಾಹಿತಿ ನೀಡುವುದು ಮುಖ್ಯ.

ಕ್ರೆಡಿಟ್ ರಿಪೋರ್ಟ್‌ನಲ್ಲಿ ತಪ್ಪು ಮಾಹಿತಿ ಇದ್ದರೆ?

ಕೆಲವೊಮ್ಮೆ ಮೋಸ ಆಗಿರಬಹುದು. ಕೆಲವೊಮ್ಮೆ ಮಾಹಿತಿ ತಪ್ಪಾಗಿ ರಿಪೋರ್ಟ್ ಆಗಿರುವ ಸಾಧ್ಯತೆಯೂ ಇರುತ್ತದೆ. ಉದಾಹರಣೆಗೆ, ಬೇರೆ ವ್ಯಕ್ತಿಯ ಸಾಲ ನಿಮ್ಮ ರಿಪೋರ್ಟ್‌ನಲ್ಲಿ ಕಾಣಿಸಿಕೊಳ್ಳಬಹುದು. ಅಥವಾ ನಿಮ್ಮ ವೈಯಕ್ತಿಕ ವಿವರಗಳು ತಪ್ಪಾಗಿ ದಾಖಲಾಗಿರಬಹುದು.

ಇಂತಹ ಸಂದರ್ಭದಲ್ಲೂ ಡಿಸ್ಪ್ಯೂಟ್ ರೆಸೊಲ್ಯೂಶನ್ ಪ್ರಕ್ರಿಯೆಯ ಮೂಲಕ ಸರಿಪಡಿಸಲು ಪ್ರಯತ್ನಿಸಬಹುದು. ಆರ್‌ಬಿಐ ಕೂಡ ಕ್ರೆಡಿಟ್ ಇನ್‌ಫಾರ್ಮೇಶನ್ ರಿಪೋರ್ಟ್‌ನಲ್ಲಿ ತಪ್ಪು ಕಂಡುಬಂದರೆ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿ ಅಥವಾ ಸಂಬಂಧಪಟ್ಟ ಬ್ಯಾಂಕ್, ಎನ್‌ಬಿಎಫ್‌ಸಿಗೆ ಕರೆಕ್ಷನ್ ಕೇಳಬಹುದು ಎಂದು ತಿಳಿಸಿದೆ. ದೂರು ಪರಿಹಾರವಾಗದಿದ್ದರೆ ಆರ್‌ಬಿಐ ಓಂಬುಡ್ಸ್‌ಮನ್ ವ್ಯವಸ್ಥೆಯನ್ನು ಬಳಸಬಹುದು.

ವರ್ಷಕ್ಕೊಮ್ಮೆಯಾದರೂ ಕ್ರೆಡಿಟ್ ರಿಪೋರ್ಟ್‌ ಪರಿಶೀಲಿಸಿ

ನಾವು Bank Balance, UPI Transactions ಮತ್ತು Credit Card Billಗಳನ್ನು ಪರಿಶೀಲಿಸುತ್ತೇವೆ. ಆದರೆ ನಮ್ಮ ಹೆಸರಿನಲ್ಲಿ ಯಾವ ಲೋನ್ ಅಕೌಂಟ್ಸ್ ದಾಖಲಾಗಿವೆ ಎಂಬುದನ್ನು ಹಲವರು ಪರಿಶೀಲಿಸುವುದಿಲ್ಲ. ಆದ್ದರಿಂದ ವರ್ಷಕ್ಕೊಮ್ಮೆಯಾದರೂ ನಿಮ್ಮ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು.

ಯಾರಾದರೂ ನಿಮ್ಮ ವೈಯಕ್ತಿಕ ವಿವರಗಳನ್ನು ದುರುಪಯೋಗಪಡಿಸಿಕೊಂಡು ಸಾಲ ಪಡೆಯಲು ಪ್ರಯತ್ನಿಸಿದರೆ, ಅದನ್ನು ಬೇಗ ಪತ್ತೆಹಚ್ಚಲು Credit Report ಸಹಾಯ ಮಾಡಬಹುದು.

ನಿಮ್ಮ ಹೆಸರಿನಲ್ಲಿ ನೀವು ತೆಗೆದುಕೊಳ್ಳದ ಸಾಲ ಕಂಡುಬಂದರೆ ಸುಮ್ಮನಿರಬೇಡಿ. ಮೊದಲು ಸಂಬಂಧಪಟ್ಟ ಲೆಂಡರ್ ಅನ್ನು ಸಂಪರ್ಕಿಸಿ, ನಂತರ ಅಗತ್ಯವಿದ್ದರೆ Credit Bureauನಲ್ಲಿ dispute ದಾಖಲಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+